"ಈಗ ನಾವು ಮೂವರು"; ಮದುವೆ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಪೋಸ್ಟ್ ವೈರಲ್

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ತಿಂಗಳ ಹಿಂದೆ ಹಸೆಮಣೆ ಏರಿದ್ದರು. ಇತ್ತೀಚೆಗೆ ಹನಿಮೂನ್‌ಗಾಗಿ ಥಾಯ್ಲೆಂಡ್‌ಗೆ ಹೋಗಿ ಬಂದಿದ್ದರು. ಬಳಿಕ ಮತ್ತೆ 'ರಣಬಾಲಿ' ಚಿತ್ರದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಸದ್ಯ ರಶ್ಮಿಕಾ ಹೊಸ ಇನ್‌ಸ್ಟಾಗ್ರಾಮ್ ಪೋಸ್ಟ್ ವೈರಲ್ ಆಗ್ತಿದೆ. "ಈಗ ನಾವು ಮೂವರು" ಎಂದು ಆಕೆ ಪೋಸ್ಟ್ ಮಾಡಿರುವುದು ಗಮನ ಸೆಳೆಯುತ್ತಿದೆ.

ವಿಜಯ್ ದೇವರಕೊಂಡ ಜೊತೆಗಿನ ಕಾರ್ಟೂನ್ ರೀಲ್ ಶೇರ್ ಮಾಡಿಕೊಂಡಿದ್ದಾರೆ. ಅದಕ್ಕೆ ಕೊಟ್ಟಿರುವ ಕ್ಯಾಪ್ಷನ್ ವಿಶೇಷವಾಗಿದೆ. ಅದರ ಅರ್ಥ ತಿಳಿಯದೇ ಕೆಲವರು ತಲೆ ಕೆಡಿಸಿಕೊಂಡಿದ್ದಾರೆ. ಮೇಡಂ ಪ್ರಗ್ನೆಂಟಾ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇಷ್ಟು ಬೇಗ ಸಿಹಿಸುದ್ದಿನಾ ಅಂತೆಲ್ಲಾ ಕಾಮೆಂಟ್ ಬಾಕ್ಸ್‌ನಲ್ಲಿ ಚರ್ಚೆ ಶುರುವಾಗಿದೆ. ಕೆಲವರು ಅಸಲಿ ಸಂಗತಿ ಹೇಳಿ ಅರ್ಥ ಮಾಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಪೋಸ್ಟ್ ಮಾಡಿ ರಶ್ಮಿಕಾ ಸೈಲೆಂಟ್ ಆಗಿಬಿಟ್ಟಿದ್ದಾರೆ.

Rashmika Mandanna s now it s us three Post Sparks Buzz Truth Behind Post with Vijay Deverakonda

ಅಸಲಿ ಸಂಗತಿ ಏನಂದ್ರೆ ಕಳೆದ ವರ್ಷ ನಟಿ ರಶ್ಮಿಕಾ ಮಂದಣ್ಣ ಜನಪ್ರಿಯ ಕಥೆ ಹೇಳುವ ವೇದಿಕೆ 'ಟೆರಿಬ್ಲಿ ಟೈನಿ ಟೇಲ್ಸ್' (ಟಿಟಿಟಿ) ಸಹಯೋಗದೊಂದಿಗೆ 'ರಶ್ಮಿಕಾ & ರು - ಆರ್ & ಆರ್' ಎಂಬ ಹೊಸ ಅನಿಮೇಟೆಡ್ ಡಿಜಿಟಲ್ ಸರಣಿಯನ್ನು ಪ್ರಾರಂಭಿಸಿದ್ದರು. ಈ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಂತೋಷ, ಭರವಸೆ ಮತ್ತು ಸಕಾರಾತ್ಮಕ ಭಾವನೆ ಹರಡುವ ಪ್ರಯತ್ನ ಮಾಡಲಾಗುತ್ತಿದೆ. ರಶ್ಮಿಕಾ ಅವರ ವ್ಯಕ್ತಿತ್ವದಿಂದ ಪ್ರೇರಿತವಾದ ಅನಿಮೇಟೆಡ್ ಪಾತ್ರವೇ 'ರು'. ಇದೀಗ ರಶ್ಮಿಕಾ ಹಾಗೂ 'ರು' ಸರಣಿಗೆ ವಿಜಯ್ ದೇವರಕೊಂಡ ಜೊತೆಯಾಗಿದ್ದಾರೆ. ಇದೇ ವಿಚಾರವನ್ನು "ಈಗ ನಾವು ಮೂವರು" ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.

'ರಶ್ಮಿಕಾ & ರು' ಎಂಬ ಇನ್‌ಸ್ಟಾಗ್ರಾಮ್ ಅಕೌಂಟ್ ಕೂಡ ಇದೆ. ಸೂರ್ಯಕಾಂತಿ ಹೂವಿನ ಕಾರ್ಟೂನ್ ಜೊತೆ ರಶ್ಮಿಕಾ ಮಂದಣ್ಣ ಕಾರ್ಟೂನ್ ಮಾತನಾಡುವ ಈ ಕಾರ್ಟೂನ್‌ಗಳನ್ನು ಡಿಸೈನ್ ಮಾಡಲಾಗುತ್ತದೆ.

