For Quick Alerts
  ALLOW NOTIFICATIONS  
  For Daily Alerts

  ತೆಲುಗಿನ ಸ್ಟಾರ್ ನಟನ ಸಿನಿಮಾ ನಿರಾಕರಿಸಿದ ರಶ್ಮಿಕಾ ಮಂದಣ್ಣ

  |

  ಸ್ಟಾರ್ ನಟಿಯಾಗಿ ಬೆಳೆದಿರುವ ರಶ್ಮಿಕಾ ಮಂದಣ್ಣ ಇದೀಗ ಕನ್ನಡ, ತೆಲುಗು, ತಮಿಳು ಬಳಿಕ ಈಗ ಬಾಲಿವುಡ್‌ಗೆ ಹಾರಿದ್ದಾರೆ.

  ಬಾಲಿವುಡ್‌ನಲ್ಲಿ ಎರಡು ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ರಶ್ಮಿಕಾ ಕೆಲಸ ಮಾಡಲಿದ್ದಾರೆ. ಅಮಿತಾಬ್ ಬಚ್ಚನ್ ಮಗಳ ಪಾತ್ರದಲ್ಲಿ ನಟಿಸಲಿರುವ 'ಡೆಡ್ಲಿ' ಸಿನಿಮಾಕ್ಕಂತೂ ಭಾರಿ ಮೊತ್ತದ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ ರಶ್ಮಿಕಾ.

  ತೆಲುಗು ಸಿನಿಮಾರಂಗದಲ್ಲಿ ಸ್ಟಾರ್ ನಟರೊಂದಿಗೆ ಸಿನಿಮಾ ಮಾಡಿದ ರಶ್ಮಿಕಾ ಇದೀಗ ಬಾಲಿವುಡ್‌ ಮೇಲೆ ದೃಷ್ಟಿ ನೆಟ್ಟಿದ್ದು, ಹೆಚ್ಚು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಲೆಂದು ತೆಲುಗು ಸಿನಿಮಾ ಅವಕಾಶಗಳನ್ನು ಕೈಬಿಡುತ್ತಿದ್ದಾರೆ.

  ಹೌದು, ಬಾಲಿವುಡ್ ಸಿನಿಮಾ ಅವಕಾಶಗಳು ಕೈಗೆ ಬಂದ ಕೂಡಲೇ ಮಾತುಕತೆ ಹಂತದಲ್ಲಿದ್ದ ಪ್ರಮುಖ ತೆಲುಗು ಸಿನಿಮಾವನ್ನು ಕೈಬಿಟ್ಟಿದ್ದಾರೆ ರಶ್ಮಿಕಾ. ಆ ಸಿನಿಮಾಕ್ಕೆ ಜೂ.ಎನ್‌ಟಿಆರ್ ನಾಯಕರಾಗಿದ್ದರು.

  ಹೌದು, ಜೂ.ಎನ್‌ಟಿಆರ್ ಸಿನಿಮಾದಲ್ಲಿ ನಟಿಸಲು ರಶ್ಮಿಕಾ ಗೆ ಅವಕಾಶ ಒದಗಿಬಂದಿತ್ತು, ಈ ಬಗ್ಗೆ ಮಾತುಕತೆ ಸಹ ನಡೆಯುತ್ತಿತ್ತು. ಆದರೆ ಬಾಲಿವುಡ್‌ ಸಿನಿಮಾಗಳು ದೊರೆತ ಕಾರಣ ರಶ್ಮಿಕಾ, ಜೂ.ಎನ್‌ಟಿಆರ್ ಸಿನಿಮಾವನ್ನು ನಿರಾಕರಿಸಿದ್ದಾರೆ.

  ತ್ರಿವಿಕ್ರಮ್ ನಿರ್ದೇಶಿಸಲಿರುವ ಮುಂದಿನ ಸಿನಿಮಾದಲ್ಲಿ ಜೂ.ಎನ್‌ಟಿಆರ್ ನಾಯಕರಾಗಿದ್ದು, ಈ ಸಿನಿಮಾಕ್ಕೆ ರಶ್ಮಿಕಾ ಮಂದಣ್ಣ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು. ನಾಯಕಿ ಪಾತ್ರವನ್ನು ರಶ್ಮಿಕಾ ನಿರಾಕರಿಸಿರುವ ಕಾರಣ, ಮತ್ತೊಬ್ಬ ನಾಯಕಿಯನ್ನು ಹುಡುಕಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದ್ದಾರೆ ತ್ರಿವಿಕ್ರಮ್.

  ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲಿ ಅಮಿತಾಬ್ ಬಚ್ಚನ್ ಜೊತೆಗೆ ಡೆಡ್ಲಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ ಮಿಷನ್ ಮಜ್ನು ಸಿನಿಮಾದಲ್ಲಿ ನಟಿಸಲಿದ್ದಾರೆ. ಇದರ ಜೊತೆಗೆ ತೆಲುಗಿನಲ್ಲಿ ಅಲ್ಲು ಅರ್ಜುನ್ ನಾಯಕರಾಗಿರುವ 'ಪುಷ್ಪಾ' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

  English summary
  Rashmika Mandanna becoming busy in bollywood movies. So she rejected Jr NTR movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion