ಅಂತೂ ಮದುವೆ ಬಗ್ಗೆ ಮೌನ ಮುರಿದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ

ಬಣ್ಣದ ಲೋಕದ ಗಲ್ಲಿ ಗಲ್ಲಿಯಲ್ಲೂ ಈಗ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆಯದ್ದೇ ಸದ್ದು. ಗಾಂಧಿನಗರದ ಟೀ ಅಂಗಡಿಯಿಂದ ಹಿಡಿದು ಹೈದರಾಬಾದಿನ ಫಿಲ್ಮ್ ನಗರದವರೆಗೆ ಎಲ್ಲರ ಬಾಯಲ್ಲೂ ಈ ಜೋಡಿಯದ್ದೇ ಮಾತು. ಇಬ್ಬರ ಲವ್ವಿ ಡವ್ವಿ ಬಗ್ಗೆ ಸಿನಿಮಾ ಸೆಟ್‌ನಲ್ಲಿ ಸಣ್ಣದಾಗಿ ಶುರುವಾದ ಗುಸುಗುಸು ಈಗ ಮದುವೆವರೆಗೆ ಬಂದು ನಿಂತಿದೆ.

ಅಭಿಮಾನಿಗಳಂತೂ ವಿಜಯ್, ರಶ್ಮಿಕಾ ಜೋಡಿಯ ಪ್ರತಿಯೊಂದು ಮೂವ್ಮೆಂಟ್ ಮೇಲೆ ಕಣ್ಣಿಟ್ಟಿದ್ದಾರೆ. ಇವರು ಒಟ್ಟಿಗೆ ಕಾಫಿ ಕುಡಿದರೂ ಸುದ್ದಿ, ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಂಡರೂ ಅದೊಂದು ದೊಡ್ಡ ಹೆಡ್ಲೈನ್. ಆದರೆ ಇಷ್ಟು ದಿನ ಕೇವಲ ಊಹಾಪೋಹಗಳಾಗಿದ್ದ ಈ ಸುದ್ದಿಗಳು ಈಗ ನಿಜವಾಗುವ ಕಾಲ ಹತ್ತಿರ ಬಂದಿದೆ ಎನ್ನಲಾಗುತ್ತಿದೆ.

Rashmika Mandanna Reacts to Vijay Deverakonda Wedding Rumours Udaipur Ceremony Buzz Grows Stronger

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ರೌಡಿ ಸ್ಟಾರ್ ವಿಜಯ್ ದೇವರಕೊಂಡ ಮದುವೆ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಕಳೆದ ಕೆಲವು ವರ್ಷಗಳಿಂದ ಇವರಿಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂಬ ಮಾತು ಕೇಳಿ ಬರುತ್ತಲೇ ಇತ್ತು. ಆದರೆ ಇಬ್ಬರೂ "ನಾವು ಜಸ್ಟ್ ಫ್ರೆಂಡ್ಸ್" ಎಂದು ಹೇಳುತ್ತಾ ಜಾರಿಕೊಳ್ಳುತ್ತಿದ್ದರು.

ಆದರೆ ಈಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಈ ಜೋಡಿ ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದೆ. ಸದ್ದಿಲ್ಲದೆ ಮದುವೆಯ ತಯಾರಿಗಳು ನಡೆಯುತ್ತಿವೆ. ಈ ಜೋಡಿಯ ಅಭಿಮಾನಿಗಳಿಗೆ ಇದು ನಿಜಕ್ಕೂ ದೊಡ್ಡ ಸರ್ಪ್ರೈಸ್ ಅಂದರೂ ತಪ್ಪಾಗಲಾರದು.

Rashmika Mandanna Reacts to Vijay Deverakonda Wedding Rumours Udaipur Ceremony Buzz Grows Stronger

ಉದಯಪುರದಲ್ಲಿ ಅದ್ಧೂರಿ ವಿವಾಹ...

ಮೂಲಗಳ ಪ್ರಕಾರ, ಈ ತಾರಾ ಜೋಡಿಯ ಮದುವೆಗೆ ರಾಜಸ್ಥಾನದ ಉದಯಪುರ ಸಾಕ್ಷಿಯಾಗಲಿದೆ. ಫೆಬ್ರವರಿ 26 ರಂದು ರಾಜವೈಭೋಗದ ನಡುವೆ ಈ ಜೋಡಿ ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಇವರ ಮದುವೆಯ ಆಮಂತ್ರಣ ಪತ್ರಿಕೆಯು ಅಂತರ್ಜಾಲದಲ್ಲಿ ಸಖತ್ ವೈರಲ್ ಆಗಿದೆ.

