ವಿಜಯ್ ದೇವಕೊಂಡ ಜೊತೆ ಡೇಟಿಂಗ್ ಬಗ್ಗೆ ಬಾಯ್ಬಿಟ್ಟ ರಶ್ಮಿಕಾ ಮಂದಣ್ಣ!

ಸಿನಿಮಾ ರಂಗದಲ್ಲಿ ಹಲವು ಹೆಸರುಗಳ ಸುತ್ತಲೂ ಲವ್ ಗಾಸಿಪ್, ಡೇಟಿಂಗ್ ಗಾಸಿಪ್, ಸುತ್ತಿಕೊಳ್ಳುತ್ತಲೇ ಇರುತ್ತೆ. ಇದರ ಜೊತೆಗೆ ಸಿನಿಮಾ ತಾರೆಯರ ಡೇಟಿಂಗ್ ಸುದ್ದಿ, ಬ್ರೇಕಪ್ ಸುದ್ದಿ, ಮದುವೆ ಸುದ್ದಿ, ವಿಚ್ಛೇದನದ ಸುದ್ದಿ ಸದಾ ಒಂದಿಲ್ಲೊಂದು ರೂಪದಲ್ಲಿ ಸದ್ದು ಮಾಡುತ್ತಲೇ ಇರುತ್ತೆ. ಇದು ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡರನ್ನು ಬಿಟ್ಟಿಲ್ಲ.

ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡು ಇಲ್ಲೇ ಸಾಕಷ್ಟು ಅಭಿಮಾನಿ ಬಳಗವನ್ನು ಪಡೆದುಕೊಂಡ ಬಳಿಕ ತೆಲುಗಿಗೆ ಎಂಟ್ರಿಕೊಟ್ಟರು. ರಶ್ಮಿಕಾ ಮಂದಣ್ಣ ತೆಲುಗಿಗೆ ಎಂಟ್ರಿ ಕೊಟ್ಟಿದ್ದೇ ಕೊಟ್ಟಿದ್ದು ಆಕೆಯ ಸುತ್ತ ಹಲವು ಗಾಸಿಪ್ ಹರಿದಾಡಲು ಶುರುವಾಗಿತ್ತು.

ಹೌದು, ರಶ್ಮಿಕಾ ಮಂದಣ್ಣ 'ಗೀತಾ ಗೋವಿಂದಂ' ಸಿನಿಮಾದಲ್ಲಿ ನಟಿಸಿದ ಬಳಿಕ ವಿಜಯ್ ದೇವರಕೊಂಡ, ರಶ್ಮಿಕಾ ಹೆಸರು ಹೆಚ್ಚಾಗಿದೆ ಸದ್ದು ಮಾಡಿತು. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇಬ್ಬರೂ ಕೂಡ ಪ್ರೀತಿಯಲ್ಲಿ ಇದ್ದಾರೆ, ಡೇಟಿಂಗ್ ಮಾಡುತ್ತಿದ್ದಾರೆ, ಎನ್ನುವ ವಿಚಾರ ಆಗಾಗ ಮುನ್ನೆಲೆಗೆ ಬರುತ್ತಲೇ ಇರುತ್ತೆ. ಈ ಬಗ್ಗೆ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಮಾತನಾಡಿದ್ದಾರೆ.

ರಶ್ಮಿಕಾ ಮಂದಣ್ಣ, ವಿಜಯ್ ಬ್ರೇಕಪ್ ಸುದ್ದಿ!

ರಶ್ಮಿಕಾ ಮಂದಣ್ಣ, ವಿಜಯ್ ಬ್ರೇಕಪ್ ಸುದ್ದಿ!

ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಬಗ್ಗೆ ನಾನಾ ಸುದ್ದಿಗಳು ಆಗಾಗ ಹರಿದಾಡುತ್ತಲೇ ಇರುತ್ತವೆ. ಇಬ್ಬರೂ ಲವ್‌ನಲ್ಲಿ ಬಿದ್ದಿದ್ದಾರೆ ಎನ್ನುವ ಸುದ್ದಿ ಒಂದು ಕಡೆಯಾದರೆ, ಇದೀಗ ಈ ಜೋಡಿ ಬ್ರೇಕಪ್ ಮಾಡಿಕೊಂಡು ದೂರಾಗಿದೆ ಎನ್ನುವ ಸುದ್ದಿ ಸಂಚಲನ ಮೂಡಿಸಿದೆ. ಈಟಿ ವರದಿಯ ಪ್ರಕಾರ ಎರಡು ವರ್ಷಗಳ ಹಿಂದೆಯೇ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಪರಸ್ಪರ ದೂರವಾಗಿದ್ದಾರೆ. ಹಾಗಾಗಿಯೇ ಇಬ್ಬರೂ ಕೆಲಕಾಲ ಅಂತರವನ್ನು ಕಾಯ್ದುಕೊಂಡಿದ್ದಾರೆ ಎನ್ನುವ ಸುದ್ದಿ ಕೂಡಾ ವರದಿಯಾಗಿದೆ.

ಡೇಟಿಂಗ್ ಬಗ್ಗೆ ರಶ್ಮಿಕಾಗೆ ಪ್ರಶ್ನೆ!

ಡೇಟಿಂಗ್ ಬಗ್ಗೆ ರಶ್ಮಿಕಾಗೆ ಪ್ರಶ್ನೆ!