'ರಶ್ಮಿಕಾ & ರು' ಎನ್ನುವುದು 'ಕಲೆಕ್ಟಿವ್ ಆರ್ಟಿಸ್ಟ್ಸ್ ನೆಟ್‌ವರ್ಕ್' ಅಡಿಯಲ್ಲಿ ಟಿಟಿಟಿ ಮತ್ತು ರಶ್ಮಿಕಾ ಜಂಟಿ ಪ್ರಯತ್ನ. ಇದೀಗ ವಿಜಯ್ ಕೂಡ ಕೈ ಜೋಡಿಸಿರುವುದು ಕ್ರೇಜ್ ಈ ಕಾರ್ಟೂನ್ ಸ್ಟೋರಿಗಳ ಕ್ರೇಜ್ ಹೆಚ್ಚುವಂತೆ ಮಾಡಿದೆ. ಈಗಾಗಲೇ ಸಾಕಷ್ಟು ಜನ ಸೋಶಿಯಲ್ ಮೀಡಿಯಾದಲ್ಲಿ 'ರಶ್ಮಿಕಾ & ರು' ಖಾತೆಯನ್ನು ಫಾಲೋ ಮಾಡುತ್ತಿದ್ದಾರೆ. ಮುಂದೆ ಈ ಸಂಖ್ಯೆ ಹೆಚ್ಚಲಿದೆ.

ಫೆಬ್ರವರಿ 26ರಂದು ಉದಯ್‌ಪುರದಲ್ಲಿ ರಶ್ಮಿಕಾ, ವಿಜಯ್ ಮದುವೆ ಅದ್ಧೂರಿಯಾಗಿ ನೆರವೇರಿತ್ತು. ಬಳಿಕ ಹೈದರಾಬಾದ್‌ನಲ್ಲಿ ರಿಸೆಪ್ಷನ್ ಪಾರ್ಟಿ ಏರ್ಪಡಿಸಿದ್ದರು. ದೇಶಾದ್ಯಂತ ಸಿಹಿ ಹಂಚಿ, ಅನ್ನದಾನಕ್ಕೆ ದೇಣಿಗೆ ನೀಡಿ ವಿರೋಷ್ ಜೋಡಿ ತಮ್ಮ ಮದುವೆಯನ್ನು ಸಂಭ್ರಮಿಸಿದ್ದರು. ರಿಸೆಪ್ಷನ್ ಪಾರ್ಟಿಗೆ ಟಾಲಿವುಡ್ ತಾರೆಯರ ಜೊತೆಗೆ ಬಾಲಿವುಡ್ ತಾರೆಯರು ಹಾಜರಾಗಿ ನವ ಜೋಡಿಗೆ ಶುಭ ಕೋರಿದ್ದರು.

'ಗೀತಾಗೋವಿಂದಂ' ಚಿತ್ರದಲ್ಲಿ ಮೊದಲಿಗೆ ಇಬ್ಬರೂ ನಟಿಸಿದ್ದರು. ಆಗ ಶುರುವಾದ ಪರಿಚಯ, ಸ್ನೇಹ ಬಳಿಕ 'ಡಿಯರ್ ಕಾಮ್ರೇಡ್' ಸಿನಿಮಾ ಮಾಡುವ ವೇಳೆಗೆ ಪ್ರೀತಿಯಾಗಿ ಬದಲಾಗಿತ್ತು. 3ನೇ ಸಿನಿಮಾ ಬಿಡುಗಡೆಗೂ ಮುನ್ನ ಇಬ್ಬರ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ. ಅಭಿಮಾನಿಗಳು ಇದನ್ನು ಸಂಭ್ರಮಿಸಿದ್ದರು. ಮದುವೆ ಬಳಿಕ ಕೂಡ ರಶ್ಮಿಕಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಕನ್ನಡ, ತೆಲುಗು, ತಮಿಳು ಬಳಿಕ ಬಾಲಿವುಡ್ ಅಂಗಳಕ್ಕೂ ರಶ್ಮಿಕಾ ಜಿಗಿದಿದ್ದಾರೆ. ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ 'ಕಾಕ್‌ಟೇಲ್-2' ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಶೀಘ್ರದಲ್ಲೇ ಆ ಚಿತ್ರದ ಹಾಡೊಂದು ಅನಾವರಣವಾಗಲಿದೆ. 'ಮೈಸಾ' ಎಂಬ ಮಹಿಳಾ ಪ್ರಧಾನ ಚಿತ್ರದಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ. ಪತಿ ವಿಜಯ್ ಜೊತೆ ನಟಿಸುತ್ತಿರುವ 'ರಣಬಾಲಿ' ಸಿನಿಮಾ ಕೂಡ ಕುತೂಹಲ ಮೂಡಿಸಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X