ಕೀರ್ತಿ ಸುರೇಶ್ ಅವರನ್ನು ಹಾಡಿಹೊಗಳಿದ ನಟಿ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ ಲಾಕ್ ಡೌನ್ ನಲ್ಲಿಯೂ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗೆ ನಟಿ ರಶ್ಮಿಕಾ, ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ಅವರನ್ನು ಹಾಡಿ ಹೊಗಳಿದ್ದಾರೆ. ಸಾಮಾನ್ಯವಾಗಿ ನಟಿಮಣಿಯರಿಗೆ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ ಎಂದು ಹೇಳಲಾಗುತ್ತೆ. ಆಧರೆ ರಶ್ಮಿಕಾ, ಕೀರ್ತಿ ಸುರೇಶ್ ಅವರನ್ನು ಮನಸಾರೆ ಹಾಡಿ ಹೊಗಳಿದ್ದಾರೆ.
Recommended Video
ಅಷ್ಟಕ್ಕೂ ರಶ್ಮಿಕಾ ಹೊಗಳಲು ಕಾರಣ, ಪೆಂಗ್ವಿನ್ ಸಿನಿಮಾ. ಕೀರ್ತಿ ಸುರೇಶ್ ಅಭಿನಯದ ಪೆಂಗ್ವಿನ್ ಸಿನಿಮಾ ಜೂನ್ 19ರಂದು ಒಟಿಟಿಯಲ್ಲಿ ರಿಲೀಸ್ ಆಗಿದೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೀರ್ತಿ ಸುರೇಶ್ ಸಿನಿಮಾ ನೋಡಿ ನಟಿ ರಶ್ಮಿಕಾ ಕೂಡ ಹಾಡಿ ಹೊಗಳಿದ್ದಾರೆ.
"ಪೆಂಗ್ವಿನ್ ಸಿನಿಮಾ ನೋಡಿದೆ. ಕೀರ್ತಿ ಸುರೇಶ್ ಅಭಿನಯ ಅದ್ಭುತವಾಗಿದೆ. ಚಿತ್ರಲ್ಲಿ ಸೈರಸ್ ಕುಟುಂಬವನ್ನು ಹೇಗೆ ರಕ್ಷಿಸುತ್ತಾನೆ ಎಂಬುದರಂತೆ ಸುಂದರವಾಗಿದೆ. ಎಲ್ಲಾ ತಾಯಂದಿರಿಗೆ ಸಿನಿಮಾ ಕನೆಕ್ಟ್ ಆಗಲಿದೆ. ನಿರ್ದೇಶಕ ಈಶ್ವರ್ ಕಾರ್ತಿಕ್ ಮತ್ತು ನಿರ್ಮಾಪಕ ಕಾರ್ತಿಕ್ ಸುಬ್ಬರಾಜ್ ಗೆ ವಿಶೇಷವಾಗಿ ಅಭಿನಂದನೆಗಳು. ಇಡಿ ಪೆಂಗ್ವಿನ್ ತಂಡಕ್ಕೆ ಶುಭಾಶಯಗಳು" ಎಂದು ರಶ್ಮಿಕಾ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

ಪೆಂಗ್ವಿನ್ ತಾಯಿ ಮಗನ ಕಥೆ. ಕಳೆದುಹೋದ ಮಗನನ್ನು ಹುಡುಕುವುದೆ ಸಿನಿಮಾದ ಹೈಲೆಟ್ಸ್. ತಾಯಿ ಪಾತ್ರದಲ್ಲಿ ಕೀರ್ತಿ ಸುರೇಶ್ ಕಾಣಿಸಿಕೊಂಡಿದ್ದಾರೆ. ಉಳಿದ್ದಂತೆ ಸಿನಿಮಾದಲ್ಲಿ ಎಲ್ಲಾ ಹೊಸಬರೆ ಕಾಣಿಸಿಕೊಂಡಿದ್ದಾರೆ. ಥ್ರಿಲ್ಲಿಂಗ್ ಅಂಶಗಳೊಂದಿಗೆ ಸಿನಿಮಾ ನೋಡುಗರ ಮನಗೆದ್ದಿದೆ. ಲಾಕ್ ಡೌನ್ ಕಾರಣ ಪೆಂಗ್ವಿನ್ ಒಟಿಟಿಯಲ್ಲಿ ರಿಲೀಸ್ ಆಗಿದೆ.


Click it and Unblock the Notifications