ಇತ್ತೀಚೆಗೆ ನಟ ವಿಜಯ್ ದೇವರಕೊಂಡಗೆ ರಶ್ಮಿಕಾ ಮಂದಣ್ಣ ಬಗ್ಗೆ ಪ್ರಶ್ನೆ ಕೇಳಲಾಯ್ತು. ಈಗ ರಶ್ಮಿಕಾಗೆ ವಿಜಯ್ ಬಗ್ಗೆ ಮತ್ತು ಲವ್ ಡೇಟಿಂಗ್ ಬಗ್ಗೆ ಪ್ರಶ್ನೆ ಎದುರಾಗಿದೆ. ಇದಕ್ಕೆ ರಶ್ಮಿಕಾ ನೇರವಾಗಿ ಉತ್ತರ ಕೊಡದೆ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ. "ಕೆಲವೊಮ್ಮೆ ನನಗೆ ಅನಿಸುತ್ತೆ, ಅರೇ... ನಾನು ವರ್ಷಕ್ಕೆ ಹಲವು ಸಿನಿಮಾಗಳನ್ನು ಮಾಡುತ್ತೇನೆ, ಆದರೂ ಕೂಡ ಯಾರ ಜೊತೆಗೆ ಡೇಟಿಂಗ್ ಮಾಡುತ್ತಿರಿ? ನಿನ್ನ ವೈಯಕ್ತಿಕ ಬದುಕಿನಲ್ಲಿ ಏನಾಗುತ್ತಿದೆ? ಎನ್ನುವ ಪ್ರಶ್ನೆ ಬರುತ್ತದೆ. ನನಗೆ ಅರ್ಥ ಆಗುತ್ತದೆ. ನಾನು ಸೆಲೆಬ್ರೆಟಿ ಹಾಗಾಗಿ ನನ್ನ ವಿಚಾರಗಳ ಮೇಲೆ ಹೆಚ್ಚಿನ ಆಸಕ್ತಿ ಇರುತ್ತದೆ ಎಂದು ಅರ್ಥವಾಗಿತ್ತದೆ" ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.

ಹುಡುಗ ಸಿಕ್ಕಮೇಲೆ ಹೇಳುತ್ತೇನೆ- ರಶ್ಮಿಕಾ!

ಹುಡುಗ ಸಿಕ್ಕಮೇಲೆ ಹೇಳುತ್ತೇನೆ- ರಶ್ಮಿಕಾ!

ನಟಿ ರಶ್ಮಿಕಾ ಮಂದಣ್ಣ ಈ ಬಗ್ಗೆ ಮಾತು ಮುಂದುವರೆಸಿ, ನನಗೆ ನನ್ನ ಜೀವನದಲ್ಲಿ ಇರುವ ವ್ಯಕ್ತಿ ಯಾರು ಎನ್ನುದನ್ನು ತಿಳಿದ ಬಳಿಕ ಬಹಿರಂಗ ಪಡಿಸುವೆ ಎಂದು ಹೇಳಿದ್ದಾರೆ. "ನನ್ನ ವೃತ್ತಿ ಬದುಕಿನ ವಿಚಾರಕ್ಕೆ ಬರುವುದಾದರೇ, ನಾನು ಯಾರ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದೇನೆ, ಮುಂದಿನ ಸಿನಿಮಾ ಯಾವಾಗ ರಿಲೀಸ್ ಎನ್ನುವುದನ್ನು ಖಚಿತ ಪಡಿಸಬಲ್ಲೇ, ಆದರೆ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ, ನನ್ನ ಜೀವನದ ಬಗ್ಗೆ ನನಗೇ ಖಚಿತತೇ ಇಲ್ಲದೇ ನಾನು ಯಾವುದರ ಬಗ್ಗೆಯೋ ಮಾತನಾಡುವುದಿಲ್ಲ." ಎಂದಿದ್ದಾರೆ ನಟಿ ರಶ್ಮಿಕಾ ಮಂದಣ್ಣ.

ರಶ್ಮಿಕಾಳನ್ನು ಹೊಗಳಿದ್ದ ವಿಜಯ್!

ರಶ್ಮಿಕಾಳನ್ನು ಹೊಗಳಿದ್ದ ವಿಜಯ್!

ದೊಡ್ಡ ಗ್ಯಾಪ್ ಬಳಿಕ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ನನ್ನ ನೆನಪಿಸಿಕೊಂಡು ಟ್ವೀಟ್ ಮಾಡಿದ್ದರು. ವಿಜಯ್ ದೇವರಕೊಂಡ ಹುಟ್ಟುಹಬ್ಬ ಸೇರಿದಂತೆ ಹಲವು ಸಂದರ್ಭಗಳಲ್ಲಿ ಸುಮ್ಮನೆ ಇದ್ದ ನಟಿ ರಶ್ಮಿಕಾ ಮಂದಣ್ಣ, ಲೈಗರ್ ಟೀಸರ್ ಬಗ್ಗೆ ಹೊಗಳಿ ಟ್ವೀಟ್ ಮಾಡಿದ್ದರು. ಇನ್ನು ವಿಜಯ್ ದೇವರಕೊಂಡ ಕೂಡ ರಶ್ಮಿಕಾ ಬಗ್ಗೆ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಒಂದಾಗಿದ್ದಾರೆ ಎನ್ನು ಸುದ್ದಿಗೂ ಮೊದಲೇ ದೂರಾದ ಸುದ್ದಿ ಬಂದಿದೆ ಇನ್ನು ಮುಂದೆ ಮತ್ತೇ ಈ ಜೋಡಿ ಒಟ್ಟಿಗೆ ಬರಲಿದ್ಯಾ ಎನ್ನುವುದನ್ನು ನೊಡಬೇಕಿದೆ.

More from Filmibeat

English summary
Rashmika Mandanna Openup On Dating With Vijay Devarakonda, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X