ಹಿಜಬ್ ಧರಿಸಿ ಈದ್ ಶುಭಾಶಯ ಹೇಳಿದ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ನಲ್ಲಿ ಬಹಳ ಬ್ಯುಸಿ. ಬಾಲಿವುಡ್‌ನಲ್ಲಿ ಮಾತ್ರವಲ್ಲ ತೆಲುಗು, ತಮಿಳುಗಳಿಂದಲೂ ಸತತ ಆಫರ್‌ಗಳನ್ನು ರಶ್ಮಿಕಾ ಬಾಚಿಕೊಳ್ಳುತ್ತಿದ್ದಾರೆ.

ಇಷ್ಟು ವರ್ಷ ಕೇವಲ ಬಬ್ಲಿ, ಗ್ಲಾಮರಸ್ ಪಾತ್ರಗಳಿಗೆ ಮಾತ್ರವೇ ಸೀಮಿತವಾಗಿದ್ದ ರಶ್ಮಿಕಾಗೆ ಈಗ ತಮ್ಮ ಅಭಿನಯ ಚತುರತೆ ಪ್ರದರ್ಶಿಸಲು ಅವಕಾಶವುಳ್ಳ ಕೆಲವು ಸವಾಲಿನ ಪಾತ್ರಗಳು ಸಹ ಸಿಗುತ್ತಿವೆ.

ಅಮಿತಾಬ್ ಬಚ್ಚನ್ ಜೊತೆಗೆ 'ಗುಡ್ ಬಯ್' ಸಿನಿಮಾದಲ್ಲಿ ಇಂಥಹುದೇ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ 'ಸೀತಾ ರಾಮಮ್' ಹೆಸರಿನ ಸಿನಿಮಾವೊಂದರಲ್ಲಿ ರಶ್ಮಿಕಾ ನಟಿಸುತ್ತಿದ್ದು, ಇದರಲ್ಲಿ ಸಹ ಭಿನ್ನವಾದ ಪಾತ್ರಕ್ಕೆ ರಶ್ಮಿಕಾ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದ ಹೊಸ ಪೋಸ್ಟರ್ ಒಂದು ಬಿಡುಗಡೆ ಆಗಿದ್ದು ಗಮನ ಸೆಳೆಯುತ್ತಿದೆ.

'ಸೀತಾ ರಾಮಮ್' ಸಿನಿಮಾವು ಹಿಂದು-ಮುಸ್ಲಿಂ ಕತೆಯನ್ನು ಹೊಂದಿದ್ದು ಮುಸ್ಲಿಂ ತೀವ್ರವಾದಿಯ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಇಂದು ಈದ್ ಉಲ್ ಅದಾ ಇದ್ದು, ಅದರ ಸಂಬಂಧ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿ ಹಬ್ಬಕ್ಕೆ ಶುಭ ಹಾರೈಸಿದೆ ಚಿತ್ರತಂಡ.

Rashmika Mandannas New Movie Sita Raman New Poster Released

'ಸೀತಾ ರಾಮನ್' ಸಿನಿಮಾದಲ್ಲಿ ಅಫ್ರೀನ್ ಹೆಸರಿನ ಮುಸ್ಲಿಂ ಯುವತಿಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿಂದೆ ಸಿನಿಮಾದ ಟೀಸರ್ ಒಂದು ಬಿಡುಗಡೆ ಆಗಿತ್ತು. ಟೀಸರ್‌ನಲ್ಲಿ ಬಂದೂಕು ಹಿಡಿದು ಖತರ್‌ನಾಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಈಗ ಬಿಡುಗಡೆ ಆಗಿರುವ ಪೋಸ್ಟರ್‌ನಲ್ಲಿ ನಮಾಜು ಮಾಡುವ ರೀತಿಯಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ ರಶ್ಮಿಕಾ ಮಂದಣ್ಣ.

'ಸೀತಾ ರಾಮನ್' ಸಿನಿಮಾದಲ್ಲಿ ನಾಯಕನಾಗಿ ಮಲಯಾಳಂನ ಸ್ಟಾರ್ ನಟ ದುಲ್ಕರ್ ಸಲ್ಮಾನ್ ನಟಿಸುತ್ತಿದ್ದಾರೆ. ನಟ ಸುಮಂತ್ ಸಹ ಸಿನಿಮಾದಲ್ಲಿದ್ದಾರೆ. ಯುದ್ಧದ ಕಾಲದ ಈ ಪ್ರೇಮಕತೆಯನ್ನು ಹನು ರಘುಪುಡಿ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾವು ಆಗಸ್ಟ್ 05 ರಂದು ತೆರೆಗೆ ಬರಲಿದೆ.

ಈಗಾಗಲೇ ರಶ್ಮಿಕಾ ಮಂದಣ್ಣ ಕೈಯಲ್ಲಿ ಹಲವು ಸಿನಿಮಾಗಳಿವೆ. ರಶ್ಮಿಕಾ ನಟನೆಯ ಹಿಂದಿ ಸಿನಿಮಾಗಳಾದ 'ಮಿಷನ್ ಮಜ್ನು' ಹಾಗೂ 'ಗುಡ್ ಬೈ' ಸಿನಿಮಾಗಳು ತೆರೆಗೆ ಬರಲು ರೆಡಿಯಾಗಿವೆ. ಅದರ ಜೊತೆಗೆ 'ಪುಷ್ಪ 2' ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ರಣ್ಬೀರ್ ಕಪೂರ್ ನಾಯಕರಾಗಿರುವ ಹಿಂದಿ ಸಿನಿಮಾ 'ಅನಿಮಲ್'ನಲ್ಲಿ ರಶ್ಮಿಕಾ ನಾಯಕಿ. ನಟ ವಿಜಯ್‌ರ ಹೊಸ ತಮಿಳು ಸಿನಿಮಾಕ್ಕೂ ರಶ್ಮಿಕಾ ಆಯ್ಕೆಯಾಗಿದ್ದಾರೆ. ಹಲವಾರು ಸ್ಟಾರ್ ನಟರೊಟ್ಟಿಗೆ, ದೊಡ್ಡ ದೊಡ್ಡ ಬ್ಯಾನರ್‌ಗಳಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿರುವುದು ವಿಶೇಷ.

More from Filmibeat

English summary
Rashmika Mandanna's new movie Sita Raman new poster released. Rashmika acted as Afreen in the movie. Dulquer Salmaan is the hero.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X