ರಶ್ಮಿಕಾ ಪ್ರತಿಕ್ರಿಯೆ

ಮದುವೆ ಬಗ್ಗೆ ಇಷ್ಟೆಲ್ಲಾ ಚರ್ಚೆ ಆಗುತ್ತಿದ್ದರೂ ವಿಜಯ್ ಹಾಗೂ ರಶ್ಮಿಕಾ ಮಾತ್ರ ಪ್ರತಿಕ್ರಿಯಿಸಿಲ್ಲ. ನೇರವಾಗಿ ಪ್ರಶ್ನೆ ಹೇಳಿದ್ರು, ಹೌದಾ? ನಿಜಾನಾ? ಮುಂದೆ ನೋಡೋಣ ಎಂದು ರಶ್ಮಿಕಾ ಹೇಳಿ ನುಣುಚಿಕೊಂಡಿದ್ದರು. ಇದೇ ಮೊದಲ ಬಾರಿಗೆ ಕೊಡಗಿನ ಕುವರಿ ಮದುವೆ ವಿಷಯವನ್ನು ಒಪ್ಪಿಕೊಂಡಿದ್ದಾರೆ. ಬಾಲಿವುಡ್ ಹಂಗಾಮ ವೆಬ್‌ಸೈಟ್‌ ಕಡೆಯಿಂದ ರಶ್ಮಿಕಾ ಅವರಿಗೆ 'ಅಭಿನಂದನೆಗಳು' ಎಂದು ಮೆಸೇಜ್ ಕಳುಹಿಸಿದ್ದರಂತೆ. ಅದಲ್ಲೆ ಆಕೆ 'ಧನ್ಯವಾದಗಳು' ಎಂದು ಪ್ರತಿಕ್ರಿಯಿಸುವ ಮೂಲಕ ಪರೋಕ್ಷವಾಗಿ ಈ ಸುದ್ದಿಯನ್ನು ಒಪ್ಪಿಕೊಂಡಿದ್ದಾರೆ.

ಇದೆಲ್ಲಾ ಗಾಸಿಪ್ ಆಗಿದ್ದರೆ ರಶ್ಮಿಕಾ ಆ ರೀತಿ ಪ್ರತಿಕ್ರಿಯಿಸುತ್ತಿರಲಿಲ್ಲ. ಇಬ್ಬರೂ ಫೆಬ್ರವರಿ 26ರಂದು ಮದುವೆ ಆಗುವುದು ಖಚಿತ ಎಂದು ಸುದ್ದಿಯಾಗಿದೆ. ಇದು ಅಭಿಮಾನಿಗಳ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಈ ಮದುವೆಯು ಅತ್ಯಂತ ಖಾಸಗಿಯಾಗಿ ನಡೆಯಲಿದ್ದು, ಕೇವಲ ಆಪ್ತರು ಮಾತ್ರ ಭಾಗವಹಿಸಲಿದ್ದಾರೆ.

2 ಕಡೆ ಅದ್ಧೂರಿ ರಿಸೆಪ್ಷನ್...

ಮದುವೆ ಉದಯಪುರದಲ್ಲಿ ಖಾಸಗಿಯಾಗಿ ನಡೆದರೂ, ಚಿತ್ರರಂಗದ ಗೆಳೆಯರಿಗಾಗಿ ವಿಶೇಷ ಏರ್ಪಾಡು ಮಾಡಲಾಗಿದೆ. ಹೈದರಾಬಾದ್ ಮತ್ತು ಮುಂಬೈನಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ ಎಂದು ವರದಿಯಾಗಿದೆ. ವಿಜಯ್ ದೇವರಕೊಂಡ ಅವರ ಮನೆಯನ್ನು ಈಗಾಗಲೇ ಹೂವು ಮತ್ತು ದೀಪಗಳಿಂದ ಅಲಂಕರಿಸಲಾಗುತ್ತಿದೆ. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿವೆ.

ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದಿರುವ ಈ ಜೋಡಿ, ಈಗ ಸಂಪೂರ್ಣವಾಗಿ ಮದುವೆಯ ಸಂಭ್ರಮದಲ್ಲಿ ಮುಳುಗಿದ್ದಾರೆ. ರಶ್ಮಿಕಾ ಅವರು ಮದುವೆಯ ನಂತರ ಕೂಡಲೇ ತಮ್ಮ ಶೂಟಿಂಗ್ಗಳಲ್ಲಿ ಭಾಗಿಯಾಗಲಿದ್ದಾರೆ ಎಂಬ ಮಾಹಿತಿಯೂ ಇದೆ.

ರಕ್ಷಿತ್ ಶೆಟ್ಟಿ ಆಪ್ತರ ಮಾತು...

ರಶ್ಮಿಕಾ ಈ ಹಿಂದೆ ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಎಲ್ಲರಿಗೂ ತಿಳಿದಿದೆ. ಈಗ ಅವರ ಮದುವೆ ಸುದ್ದಿ ಕೇಳಿ ರಕ್ಷಿತ್ ಅವರ ಆಪ್ತ ಗೆಳೆಯ ಪ್ರಮೋದ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. "ನಮಗೆ ಇನ್ನೂ ಆಮಂತ್ರಣ ಬಂದಿಲ್ಲ, ಬಂದರೆ ಖಂಡಿತ ಹೋಗುತ್ತೇವೆ" ಎಂದು ಅವರು ಸರಳವಾಗಿ ಹೇಳಿದ್ದಾರೆ. ರಕ್ಷಿತ್ ಶೆಟ್ಟಿ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದು, ಹಳೆಯ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎನ್ನುವುದು ಸ್ಪಷ್ಟವಾಗಿದೆ.

ಸದ್ಯಕ್ಕಂತೂ ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮತ್ತು ವಿಜಯ್ ಅವರದ್ದೇ ಹವಾ. ಈ ಪ್ಯಾನ್ ಇಂಡಿಯಾ ಸ್ಟಾರ್‌ಗಳು ಸಪ್ತಪದಿ ತುಳಿಯುವ ಕ್ಷಣಕ್ಕಾಗಿ ಇಡೀ ಭಾರತೀಯ ಚಿತ್ರರಂಗವೇ ಕಾಯುತ್ತಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X