For Quick Alerts
  ALLOW NOTIFICATIONS  
  For Daily Alerts

  ಸಾರ್ವಜನಿಕರಲ್ಲಿ ವಿಶೇಷ ಮನವಿ ಮಾಡಿದ ರಶ್ಮಿಕಾ ಮಂದಣ್ಣ!

  |

  ನಟಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿ ಇರುತ್ತಾರೆ. ಸೋಷಿಯಲ್ ಮಿಡಿಯಾದಲ್ಲೇನೆ ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ.‌ ಇನ್ನೂ ರಶ್ಮಿಕಾ ಯಾವುದೇ ವಿಚಾರ ಹಂಚಿಕೊಂಡರೂ, ಅದು ವೈರಲ್ ಆಗಿ‌ ಬಿಡುತ್ತದೆ.

  ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾಗಳಲ್ಲಿ ನಟಿಸಿದ ಬಳಿಕ ಈಗ ತಮಿಳು, ತೆಲುಗು, ಹಿಂದಿಯಲ್ಲೇ ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದಾರೆ. ಇತ್ತೀಚೆಗೆ ರಶ್ಮಿಕಾ ನಟಿಸಿದ 'ಸೀತಾ ರಾಮಂ' ಚಿತ್ರ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ರಶ್ಮಿಕಾ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

  ರಶ್ಮಿಕಾ ಮಂದಣ್ಣ ನನ್ನ ಡಾರ್ಲಿಂಗ್, ಆದರೆ...! ವಿಜಯ್ ದೇವರಕೊಂಡ ಹೇಳಿದ್ದೇನು?ರಶ್ಮಿಕಾ ಮಂದಣ್ಣ ನನ್ನ ಡಾರ್ಲಿಂಗ್, ಆದರೆ...! ವಿಜಯ್ ದೇವರಕೊಂಡ ಹೇಳಿದ್ದೇನು?

  ಆದರೆ ಈ ಬಾರಿ ರಶ್ಮಿಕಾ ಮಂದಣ್ಣ ತಮ್ಮ ಸಿನಿಮಾ ಬಗ್ಗೆ ಮಾತನಾಡಿ ಸುದ್ದಿಯಾಗಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಸಿನಿಮಾ ಬಗ್ಗೆ ಹೇಳಿಕೊಂಡಿಲ್ಲ. ಬದಲಿಗೆ ಸಾರ್ವಜನಿಕರಲ್ಲಿ ವಿಷೇಶವಾದ ಮನವಿ ಮಾಡಿದ್ದಾರೆ. ಅದೇನು ಅಂತ ಮುಂದರ ಓದಿ...

  ರಶ್ಮಿಕಾ ಮಂದಣ್ಣ ಟ್ವೀಟ್!

  ರಶ್ಮಿಕಾ ಮಂದಣ್ಣ ಟ್ವೀಟ್!

  ಈಗ ಎಲ್ಲಿ ನೋಡಿದರೂ ಮಳೆಯೋ ಮಳೆ. ಮಳೆಯಿಂದಾಗಿ ರಸ್ತೆಗಳು ಹಾಳಾಗುವುದು. ಹಾಳಾದ ರಸ್ತೆಗಳಿಂದ ಅನಾಹುತಗಳಾಗುವುದು ಹೊಸದೇನಲ್ಲ. ಈ ಮಳೆ ವಿಚಾರಕ್ಕೂ, ರಶ್ಮಿಕಾಗೂ ಏನಪ್ಪ ಸಂಬಂಧ ಅಂದುಕೊಳ್ಳಬೇಡಿ. ಮಳೆಯ ವಿಚಾರವಾಗಿಯೇ ರಶ್ಮಿಕಾ ಮಂದಣ್ಣ ಮಾತನಾಡಿದ್ದಾರೆ. ಎಲ್ಲರೂ ಎಚ್ಚರಿಕೆಯಿಂದ ಇರಲು ಮನವಿ ಮಾಡಿದ್ದಾರೆ. ಅದರಲ್ಲು ಬೈಕ್ ಸವಾರರಿಗೆ ಎಚ್ಚರಿಕೆಯಿಂದ ಇರಲು ಮನವಿ ಮಾಡಿಕೊಂಡಿದ್ದಾರೆ ರಶ್ಮಿಕಾ ಮಂದಣ್ಣ.

  ಮಳೆಯಲ್ಲಿ ಎಚ್ಚರ: ರಶ್ಮಿಕಾ ಟ್ವೀಟ್!

  ಮಳೆಯಲ್ಲಿ ಎಚ್ಚರ: ರಶ್ಮಿಕಾ ಟ್ವೀಟ್!

