ಕೋಪಿಷ್ಠ.. ಗರ್ವಿಷ್ಠ; ರಕ್ಷಿತ್ ಶೆಟ್ಟಿ ಜೊತೆ ರಶ್ಮಿಕಾ ಬ್ರೇಕಪ್ ಕಾರಣ ಕೊನೆಗೂ ಬಹಿರಂಗ?
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಆಗುತ್ತಾರೆ ಎನ್ನುವ ಚರ್ಚೆ ನಡೀತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಇದಕ್ಕೂ ಮುನ್ನ ರಕ್ಷಿತ್ ಶೆಟ್ಟಿ ಜೊತೆ ರಶ್ಮಿಕಾ ಮದುವೆ ನಿಶ್ಚಯವಾಗಿ ಎಂಗೇಜ್‌ಮೆಂಟ್ ಸಹ ಆಗಿತ್ತು. ಬಳಿಕ ಅದು ಮುರಿದು ಬಿದ್ದಿತ್ತು. ಸದ್ಯ ರಶ್ಮಿಕಾ ನಟನೆಯ 'ದಿ ಗರ್ಲ್‌ಫ್ರೆಂಡ್' ಸಿನಿಮಾ ತೆರೆಗೆ ಬಂದಿದೆ.
ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಎಂಗೇಜ್‌ಮೆಂಟ್ ಮುರಿದು ಬೀಳಲು ಕಾರಣ ಏನು ಎನ್ನುವುದು ಗೊತ್ತಿಲ್ಲ. ಇಬ್ಬರೂ ಈ ಬಗ್ಗೆ ಅಧಿಕೃತವಾಗಿ ಮಾತನಾಡಲಿಲ್ಲ. ಬ್ರೇಕಪ್ ಎನ್ನುವುದನ್ನು ಕೂಡ ಘೋಷಣೆ ಮಾಡಿರಲಿಲ್ಲ. ಇಬ್ಬರು ತಾವಾಯಿತು ತಮ್ಮ ಕೆಲಸ ಆಯಿತು ಎಂದು ಸುಮ್ಮನಾಗಿಬಿಟ್ಟರು. ಸದ್ಯ ಬಿಡುಗಡೆ ಆಗಿರುವ 'ದಿ ಗರ್ಲ್‌ಫ್ರೆಂಡ್' ಸಿನಿಮಾ ನನ್ನ ಜೀವನಕ್ಕೆ ಬಹಳ ಹತ್ತಿರ, ನನ್ನದೇ ಕಥೆ ಎನ್ನುವ ಅರ್ಥ ಬರುವಂತೆ ರಶ್ಮಿಕಾ ಮಾತನಾಡಿರುವುದು ಹೊಸ ಚರ್ಚೆ ಹುಟ್ಟಾಕ್ಕಿದೆ.

ರಾಹುಲ್ ರವೀಂದ್ರನ್ ನಿರ್ದೇಶನದ 'ದಿ ಗರ್ಲ್‌ಫ್ರೆಂಡ್' ಸಿನಿಮಾ ಬಿಡುಗಡೆ ಆಗಿ ಪ್ರೇಕ್ಷಕರ ಮನಗೆದ್ದಿದೆ. ಚಿತ್ರದಲ್ಲಿ ಭೂಮಾ ದೇವಿ ಎಂಬ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಆಕೆಯ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ. ವಿಕ್ರಮ್ ಪಾತ್ರದಲ್ಲಿ ಕುಂದಾಪುರದ ನಟ ದೀಕ್ಷಿತ್ ಶೆಟ್ಟಿ ಮಿಂಚಿದ್ದಾರೆ. ಟಾಕ್ಸಿಕ್ ರಿಲೇಷನ್‌ಶಿಪ್‌ನಿಂದ ಸಂಕಷ್ಟ ಎದುರಿಸುವ ಯುವತಿಯ ಕಥೆ ಚಿತ್ರದಲ್ಲಿದೆ. ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಲವ್, ಎಂಗೇಜ್‌ಮೆಂಟ್, ಬ್ರೇಕಪ್‌ಗೆ ನೇರಾನೇರ ಸಂಬಂಧ ಇರುವಂತೆ ಯಾವುದೇ ಸನ್ನಿವೇಶ ಚಿತ್ರದಲ್ಲಿಲ್ಲ.
ಚಿತ್ರದ ಕಥೆ ಏನು ಎನ್ನುವುದನ್ನು ನೋಡುವುದಾದರೆ ಮುಗ್ಧ ಯುವತಿ ಭೂಮಾದೇವಿ(ರಶ್ಮಿಕಾ ಮಂದಣ್ಣ) ಕಾಲೇಜು ವ್ಯಾಸಂಗಕ್ಕಾಗಿ ಹೈದರಾದ್‌ಗೆ ಬರ್ತಾಳೆ. ತನ್ನ ಕಾಲೇಜಿನ ಬೇರೆ ಬ್ರ್ಯಾಂಚ್‌ಗೆ ವಿದ್ಯಾರ್ಥಿ ವಿಕ್ರಮ್(ದೀಕ್ಷಿತ್ ಶೆಟ್ಟಿ) ಜೊತೆ ಆಕೆ ಪರಿಚಯ, ಸ್ನೇಹ ಶುರುವಾಗಿ ಬಹಳ ಬೇಗ ಪ್ರೀತಿಯಲ್ಲಿ ಬೀಳ್ತಾರೆ. ಆದರೆ ವಿಕ್ರಮ್ ಒರಟು ಗರ್ವಿಷ್ಟ ಸ್ವಭಾವ, ಟಾಕ್ಸಿಕ್ ವರ್ತನೆ ಆಕೆಗೆ ಸಹಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಅದನ್ನು ಯಾರ ಬಳಿ ಕೂಡ ಹೇಳಿಕೊಳ್ಳಲು ಸಾಧ್ಯವಾಗದೇ ರಿಲೇಷನ್‌ಶಿಪ್ ಅನ್ನು ಹೇಗೆ ಮುಂದುವರಿಸುತ್ತಾಳೆ, ಬ್ರೇಕಪ್ ನಂತರ ಏನೆಲ್ಲಾ ಆಗುತ್ತದೆ ಎನ್ನುವುದು ಇನ್ನುಳಿದ ಕಥೆ.
