For Quick Alerts
  ALLOW NOTIFICATIONS  
  For Daily Alerts

  ಬ್ರೇಕಪ್ ಬಳಿಕ ಟ್ರೋಲ್ ಕಾಟ ಎದುರಿಸಿದ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಹೇಳಿದ್ದೇನು?

  |

  ನಟಿ ರಶ್ಮಿಕಾ ಮಂದಣ್ಣ ಸದ್ಯ ತಲುಗಿನಿಂದ ಬಾಲಿವುಡ್ ವರೆಗೂ ಸಿಕ್ಕಾಪಟ್ಟೆ ಬ್ಯುಸಿ ಇರುವ ನಟಿ. ಬೇಡಿಕೆಯ ನಟಿಯಾಗಿ ಹೊರಹೊಮ್ಮಿರುವ ರಶ್ಮಿಕಾ ಅತೀ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ರಶ್ಮಿಕಾರನ್ನು ಪ್ರೀತಿಸುವ ಎಷ್ಟು ಅಬಿಮಾನಿಗಳಿದ್ದಾರೋ ಅಷ್ಟೆ ಟ್ರೋಲ್ ಮಾಡುವವರು ಇದ್ದಾರೆ. ಒಂದು ಕಾಲದಲ್ಲಿ ರಶ್ಮಿಕಾ ಸಿಕ್ಕಾಪಟ್ಟೆ ಟ್ರೋಲಿಗೆ ಗುರಿಯಾಗಿದ್ದರು.

  ಕಿರಿಕ್ ಪಾರ್ಟಿ ಸೂಪರ್ ಸಕ್ಸಸ್ ಬಳಿಕ ಟಾಲಿವುಡ್ ಗೆ ಕಾಲಿಟ್ಟ ರಶ್ಮಿಕಾ ಮೊದಲ ಸಿನಿಮಾದಲ್ಲೇ ತೆಲುಗು ಪ್ರೇಕ್ಷಕರ ಮನಗೆದ್ದರು. ಅಷ್ಟರಲ್ಲೇ ರಶ್ಮಿಕಾ ನಟ ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು. ಅದ್ದೂರಿಯಾಗಿ ರಕ್ಷಿತ್ ಜೊತೆ ಎಂಗೇಜ್ ಆಗುತ್ತಿದ್ದಂತೆ ತೆಲುಗು ಕಡೆ ಮುಖಮಾಡಿದರು. ತೆಲುಗಿನಲ್ಲಿ ನಟ ವಿಜಯ್ ದೇವರಕೊಂಡ ಜೊತೆ ಗೀತಾ ಗೋವಿಂದಂ ಸಿನಿಮಾದಲ್ಲಿ ಕಾಣಿಸಿಕೊಂಡ ರಶ್ಮಿಕಾ ಸಿಕ್ಕಾಪಟ್ಟೆ ಸುದ್ದಿಯಾದರು. ವಿಜಯ್ ಜೊತೆ ಕಿಸ್ಸಿಂಗ್ ದೃಶ್ಯದಲ್ಲಿ ನಟಿಸಿದ್ದ ವಿಡಿಯೋ ವೈರಲ್ ಆಗುತ್ತಿದ್ದಂತೆ ರಶ್ಮಿಕಾ ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಸದ್ದು ಮಾಡಲು ಶುರುಮಾಡಿದರು.

  ಅದೆ ಸಮಯದಲ್ಲಿ ನಟ ರಕ್ಷಿತ್ ಶೆಟ್ಟಿ ಜೊತೆ ಬ್ರೇಕಪ್ ಕೂಡ ಮಾಡಿಕೊಂಡರು. ರಕ್ಷಿತ್ ಯಿಂದ ದೂರ ಆಗುತ್ತಿದ್ದಂತೆ ರಶ್ಮಿಕಾ ಸಿಕ್ಕಾಪಟ್ಟೆ ಟ್ರೋಲ್ ಗೆ ಗುರಿಯಾದರು. ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿಕಾರನ್ನು ಹಿಗ್ಗಾಮುಗ್ಗ ಟ್ರೋಲ್ ಮಾಡಲಾಯಿತು. ರಶ್ಮಿಕಾ ಏನೆ ಮಾಡಿದರು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದರು. ಯಾವುದೇ ಪೋಸ್ಟ್ ಶೇರ್ ಮಾಡಿದರೂ ಕೆಟ್ಟದಾಗಿ ಕಾಮೆಂಟ್ ಮಾಡಿ ರಶ್ಮಿಕಾ ಕಾಲೆಳೆಯುತ್ತಿದ್ದರು.

