ಮಗಳಾಗಿ ಇಲ್ಲಿಗೆ ಬಂದೆ ಈಗ ಸೊಸೆಯಾಗಿದ್ದೀನಿ.. ರಶ್ಮಿಕಾ ಮಾತಿಗೆ ವಿಜಯ್ ದೇವರಕೊಂಡ ತಾಯಿ ಭಾವುಕ

ಮದುವೆ ಬೆನ್ನಲ್ಲೇ ನಟಿ ರಶ್ಮಿಕಾ ದೇವರಕೊಂಡಗೆ ಅತ್ಯುತ್ತಮ ನಟಿ ತೆಲಂಗಾಣ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ಕಳೆದ ವರ್ಷ ಬಿಡುಗಡೆ ಆಗಿದ್ದ 'ದಿ ಗರ್ಲ್‌ಫ್ರೆಂಡ್' ಚಿತ್ರದ ನಟನೆಗಾಗಿ ರಶ್ಮಿಕಾ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇತ್ತೀಚೆಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕೊಡಗಿನ ಬೆಡಗಿ ಅತ್ತೆ ಜೊತೆ ಭಾಗಿ ಆಗಿದ್ದರು. ವೇದಿಕೆಯಲ್ಲಿ ಸೊಸೆ ಮಾತು ಕೇಳಿ ಅತ್ತೆ ಭಾವೋದ್ವೇಗಕ್ಕೆ ಗುರಿಯಾಗಿದ್ದಾರೆ.

ಗದ್ದರ್ ಅವಾರ್ಡ್ಸ್ ಹೆಸರಿನಲ್ಲಿ ಕಳೆದೆರಡು ವರ್ಷಗಳಿಂದ ತೆಲಂಗಾಣ ಸರ್ಕಾರ ಚಲನಚಿತ್ರ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. 2025ರಲ್ಲಿ ಬಿಡುಗಡೆಯಾಗಿದ್ದ ಸಿನಿಮಾಗಳಿಗೆ ಇದೀಗ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಮದುವೆ ಬೆನ್ನಲ್ಲೇ ರಶ್ಮಿಕಾ ಮಂದಣ್ಣಗೆ ರಾಜ್ಯ ಪ್ರಶಸ್ತಿ ಲಭಿಸಿದ ಸಿಹಿಸುದ್ದಿ ಸಿಕ್ಕಿತ್ತು. ನಿನ್ನೆ(ಮಾರ್ಚ್ 19) ಹೈದರಾಬಾದ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೀತು. ಚಿರಂಜೀವಿ, ರಾಮ್‌ಚರಣ್, ಕಮಲ್ ಹಾಸನ್ ಸೇರಿದಂತೆ ಘಟನಾನುಘಟಿ ತಾರೆಯರು ಭಾಗಿ ಆಗಿದ್ದರು. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಉಪಸ್ಥಿತರಿದ್ದರು.

Rashmika Mandanna s Emotional Speech Leaves Mother-in-Law in Tears at Gaddar Awards

ರಶ್ಮಿಕಾ ಅವರಿಗೆ ನಟ ರಾಮ್‌ಚರಣ್ ಹಾಗೂ ಸಿಎಂ ರೇವಂತ್ ರೆಡ್ಡಿ ಅತ್ಯುತ್ತಮ ನಟಿ ಗದ್ದರ್ ಪ್ರಶಸ್ತಿ ಪ್ರದಾನ ಮಾಡಿದರು. ಬಳಿಕ ಮಾತನಾಡಿ ರಶ್ಮಿಕಾ ಭಾವಕರಾದರು. "ಒಂದ್ಕಾಲದಲ್ಲಿ ನನ್ನ ನಟನೆ ಬಗ್ಗೆ ಕೆಲವರು ಟ್ರೋಲ್ ಮಾಡಿದ್ರು. ಆದರೆ ಈ ದಿನ ರಾಜ್ಯವೇ ನನಗೆ ಪ್ರಶಸ್ತಿ ಕೊಟ್ಟಿದೆ. ನಾನು ಬಹಳ ದೂರ ಸಾಗಿ ಬಂದಿದ್ದೀನಿ.. 'ದಿ ಗರ್ಲ್‌ಫ್ರೆಂಡ್' ರೀತಿಯ ಚಿತ್ರಕ್ಕೆ ಪ್ರಶಸ್ತಿ ಬರುವುದು ಬಹಳ ವಿಶೇಷ. ಕಾರಣ ಇಂತಹ ಮತ್ತಷ್ಟು ಸಿನಿಮಾ ಮಾಡಲು ಇದು ಪ್ರೋತ್ಸಾಹ ನೀಡುತ್ತದೆ. ನಿರ್ದೇಶಕ ರಾಹುಲ್ ಕಾರಣಕ್ಕೆ ಈ ಸಿನಿಮಾ ಇಷ್ಟು ಚೆನ್ನಾಗಿ ಮೂಡಿಬಂತು.. ರಶ್ಮಿಕಾ ಮಾಡಿದ್ದ ಭೂಮಾದೇವಿ ಪಾತ್ರ ಒಪ್ಪಿಕೊಂಡಿದ್ದಕ್ಕೆ ಎಲ್ಲರಿಗೂ ಧನ್ಯವಾದ" ಎಂದು ರಶ್ಮಿಕಾ ಹೇಳಿದ್ದಾರೆ.

