ಬಾಡಿ ಶೇಮಿಂಗ್ ಮಾಡಿದ್ರು, ಬೆದರಿಕೆ ಹಾಕಿದ್ರು ಆದರೂ ನಾನು ಅವಿತುಕೊಂಡಿಲ್ಲ: ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ದಕ್ಷಿಣ ಭಾರತೀಯ ಸಿನಿಮಾರಂಗದ ಬಹುಬೇಡಿಕೆಯ ನಟಿ. ತೆಲುಗು ಸಿನಿಮಾದಲ್ಲಿ ಗಟ್ಟಿಯಾಗಿ ಬೇರುರಿರುವ ರಶ್ಮಿಕಾ, ತೆಲುಗಿನಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ.

Recommended Video

ನಾನು ಯಾರಿಗೂ ತಲೆಕೆಡಿಸಿಕೊಳ್ಳೋದಿಲ್ಲ ಎಂದ ರಶ್ಮಿಕಾ | Rashmika Mandanna | Kannada

ವೃತ್ತಿ ಜೀವನದಲ್ಲಿ ಉತ್ತುಂಗಕ್ಕೆ ಏರಿರುವ ರಶ್ಮಿಕಾ, ಅತೀ ಹೆಚ್ಚು ಬಾರಿ ಟ್ರೋಲ್ ಆಗಿದ್ದಾರೆ. ನಾನಾ ಕಾರಣಗಳಿಗೆ ರಶ್ಮಿಕಾ ಟ್ರೋಲ್ ಗಳಿಗೆ ಆಹಾರವಾಗಿದ್ದಾರೆ. ರಶ್ಮಿಕಾ ವಿರುದ್ಧ ತೀರ ಕೆಳಮಟ್ಟದ ಟ್ರೋಲ್ ಗಳನ್ನು ಮಾಡಲಾಗಿದೆ. ಆದರೂ ರಶ್ಮಿಕಾ ಖ್ಯಾತಿ ಕಡಿಮೆ ಆಗಿಲ್ಲ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅಭಿನಯಿಸುತ್ತ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಟ್ರೋಲ್ ಗಳಿಗೆ ಹೆದರಿ ಸಾಮಾಜಿಕ ಜಾಲತಾಣದಿಂದನೂ ದೂರ ಸರಿದಿಲ್ಲ. ಈ ಬಗ್ಗೆ ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

"ಪರದೆಯನ್ನು ಸ್ಪರ್ಶಿಸಿದರೆ ನಮಗೆ ಏನು ಬೇಕಾದರು ಸಿಗುತ್ತೆ, ನಾವು ಅಂತಹ ವಯಸ್ಸಿನಲ್ಲಿ ಮತ್ತು ಸಮಯದಲ್ಲಿದ್ದೇವೆ. ಇದು ವ್ಯಕ್ತಿಯನ್ನು ಉಳಿಸಬಹುದು ಅಥವಾ ಕೊಲ್ಲಬಹುದು" ಎಂದಿದ್ದಾರೆ.

Rashmika Mandanna React To Cyber Bullies And Body Shaming

"ನನ್ನನ್ನು ಟ್ರೋಲ್ ಮಾಡಲಾಯಿತು, ನನ್ನನ್ನು ಬಾಡಿ ಶೇಮಿಂಗ್ ಮಾಡಲಾಯಿತು. ಕ್ಯಾರೆಕ್ಟರ್ ಬಗ್ಗೆ ಮಾತನಾಡಿದರು, ನಾನು ಸೈಬರ್ ಬೆದರಿಕೆಗಳಿಗೆ ಒಳಗಾದೆ. ಆದರೆ ನಾನು ಇನ್ನೂ ಸಾಮಾಜಿಕ ಜಾಲತಾಣದಿಂದ ಅವಿತುಕೊಂಡಿಲ್ಲ ಎಂದರೆ ನಕರಾತ್ಮಕತೆಗಳಿಂತ ಹೆಚ್ಚು ಒಳ್ಳೆಯದು ಇದೆ ಎಂದು ನನಗೆ ತಿಳಿದಿದೆ. ತುಂಬಾ ನಕರಾತ್ಮಕತೆಯನ್ನು ನೋಡಿದಾಗ ನೀವು ಕೇವಲ ನಕರಾತ್ಮಕತೆನ್ನು ಮಾತ್ರ ನಂಬಲು ಪ್ರಾರಂಭಿಸುತ್ತೀರಿ. ಇದು ಒಂದು ಕೇವಲ ಸಣ್ಣ ಹಂತವಾಗಿದ್ದರೂ ಸಹ ನಂಬುತ್ತೇವೆ. ಡಿಜಿಟಲ್ ವೇದಿಕೆಯನ್ನು ಒಳ್ಳೆಯದಕ್ಕೆ ಬಳಸಲು ಆರಂಭಿಸಬೇಕು ಅಂತ ನಾನು ನಂಬುತ್ತೇನೆ" ಎಂದು ಬರೆದುಕೊಂಡಿದ್ದಾರೆ.

ರಶ್ಮಿಕಾ ಸದ್ಯ ತೆಲುಗಿನ ಪುಷ್ಪಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ಇತ್ತೀಚಿಗೆ ನಟ ಶರ್ವಾನಂದ್ ಅಭಿನಯದ ಹೊಸ ಸಿನಿಮಾಗೂ ಸಹಿ ಮಾಡಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾದ ಮುಹೂರ್ತ ಮಾಡಲಾಗಿದೆ. ಇನ್ನೂ ಕನ್ನಡದಲ್ಲಿ ಪೊಗರು ಸಿನಿಮಾ ರಿಲೀಸ್ ಗೆ ಎದುರು ನೊಡುತ್ತಿದ್ದಾರೆ.

More from Filmibeat

English summary
Actress Rashmika Mandanna speak up against troll, cyber bullies and body Shaming.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X