ಪ್ರೀತಿಯಲ್ಲಿ ಅಭದ್ರತೆ ಭಾವನೆ ಶುರುವಾದಾಗ ಏನಾಗುತ್ತದೆ ಎನ್ನುವುದು ಚಿತ್ರದ ತಿರುವು. ಒಮ್ಮೆ ರಿಲೇಷನ್‌ಶಿಪ್ ಶುರುವಾಗಿ ಆಳಕ್ಕೆ ಇಳಿದ ಬಳಿಕ ಹೊರಗೆ ಬರಲಾಗದೇ, ಒಳಗಿನ ನೋವನ್ನು ಹೇಳಿಕೊಳ್ಳಲು ಸಾಧ್ಯವಾಗದೇ ನರಳುವ ಪ್ರೇಮಿಯ ಕಥೆ ಇಲ್ಲಿದೆ. ಚಿತ್ರದಲ್ಲಿ ಪ್ರಿಯಕರನನ್ನು ವಿಲನ್ ರೀತಿ ತೋರಿಸಿರುವುದು ಕೆಲವರ ಬೇಸರಕ್ಕೆ ಕಾರಣವಾಗಿದೆ. ಆದರೆ ಇಂತಹ ಟಾಕ್ಸಿಕ್ ಪ್ರಿಯಕರ, ಪ್ರಿಯತಮೆ ನಮ್ಮ ನಡುವೆ ಇದ್ದಾರೆ ಎನ್ನುವವರು ಇದ್ದಾರೆ.
ಒಂದಷ್ಟು ತಪ್ಪುಗಳ ಹೊರತಾಗಯೂ 'ದಿ ಗರ್ಲ್‌ಫ್ರೆಂಡ್' ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಮೊದಲ ದಿನ ನೀರಸ ಪ್ರತಿಕ್ರಿಯೆ ಸಿಕ್ಕರೂ ಮೌತ್ ಟಾಕ್‌ನಿಂದ 2ನೇ ದಿನ ಕಲೆಕ್ಷನ್ ಚೆನ್ನಾಗಿದೆ. ಇನ್ನು ಚಿತ್ರದ ಬಗ್ಗೆ ಮಾತನಾಡಿರುವ ರಶ್ಮಿಕಾ "ಇದು ನನ್ನದೇ ಕಥೆ ಎನ್ನುವಂತೆ ಭಾಸವಾಯ್ತು. ನನ್ನ ಕಥೆ ನಾನು ಹೇಳ್ತಿದ್ದೀನಿ ಎಂಬಂತೆ ಇತ್ತು. ಹೀಗಾಗಿಯೇ ಅಷ್ಟೊಂದು ಉತ್ತಮವಾಗಿ ನಾನು ಅಭಿನಯಿಸಲು ಸಾಧ್ಯವಾಯ್ತು" ಎಂದು ಹೇಳಿದ್ದಾರೆ.
ಇದನ್ನು ನೋಡಿ ಕೆಲವರು ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕಪ್ ವಿಚಾರವನ್ನು ಕೆದಕಿ ಕಾಮೆಂಟ್ ಮಾಡುತ್ತಿದ್ದಾರೆ. ರಶ್ಮಿಕಾ ಪರೋಕ್ಷವಾಗಿ ರಕ್ಷಿತ್ ಶೆಟ್ಟಿ ಬಗ್ಗೆ ಹೇಳಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ಚಿತ್ರದ ನಾಯಕ ವಿಕ್ರಂ ಗರ್ವಷ್ಠ, ಕೋಪಿಷ್ಠ. ಹುಡುಗಿ ಅಂದ್ರೆ ಹೀಗೆ ಇರಬೇಕು, ತನ್ನಿಷ್ಟದಂತೆ ಭೂಮಾ ಇದ್ದಾಳೆ ಎಂದು ಪ್ರೀತಿಸುತ್ತಾನೆ. ನನ್ನ ಜೀವನವೇ ವಿಕ್ರಮ್ ಹಿಡಿತಕ್ಕೆ ಸಿಲುಕಿದೆ ಎಂದು ಗೊತ್ತಾದಾಗ ಆಕೆ ಏನು ನಿರ್ಧಾರ ತೆಗೆದುಕೊಳ್ಳುತ್ತಾಳೆ. ಅದರಿಂದ ಹೇಗೆ ಬರುತ್ತಾಳೆ ಎನ್ನುವುದನ್ನು ಸೊಗಸಾಗಿ ತೆರೆಗೆ ತರಲಾಗಿದೆ.
ಚಿತ್ರದ ಕಥೆಗೂ ರಶ್ಮಿಕಾ ಹೇಳಿಕೆಗೂ ಲಿಂಕ್ ಮಾಡಿ ಕೆಲವರು ರಕ್ಷಿತ್ ಶೆಟ್ಟಿ ಹೆಸರು ಎಳೆದುತಂದು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











