For Quick Alerts
  ALLOW NOTIFICATIONS  
  For Daily Alerts

  ಒಂದು ಚಿತ್ರವನ್ನ ಒಪ್ಪಿಕೊಳ್ಳಲು ರಶ್ಮಿಕಾ 'ಇದನ್ನೆಲ್ಲ' ನೋಡ್ತಾರಾ.?

  |

  'ಕಿರಿಕ್ ಪಾರ್ಟಿ' ಚಿತ್ರ ಸೂಪರ್ ಹಿಟ್ ಆದ ಮೇಲೆ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆಗೆ 'ಅಂಜನಿಪುತ್ರ', ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ 'ಚಮಕ್', ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ 'ಯಜಮಾನ' ಚಿತ್ರದಲ್ಲಿ ಅಭಿನಯಿಸಿದರು.

  ಈ ಗ್ಯಾಪ್ ನಲ್ಲಿ ಟಾಲಿವುಡ್ ಗೆ ಹಾರಿದ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಜೊತೆಗೆ 'ಗೀತ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ಚಿತ್ರಗಳಲ್ಲಿ ನಟಿಸಿದರು.

  ಇದೀಗ ಮಹೇಶ್ ಬಾಬು ಜೊತೆಗೆ 'ಸರಿಲೇರು ನೀಕ್ಕೆವ್ವರು' ಮತ್ತು ಅಲ್ಲು ಅರ್ಜುನ್ ಜೊತೆಗೆ ಒಂದು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಲ್ಲಾ ಎ-ಲಿಸ್ಟ್ ನಟರ ಜೊತೆಗೆ ಸ್ಕ್ರೀನ್ ಶೇರ್ ಮಾಡುತ್ತ ಬಂದಿರುವ ರಶ್ಮಿಕಾ ಮಂದಣ್ಣ, ಎರಡನೇ ದರ್ಜೆಯ ನಟರೊಂದಿಗೆ ತೆರೆ ಹಂಚಿಕೊಳ್ಳಲು ಸುತರಾಂ ಒಪ್ಪುತ್ತಿಲ್ಲವಂತೆ. ಹೀಗೊಂದು ಗಾಸಿಪ್ ತೆಲುಗು ಸಿನಿ ಅಂಗಳದಲ್ಲಿ ಹರಿದಾಡುತ್ತಿದೆ. ಮುಂದೆ ಓದಿರಿ...

  ನಾಗ ಚೈತನ್ಯ ಚಿತ್ರಕ್ಕೆ ನೋ ಎಂದ ರಶ್ಮಿಕಾ ಮಂದಣ್ಣ

  ನಾಗ ಚೈತನ್ಯ ಚಿತ್ರಕ್ಕೆ ನೋ ಎಂದ ರಶ್ಮಿಕಾ ಮಂದಣ್ಣ

  'ಗೀತ ಗೋವಿಂದಂ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ಪರಶುರಾಮ್ ಇದೀಗ ನಾಗ ಚೈತನ್ಯಗಾಗಿ ಒಂದು ಚಿತ್ರ ರೆಡಿ ಮಾಡುತ್ತಿದ್ದಾರೆ. ಈ ಚಿತ್ರಕ್ಕಾಗಿ ರಶ್ಮಿಕಾ ಮಂದಣ್ಣಗೆ ಪರಶುರಾಮ್ ಅಫರ್ ನೀಡಿದ್ದರು. ಆದ್ರೆ, ಅದನ್ನ ರಿಜೆಕ್ಟ್ ಮಾಡಿದ್ದಾರಂತೆ ರಶ್ಮಿಕಾ ಮಂದಣ್ಣ. ಹಾಗಂತ ಟಾಲಿವುಡ್ ನಲ್ಲಿ ಗುಲ್ಲೋ ಗುಲ್ಲು.

  ಟ್ರೋಲ್ ಗಳ ವಿಚಾರದಲ್ಲಿ ಇನ್ಮುಂದೆ ಸುಮ್ಮನಿರಲ್ಲ: ರಶ್ಮಿಕಾ ಮಂದಣ್ಣಟ್ರೋಲ್ ಗಳ ವಿಚಾರದಲ್ಲಿ ಇನ್ಮುಂದೆ ಸುಮ್ಮನಿರಲ್ಲ: ರಶ್ಮಿಕಾ ಮಂದಣ್ಣ

  ಈ ಹಿಂದೆಯೂ ನಾಗ ಚೈತನ್ಯ ಚಿತ್ರವನ್ನ ರಿಜೆಕ್ಟ್ ಮಾಡಿದ್ದ ರಶ್ಮಿಕಾ.!

