ನಾಗ ಚೈತನ್ಯ ಸಿನಿಮಾದಿಂದ ಕೀರ್ತಿ ಸುರೇಶ್ ಔಟ್? 'ಮಹಾನಟಿ' ಜಾಗಕ್ಕೆ ಬಂದ ರಶ್ಮಿಕಾ?

By ಫಿಲ್ಮ್ ಡೆಸ್ಕ್

ನಟಿ ರಶ್ಮಿಕಾ ಮಂದಣ್ಣ ಸದ್ಯ ತೆಲುಗು ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಟಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ರಶ್ಮಿಕಾ ಎಲ್ಲಾ ನಾಯಕಿಯರನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದ್ದಾರೆ. ಸದ್ಯ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವ ರಶ್ಮಿಕಾ, ಈಗ ಮತ್ತೊಂದು ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

Recommended Video

ದಾರವಾಹಿಯಿಂದ ಸಿನಿಮಾ ವರೆಗೆ ಶತಮರ್ಷನ್ ಅವಿನಾಶ್ ಪಯಣ ಹೇಗಿತ್ತು | Shatamarshan Avinash | Filmibeat Kannada

ಹೌದು, ತೆಲುಗು ನಟ ನಾಗಚೈತನ್ಯ ಅಭಿನಯದ ಅಭಿನಯದ ಮುಂದಿನ ಸಿನಿಮಾಗೆ ರಶ್ಮಿಕಾ ನಾಯಕಿ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ. ಅಂದ್ಹಾಗೆ ಈ ಸಿನಿಮಾಗೆ ಮೊದಲು ನಟಿ ಕೀರ್ತಿ ಸುರೇಶ್ ಆಯ್ಕೆಯಾಗಿದ್ರಂತೆ. ಆದರೀಗ ಕೀರ್ತಿ ಔಟ್ ಆಗಿದ್ದು, ಆ ಜಾಗಕ್ಕೆ ನಟಿ ರಶ್ಮಿಕಾ ಬಂದಿದ್ದಾರೆ. ಮುಂದೆ ಓದಿ...

ನಾಗ್ ಚೈತನ್ಯ ಮತ್ತು ವಿಕ್ರಮ್ ಕುಮಾರ್ ಸಿನಿಮಾ

ನಾಗ್ ಚೈತನ್ಯ ಮತ್ತು ವಿಕ್ರಮ್ ಕುಮಾರ್ ಸಿನಿಮಾ

ನಿರ್ದೇಶಕ ವಿಕ್ರಮ್ ಕೆ ಕುಮಾರ್ ಅವರ ಮುಂದಿನ ಸಿನಿಮಾದಲ್ಲಿ ನಟ ನಾಗಚೈತನ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೆ ಚಿತ್ರಕ್ಕೆ ಟೈಟಲ್ ಫಿಕ್ಸ್ ಮಾಡುವ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಇದರ ನಡುವೆ ಈಗ ಚಿತ್ರಕ್ಕೆ ನಾಯಕಿ ಯಾರು ಎನ್ನುವ ಬಗ್ಗೆಯು ಮಾತುಕತೆ ನಡೆಯುತ್ತಿದೆ. ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ರಶ್ಮಿಕಾ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಕೀರ್ತಿ ಸುರೇಶ್ ಮತ್ತು ರಶ್ಮಿಕಾ ನಡುವೆ ಪೈಪೋಟಿ

