"ರಶ್ಮಿಕಾ ಕೈಯಲ್ಲಿ ವಿಜಯ್ ಉಂಗುರ.. ಒಂದೇ ಮನೆಯಲ್ಲಿ ವಾಸ?" ನೆಟ್ಟಿಗರ ತನಿಖೆ ಬಗ್ಗೆ ಮೌನ ಮುರಿದ ಕಿರಿಕ್ ಬೆಡಗಿ

ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಡೇಟಿಂಗ್ ನಡೆಸುತ್ತಿದ್ದಾರೆ, ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ, ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಾನೇ ಇದೆ. ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಎಂದು ಇಬ್ಬರು ಹೇಳ್ತಾ ಬರ್ತಿದ್ದಾರೆ. ಆದರೆ ಲವ್ವಿ ಡವ್ವಿ ವದಂತಿಗಳಿಗೆ ಮಾತ್ರ ಬ್ರೇಕ್ ಬಿದ್ದಿಲ್ಲ. ಇಬ್ಬರು ಡೇಟಿಂಗ್‌ನಲ್ಲಿದ್ದಾರೆ ಎಂದು ನೆಟ್ಟಿಗರು ಸಾಕ್ಷಿ ಹುಡುಕುವ ಪ್ರಯತ್ನ ಮಾಡ್ತಿದ್ದಾರೆ.

ಈ ಹಿಂದೆ ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಂ ಲೈವ್‌ ಬಂದಿದ್ದಾಗ ಅದೇ ರೂಮ್‌ನಲ್ಲಿದ್ದ ವಿಜಯ್ ದೇವರಕೊಂಡ ಮಾತನಾಡುವ ವಾಯ್ಸ್ ಕೇಳಿಸಿತ್ತು ಎಂದು ಕೆಲವರು ವಾದಿಸಿದ್ದರು. ಆದರೆ ಇದೆಲ್ಲಾ ಸುಳ್ಳು "ಕೆಲವೊಮ್ಮೆ ನಮಗೆ ಬೇಕಾದವರ ಧ್ವನಿಯನ್ನೇ ಕೇಳುತ್ತಿದ್ದೇವೆ ಎನಿಸುತ್ತದೆ. ಹಾಗೆಯೇ ಆ ವಿಡಿಯೋದಲ್ಲಿ ವಿಜಯ್ ಧ್ವನಿ ಕೇಳಿದಂತೆ ಎಲ್ಲರಿಗೂ ಅನ್ನಿಸಿದೆ" ಎಂದು ರಶ್ಮಿಕಾ ಹೇಳಿದ್ದರು. ಆದರೆ ಈಗ ಮತ್ತೊಮ್ಮೆ ನೆಟ್ಟಿಗರು ಇಂತದ್ದೇ ಸಾಕ್ಷಿ ಹುಡುಕಿದ್ದಾರೆ. ರಶ್ಮಿಕಾ ಹಾಗೂ ವಿಜಯ್ ಲಿವ್‌ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂದು ಹೇಳಿದ್ದಾರೆ.

Rashmika Mandanna reacts to Vijay Deverakonda dating rumours once Again

"ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿರುವುದು ಸಾಬೀತಾಗಿದೆ. ವಿಜಯ್ ದೇವರಕೊಂಡ ಇಷ್ಟದ ಉಂಗುರ ರಶ್ಮಿಕಾ ಕೈಯಲ್ಲಿದೆ. ಇಬ್ಬರು ಒಂದೇ ಮನೆಯಲ್ಲಿ ಒಂದೇ ಕೋಣೆಯಲ್ಲಿ ವಾಸಿಸುತ್ತಿದ್ದಾರೆ. ಶೀಘ್ರದಲ್ಲೇ ನಾವು ಒಂದೊಳ್ಳೆ ಸುದ್ದಿ ಕೇಳುತ್ತೇನೆ" ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ಗೆ ರಿಪ್ಲೇ ಮಾಡಿರುವ ರಶ್ಮಿಕಾ "ಅಯ್ಯೋ.. ಅತಿಯಾಗಿ ಯೋಚಿಸಬೇಡಪ್ಪಾ" ಎಂದು ಕಾಮೆಂಟ್ ಮಾಡಿದ್ದಾರೆ. ಆ ಮೂಲಕ ಇದೆಲ್ಲಾ ನಿಮ್ಮ ಊಹೆ ಅಷ್ಟೇ. ಸುಮ್ಮನಿರಿ ಎಂದಿದ್ದಾರೆ.

'ಚಲ್ಲೋ' ಸಿನಿಮಾ ಮೂಲಕ ಟಾಲಿವುಡ್ ಪ್ರವೇಶಿಸಿದ ರಶ್ಮಿಕಾ 'ಗೀತಾ ಗೋವಿಂದಂ' ಚಿತ್ರದಲ್ಲಿ ವಿಜಯ್ ದೇವರಕೊಂಡಗೆ ಜೊತೆಯಾಗಿದ್ದರು. ಅಲ್ಲಿಂದಲೇ ಇಬ್ಬರು ಆತ್ಮೀಯ ಸ್ನೇಹಿತರಾಗಿದ್ದರು. ಇನ್ನು ಸಿನಿಮಾದಲ್ಲಿದ್ದ ಇಬ್ಬರ ಲಿಪ್‌ಲಾಕ್ ಸೀನ್‌ ಕಾರಣಕ್ಕೆ ರಕ್ಷಿತ್ ಶೆಟ್ಟಿ ಜೊತೆಗಿನ ರಶ್ಮಿಕಾ ಮದುವೆ ಮುರಿದುಬಿತ್ತು ಎನ್ನುವ ಮಾತುಗಳು ಕೇಳಿಬಂದಿತ್ತು. 'ಗೀತಾ ಗೋವಿಂದಂ' ನಂತರ 'ಡಿಯರ್ ಕಾಮ್ರೆಡ್' ಚಿತ್ರದಲ್ಲಿ ಜೋಡಿ ಮತ್ತೆ ಒಂದಾಗಿ ನಟಿಸಿತ್ತು. ಇನ್ನು ವಿಜಯ್ ಸ್ನೇಹಿತರ ಬಳಗದಲ್ಲಿ ರಶ್ಮಿಕಾ ಗುರ್ತಿಸಿಕೊಂಡಿದ್ದಾರೆ. ಸ್ನೇಹಿತರ ಜೊತೆಗೆ ಆಗಾಗ್ಗೆ ಪಾರ್ಟಿ, ಟೂರ್ ಅಂತ ಎಂಜಾಯ್ ಮಾಡ್ತಿರ್ತಾರೆ.

