ಕರಾವಳಿ ಸುಂದರಿ ಅನುಷ್ಕಾ ಶೆಟ್ಟಿಗೆ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸವಾಲು?

ದೊಡ್ಡ ಸಿನಿಮಾಗಳ ನಡುವೆ ಬಾಕ್ಸಾಫೀಸ್ ಕ್ಲ್ಯಾಶ್ ಹೊಸದೇನು ಅಲ್ಲ. ಪದೇ ಪದೆ ಇಂತಹ ಸಂದರ್ಭಗಳು ಎದುರಾಗುತ್ತಲೇ ಇರುತ್ತವೆ. ಸ್ಟಾರ್ ನಟರ ಸಿನಿಮಾಗಳು ಒಟ್ಟೊಟ್ಟಿಗೆ ಬಂದು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವುದು ನೋಡಿದ್ದೇವೆ. ಕೆಲವೊಮ್ಮೆ ಹೀಗೆ ಸ್ಟಾರ್ ನಟಿಯರ ಸಿನಿಮಾಗಳು ಎದುರುಬದಿರಾಗುವುದು ಇದೆ.

ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾಗಳ ಮೂಲಕ ರಶ್ಮಿಕಾ ಮಂದಣ್ಣ ಕಮಾಲ್ ಮಾಡ್ತಿದ್ದಾರೆ. 'ಪುಷ್ಪ'- 2, 'ಛಾವ' ಬಳಿಕ ರಶ್ಮಿಕಾ ನಟನೆಯ 'ಕುಬೇರ' ಸಿನಿಮಾ ಕೂಡ ಗೆದ್ದಿತ್ತು. ಅಟ್ಲಿ ಹಾಗೂ ಅಲ್ಲು ಅರ್ಜುನ್ ಮುಂದಿ ಚಿತ್ರದಲ್ಲಿ ಕೂಡ ರಶ್ಮಿಕಾ ನಟಿಸೋ ಬಗ್ಗೆ ಊಹಾಪೋಹ ಶುರುವಾಗಿದೆ. ಇದೆಲ್ಲದರ ನಡುವೆ ಆಕೆ ನಟಿಸುತ್ತಿರುವ ಕೆಲ ಮಹಿಳಾ ಪ್ರಧಾನ ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿದೆ.

Rashmika Mandanna s The Girlfriend faces off against Anushka Shetty s Ghaati on Sep 5

ಮತ್ತೊಂದು ಕಡೆ ಅನುಷ್ಕಾ ಶೆಟ್ಟಿ ಮತ್ತೆ ಬೆಳ್ಳಿ ಪರದೆಗೆ ಬಂದು ಪ್ರೇಕ್ಷಕರನ್ನು ರಂಜಿಸುವ ಲೆಕ್ಕಾಚಾರದಲ್ಲಿದ್ದಾರೆ. 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಬಳಿಕ ಸ್ವೀಟಿ ನಟಿಸಿದ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಇದೀಗ 'ಘಾಟಿ' ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಕ್ರಿಶ್ ಚಿತ್ರಕ್ಕೆ ಆಕ್ಷನ್‌ ಕಟ್ ಹೇಳಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ. ಪದೇ ಪದೆ ಸಿನಿಮಾ ರಿಲೀಸ್ ಡೇಟ್ ಬದಲಾಗುತ್ತಿದೆ.

ಸೆಪ್ಟೆಂಬರ್ 5ಕ್ಕೆ 'ಘಾಟಿ' ಸಿನಿಮಾ ರಿಲೀಸ್ ಎಂದು ಹೇಳಲಾಗ್ತಿದೆ. ಅದೇ ದಿನ ರಶ್ಮಿಕಾ ನಟನೆಯ 'ದಿ ಗರ್ಲ್ ಫ್ರೆಂಡ್' ಚಿತ್ರ ಕೂಡ ತೆರೆಗೆ ಬರುವ ಸಾಧ್ಯತೆಯಿದೆ. ಹಾಗಾಗಿ ಎರಡೂ ಸಿನಿಮಾಗಳ ನಡುವೆ ಬಾಕ್ಸಾಫೀಸ್ ಕ್ಲ್ಯಾನ್ ಲೆಕ್ಕಾಚಾರ ನಡೀತಿದೆ. ಎರಡೂ ಕೂಡ ತೆಲುಗಿನಲ್ಲಿ ನಿರ್ಮಾಣವಾಗಿರುವ ಮಹಿಳಾ ಪ್ರಧಾನ ಚಿತ್ರಗಳು. ಹಾಗಾಗಿ ಟಾಲಿವುಡ್ ಬಾಕ್ಸಾಫೀಸ್ ಮೊದಲ ಟಾರ್ಗೆಟ್ ಆಗಿರಲಿದೆ. ಹಾಗಾಗಿ ಯಾವ ಸಿನಿಮಾ ಗೆಲ್ಲುತ್ತದೆ? ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.