  ಮಳೆ ಹೆಚ್ಚು ಬರುವ ಸಂದರ್ಭದಲ್ಲಿ ಬೈಕ್ ಸವಾಸರು ಎಚ್ಚರವಾಗಿ ಇರಬೇಕು ಎನ್ನುವ ಬಗ್ಗೆ ರಶ್ಮಿಕಾ ಟ್ವೀಟ್ ಮಾಡಿದ್ದಾರೆ. "ಎಲ್ಲರೂ ಕೇಳಿ... ನಾನು ಈಗ ಹೆಳುತ್ತಿರುವು ಸಹಜ ವಿಚಾರ ಅನಿಸಬಹುದು, ಆದರೂ ಹೇಳಲೇ ಬೇಕು ಅನಿಸಿತು. ನೀವು ಯಾರಾದರೂ ಕೆಲಸಕ್ಕೆ ಹೋಗುತ್ತಿದ್ದರೆ. ಈ ಮಳೆಯಲ್ಲಿ ರಾತ್ರಿ ಹೊತ್ತು ಮನೆಗೆ ವಾಪಸ್ ಆಗುತ್ತಿದ್ದರೆ. ದಯವಿಟ್ಟು ಬಹಳ ಎಚ್ಚರಿಕೆ ವಹಿಸಿ". ಎಂದು ರಶ್ಮಿಕಾ ಮಂದಣ್ಣ ಬರೆದುಕೊಂಡು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಸಾಕಷ್ಟು ಜನ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

  ಎಲ್ಲೆಲ್ಲೂ ರಶ್ಮಿಕಾ ಮಂದಣ್ಣ ಹವಾ!

  ಎಲ್ಲೆಲ್ಲೂ ರಶ್ಮಿಕಾ ಮಂದಣ್ಣ ಹವಾ!

  ಭಾರತೀಯ ಸಿನಿಮಾರಂಗದಲ್ಲಿ ಅತ್ಯಂತ ಬ್ಯುಸಿಯಾಗಿರುವ ನಟಿ ಎಂದರೇನು ಅದು ರಶ್ಮಿಕಾ ಮಂದಣ್ಣ ಎನ್ನಬಹುದು. ತೆಲುಗಿನಲ್ಲಿ 'ಪುಷ್ಪಾ 2', ತಮಿಳಿನಲ್ಲಿ 'ವಾರಿಸು', ಹಿಂದಿಯಲ್ಲಿ 'ಅನಿಮಲ್' ಸಿನಿಮಾಗಳಲ್ಲಿ ಸದ್ಯಕ್ಕೆ ನಟಿಸುತ್ತಿದ್ದಾರೆ. ಇದರ ಜೊತೆಗೆ ಅವರ ಮುಂಬರುವ ಸಿನಿಮಾಗಳ ಬಗ್ಗೆಯೂ ನಾನಾ ಸುದ್ದಿ ಹಬ್ಬಿದೆ. ಒಟ್ಟಿನಲ್ಲಿ ರಶ್ಮಿಕಾ ಮಂದಣ್ಣ ಆಲ್ ರೌಂಡರ್ ಆಗಿ ಎಲ್ಲಾ ಕಡೆಯಲ್ಲೂ ಮಿಂಚುತ್ತಿದ್ದಾರೆ.

  ರಶ್ಮಿಕಾ ಸಿನಿಮಾಗೆ ಕರಣ್ ಬಂಡವಾಳ?

  ರಶ್ಮಿಕಾ ಸಿನಿಮಾಗೆ ಕರಣ್ ಬಂಡವಾಳ?

  ಕನ್ನಡದ ಮೂಲಕ ತಮ್ಮ ಸಿನಿಮಾ ಜರ್ನಿ ಆರಂಭ ಮಾಡಿದ ನಟಿ ರಶ್ಮಿಕಾ ಮಂದಣ್ಣ ಸೌತ್ ಚಿತ್ರಗಳನ್ನು ಒಂದು ಸುತ್ತಿ ಹಾಕಿ, ಈಗ ಬಾಲಿವುಡ್‌ನಲ್ಲಿ ಬ್ಯುಸಿ ಆಗುತ್ತಾ ಇದ್ದಾರೆ. ಹಿಂದಿಯಲ್ಲೂ ಈಗಾಗಲೇ 2 ಸಿನಿಮಾಗಳನ್ನು ಮಾಡಿ ಮುಗಿಸಿದ್ದಾರೆ. ಇನ್ನೇನಿದ್ದರು ಹೊಸ ಸಿನಿಮಾ ಪ್ರಕಟ ಮಾಡವುದು ಮಾತ್ರ ಬಾಕಿ ಇದೆ. ರಶ್ಮಿಕಾ ಮುಂದಿನ ಸಿನಿಮಾವನ್ನು ಕರಣ್ ಜೋಹರ್ ನಿರ್ಮಾಣ ಮಾಡಲಿದ್ದಾರೆ ಎನ್ನಲಾಗುತ್ತಾ ಇದೆ.

  English summary
  Rashmika Mandanna Request To Fans To Be Safe Ride In This heavy Rain, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X