For Quick Alerts
  ALLOW NOTIFICATIONS  
  For Daily Alerts

  ಕನ್ನಡ ಚಿತ್ರರಂಗದಿಂದ ದೂರ ಸರಿದ ಬಗ್ಗೆ ರಶ್ಮಿಕಾ ಮಂದಣ್ಣ ಹೇಳಿದ್ದೇನು?

  |

  ನಟಿ ರಶ್ಮಿಕಾ ಮಂದಣ್ಣ ಸದ್ಯ ತೆಲುಗು ಮತ್ತು ಹಿಂದಿ ಸಿನಿಮಾರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ತೆಲುಗಿನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಂತೆ ರಶ್ಮಿಕಾ ಹಿಂದಿ ಸಿನಿಮಾರಂಗದ ಕಡೆ ಮುಖ ಮಾಡಿದರು. ಹಿಂದಿಯಲ್ಲಿ ಬಿಗ್ ಬಿ ಅಮಿತಾಬ್ ಜೊತೆ ನಟಿಸುವ ಅವಕಾಶ ಗಿಟ್ಟಿಸಿಕೊಳ್ಳುವ ಮೂಲಕ ರಶ್ಮಿಕಾ ಅಚ್ಚರಿ ಮೂಡಿಸಿದರು. ಸದ್ಯ ಹಿಂದಿ ಮತ್ತು ತೆಲುಗು ಅಂತ ಬ್ಯುಸಿಯಾಗಿರುವ ರಶ್ಮಿಕಾ ಕನ್ನಡ ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ.

  ರಶ್ಮಿಕಾ ಕನ್ನಡ ಚಿತ್ರರಂಗದಿಂದ ಸಿನಿಮಾರಂಗಕ್ಕೆ ಬಂದ ನಟಿ. ಕನ್ನಡದ ಸೂಪರ್ ಹಿಟ್ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ರಶ್ಮಿಕಾ ಸಿನಿಪ್ರಿಯರಿಗೆ ಪರಿಚಿತರಾದವರು. ಮೊದಲ ಸಿನಿಮಾದಲ್ಲೇ ಸೂಪರ್ ಸಕ್ಸಸ್ ಕಂಡ ರಶ್ಮಿಕಾ ಬಳಿಕ ಕನ್ನಡ ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡರು. ಅಪರೂಪಕ್ಕೊಂದು ಸಿನಿಮಾದಲ್ಲಿ ನಟಿಸಿ ಇದೀಗ ಶಾಶ್ವತವಾಗಿ ದೂರ ಆಗಿದ್ದಾರೆ.

  ಕೊನೆಯದಾಗಿ ರಶ್ಮಿಕಾ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಈ ಸಿನಿಮಾ ಬಿಡುಗಡೆ ಸಮಯದಲ್ಲಿ ಚಿತ್ರದ ಬಗ್ಗೆ ಸರಿಯಾದ ಪ್ರಮೋಷನ್ ಮಾಡಿಲ್ಲ ಎನ್ನುವ ಆರೋಪ ಕೂಡ ರಶ್ಮಿಕಾ ವಿರುದ್ಧ ಕೇಳಿಬಂದಿತ್ತು. ತೆಲುಗು, ತಮಿಳು ಸಿನಿಮಾಗಳನ್ನು ಚೆನ್ನಾಗಿ ಪ್ರಮೋಟ್ ಮಾಡುವ ರಶ್ಮಿಕಾ ತಾನೆ ನಟಿಸಿದ ಕನ್ನಡ ಸಿನಿಮಾವನ್ನು ಸರಿಯಾಗಿ ಪ್ರಮೋಟ್ ಮಾಡುತ್ತಿಲ್ಲ ಎಂದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಅದೇ ರಶ್ಮಿಕಾ ನಟನೆಯ ಕೊನೆಯ ಕನ್ನಡ ಸಿನಿಮಾ.

  ಕನ್ನಡ ಸಿನಿಮಾರಂಗದಿಂದಲೇ ಬಣ್ಣದ ಲೋಕಕ್ಕೆ ಬಂದ ರಶ್ಮಿಕಾ ಇದೀಗ ಕನ್ನಡ ಸಿನಿಮಾರಂಗದಿಂದ ದೂರ ಸರಿದ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ರಶ್ಮಿಕಾ ಈ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಕನ್ನಡ ಸಿನಿಮಾ ಮಾಡುವುದು ಯಾವಾಗ ಎಂದು ಕೇಳಿದ ಪ್ರಶ್ನೆಗೆ ರಶ್ಮಿಕಾ, "ಈಗ ತೆಲುಗು ಮತ್ತು ಹಿಂದಿ ನಡುವೆ ಪ್ರಯಾಣ ಮಾಡಲು ಸಾಕಷ್ಟು ತೆಗೆದುಕೊಳ್ಳುತ್ತಿದೆ. ಈಗಾಗಲೇ ತಮಿಳು ಸಿನಿಮಾ ಮಾಡಿದ್ದೇನೆ. ಇದೆಲ್ಲರ ಜೊತೆಗೆ ಕನ್ನಡ ಸಿನಿಮಾ ಮಾಡಲು ಮತ್ತಷ್ಟು ಎನರ್ಜಿ ಬೇಕಾಗುತ್ತದೆ. 365 ದಿನಗಳು ನನಗೆ ಸಾಕಾಗುವುದಿಲ್ಲ" ಎಂದಿದ್ದಾರೆ.

  "ನಾನು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದೀನಿ. ಇದು ಎಲ್ಲಾ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿದೆ. ನಾನು 5 ದಕ್ಷಿಣದ ಭಾಷೆಯಲ್ಲಿ ಮತ್ತು ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡಿದರೆ ನನಗೆ 565 ದಿನಗಳು ಬೇಕಾಗುತ್ತದೆ" ಎಂದು ಹೇಳಿದರು.

  ಇನ್ನು ರಶ್ಮಿಕಾ ಸದ್ಯ ಹಿಂದಿಯ ಎರಡು ಸಿನಿಮಾ ಮತ್ತು ತೆಲುಗಿನಲ್ಲಿ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಿಂದಿಯಲ್ಲಿ ಈಗಾಗಲೇ ಮಿಷನ್ ಮಜ್ನು ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾದಲ್ಲಿ ರಶ್ಮಿಕಾ ಬಾಲಿವುಡ್ ಸ್ಟಾರ್ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ನಟಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿದ ಸಂತಸವನ್ನು ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು.

  ಈ ಸಿನಿಮಾ ಜೊತೆಗೆ ರಶ್ಮಿಕಾ ಬಾಲಿವುಡ್‌ನಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ಗುಡ್ ಬೈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದ್ದು, ಬಹುತೇಕ ಚಿತ್ರೀಕರಣ ಮುಗಿಯುತ್ತಾ ಬಂದಿದೆ. ಹಿಂದಿ ಸಿನಿಮಾಗಳ ಜೊತೆಗೆ ರಶ್ಮಿಕಾ ತೆಲುಗಿನಲ್ಲಿ ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲು ಅರ್ಜುನ್ ಜೊತೆ ರಶ್ಮಿಕಾ ನಟಿಸುತ್ತಿದ್ದಾರೆ. ಬಳಿಕ ಮತ್ತೊಂದು ತೆಲುಗು ಸಿನಿಮಾ ಕೂಡ ರಶ್ಮಿಕಾ ಕೈಯಲ್ಲಿದೆ.

  English summary
  Actress Rashmika Mandanna opens up on being away from Kannada industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X