  ಬ್ರೇಕಪ್ ಬಳಿಕ ಸಿಕ್ಕಾಪಟ್ಟೆ ಟ್ರೋಲಿಗೆ ಗುರಿಯಾಗಿದ್ದ ರಶ್ಮಿಕಾ

  ಬ್ರೇಕಪ್ ಬಳಿಕ ಸಿಕ್ಕಾಪಟ್ಟೆ ಟ್ರೋಲಿಗೆ ಗುರಿಯಾಗಿದ್ದ ರಶ್ಮಿಕಾ

  ರಕ್ಷಿತ್ ಶೆಟ್ಟಿ ಜೊತೆ ಬ್ರೇಕಪ್ ಆದ ಬಳಿಕ ರಶ್ಮಿಕಾ ಸಿಕ್ಕಾಪ್ಟೆ ಟ್ರೋಲಿಗೆ ಗುರಿಯಾಗಿದ್ದರು. ಟ್ರೋಲ್ ಗಳನ್ನು ಎದುರಿಸಿದ ರೀತಿಯ ಬಗ್ಗೆ ರಶ್ಮಿಕಾ ಈಗ ಮಾತನಾಡಿದ್ದಾರೆ. ಸಿನಿಮಾ ನಿರ್ಮಾಪಕಿ ಅನುಪಮಾ ಚೋಪ್ರಾಗೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಬ್ರೇಕಪ್ ಬಳಿಕ ನಿಭಾಯಿಸಿದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

  ಉಸಿರುಗಟ್ಟಿಸುವ ವಾತಾವರಣವಾಗಿತ್ತು

  ಉಸಿರುಗಟ್ಟಿಸುವ ವಾತಾವರಣವಾಗಿತ್ತು

  "ಪ್ರಾರಂಭದಲ್ಲಿ ಇದು ತುಂಬಾ ಕಷ್ಟವಾಗಿತ್ತು. ಖಂಡಿತ ತುಂಬಾ ಸುಲಭ ಆಗಿರಲಿಲ್ಲ. ನಮ್ಮ ಕುಟುಂಬ ಸಿನಿಮಾ ಬ್ಯಾಗ್ರೌಂಡ್ ನಿಂದ ಬಂದಿದ್ದಲ್ಲ. ಯಾರಿಗೂ ಕೂಡ ಸಿನಿಮಾಗೆ ಸಂಬಂಧ ಇರಲಿಲ್ಲ. ನನಗೆ ಎಲ್ಲವೂ ಹೊಸದಾಗಿತ್ತು. ಜನರು ನನ್ನನು ಟ್ರೋಲ್ ಮಾಡುತ್ತಿದ್ದರು, ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದರು. ತುಂಬಾ ಗಂಭೀರವಾಗಿ ಪರಿಗಣಿಸುತ್ತಿದ್ದೆ. ತುಂಬಾ ಉಸಿರುಗಟ್ಟಿಸುವ ವಾತಾವರಣವಾಗಿತ್ತು" ಎಂದಿದ್ದಾರೆ.

  ನನಗೆ ತುಂಬಾ ಕಷ್ಟವಾಗುತ್ತಿತ್ತು

  ನನಗೆ ತುಂಬಾ ಕಷ್ಟವಾಗುತ್ತಿತ್ತು

  "ಜನರು ನಿಮ್ಮ ಬಾಡಿ, ಬಣ್ಣ, ಸಂಬಂಧ ಸೇರಿದಂತೆ ಎಲ್ಲದರ ಬಗ್ಗೆಯೂ ಮಾಡುತ್ತಾರೆ. ಆಗ ನನಗೆ ಇದು ತುಂಬಾ ಕಷ್ಟವಾಗಿತ್ತು. ಕೆಲವು ಬಾರಿ ನನಗೆ ತುಂಬಾ ನೋವಾಗಿತ್ತು. ಆಗ ಅನಿವಾರ್ಯ ಈ ಬಗ್ಗೆ ಮಾತನಾಡಿದ್ದೇನೆ. ಕೆಲಸದ ಬಗ್ಗೆ ಕಾಮೆಂಟ್ ಮಾಡಿ. ಆದರೆ ನನ್ನ ಬಾಲ್ಯದ ಫೋಟೋ, ನನ್ನ ಕುಟುಂಬದ ಬಗ್ಗೆ ಕಾಮೆಂಟ್ ಮಾಡುವುದು ಸರಿಯಲ್ಲ" ಎಂದು ರಶ್ಮಿಕಾ ಹೇಳಿದ್ದಾರೆ.

