ರಶ್ಮಿಕಾ ಮಂದಣ್ಣಗೆ ಹಿಗ್ಗಾಮುಗ್ಗಾ ಜಾಡಿಸಿದ ಹೈದ್ರಾಬಾದ್ ವೈದ್ಯೆ; ಅಷ್ಟಕ್ಕೂ ಏನಾಯ್ತು?

ರಶ್ಮಿಕಾ ಮಂದಣ್ಣ ಹವಾ ಜೋರಾಗಿದೆ. ನಟಿಸಿದ ಸಿನಿಮಾಗಳೆಲ್ಲಾ ಗೆಲ್ಲುತ್ತಿದೆ. ಇತ್ತೀಚೆಗೆ ಬಂದ 'ದಿ ಗರ್ಲ್‌ಫ್ರೆಂಡ್' ಚಿತ್ರಕ್ಕೂ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ. ಅದರಲ್ಲೂ ಮುಖ್ಯವಾಗಿ ಆಕೆಯ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮತ್ತೊಂದು ಕಡೆ ವಿಜಯ್ ದೇವರಕೊಂಡ ಜೊತೆ ಮದುವೆ ಎನ್ನುವ ಗುಸುಗುಸು ಶುರುವಾಗಿದೆ. ಇದೆಲ್ಲದರ ನಡುವೆ ವೈದ್ಯೆಯೊಬ್ಬರು ರಶ್ಮಿಕಾಗೆ ಕೌಂಟರ್ ಕೊಟ್ಟಿದ್ದಾರೆ.

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ತಮ್ಮ ಹೇಳಿಕೆಗಳಿಂದ ಕೆಲವೊಮ್ಮೆ ಎಡವಟ್ಟು ಮಾಡಿಕೊಳ್ಳುತ್ತಾರೆ. ಮಾತನಾಡುವ ಭರದಲ್ಲಿ ಏನೋ ಮಾತನಾಡಿ ಬಳಿಕ ಸಂಕಷ್ಟಕ್ಕೆ ಸಿಲುಕಿರುವುದು ಇದೆ. ಇಂತದ್ದೇ ಹೇಳಿಕೆಗಳಿಂದ ಕನ್ನಡ ಸಿನಿರಸಿಕರ ಅಸಮಾಧಾನಕ್ಕೂ ಗುರಿಯಾಗಿದ್ದರು. ಸದ್ಯ ತೆಲುಗು, ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಾ ಹೈದರಾಬಾದ್‌ನಲ್ಲೇ ಸೆಟ್ಲ್ ಆಗಿದ್ದಾರೆ. ಇತ್ತೀಚೆಗೆ ತೆಲುಗಿನ 'ಜಯಮ್ಮು ನಿಶ್ಚಯಮ್ಮುರಾ' ಟಾಕ್ ಶೋನಲ್ಲಿ ರಶ್ಮಿಕಾ ನೀಡಿದ್ದ ಹೇಳಿಕೆ ಭಾರೀ ಚರ್ಚೆ ಹುಟ್ಟಾಕ್ಕಿದೆ.

Rashmika Mandanna s Period Comment Sparks Debate Hyderabad Doctor Counters Her Statement

ಮುಟ್ಟಿನ ಸಮಯದಲ್ಲಿ ಮಹಿಳೆಯರು ಎಷ್ಟು ನೋವು ಅನುಭವಿಸುತ್ತಾರೆ. ಆ ಬಗ್ಗೆ ಗಂಡಸರಿಗೆ ಗೊತ್ತಾಗಲ್ಲ ಎಂದು ರಶ್ಮಿಕಾ ಹೇಳಿದ್ದರು. ಕಾರ್ಯಕ್ರಮದಲ್ಲಿ ನಿರೂಪಕ ಜಗಪತಿ ಬಾಬು "ಗಂಡಸರಿಗೂ ಪೀರಿಯಡ್ಸ್ ಬಂದರೆ ಚೆನ್ನಾಗಿರುತ್ತದೆ ಎಂದು ಭಾವಿಸಿದಂತಿದೆ" ಎಂದು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ರಶ್ಮಿಕಾ "ಹೌದು.. ಗಂಡಸರಿಗೆ ಪೀರಿಯಡ್ಸ್ ಬಂದು ಆ ನೋವು ಹೇಗಿರುತ್ತದೆ ಎಂದು ಗೊತ್ತಾಗಬೇಕು. ಅದಕ್ಕೆ ಅವರಿಗೆ ಪೀರಿಯಡ್ಸ್ ಬರಬೇಕು" ಎಂದಿದ್ದರು.

ರಶ್ಮಿಕಾ ಹೇಳಿಕೆ ಬಗ್ಗೆ ಸೋಶಿಯಲ್ ಮೀಡಿಯಾದ್ಲಿ ಪರ ವಿರೋಧ ಚರ್ಚೆ ನಡೆಯತ್ತಿದೆ. ಸಾಕಷ್ಟು ಜನ ಆಕೆ ಹೇಳಿದ್ದು ಸರಿಯಾಗಿದೆ ಎಂದಿದ್ದಾರೆ. ಕೆಲವರು ಮಾತ್ರ ಇದಕ್ಕೆ ತಿರುಗೇಟು ನೀಡುವ ಪ್ರಯತ್ನ ಮಾಡಿದ್ದಾರೆ. ಇದೇ ಕಾರಣಕ್ಕೆ ಕಳೆದೊಂದು ವಾರದಿಂದ ಈ ವಿಚಾರ ಭಾರೀ ಸದ್ದು ಮಾಡ್ತಿದೆ. ಇದೀಗ ಹೈದರಾಬಾದ್ ಮೂಲದ ವೈದ್ಯೆಯೊಬ್ಬರು ರಶ್ಮಿಕಾ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