  ಈ ಹಿಂದೆಯೂ ನಾಗ ಚೈತನ್ಯ ಚಿತ್ರವನ್ನ ರಿಜೆಕ್ಟ್ ಮಾಡಿದ್ದ ರಶ್ಮಿಕಾ.!

  ಈ ಹಿಂದೆಯೂ ದಿಲ್ ರಾಜು ನಿರ್ಮಾಣದ ನಾಗ ಚೈತನ್ಯ ಅಭಿನಯದ ಚಿತ್ರಕ್ಕೆ ರಶ್ಮಿಕಾ ಮಂದಣ್ಣಗೆ ಆಫರ್ ನೀಡಲಾಗಿತ್ತು. ಆದರೆ ಅದನ್ನೂ ರಶ್ಮಿಕಾ ಒಪ್ಪಿಕೊಂಡಿರಲಿಲ್ವಂತೆ. ನಾಗ ಚೈತನ್ಯ ಜೊತೆಗೆ ನಟಿಸೋಕೆ ದೊಡ್ಡ ಮೊತ್ತವನ್ನು ಸಂಭಾವನೆಯಾಗಿ ಕೇಳಿದ್ದರಂತೆ ರಶ್ಮಿಕಾ. ಅದಕ್ಕೆ ದಿಲ್ ರಾಜು ಸಮ್ಮತಿಸಲಿಲ್ಲ ಅನ್ನೋದು ಮೂಲಗಳ ಮಾಹಿತಿ.

  ಅಲ್ಲು ಅರ್ಜುನ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಪಾತ್ರ ಬಹಿರಂಗಅಲ್ಲು ಅರ್ಜುನ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಪಾತ್ರ ಬಹಿರಂಗ

  ಬಿ-ಲಿಸ್ಟ್ ನಟರ ಜೊತೆ ನಟಿಸಲು ಹಿಂದೇಟು.?

  ಬಿ-ಲಿಸ್ಟ್ ನಟರ ಜೊತೆ ನಟಿಸಲು ಹಿಂದೇಟು.?

  ಹಾಗ್ನೋಡಿದ್ರೆ, ನಾಗ ಚೈತನ್ಯ ಎರಡನೇ ದರ್ಜೆಯ ನಟ. ಬ್ಯಾಕ್ ಟು ಬ್ಯಾಕ್ ಹಿಟ್ ಗಳನ್ನು ನಾಗ ಚೈತನ್ಯ ನೀಡಿಲ್ಲ. ಹೀಗಾಗಿ, ಬಿ-ಲಿಸ್ಟ್ ನಟರ ಜೊತೆಗೆ ನಟಿಸಲು ರಶ್ಮಿಕಾ ಮಂದಣ್ಣ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಹೀರೋ ಮತ್ತು ಬ್ಯಾನರ್ ನೋಡಿಕೊಂಡು ಚಿತ್ರಗಳಿಗೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರಂತೆ ರಶ್ಮಿಕಾ ಮಂದಣ್ಣ.

  ರಶ್ಮಿಕಾ ಮಂದಣ್ಣ ಪಾಲಿಗಿದ್ದ ತುಪ್ಪ ಜಾರಿ ಬಿದ್ದದ್ದು ಮೃಣಾಲ್ ಠಾಕೂರ್ ತಟ್ಟೆಗೆ.!ರಶ್ಮಿಕಾ ಮಂದಣ್ಣ ಪಾಲಿಗಿದ್ದ ತುಪ್ಪ ಜಾರಿ ಬಿದ್ದದ್ದು ಮೃಣಾಲ್ ಠಾಕೂರ್ ತಟ್ಟೆಗೆ.!

  ಮುಂದೆ ರಿಗ್ರೆಟ್ ಮಾಡಿದ್ರೆ.?

  ಮುಂದೆ ರಿಗ್ರೆಟ್ ಮಾಡಿದ್ರೆ.?

  ಸದ್ಯಕ್ಕೆ ಮುಖ ನೋಡಿ ಮಣೆ ಹಾಕುತ್ತಿರುವ ರಶ್ಮಿಕಾ, ತಮ್ಮ ನಿರ್ಧಾರಗಳಿಂದ ಮುಂದೆ ರಿಗ್ರೆಟ್ ಮಾಡಿದರೆ ಅಚ್ಚರಿ ಇಲ್ಲ ಅಂತ ಕೆಲವರು ಮೂಗು ಮುರಿಯುತ್ತಿದ್ದಾರೆ. ಯಾರು ಏನೇ ಅಂದರೂ, ಡೋಂಟ್ ಕೇರ್ ಅಂತ ಸಾಲು ಸಾಲು ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ಬಿಜಿಯಾಗಿದ್ದಾರೆ.

  English summary
  Rashmika Mandanna refuses to work with Naga Chaitanya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X