ಹಿಂದೆಂದೂ ನೋಡದ ಅವತಾರದಲ್ಲಿ ಬರಲಿದ್ದಾರೆ ರಶ್ಮಿಕಾ ಮಂದಣ್ಣ

ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಸೆಲ್ವಾರ್ ಕಮೀಜ್ ತೊಟ್ಟು, ದೊಡ್ಡ ಫ್ರೇಮಿನ ಕನ್ನಡಕ ತೊಟ್ಟು 'ಓಲ್ಡ್ ಸ್ಕೂಲ್' ಚೆಲುವೆಯಾಗಿದ್ದ ರಶ್ಮಿಕಾ ಮಂದಣ್ಣ ಈಗ ಗ್ಲಾಮರಸ್ ಗೊಂಬೆ.

'ಕಿರಿಕ್ ಪಾರ್ಟಿ' ನಂತರ ತೆಲುಗು ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ ರಶ್ಮಿಕಾ ಮಂದಣ್ಣ ಕ್ಯೂಟ್ ಲುಕ್ ಜೊತೆಗೆ ಹಾಟ್ ಲುಕ್‌ನಿಂದಲೂ ಪ್ರೇಕ್ಷಕರನ್ನು ಸೆಳೆದಿದ್ದಾರೆ. ಸಿನಿಮಾದಿಂದ ಸಿನಿಮಾಕ್ಕೆ ತಮ್ಮ ಲುಕ್‌ಗಳನ್ನು ಬದಲಾಯಿಸುತ್ತಲೇ ಇರುವ ರಶ್ಮಿಕಾ, ಲುಕ್‌ ಅನ್ನು ಅಪ್‌ಗ್ರೇಡ್ ಮಾಡಿಕೊಳ್ಳುತ್ತಲೂ ಇರುತ್ತಾರೆ.

ರಶ್ಮಿಕಾ ಮಂದಣ್ಣ ತೆಲುಗಿನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ 'ಪುಷ್ಪ' ಸಿನಿಮಾದಲ್ಲಿ ನಟಿಸುತ್ತಿದ್ದು ಇದೇ ಮೊದಲ ಬಾರಿಗೆ ಚಿತ್ರತಂಡವು ರಶ್ಮಿಕಾರ ಲುಕ್‌ ಅನ್ನು ಬಿಡುಗಡೆ ಗೊಳಿಸುತ್ತಿದೆ. ಈ ಹಿಂದೆ ಅಲ್ಲು ಅರ್ಜುನ್‌ರ ಲುಕ್‌ನ ಕೆಲವು ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಿತ್ತಾದರೂ ಇದೇ ಮೊದಲ ಬಾರಿಗೆ ಸಿನಿಮಾದಲ್ಲಿ ರಶ್ಮಿಕಾ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುಳಿವು ಚಿತ್ರಪ್ರೇಮಿಗಳಿಗೆ, ರಶ್ಮಿಕಾರ ಅಭಿಮಾನಿಗಳಿಗೆ ಸಿಗಲಿದೆ.

ನಾಳೆ (ಸೆಪ್ಟೆಂಬರ್ 29)ಕ್ಕೆ ರಶ್ಮಿಕಾರ ಪೋಸ್ಟರ್ ಬಿಡುಗಡೆ ಆಗಲಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ 'ಪುಷ್ಪ' ತಂಡವು, 'ಕಚ್ಚಾ ಮತ್ತು ತೀವ್ರತೆಯುಳ್ಳ ರಶ್ಮಿಕಾ ಮಂದಣ್ಣರ ಲುಕ್ ನಾಳೆ ಬಿಡುಗಡೆ ಆಗಲಿದೆ. 'ಪುಷ್ಪ'ನ ಪ್ರೇಯಸಿಯನ್ನು ನಾಳೆ ನಿಮಗೆ ಪರಿಚಯ ಮಾಡಿಸುತ್ತೇವೆ'' ಎಂದಿದೆ. ಸಿನಿಮಾದಲ್ಲಿ ಅಲ್ಲು ಅರ್ಜುನ್ ಪ್ರೇಯಸಿ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದು, ಹಳ್ಳಿ ಬೆಡಗಿಯಾಗಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ.

