ಅಬ್ಬಬ್ಬಾ.. ರಶ್ಮಿಕಾನ ಎತ್ತಿ ಹೃದಯದಲ್ಲಿ ಇಟ್ಟುಕೊಂಡ ಬಾಲಕೃಷ್ಣ!: ವಿಡಿಯೋ ಫುಲ್ ವೈರಲ್

"ನನ್ನ ಲೇಟೆಸ್ಟ್ ಕ್ರಶ್ ರಶ್ಮಿಕಾ ಮಂದಣ್ಣ" ಎಂದು ಇತ್ತೀಚಿಗೆ ತೆಲುಗು ನಟ ಬಾಲಕೃಷ್ಣ ಹೇಳಿದ್ದರು. ಬಾಲಯ್ಯ ಅಹಾ ಓಟಿಟಿ ಫ್ಲಾಟ್‌ಫಾರ್ಮ್‌ಗಾಗಿ 'ಅನ್‌ಸ್ಟಾಪಬಲ್ ವಿತ್ ಎನ್‌ಬಿಕೆ' ಎನ್ನುವ ಟಾಕ್‌ ಶೋ ನಡೆಸಿಕೊಡುತ್ತಾರೆ. ಈ ವಾರದ ಎಪಿಸೋಡ್ ಪ್ರೋಮೊ ರಿಲೀಸ್ ಆಗಿ ವೈರಲ್ ಆಗಿದೆ. ಅದರಲ್ಲೂ ಮತ್ತೊಮ್ಮೆ ಬಾಲಯ್ಯ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಜಪ ಮಾಡಿರೋದು ವಿಶೇಷ. ಈ ಹಿಂದೆ ರಶ್ಮಿಕಾ ಶೋಗೆ ಹೋದಾಗ ಕನ್ನಡದಲ್ಲೇ ಪದ್ಯ ಹಾಡಿ ಬಾಲಯ್ಯ ಹುಬ್ಬೇರಿಸುವಂತೆ ಮಾಡಿದ್ದರು.

ಈ ವಾರದ ಎಪಿಸೋಡ್‌ನಲ್ಲಿ ನಟರಾದ ಶರ್ವಾನಂದ್ ಹಾಗೂ ಅಡವಿ ಶೇಷ್ ಅತಿಥಿಗಳಾಗಿ ಭಾಗವಹಿಸಿದ್ದಾರೆ. ಬಾಲಯ್ಯ ಟಾಕ್ ಶೋ ಅಂದಮೇಲೆ ತಮಾಷೆ, ಮೋಜು ಮಸ್ತಿಗೆ ಬರ ಇರುವುದಿಲ್ಲ. ಚಿತ್ರವಿಚಿತ್ರ ಪ್ರಶ್ನೆಗಳನ್ನು ಕೇಳಿ ಎದುರಿಗೆ ಕೂತವರಿಗೆ ಚಮಕ್ ಕೊಡುವ ಬಾಲಕೃಷ್ಣ ತಮ್ಮ ಜೋಕ್‌ಗಳ ಮೂಲಕ ನಗು ಉಕ್ಕಿಸುತ್ತಾರೆ. ಸಿಕ್ಕಾಪಟ್ಟೆ ಜೋವಿಯೆಲ್ ಆಗಿ ಶೋ ನಡೆಸಿಕೊಡುತ್ತಾರೆ. ಇದಕ್ಕಾಗಿ ಭಾರೀ ಮೊತ್ತದ ಸಂಭಾವನೆಯನ್ನು ಪಡೆಯುತ್ತಿದ್ದರೆ. ಮೊದಲ ಸೀಸನ್ ಸಕ್ಸಸ್ ನಂತರ 2ನೇ ಸೀಸನ್ ಶುರುವಾಗಿದೆ. 3ನೇ ಎಪಿಸೋಡ್ ಪ್ರೋಮೊ ರಿಲೀಸ್ ಆಗಿದೆ.

