5 ವರ್ಷಕ್ಕೆ 5 ಫ್ಲಾಟ್ ಖರೀದಿಸಿದ ರಶ್ಮಿಕಾ? ಕೊನೆಗೂ ಪ್ರತಿಕ್ರಿಯಿಸಿದ ಕಿರಿಕ್ ಬೆಡಗಿ
ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ಣ ಚಿತ್ರರಂಗಕ್ಕೆ ಬಂದು 6 ವರ್ಷಗಳ ಕಳೆದಿದೆ. 'ಗೀತಾ ಗೋವಿಂದಂ' ಸಿನಿಮಾ ಸಕ್ಸಸ್ ನಂತರ ಸಾನ್ವಿ ಕ್ರೇಜ್ ಹೆಚ್ಚಾಯಿತು. ಕಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲೂ ನಟಿಸಲು ಆರಂಭಿಸಿದರು. ಅದಕ್ಕೆ ತಕ್ಕಂತೆ ಸಂಭಾವನೆ ಕೂಡ ಹೆಚ್ಚಾಯಿತು.
ಕಳೆದ 5 ವರ್ಷಗಳಲ್ಲಿ ರಶ್ಮಿಕಾ ಮಂದಣ್ಣ ನಸೀಬೇ ಬದಲಾಗಿ ಹೋಗಿದೆ. ಬಿಗ್‌ಬಿ ಅಮಿತಾಬ್ ಬಚ್ಚನ್ ಜೊತೆಗೂ ನಟಿಸುವ ಮಟ್ಟಿಗೆ ಬೆಳೆದಿದ್ದಾರೆ. ರಶ್ಮಿಕಾ ಕ್ರೇಜ್, ಸಂಭಾವನೆ, ಗಳಿಕೆ ಎಲ್ಲಾ ನೋಡಿ ಸೋಶಿಯಲ್ ಮೀಡಿಯಾದಲ್ಲೊಂದು ಪೋಸ್ಟ್ ವೈರಲ್ ಆಗಿದೆ. ರಶ್ಮಿಕಾ 5 ವರ್ಷಗಳಲ್ಲಿ ದೇಶದ 5 ಬೇರೆ ಬೇರೆ ನಗರಗಳಲ್ಲಿ 5 ಫ್ಲಾಟ್‌ಗಳನ್ನು ಖರೀದಿಸಿದ್ದಾರೆ ಎಂದು ಆ ಟ್ವೀಟ್‌ನಲ್ಲಿ ಬರೆಯಲಾಗಿದೆ. ನೋಡ ನೋಡುತ್ತಲೇ ಈ ಟ್ವೀಟ್ ವೈರಲ್ ಆಗಿತ್ತು.
ರಶ್ಮಿಕಾ ಮಂದಣ್ಣ ಅಭಿಮಾನಿಗಳು ಈ ಪೋಸ್ಟ್ ನೋಡಿ ಹುಬ್ಬೇರಿಸಿದ್ದರು. ತಮ್ಮ ನೆಚ್ಚಿನ ನಟಿಯ ಕ್ರೇಜ್ ಬಗ್ಗೆ ಖುಷಿಯಾಗಿದ್ದರು. ನೆಟ್ಟಿಗರೊಬ್ಬರು ರಿಪ್ಲೇ ಮಾಡಿ "ಇದು ನಿಜವೇ ಆಗಿದ್ದರೆ ನನಗೆ ಒಂದು ಫ್ಲಾಟ್ ಗಿಫ್ಟ್ ಆಗಿ ಕೊಡಿ ರಶ್ಮಿಕಾ" ಎಂದಿದ್ದರು.

ಟ್ವಿಟರ್ ಪೋಸ್ಟ್ ಸಖತ್ ವೈರಲ್
ಅಷ್ಟಕ್ಕೂ ಈ ಪೋಸ್ಟ್‌ನಲ್ಲಿ ಏನಿದೆ ಅಂದ್ರೆ, ಇಂಡಸ್ಟ್ರಿಗೆ ಬಂದ 5 ವರ್ಷಗಳಲ್ಲಿ ರಶ್ಮಿಕಾ ಮಂದಣ್ಣ 5 ಜಾಗಗಳಲ್ಲಿ 5 ಐಷಾರಾಮಿ ಫ್ಲಾಟ್‌ಗಳ ಒಡತಿಯಾಗಿದ್ದಾರೆ. ಹೈದರಾಬಾದ್, ಗೋವಾ, ಮುಂಬೈ, ಬೆಂಗಳೂರು ಹಾಗೂ ತಮ್ಮ ಹುಟ್ಟೂರು ಕೊಡಗಿನಲ್ಲಿ ಫ್ಲಾಟ್ ಖರೀದಿದ್ದಾರೆ. ಕಳೆದೆರಡು ವರ್ಷಗಳಿಂದ ಪ್ರಾಪರ್ಟಿ ಮೇಲೆ ರಶ್ಮಿಕಾ ಹಣ ಹೂಡಿಕೆ ಮಾಡುತ್ತಿದ್ದಾರೆ ಎಂದು ಬರೆಯಲಾಗಿದೆ. ಈ ಪೋಸ್ಟ್ ಸಖತ್ ವೈರಲ್ ಆಗಿದೆ.

ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ
ಇಷ್ಟೆಲ್ಲಾ ವೈರಲ್ ಆಗ್ತಿದೆ ಅಂದಮೇಲೆ ಸೋಶಿಯಲ್ ಮೀಡಿಯಾದಲ್ಲಿ ಆಕ್ವೀಟ್ ಆಗಿರುವ ರಶ್ಮಿಕಾ ಕಣ್ಣಿಗೆ ಇದು ಬೀಳದೇ ಇರುತ್ತದೆಯೇ? ಖಂಡಿತ ರಶ್ಮಿಕಾ ಕೂಡ ಈ ಟ್ವೀಟ್ ನೋಡಿದ್ದಾರೆ. ಅದನ್ನು ನೋಡಿ ಅಳುವ ಎಮೋಜಿ ಹಾಕಿ "ಇದು ನಿಜ ಆಗಬೇಕು ಎಂದು ನಾನು ಆಶಿಸುತ್ತೇನೆ" ಎಂದು ರಿಪ್ಲೇ ಮಾಡಿದ್ದಾರೆ. ಆ ಮೂಲಕ ಇದೆಲ್ಲ ಸುಳ್ಳು ಸುದ್ದಿ. ಆದರೆ ಇದು ನಿಜವಾಗಲಿ ಎಂದು ಪ್ರಾರ್ಥಿಸಿದ್ದಾರೆ.

ರಶ್ಮಿಕಾ ಐಷಾರಾಮಿ ಜೀವನ
ರಶ್ಮಿಕಾ ಕ್ರೇಜ್‌ಗೆ ತಕ್ಕಂತೆ ಸಂಭಾವನೆ ಹೆಚ್ಚಾಗಿರೋದು ನಿಜ. ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಜಾಹಿರಾತು ಅದು, ಇದು ಅಂತ ಸಾಕಷ್ಟು ಸಂಪಾದನೆ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಲೈಫ್‌ಸ್ಟೈಲ್ ಕೂಡ ಬದಲಾಗಿದೆ. ಕೆಲ ದಿನಗಳ ಹಿಂದೆ ರೇಂಜ್ ರೋವರ್ ಸ್ಪೋರ್ಟ್ಸ್ ಕಾರ್ ಖರೀದಿಸಿದ್ದರು. ಅದನ್ನು ಫೋಟೊ ಸಮೇತ ಹಂಚಿಕೊಂಡಿದ್ದರು. ಫಾರಿನ್ ಟ್ರಿಪ್ ಅಂತೆಲ್ಲಾ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಆದರೆ 5 ವರ್ಷಕ್ಕೆ 5 ಕಡೆ 5 ಫ್ಲಾಟ್ ಎನ್ನುವುದೆಲ್ಲ ಸುಳ್ಳು.

2 ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿ
ರಶ್ಮಿಕಾ ನಟನೆಯ 'ವಾರಿಸು' ಸಿನಿಮಾ ಸಖತ್ ಸದ್ದು ಮಾಡ್ತಿದೆ. ಇನ್ನು ಅಲ್ಲು ಅರ್ಜುನ್ ಜೋಡಿಯಾಗಿ 'ಪುಷ್ಪ'- 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಒನ್ಸ್ ಅಗೇನ್ ಶ್ರೀವಲ್ಲಿ ಆಗಿ ಪ್ರೇಕ್ಷಕರಿಗೆ ಮೋಡಿ ಮಾಡಲು ಬರ್ತಿದ್ದಾರೆ. ಇನ್ನು ಬಾಲಿವುಡ್‌ನಲ್ಲಿ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ 'ಗುಡ್‌ಬೈ' ಸಿನಿಮಾ ಸೋಲುಂಡಿತ್ತು. 'ಮಿಷನ್ ಮಜ್ನು' ನೇರವಾಗಿ ಓಟಿಟಿಗೆ ಬಂದು ಕೊಂಚ ಸದ್ದು ಮಾಡಿತ್ತು. ಇದೀಗ ರಣ್‌ಬೀರ್ ಕಪೂರ್ ಜೊತೆ ಅನಿಮಲ್ ಎನ್ನುವ ಚಿತ್ರದಲ್ಲಿ ನಟಿಸ್ತಿದ್ದಾರೆ. ಸಂದೀಪ್ ರೆಡ್ಡಿ ವಂಗಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.


Click it and Unblock the Notifications