ಹೊಸ ವರ್ಷದ ಸಂಭ್ರಮದಲ್ಲಿ ಸ್ನೇಹಿತರು ವಿದೇಶ ಪ್ರವಾಸಕ್ಕೆ ಹೋಗಿದ್ದರು. ಆ ನಂತರ ವಿಜಯ್ ಫ್ಯಾಮಿಲಿ ಜೊತೆ ರಶ್ಮಿಕಾ ದುಬೈ ಪ್ರವಾಸ ಕೈಗೊಂಡಿದ್ದರು. ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಲಿವ್ ಇನ್ ರಿಲೇಷನ್‌ಶಶಿಪ್‌ನಲ್ಲಿದ್ದಾರೆ. ವಿಜಯ್ ದೇವರಕೊಂಡ ಕೈಯಲ್ಲಿದ್ದ ಉಂಗುರ ರಶ್ಮಿಕಾ ಕೈಯಲ್ಲಿದೆ. ಇನ್ನು ವಿಜಯ್ ಈ ಹಿಂದೆ ಕ್ಲಿಕ್ಕಿಸಿದ್ದ ಫೋಟೊ ಹಾಗೂ ರಶ್ಮಿಕಾ ಹೊಸ ವಿಡಿಯೋದ ಬ್ಯಾಕ್‌ಗ್ರೌಂಡ್‌ನಲ್ಲಿ ಇಬ್ಬರು ಒಂದೇ ಮನೆಯಲ್ಲಿ ವಾಸವಾಗಿದ್ದಾರೆ ಎನ್ನುವ ಲೆಕ್ಕಾಚಾರಕ್ಕೆ ಕೆಲವರು ಬರ್ತಿದ್ದಾರೆ. ಅದಕ್ಕೆ ಕೊಡಗಿನ ಕುವರಿ ಈಗ ಸ್ಪಷ್ಟನೆ ನೀಡಿದ್ದಾರೆ.

ಸಿನಿಮಾಗಳ ವಿಚಾರಕ್ಕೆ ಬಂದರೆ ರಶ್ಮಿಕಾ ಕೈಯಲ್ಲಿ ಸದ್ಯ 4 ಸಿನಿಮಾಗಳಿವೆ. ರಣ್‌ಬೀರ್ ಕಪೂರ್ ಜೊತೆ 'ಅನಿಮಲ್' ಚಿತ್ರದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. 'ಪುಷ್ಪ'-2 ಚಿತ್ರದಲ್ಲಿ ಶ್ರೀವಲ್ಲಿ ಪಾತ್ರ ಮುಂದುವರೆಸಬೇಕಿದೆ. ಇನ್ನು ನಿತಿನ್ ಜೊತೆ ಮತ್ತೊಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಹಿಂದೆ ಈ ಜೋಡಿ 'ಭೀಷ್ಮ' ಚಿತ್ರಕ್ಕೆ ಒಟ್ಟಿಗೆ ಕೆಲಸ ಮಾಡಿತ್ತು. ಅದೇ ತಂಡ ಹೊಸ ಚಿತ್ರಕ್ಕೂ ಜೊತೆಯಾಗುತ್ತಿದೆ.

ಮೊನ್ನೆಯಷ್ಟೆ ರಶ್ಮಿಕಾ ಮಂದಣ್ಣ ನಟನೆಯ 'ರೈನ್‌ಬೋ' ಸಿನಿಮಾ ಸೆಟ್ಟೇರಿತ್ತು. ಇದು ಕೊಡಿಗಿನ ಕುವರಿಯ ಚೊಚ್ಚಲ ಫೀಮೇಲ್ ಓರಿಯಂಟೆಡ್ ಸಿನಿಮಾ. ಏಕಕಾಲಕ್ಕೆ ತಮಿಳು ಹಾಗೂ ತೆಲುಗಿನಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಅಸಲಿಗೆ ಸಮಂತಾ ಈ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ ಮಯೋಸೈಟಿಸ್ ಸಮಸ್ಯೆಯಿಂದ ಸ್ಯಾಮ್ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಹಾಗಾಗಿ 'ರೈನ್‌ಬೋ' ಸಿನಿಮಾ ಕಿರಿಕ್ ಬೆಡಗಿ ಪಾಲಾಗಿದೆ. ಇನ್ನು ನಿನ್ನೆಯಷ್ಟೆ(ಏಪ್ರಿಲ್ 5) ಹುಟ್ಟುಹಬ್ಬ ಆಚರಿಸಿಕೊಂಡ ಚೆಲುವೆಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು.

More from Filmibeat

English summary
Rashmika Mandanna reacts to Vijay Deverakonda dating rumours. She Tweeted Aiyoooo.. don't over think it babu. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X