'ನ್ಯಾಷನಲ್ ಕ್ರಶ್' ಪಟ್ಟದ ಬಗ್ಗೆ ರಶ್ಮಿಕಾ ಮಂದಣ್ಣ ಹೇಳಿದ್ದೇನು?
ರಶ್ಮಿಕಾ ಮಂದಣ್ಣ ಸದ್ಯ ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ತೆಲುಗು ಸಿನಿಮಾ ರಂಗದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಸದಾ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ.
Recommended Video
ತಮಿಳು ಮತ್ತು ತೆಲುಗಿನಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿರುವ ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ, ದೇಶದಾದ್ಯಂತ ಸದ್ದು ಮಾಡುತ್ತಿದ್ದಾರೆ. ಕರ್ನಾಟಕ ಕ್ರಶ್ ಎನಿಸಿಕೊಂಡಿದ್ದ ರಶ್ಮಿಕಾ ಈಗ ನ್ಯಾಷನಲ್ ಕ್ರಶ್ ಆಗಿದ್ದಾರೆ. ಈ ವಿಷಯವನ್ನು ಸ್ವತಹ ಗೂಗಲ್ ಹೇಳುತ್ತಿದೆ. ಹೌದು, ಗೂಗಲ್ ನಲ್ಲಿ ನ್ಯಾಷನಲ್ ಕ್ರಶ್ ಆಫ್ ಇಂಡಿಯಾ ಎಂದು ಟೈಪಿಸಿದರೆ ರಶ್ಮಿಕಾ ಮಂದಣ್ಣ ಹೆಸರು ಬರುತ್ತೆ. ಈ ಬಗ್ಗೆ ಈಗ ರಶ್ಮಿಕಾ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ..

ಎಲ್ಲರನ್ನು ಹಿಂದಕ್ಕಿ ಮುನ್ನುಗ್ಗಿದ ರಶ್ಮಿಕಾ
ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಶ್ ಆಗಿದ್ದಾರೆ, ಈ ಹಿಂದೆ ನ್ಯಾಷನಲ್ ಕ್ರಶ್ ಎನಿಸಿಕೊಂಡಿದ್ದ ಪ್ರಿಯಾ ಪ್ರಕಾಶ್ ವಾರಿಯರ್, ದಿಶಾ ಪಟಾನಿ ಅವರುಗಳನ್ನು ಹಿಂದಿಕ್ಕಿ 'ನ್ಯಾಷನಲ್ ಕ್ರಶ್ ಆಫ್ ದಿ ಇಂಡಿಯಾ' ಎಸಿನಿಕೊಂಡಿದ್ದಾರೆ ರಶ್ಮಿಕಾ. ಈ ವಿಚಾರ ರಶ್ಮಿಕಾ ಅಭಿಮಾನಿಗಳಿಗೆ ಸಂತಸ ತಂದಿದೆ.

ನ್ಯಾಷನಲ್ ಕ್ರಶ್ ಹಿಂದಿನ ಸತ್ಯವೇನು?
ಗೂಗಲ್ ರಶ್ಮಿಕಾ ಮಂದಣ್ಣರನ್ನು ನ್ಯಾಷನಲ್ ಕ್ರಶ್ ಎಂದು ಘೋಷಿಸಲು ಕಾರಣ, ರಶ್ಮಿಕಾ ಅಭಿಮಾನಿಗಳು ನ್ಯಾಷನಲ್ ಕ್ರಶ್ ರಶ್ಮಿಕಾ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡಿದ್ದರು. ಹ್ಯಾಷ್ ಟ್ಯಾಗ್ ಹಾಕಿ ವೈರಲ್ ಮಾಡಿದ್ದರು. ಹಾಗಾಗಿ ಗೂಗಲ್ ನಲ್ಲಿ ನ್ಯಾಷನಲ್ ಕ್ರಶ್ ಆಫ್ ಇಂಡಿಯಾ ಎಂದು ಟೈಪ್ ಮಾಡಿದರೆ ರಶ್ಮಿಕಾ ಹೆಸರು ಬರುತ್ತೆ.

ರಶ್ಮಿಕಾ ಪ್ರತಿಕ್ರಿಯೆ
ನ್ಯಾಷನಲ್ ಕ್ರಶ್ ಪಟ್ಟದಿಂದ ಫುಲ್ ಖುಷ್ ಆಗಿರುವ ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. 'ವಾವ್.. ನನ್ನ ಜನರು ನಿಜಕ್ಕೂ ಲೆಜೆಂಡರಿ. ಎಲ್ಲರೂ ತುಂಬಾ ಕ್ಯೂಟ್..ಅಲ್ಲವೇ? ಎಲ್ಲರೂ ನನ್ನ ಹೃದಯ' ಎಂದು ಟ್ವೀಟ್ ಮಾಡಿದ್ದಾರೆ.

ರಶ್ಮಿಕಾ ಸಿನಿಮಾಗಳು
ರಶ್ಮಿಕಾ ಸದ್ಯ ತೆಲುಗು ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿನಲ್ಲಿ ಸದ್ಯ ಅಲ್ಲು ಅರ್ಜುನ್ ಜೊತೆ 'ಪುಷ್ಪಾ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಜೊತೆಗೆ ಶರ್ವಾನಂದ್ ಜೊತೆ ಒಂದು ಸಿನಿಮಾದಲ್ಲಿ ಅಭಿನಯಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ತಮಿಳಿನಲ್ಲಿ 'ಸುಲ್ತಾನ್' ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಕನ್ನಡದಲ್ಲಿ 'ಪೊಗರು' ಸಿನಿಮಾ ಪೋಸ್ಟ್ ಪ್ರೊಡಕ್ಷನ್ ನಲ್ಲಿ ನಿರತವಾಗಿದೆ.


Click it and Unblock the Notifications