ಶ್ರೀವಲ್ಲಿ ಹೆಸರಿನ ಪಾತ್ರದಲ್ಲಿ ರಶ್ಮಿಕಾ

ಶ್ರೀವಲ್ಲಿ ಹೆಸರಿನ ಪಾತ್ರದಲ್ಲಿ ರಶ್ಮಿಕಾ

ಸಿನಿಮಾದಲ್ಲಿ ಶ್ರೀವಲ್ಲಿ ಹೆಸರಿನ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದು, 'ಪುಷ್ಪ' ಸಿನಿಮಾದ ಲೀಕ್ಡ್ ವಿಡಿಯೋಗಳಲ್ಲಿ ರಶ್ಮಿಕಾ ಪಾತ್ರದ ಸಣ್ಣ ಮಟ್ಟಿನ ಪರಿಚಯ ಈಗಾಗಲೇ ಆಗಿದೆ. ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ ಎಂದು ಮೊದಲು ಹೇಳಲಾಗಿತ್ತು ಆದರೆ ಅದು ಸುಳ್ಳಾಗಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ ಎಂಬುದು ಖಾತ್ರಿಯಾಗಿದೆ. ಚಿತ್ರತಂಡ ರಶ್ಮಿಕಾರ ಪೋಸ್ಟರ್ ಬಿಡುಗಡೆ ಮಾಡುವ ಮೊದಲೇ ಕೆಲವರು 'ಪುಷ್ಪ' ಸಿನಿಮಾದ ರಶ್ಮಿಕಾರ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ.

ಹಲವು ಸಮಸ್ಯೆಗಳ ನಡುವೆ ಚಿತ್ರೀಕರಣ

ಹಲವು ಸಮಸ್ಯೆಗಳ ನಡುವೆ ಚಿತ್ರೀಕರಣ

'ಪುಷ್ಪ' ಸಿನಿಮಾವು ಕೊರೊನಾ ಮಾತ್ರವೇ ಅಲ್ಲದೆ ಇನ್ನೂ ಹಲವು ಸಮಸ್ಯೆಗಳನ್ನು ಎದುರಿಸಿಕೊಂಡು ಚಿತ್ರೀಕರಣ ಮಾಡುತ್ತಿದೆ. ಚಿತ್ರೀಕರಣದಲ್ಲಿ ತೊಡಗಿದವರಿಗೆ ಡೆಂಗ್ಯೂ ಸಹ ಆಗಿತ್ತು, ಅದನ್ನು ಪಾರು ಮಾಡಿಕೊಂಡು ಚಿತ್ರೀಕರಣ ಮಾಡುತ್ತಿರುವ ಹೊತ್ತಿಗೆ, ಸಿನಿಮಾಕ್ಕೆ ವಿಡಿಯೋ ಲೀಕ್ ಕಾಟ ಎದುರಾಯಿತು, ಸಿನಿಮಾದ ಸುಮಾರು 30 ನಿಮಿಷದ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದೆ. ಅಲ್ಲು ಅರ್ಜುನ್, ಡಾಲಿ ಧನಂಜಯ್, ರಶ್ಮಿಕಾರ ಲುಕ್‌ಗಳು ಲೀಕ್ ಆದ ವಿಡಿಯೋದಿಂದ ಬಹಿರಂಗವಾಗಿವೆ.