'ಎಕ್ಸ್'(ಟ್ವಿಟ್ಟರ್) ವೇದಿಕೆಯಲ್ಲಿ ರಶ್ಮಿಕಾ ಮಂದಣ್ಣ ಹೇಳಿಕೆ ಬಗ್ಗೆ ಹೈದರಾದ್ ಮೂಲದ ವೈದ್ಯೆ ಸುನಿತಾ ಸಯಮ್ಮಗಾರು ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. "ಯಾಕೆ ಜನಪ್ರಿಯ ವ್ಯಕ್ತಿಗಳು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಮಹಿಳೆಯರಿಗೆ ಋತುಚಕ್ರದ ಸಮಯದಲ್ಲಿ ಕಷ್ಟಪಡುತ್ತಾರೆ ಎಂದ ಮಾತ್ರಕ್ಕೆ ಪುರುಷರಿಗೂ ಅದೇ ರೀತಿ ಆಗಬೇಕು ಎಂದು ಹಾರೈಸುವುದು ಎಷ್ಟು ಸರಿ? ಆಕೆಯ ತಂದೆ, ಆಕೆ ಪ್ರಿಯಕರ ವಿಜಯ್ ದೇವರಕೊಂಡ ಹಾಗೂ ಆಕೆಯ ಸಹೋದರರಿಗೆ ಇದನ್ನೇ ಏಕೆ ಹಾರೈಸಬೇಕು?" ಎಂದು ಪ್ರಶ್ನಿಸಿದ್ದಾರೆ.

ಟ್ವೀಟ್ ಮುಂದುವರೆಸಿ "ನಿಯಮಿತವಲ್ಲದ ಋತುಚಕ್ರ ಹೊಂದಿರುವ ಮಹಿಳೆಯನ್ನು ಕೇಳಿ, ಅವರು ಮಾಸಿಕ ನಿಯಮಿತ ಋತುಚಕ್ರವನ್ನು ಸಂತೋಷದಿಂದ ಸ್ವೀಕರಿಸುತ್ತಾರೆ. ಪುರುಷರಲ್ಲಿ ನಿಮಿರುವಿಕೆ ಉತ್ತಮ ಆರೋಗ್ಯದ ಸಂಕೇತವಾಗಿರುವಂತೆ. ಋತುಚಕ್ರವು ಉತ್ತಮ ಆರೋಗ್ಯ ಮತ್ತು ಫಲವತ್ತತೆಯ ಸಂಕೇತವಾಗಿದೆ. ಪುರುಷರಿಗೆ ತಮ್ಮದೇ ಆದ ಆರೋಗ್ಯ ಸಮಸ್ಯೆಗಳಿರುತ್ತವೆ ಎನ್ನುವುದು ಈ ಮಹಿಳೆಗೆ ತಿಳಿದಿದೆಯೇ? ತನ್ನ ಸ್ತ್ರೀ ಸಮಸ್ಯೆಗಳಿಗೆ ಕೆಲವು ಪುರುಷ ಸಮಸ್ಯೆಗಳನ್ನು ವಿನಿಮಯ ಮಾಡಿಕೊಳ್ಳಲು ಅವಳು ಬಯಸುತ್ತಾಳೆಯೇ?" ಎಂದು ವೈದ್ಯೆ ಸುನಿತಾ ಸಯಮ್ಮಗಾರು ತಿರುಗೇಟು ನೀಡಿದ್ದಾರೆ.

ಕೆಲವರು ವೈದ್ಯೆ ಸುನಿತಾ ಅವರ ಹೇಳಿಕೆಗೆ ದನಿಗೂಡಿಸಿದ್ದಾರೆ. ಆಕೆಯ ಹೇಳಿಕೆ ಸರಿಯಾಗಿದೆ ಎಂದು ರಿಪ್ಲೇ ಮಾಡುತ್ತಿದ್ದಾರೆ. ರಶ್ಮಿಕಾ ಈ ಹಿಂದೆ ಪೀರಿಯಡ್ಸ್ ಸಮಯದಲ್ಲಿ ಮಹಿಳೆಯರು ಎದುರಿಸುವ ನೋವಿನ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು.

"ಮುಟ್ಟಿನ ಸಮಯದಲ್ಲಿ ನೋವನ್ನು ನಿಭಾಯಿಸಲು ಏನು ಮಾಡಬೇಕು" ಆ ನೋವಿನಿಂದ ಸ್ವಲ್ಪ ಪರಿಹಾರ ಪಡೆಯಲು ಏನು ಮಾಡಬೇಕು? ಎಂದು ಕೇಳುವ ಪೋಲ್ ಪೋಸ್ಟ್ ಹಾಕಿದ್ದರು. 1. ಐಸ್ ಕ್ರೀಮ್, ಚಾಕಲೇಟ್ ತಿನ್ನಬೇಕಾ? 2. ಯಾರನ್ನಾದರೂ ಹೊಡೆಯಬೇಕೇ? 3. ನಾನು ಸಿನಿಮಾ ನೋಡಬೇಕೇ? ಅಥವಾ 4. ನಾನು ಸುಮ್ಮನೆ ಕೂತು ಅಳಬೇಕೇ? ಎಂದು ಪ್ರಶ್ನಿಸಿದ್ದರು. ಮಹಿಳಾ ಅಭಿಮಾನಿಗಳು ಅದಕ್ಕೆ ಕಾಮೆಂಟ್ ಮಾಡಿ ಸಲಹೆ ನೀಡಿದ್ದರು.

More from Filmibeat

Read more about: rashmika mandanna tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X