ನಾನು ಸೊಸೆಯಾಗುವ ಮುನ್ನ ಮಗಳಾಗಿ ಇಲ್ಲಿಗೆ ಬಂದೆ.. ಅವತ್ತು ಮನೆ ಮಗಳು ಎನ್ನುವಂತೆ ಪ್ರೀತಿ ಕೊಟ್ರಿ.. ಇವತ್ತು ಅಧಿಕೃತವಾಗಿ ಸೊಸೆಯಾಗಿ ನಿಮ್ಮ ಮುಂದೆ ನಿಂತಿದ್ದೀನಿ.. ಬಹಳ ಹೆಮ್ಮೆ ಎನಿಸುತ್ತಿದೆ. ನಿಮ್ಮೆಲ್ಲರ ಪ್ರೀತಿ ಆಭಾರಿ.. ನಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಿ ಎನ್ನುವುದಷ್ಟೆ ನನ್ನ ಕೋರಿಕೆ ಎಂದು ರಶ್ಮಿಕಾ ಹೇಳಿತ್ತಿದ್ದಂತೆ ವೇದಿಕೆ ಮುಂದೆ ಕೂತಿದ್ದ ವಿಜಯ್ ದೇರವಕೊಂಡ ತಾಯಿ ಭಾವುಕರಾಗಿ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿದ್ದಾರೆ. ನಾನು ಸಾಧಿಸಿದ್ದೀನಿ, ಮನೆಗೋಗಿ ಪಾರ್ಟಿ ಮಾಡೋಣ ಅತ್ತೆ ಎಂದು ವೇದಿಕೆಯಿಂದಲೇ ರಶ್ಮಿಕಾ ಹೇಳಿರುವುದು ವೈರಲ್ ಆಗ್ತಿದೆ.

'ತಂಡೇಲ್' ಚಿತ್ರದ ನಟನೆಗಾಗಿ ನಾಗಚೈತನ್ಯಾ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದರು. 'ರಾಜು ವೆಡ್ಸ್ ರಾಂಬಾಯಿ' ಅತ್ಯುತ್ತಮ ಸಿನಿಮಾ, ಇದೇ ಚಿತ್ರಕ್ಕಾಗಿ ಸೈಲೂ ಕೆಂಪಟಿ ಅತ್ಯುತ್ತಮ ನಿರ್ದೇಶನ ಪ್ರಶಸ್ತಿ ಪಡೆದರು. 'ಕಿರಿಕ್ ಪಾರ್ಟಿ' ಚಿತ್ರದ ಸಾನ್ವಿ ಆಗಿ ಗೆಲ್ಲುತ್ತಿದ್ದಂತೆ ರಶ್ಮಿಕಾಗೆ ಪರಭಾಷೆಗಳಿಗೆ ಅವಕಾಶಗಳು ಬರಲು ಆರಂಭಿಸಿತ್ತು. 'ಚಲೋ' ಸಿನಿಮಾ ಮೂಲಕ ಟಾಲಿವುಡ್ ಪ್ರವೇಶಿಸಿದ್ದರು. ಅದರ ಬೆನ್ನಲ್ಲೇ 'ಗೀತಾಗೋವಿಂದಂ' ಸಿನಿಮಾ ತೆರೆಕಂಡು ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ಸ್ಟಾರ್ ನಟರ ಜೊತೆಗೆಲ್ಲಾ ತೆರೆ ಹಂಚಿಕೊಳ್ಳುವ ಅವಕಾಶ ಗಿಟ್ಟಿಸಿದ್ದರು.

'ಗೀತಾಗೋವಿಂದಂ' ಬಳಿಕ 'ಡಿಯರ್ ಕಾಮ್ರೆಡ್' ಚಿತ್ರದಲ್ಲಿ ವಿಜಯ್ ದೇವರಕೊಂಡ ಜೋಡಿಯಾಗಿ ರಶ್ಮಿಕಾ ನಟಿಸಿದ್ದರು. ಅದೇ ಸಮಯದಲ್ಲಿ ಇಬ್ಬರ ನಡುವೆ ಲವ್ ಆಗಿತ್ತು. ಫೆಬ್ರವರಿ 26ರಂದು ಉದಯ್‌ಪುರದಲ್ಲಿ ಅದ್ಧೂರಿಯಾಗಿ ಮದುವೆ ನಡೆಯಿತು. ಮದುವೆ ಶಾಸ್ತ್ರಗಳ ಫೋಟೊ, ವೀಡಿಯೋ ವೈರಲ್ ಆಗಿತ್ತು. ವಿರೋಷ್ ಮದುವೆ ಸಂಭ್ರಮ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು.

More from Filmibeat

Read more about: tollywood rashmika mandanna
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X