Rashmika Mandanna s The Girlfriend faces off against Anushka Shetty s Ghaati on Sep 5

'ಘಾಟಿ' ಚಿತ್ರವನ್ನು ಯುವಿ ಕ್ರಿಯೇಷನ್ಸ್ ಸಂಸ್ಥೆ ನಿರ್ಮಾಣ ಮಾಡಿದೆ. ಇನ್ನು ಗೀತಾ ಆರ್ಟ್ಸ್ ಬ್ಯಾನರ್‌ ಅಡಿಯಲ್ಲಿ 'ದಿ ಗರ್ಲ್‌ ಫ್ರೆಂಡ್' ಸಿನಿಮಾ ನಿರ್ಮಾಣವಾಗಿದೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಜೊತೆ ಕನ್ನಡ ನಟ ದೀಕ್ಷಿತ್ ಶೆಟ್ಟಿ ಹೀರೊ ಆಗಿ ನಟಿಸಿದ್ದಾರೆ. ಸದ್ಯ ಚಿತ್ರದ ಪ್ರಮೋಷನಲ್ ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ.

ಇನ್ನು ಮಹಿಳಾ ಪ್ರಧಾನ ಸಿನಿಮಾಗಳು ಅನುಷ್ಕಾ ಶೆಟ್ಟಿಗೆ ಹೊಸದೇನು ಅಲ್ಲ. 'ಅರುಂಧತಿ', 'ರುದ್ರಮದೇವಿ' ರೀತಿಯ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. 'ಘಾಟಿ' ಚಿತ್ರದಲ್ಲಿ ವಿಕ್ರಂ ಪ್ರಭು, ರಮ್ಯಾಕೃಷ್ಣನ್, ಜಗಪತಿ ಬಾಬು, ಜಾನ್ ವಿಜಯ್, ರವೀಂದ್ರ ವಿಜಯ್ ಸೇರಿ ದೊಡ್ಡ ತಾರಾಗಣವಿದೆ. ಜುಲೈ 11ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಆದರೆ ಬಳಿಕ ಮುಂದೂಡಲಾಗಿತ್ತು.

ಈಗಾಗಲೇ 'ಘಾಟಿ' ಚಿತ್ರದ ಟೀಸರ್, ಪೋಸ್ಟರ್‌ಗಳು ವೈರಲ್ ಆಗ್ತಿದೆ. ಚಿತ್ರದಲ್ಲಿ ಬಹಳ ಪವರ್‌ಫುಲ್ ಪಾತ್ರದಲ್ಲಿ ಸ್ವೀಟಿ ನಟಿಸಿರುವುದು ಗೊತ್ತಾಗುತ್ತಿದೆ. ಸಂತ್ರಸ್ತೆ ಅಪರಾಧಿಯಾಗಿ ಬದಲಾಗಿ ಮುಂದೆ ದಂತಕಥೆ ಆಗುವಂತಹ ಕಥೆ ಈ ಚಿತ್ರದಲ್ಲಿದೆ ಎನ್ನಲಾಗ್ತಿದೆ. 'ಘಾಟಿ' ಬಿಟ್ಟರೆ ಮಲಯಾಳಂನ 'ಕತ್ತಾನಾರ್' ಎಂಬ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಬಣ್ಣ ಹಚ್ಚಿದ್ದಾರೆ.

'ಘಾಟಿ' ಹಾಗೂ 'ದಿ ಗರ್ಲ್‌ಫ್ರೆಂಡ್' ಚಿತ್ರಗಳು ಸೆಪ್ಟೆಂಬರ್ 5ಕ್ಕೆ ಬಿಡುಗಡೆ ಆಗುತ್ತಾ ಅಥವಾ ಯಾವುದಾದರೂ ಒಂದು ಸಿನಿಮಾ ರಿಲೀಸ್ ಮುಂದಕ್ಕೆ ಹೋಗತ್ತಾ ಕಾದು ನೋಡಬೇಕಿದೆ.

More from Filmibeat

English summary
The Girlfriend Vs Ghaati; Anushka Shetty film to clash with Rashmika mandanna's film;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X