For Quick Alerts
  ALLOW NOTIFICATIONS  
  For Daily Alerts

  ನಿಮ್ಮನ್ನು ಅತೀ ಹೆಚ್ಚು ಭಯ ಪಡಿಸಿದ ವಿಚಾರ ಯಾವುದು?; ಅಭಿಮಾನಿ ಪ್ರಶ್ನೆಗೆ ರಶ್ಮಿಕಾ ಉತ್ತರ ಹೀಗಿದೆ

  |

  ನಟಿ ರಶ್ಮಿಕಾ ಮಂದಣ್ಣ ಸದ್ಯ ದಕ್ಷಿಣ ಭಾರತದ ಬಹು ಬೇಡಿಕೆ ಇರುವ ನಟಿಯಲ್ಲಿ ಒಬ್ಬರಾಗಿದ್ದಾರೆ. ಸ್ಯಾಂಡಲ್ ವುಡ್ ನಿಂದ ಸಿನಿಮಾ ಪಯಣ ಪ್ರಾರಂಭ ಮಾಡಿದ ರಶ್ಮಿಕಾ ಟಾಲಿವುಡ್, ಕಾಲಿವುಡ್ ಇದೀಗ ಬಾಲಿವುಡ್ ಗೂ ಎಂಟ್ರಿ ಕೊಟ್ಟಿದ್ದಾರೆ. ದಿನದಿಂದ ದಿನಕ್ಕೆ ಉತ್ತುಂಗದ ಮೆಟ್ಟಿಲನ್ನು ಏರುತ್ತಿರುವ ರಶ್ಮಿಕಾ ಬಳಿ ಕೈತುಂಬ ಸಿನಿಮಾಗಳಿವೆ.

  ಅಪಾರ ಸಂಖ್ಯೆಯ ಅಭಿಮಾನಿ ಬಳಿಕ ಹೊಂದಿರುವ ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ವೀಟ್ ಇರುವ ನಟಿ. ಆಗಾಗ ಸುಂದರ ಫೋಟೋಗಳನ್ನು ಪೋಸ್ಟ್ ಮಾಡುತ್ತ ಅಭಿಮಾನಿಗಳನ್ನು ಖುಷಿ ಪಡಿಸುತ್ತಿರುವ ಜೊತೆಗೆ ಕಿರಿಕ್ ನಟಿ ಅಭಿಮಾನಿಗಳ ಜೊತೆ ಸಂವಾದ ಸಹ ನಡೆಸುತ್ತಾರೆ.

  ಅಮಿತಾಭ್ ಬಚ್ಚನ್ ಚಿತ್ರದಲ್ಲಿ ನಟಿಸಲು ರಶ್ಮಿಕಾ ಮಂದಣ್ಣ ಪಡೆದ ಸಂಭಾವನೆ ಇಷ್ಟೊಂದಾ?

  ಇತ್ತೀಚಿಗೆ ರಶ್ಮಿಕಾ, ಪ್ರಶ್ನೆಗಳನ್ನು ಕೇಳಿ ಎಂದು ಅಭಿಮಾನಿಗಳಿಗೆ ಹೇಳಿದ್ದರು. ರಶ್ಮಿಕಾ ಹೀಗೆ ಹೇಳುತ್ತಿದ್ದಂತೆ ಅನೇಕರು ತರಹೇವಾರಿ ಪ್ರಶ್ನೆಗಳನ್ನು ಕೇಳಿದ್ದಾರೆ. ಅಭಿಮಾನಿಗಳ ಸಾಕಷ್ಟು ಪ್ರಶ್ನೆಗಳಿಗೆ ರಶ್ಮಿಕಾ ಸಾಮಾಜಿಕ ಜಾಲತಾಣದ ಮೂಲಕ ಉತ್ತರ ನೀಡಿದ್ದಾರೆ. ಇದೇ ಸಮಯದಲ್ಲಿ ರಶ್ಮಿಕಾ ಯಾವ ವಿಚಾರಕ್ಕೆ ಭಯಪಡುತ್ತಾರೆ ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ.

  ಅಭಿಮಾನಿಯೊಬ್ಬ ರಶ್ಮಿಕಾಗೆ, ಅತೀ ಹೆಚ್ಚು ಭಯಪಡಿಸಿದ ವಿಚಾರ ಯಾವುದು? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ರಶ್ಮಿಕಾ, 'ಸಾಮಾನ್ಯವಾಗಿ ಜೀವನದಲ್ಲಿ ನಾನು ಭಯಪಟ್ಟ ಅನೇಕ ವಿಚಾರಗಳು ಈಗಾಗಲೇ ಸಂಭವಿಸಿದೆ. ಈಗ ನನಗೆ ಹಲ್ಲಿ, ಆಳವಾದ ಕತ್ತಲಿನ ಸ್ಥಳಗಳು ಈ ರೀತಿಯದ್ದು ನನಗೆ ಹೆದರಿಕೆ ಆಗುತ್ತೆ' ಎಂದು ಹೇಳಿದ್ದಾರೆ.

  ಸಿನಿಮಾ ವಿಚಾರಕ್ಕೆ ಬರುವುದಾದರೆ ರಶ್ಮಿಕಾ ಸದ್ಯ ತೆಲುಗಿನ ಪುಷ್ಪಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ತೆಲುಗಿನ ಮತ್ತೊಂದು ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಟಾಲಿವುಡ್ ಜೊತೆಗೆ ತಮಿಳಿನ ಸುಲ್ತಾನ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಸ್ಯಾಂಡಲ್ ವುಡ್ ನಲ್ಲಿ ಧ್ರುವ ಸರ್ಜಾ ಜೊತೆ ನಟಿಸಿರುವ ಪೊಗರು ಸಿನಿಮಾ ಸಹ ಬಿಡುಗಡೆಗೆ ರೆಡಿಯಾಗಿದೆ.

  ದಕ್ಷಿಣ ಭಾರತದ ಸಿನಿಮಾದ ಜೊತೆಗೆ ಮಿಷನ್ ಮಜ್ನು ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಸಿನಿಮಾ ಪ್ರಾರಂಭ ವಾಗುವ ಮೊದಲೇ ಅಮಿತಾಬ್ ಬಚ್ಚನ್ ಜೊತೆ ನಟಿಸಲಿದ್ದಾರೆ ಎನ್ನುವ ಸುದ್ದಿ ಸಹ ವೈರಲ್ ಆಗಿದೆ.

  English summary
  Rashmika Mandanna reveals her biggest fear in her life. She answered fans questions.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X