ಕೀರ್ತಿ ಸುರೇಶ್ ಮತ್ತು ರಶ್ಮಿಕಾ ನಡುವೆ ಪೈಪೋಟಿ

ನಾಗ ಚೈತನ್ಯ ಮತ್ತು ವಿಕ್ರಮ್ ಸಿನಿಮಾಗೆ ಇಬ್ಬರು ಖ್ಯಾತ ನಟಿಯರ ನಡುವೆ ಪೈಪೋಟಿ ನಡೆಯುತ್ತಿದೆ. ಕೀರ್ತಿ ಸುರೇಶ್ ಮತ್ತು ನಟಿ ರಶ್ಮಿಕಾ ಮಂದಣ್ಣ ಇಬ್ಬರಲ್ಲಿ ಯಾರು ನಾಯಕಿಯಾಗ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ. ಈಗಾಗಲೆ ಕೀರ್ತಿ ಸುರೇಶ್ ಫೈನಲ್ ಆಗಿದ್ದರು ಆದರೀಗ ಕೀರ್ತಿ ಸಿನಿಮಾದಿಂದ ಔಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

ನಾಗ್ ಚೈತನ್ಯಗೆ ನಾಯಕಿಯಾಗ್ತಾರಾ ರಶ್ಮಿಕಾ?

ನಾಗ್ ಚೈತನ್ಯಗೆ ನಾಯಕಿಯಾಗ್ತಾರಾ ರಶ್ಮಿಕಾ?

ನಟಿ ರಶ್ಮಿಕಾ ಮಂದಣ್ಣ ಈಗಾಗಲೆ ತೆಲುಗಿನಲ್ಲಿ ಅನೇಕ ಸ್ಟಾರ್ ನಟರ ಜೊತೆ ನಾಯಕಿಯಾಗಿ ನಟಿಸಿದ್ದಾರೆ. ಈಗ ನಾಗ್ ಚೈತನ್ಯ ಅಭಿನಯದ ಮುಂದಿನ ಸಿನಿಮಾದಲ್ಲಿ ನಟಿ ರಶ್ಮಿಕಾ ನಾಯಕಿಯಾಗಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ನಾಗ್ ಚೈತನ್ಯ ಜೊತೆ ರಶ್ಮಿಕಾ ನಾಯಕಿಯಾಗಿ ಅಭಿನಯಿಸುತ್ತಾರೆ ಎನ್ನುವ ಮಾತು ವರ್ಷದಿಂದ ಕೇಳಿಬರುತ್ತಿದೆ. ಆದರೀಗ ಸಮಯ ಬಂದಿದೆ. ಆಯೋಜಕರು ಸಹ ರಶ್ಮಿಕಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲು ಉತ್ಸುಕರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಪುಷ್ಪ ಸಿನಿಮಾದಲ್ಲಿ ನಟಿ ರಶ್ಮಿಕಾ

ಪುಷ್ಪ ಸಿನಿಮಾದಲ್ಲಿ ನಟಿ ರಶ್ಮಿಕಾ

ಪುಷ್ಪಾ ಸಿನಿಮಾ ನಿರ್ದೇಶಕ ಸುಕುಮಾರನ್ ಮೊದಲಿಗೆ ನಾಯಕಿಯಾಗಿ ಸಮಂತಾ ಅವರನ್ನು ಆಯ್ಕೆ ಮಾಡಿದ್ದರಂತೆ. ನಂತರ ನಾಯಕಿ ಪಾತ್ರಕ್ಕೆ ಸಮಂತಾಗಿಂತಲೂ ರಶ್ಮಿಕಾ ಹೆಚ್ಚು ಸೂಕ್ತ ಎನಿಸಿದ ಕಾರಣ ರಶ್ಮಿಕಾ ಅವರನ್ನು ಆಯ್ಕೆ ಮಾಡಿದರಂತೆ. ಸಮಂತಾ ರಿಜೆಕ್ಟ್ ಮಾಡಿದ ಕಾರಣ ರಶ್ಮಿಕಾ ಪುಷ್ಪ ಸಿನಿಮಾದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸದ್ಯ ರಶ್ಮಿಕಾ ಪುಷ್ಪ ಸಿನಿಮಾದಲ್ಲಿ ನಿರತರಾಗಿದ್ದಾರೆ.

More from Filmibeat

English summary
Rashmika mandanna or Keerthy Suresh leading lady opposite Naga Chaitanya next.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X