  ನಾನೀಗ ಕಲ್ಲಾಗಿದ್ದೇನೆ

  ನಾನೀಗ ಕಲ್ಲಾಗಿದ್ದೇನೆ

  "19ನೇ ವಯಸ್ಸಿನಲ್ಲೇ ನನಗೆ ಟ್ರೋಲ್ ಕಾಟ ಶುರುವಾಗಿತ್ತು. ಆದರೀಗ ನಾನು ಕಲ್ಲಾಗಿದ್ದೇನೆ. ಈಗ ನನಗೆ ಟ್ರೋಲ್ ಯಾವುದೇ ಮ್ಯಾಟರ್ ಆಗಲ್ಲ. ಈಗ ತುಂಬಾ ಹಗುರವಾಗಿ ತೆಗೆದುಕೊಳ್ಳುತ್ತೇನೆ. ಟ್ರೋಲ್ ನೋಡಿದರೆ ಹಾ..ಹಾ.. ಎಂದು ನಗುತ್ತೇನೆ ಅಷ್ಟೆ. ಓ ದೇವರೆ ಹಾಗಿಯಿತು, ಹೀಗಾಯಿತು ಅಂತ ಎಲ್ಲಾ ಸ್ಟಾರ್ಸ್ ಗೂ ಅನುಭವವಾಗಿದೆ" ಎಂದು ಹೇಳಿದ್ದಾರೆ.

  ಏನು ಕೊಟ್ಟರು ತೊಗೆದುಕೊಳ್ಳುತ್ತೇನೆ

  ಏನು ಕೊಟ್ಟರು ತೊಗೆದುಕೊಳ್ಳುತ್ತೇನೆ

  "ಜನ ಎಲ್ಲಾ ಕಡೆಯಿಂದ ಪಂಚ್ ಮಾಡುತ್ತಲ್ಲೇ ಇದ್ದಾಗ ಮಾಡಿ ಎಂದು ಸುಮ್ಮನಾಗುವುದು ಅಷ್ಟೆ. ನೀವು ನನಗೆ ಏನು ಕೊಟ್ಟರೂ ತೆಗೆದುಕೊಳ್ಳುತ್ತೇನೆ. ಜನರು ನನ್ನ ಬಗ್ಗೆ ಒಳ್ಳೆಯಮಾತುಗಳನ್ನು ಆಡಿದ್ದಾರೆ. ತನ್ನ ಕೆಲಸವನ್ನು ಇಷ್ಟಪಟ್ಟಿದ್ದಾರೆ. ಎಲ್ಲಾ ಕಡೆ ಕೆಟ್ಟದ್ದು ಮತ್ತು ಒಳ್ಳೆಯದ್ದು ಎರಡು ಇರುತ್ತದೆ. ಜನರು ನನ್ನನ್ನು ಸಾನ್ವಿ ಎನ್ನುತ್ತಾರೆ, ಲಿಲ್ಲಿ ಎನ್ನುತ್ತಾರೆ, ಗೀತಾ ಎಂದು ಕರೆಯುತ್ತಾರೆ ಇದು ತುಂಬಾ ಸಂತೋಷವಾಗುತ್ತದೆ" ಎಂದು ಹೇಳಿದ್ದಾರೆ.

  ರಶ್ಮಿಕಾ ಬಳಿ ಇರುವ ಸಿನಿಮಾಗಳು

  ರಶ್ಮಿಕಾ ಬಳಿ ಇರುವ ಸಿನಿಮಾಗಳು

  ರಶ್ಮಿಕಾ ಸದ್ಯ ಬಾಲಿವುಡ್ ಮತ್ತು ತೆಲುಗು ಎರಡು ಸಿನಿಮಾರಂಗದಲ್ಲೂ ಬ್ಯುಸಿಯಾಗಿದ್ದಾರೆ. ಬಾಲಿವುಡ್ ನಲ್ಲಿ ಮಿಷನ್ ಮಜ್ನು ಮತ್ತು ಗುಡ್ ಬೈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಗುಡ್ ಬೈ ನಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ನಟಿಸುತ್ತಿದ್ದಾರೆ. ಇನ್ನು ತೆಲುಗಿನಲ್ಲಿ ಬಹುನಿರೀಕ್ಷೆಯ ಪುಷ್ಪ ಮತ್ತು ನಟ ಶರ್ವಾನಂದ ಜೊತೆ ನಟಿಸುತ್ತಿದ್ದಾರೆ. ಈ ಸಿನಿಮಾ ಜೊತೆಗೆ ಮತ್ತೊಂದು ಸಿನಿಮಾದ ಮಾತುಕತೆಯಲ್ಲಿದ್ದಾರೆ.

  English summary
  Actress Rashmika Mandanna opens up about how dealing with trolls after break up with Rakshith shetty.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X