ನಟಿ ರಶ್ಮಿಕಾ ಮಂದಣ್ಣಗೆ ಆಕ್ಸಿಡೆಂಟ್, ಈಗ ಆಕೆ ಹೇಗಿದ್ದಾರೆ? ಇಲ್ಲಿದೆ ಮಾಹಿತಿ

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸುತ್ತಾ ಮುಂಬೈ ಹೈದರಾಬಾದ್ ಅಂತ ಸುತ್ತಾಡುತ್ತಿದ್ದಾರೆ. 'ಪುಷ್ಪ' ಹಾಗೂ 'ಚಾವ' ರೀತಿಯ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಆಕೆ ನಟಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಖತ್ ಆಕ್ಟೀವ್ ಆಗಿ ಇರುತ್ತಾರೆ.

ಕಳೆದ ಕೆಲ ದಿನಗಳಿಂದ ರಶ್ಮಿಕಾ ಸೋಶಿಯಲ್ ಮೀಡಿಯಾದಿಂದ ದೂರ ಉಳಿದಿದ್ದರು. ಇದೀಗ ಅದಕ್ಕೆ ಕಾರಣ ತಿಳಿಸಿದ್ದಾರೆ. ತಮಗೆ ಸಣ್ಣದಾಗಿ ಪೆಟ್ಟಾದ ಬಗ್ಗೆಯೂ ಹೇಳಿಕೊಂಡಿದ್ದಾರೆ. ಸದ್ಯ ಅಭಿಮಾನಿಗಳ ಪ್ರೀತಿಯ ರೋಶ್ ಕೈಯಲ್ಲಿ 6 ಸಿನಿಮಾಗಳಿವೆ.

Rashmika Mandanna opens up about she suffered a minor accident

'ಪುಷ್ಪ'-2 ಹಾಗೂ 'ಚಾವ' ಸಿನಿಮಾಗಳು ಡಿಸೆಂಬರ್ 6ಕ್ಕೆ ಒಟ್ಟೊಟ್ಟಿಗೆ ತೆರೆಗೆ ಬರ್ತಿವೆ. ಎರಡೂ ಸಿನಿಮಾಗಳ ಟೀಸರ್‌ಗಳು ರಿಲೀಸ್ ಆಗಿ ಸದ್ದು ಮಾಡ್ತಿದೆ. 'ರೈನ್‌ಬೋ', 'ದಿ ಗರ್ಲ್‌ ಫ್ರೆಂಡ್' ಎನ್ನುವ 2 ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನು ಸಲ್ಮಾನ್ ಖಾನ್ ಜೋಡಿಯಾಗಿ ಸಿಕಂದರ್ ಹಾಗೂ ಧನುಷ್ ಜೊತೆ 'ಕುಬೇರ' ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.

ರಶ್ಮಿಕಾ ಮಂದಣ್ಣ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಶಾಕಿಂಗ್ ವಿಷಯ ತಿಳಿಸಿದ್ದಾರೆ. "ಹಾಯ್ ಎಲ್ಲರೂ ಹೇಗಿದ್ದೀರಾ? ನಾನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಜೊತೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡು ಬಹಳ ಸಮಯ ಆಗಿದೆ. ಕಳೆದ ತಿಂಗಳು ನಾನು ಹೆಚ್ಚು ಸಕ್ರಿಯವಾಗಿಲ್ಲದ ಕಾರಣ, ನನಗೆ ಸಣ್ಣ ಅಪಘಾತವಾಗಿ(ಮೈನರ್) ಪೆಟ್ಟಾಗಿತ್ತು. ವೈದ್ಯರು ಹೇಳಿದಂತೆ ನಾನು ವಿಶ್ರಾಂತಿ ಪಡೆದು ಚೇತರಿಸಿಕೊಳ್ಳುತ್ತಿದ್ದೇನೆ" ಎಂದಿದ್ದಾರೆ.

"ಈಗ ನಾನು ಚೆನ್ನಾಗಿದ್ದೇನೆ. ನಾನು ಸೂಪರ್ ಆಕ್ಟಿವ್ ಆಗಿರುವ ಹಂತದಲ್ಲಿದ್ದೇನೆ. ಆದ್ದರಿಂದ ನನ್ನ ಚಟುವಟಿಕೆ ಮತ್ತೆ ಆರಂಭವಾಗಿದೆ. ಯಾವಾಗಲೂ ನಿಮ್ಮ ಬಗ್ಗೆ ಕಾಳಜಿ ವಹಿಸಲು ಆದ್ಯತೆ ನೀಡಿ. ಕಾರಣ ಜೀವನವು ತುಂಬಾ ಸೂಕ್ಷ್ಮ ಮತ್ತು ಚಿಕ್ಕದು. ನಮಗೆ ನಾಳೆ ಇರುತ್ತೋ ಇಲ್ಲವೋ ಗೊತ್ತಿಲ್ಲ. ಆದ್ದರಿಂದ ಪ್ರತಿದಿನ ಸಂತೋಷವಾಗಿ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.

ಕೊನೆಗೆ ತಮಾಷೆಯಾಗಿ ಈಗ ನಾನು ಲಡ್ಡೂಗಳನ್ನು ತಿನ್ನುತ್ತಿದ್ದೇನೆ ಎಂದು ನಗುವ ಎಮೋಜಿ ಹಾಕಿದ್ದಾರೆ. ರಶ್ಮಿಕಾ ಪೋಸ್ಟ್ ನೋಡಿ ಶಾಕ್ ಆಗಿರುವ ಅಭಿಮಾನಿಗಳು ಆಗಷ್ಟು ಬೇಗ ಚೇತರಿಸಿಕೊಳ್ಳಿ ಎಂದು ಹಾರೈಸಿ ಕಾಮೆಂಟ್ ಮಾಡುತ್ತಿದ್ದಾರೆ.

ಇನ್ನು ಇತ್ತೀಚೆಗೆ ರಶ್ಮಿಕಾ ಬಗ್ಗೆ ನಟ ಪ್ರಮೋದ್ ಶೆಟ್ಟಿ ಮಾಡಿರುವ ಕಾಮೆಂಟ್ ವೈರಲ್ ಆಗುತ್ತಿದೆ. ಸಂದರ್ಶನಗಳಲ್ಲಿ ಭಾಗಿ ಆಗಿರುವ ಪ್ರಮೋದ್ ಶೆಟ್ಟಿ ರಶ್ಮಿಕಾ ಬಗ್ಗೆ ಎದುರಾದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. "ಗಿಡ ಬೆಳೆಸುವುದು ನಮ್ ಕೆಲಸ, ಅದು ಬೆಳೆದ್ಮೇಲೆ ಹೆಂಗ್ ಬೇಕಾದ್ರೂ ತಿರುಗಿಕೊಳ್ಳುತ್ತದೆ. ಆಕೆ ಒಳ್ಳೆ ನಟಿ. ಆಕೆ ಮೊದಲ ಸಿನಿಮಾ ಆಗಿದ್ದರೂ 'ಕಿರಿಕ್ ಪಾರ್ಟಿ' ಮಾಡಿದಾಗ್ಲೇ ಆಕೆ ಒಳ್ಳೆ ನಟನೆ ಪ್ರದರ್ಶಿಸಿದ್ದರು" ಎಂದು ಹೇಳಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗುತ್ತಿದೆ.

More from Filmibeat

English summary
Actress Rashmika Mandanna Injured In Minor Accident, shares latest health update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X