ಜಾಲಿ ರೆಡ್ಡಿ ಪಾತ್ರದಲ್ಲಿ ನಟ ಡಾಲಿ ಧನಂಜಯ್

ಜಾಲಿ ರೆಡ್ಡಿ ಪಾತ್ರದಲ್ಲಿ ನಟ ಡಾಲಿ ಧನಂಜಯ್

ಅಲ್ಲು ಅರ್ಜುನ್‌ರ ಮೂರು ಪೋಸ್ಟರ್‌ಗಳು ಈಗಾಗಲೇ ಚಿತ್ರತಂಡ ಬಿಡುಗಡೆ ಮಾಡಿದೆ. ಸಿನಿಮಾದ ಮುಖ್ಯ ವಿಲನ್ ಫಹಾದ್ ಫಾಸಿಲ್ ಪೋಸ್ಟರ್ ಅನ್ನು ಸಹ ಚಿತ್ರತಂಡ ಬಿಡುಗಡೆ ಮಾಡಿದೆ. ಸಿನಿಮಾದಲ್ಲಿ ಮತ್ತೊಬ್ಬ ಪ್ರಮುಖ ವಿಲನ್ ಆಗಿ ನಟಿಸುತ್ತಿರುವ ಕನ್ನಡದ ನಟ ಡಾಲಿ ಧನಂಜಯ್‌ರ ಪೋಸ್ಟರ್ ಅನ್ನು ಇತ್ತೀಚೆಗಷ್ಟೆ ಬಿಡುಗಡೆ ಮಾಡಲಾಯಿತು. ಸಿನಿಮಾದಲ್ಲಿ ಜಾಲಿ ರೆಡ್ಡಿ ಹೆಸರಿನ ಪಾತ್ರದಲ್ಲಿ ಧನಂಜಯ್ ನಟಿಸಿದ್ದಾರೆ. ಅಲ್ಲು ಅರ್ಜುನ್ ಹಾಗೂ ಧನಂಜಯ್ ನಡುವಿನ ಫೈಟ್ ದೃಶ್ಯದ ವಿಡಿಯೋ ತುಣುಕೊಂದು ಕೆಲವು ದಿನಗಳ ಹಿಂದೆ ಲೀಕ್ ಆಗಿತ್ತು.

ಸುಕುಮಾರ್ ನಿರ್ದೇಶಿಸುತ್ತಿರುವ 'ಪುಷ್ಪ'

ಸುಕುಮಾರ್ ನಿರ್ದೇಶಿಸುತ್ತಿರುವ 'ಪುಷ್ಪ'

'ಪುಷ್ಪ' ಸಿನಿಮಾವನ್ನು ಜನಪ್ರಿಯ ನಿರ್ದೇಶಕ ಸುಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾವು ಎರಡು ಭಾಗಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಮೊದಲ ಭಾಗವು ಡಿಸೆಂಬರ್ 25 ರಂದು ಬಿಡುಗಡೆ ಆಗಲಿದೆ. ಸಿನಿಮಾಕ್ಕೆ ದೇವಿಶ್ರೀಪ್ರಸಾದ್ ಸಂಗೀತ ನೀಡಿದ್ದು, ಈಗಾಗಲೇ ಒಂದು ಹಾಡು ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ. ಸಿನಿಮಾಕ್ಕೆ ಮೈತ್ರಿ ಮೂವೀಸ್‌ ಬಂಡವಾಳ ಹೂಡಿದೆ. ವಿಡಿಯೋ ಲೀಕ್‌ ಸಮಸ್ಯೆ 'ಪುಷ್ಪ' ಸಿನಿಮಾವನ್ನು ಬಹುವಾಗಿ ಕಾಡುತ್ತಿದ್ದು, ಈ ಕುರಿತಂತೆ ಸಿನಿಮಾ ನಿರ್ಮಾಣ ಸಂಸ್ಥೆಯು ಸೈಬರ್ ಪೊಲೀಸರಿಗೆ ದೂರು ನೀಡಿದೆ.

More from Filmibeat

English summary
Actress Rashmika Mandanna's poster from the movie Pushpa releasing on September 29. Rashmika played village girl character in the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X