ಶೋಗೆ ಅತಿಥಿಯಾಗಿ ಆಗಮಿಸಿದ ನಟ ಶರ್ವಾನಂದ್, ಬಾಲಕೃಷ್ಣಗೆ ಸರ್‌ಪ್ರೈಸ್ ಕೊಟ್ಟಿದ್ದಾರೆ. ರಶ್ಮಿಕಾ ಮಂದಣ್ಣಗೆ ವಿಡಿಯೋ ಕಾಲ್ ಮಾಡಿ ಫೋನ್ ಬಾಲಯ್ಯ ಕೈಗೆ ಇಟ್ಟಿದ್ದಾರೆ. ಕಳೆದ ಬಾರಿ ರಶ್ಮಿಕಾ ನನ್ನ ಕ್ರಶ್ ಅಂತ ಹೇಳಿದ್ರಿ ಅಲ್ವಾ ಮಾತನಾಡಿ ಎಂದಿದ್ದಾರೆ. ಸಾನ್ವಿಯನ್ನು ವಿಡಿಯೋ ಕಾಲ್‌ನಲ್ಲಿ ನೋಡಿ ಅಚ್ಚರಿಗೊಂಡ ಟಾಲಿವುಡ್ ನಟಸಿಂಹ ಖುಷಿ ಖುಷಿಯಾಗಿ ಮಾತನಾಡಿದ್ದಾರೆ. ನಂತರ ರಶ್ಮಿಕಾನ ಹೃದಯದಲ್ಲಿ ಇಟ್ಟುಕೊಂಡಂತೆ ಫೋನ್‌ನ ತಮ್ಮ ಅಂಗಿ ಜೇಬಿಗೆ ಇಟ್ಟುಕೊಂಡಿದ್ದಾರೆ. ಇದನ್ನು ನೋಡಿದ ಎಲ್ಲರೂ ಓಹ್ ಎಂದು ಉದ್ಘಾರ ತೆಗೆದಿದ್ದಾರೆ.

Rashmika Mandannas Video Call To Balakrishna Video Goes Viral

'ಚಲೋ' ಸಿನಿಮಾ ಮೂಲಕ ಟಾಲಿವುಡ್ ಪ್ರವೇಶಿಸಿದ ರಶ್ಮಿಕಾಗೆ 'ಗೀತಾಗೋವಿಂದಂ' ಚಿತ್ರ ದೊಡ್ಡ ಸಕ್ಸಸ್ ತಂದು ಕೊಟ್ಟಿತ್ತು. ಅಲ್ಲಿಂದ ಮುಂದೆ ಕೊಡಗಿನ ಚೆಲುವೆ ಮತ್ತೆ ಹಿಂತಿರುಗಿ ನೋಡಲೇಯಿಲ್ಲ. ಟಾಲಿವುಡ್ ನಂತರ ಕಾಲಿವುಡ್, ಈಗ ಬಾಲಿವುಡ್‌ನಲ್ಲೂ ಮಿಂಚು ಹರಿಸಿದ್ದಾರೆ. ಇತ್ತೀಚೆಗೆ ಅಮಿತಾಬ್ ಬಚ್ಚನ್ ಮಗಳಾಗಿ ನಟಿಸಿದ್ದ 'ಗುಡ್‌ಬೈ' ಸಿನಿಮಾ ರಿಲೀಸ್ ಆಗಿತ್ತು. ಕಿರಿಕ್ ಬೆಡಗಿ ಬಹಳ ಕಡಿಮೆ ಸಮಯದಲ್ಲಿ ಬಿಗ್‌ಬಿ ಜೊತೆ ನಟಿಸೋ ಅವಕಾಶ ಗಿಟ್ಟಿಸಿದ್ದು ಅಚ್ಚರಿಯೇ ಸರಿ. ಸದ್ಯ ಬಾಲಿವುಡ್‌ನಲ್ಲಿ 'ಅನಿಮಲ್' ಹಾಗೂ 'ಮಿಷನ್ ಮಜ್ನು' ಎನ್ನುವ 2 ಸಿನಿಮಾಗಳಲ್ಲಿ ಸಾನ್ವಿ ನಟಿಸುತ್ತಿದ್ದಾರೆ.

Rashmika Mandannas Video Call To Balakrishna Video Goes Viral

ನಟ ಬಾಲಕೃಷ್ಣ 'ವೀರಸಿಂಹ ರೆಡ್ಡಿ' ಎನ್ನುವ ಚಿತ್ರದಲ್ಲಿ ಜಬರ್ದಸ್ತ್‌ ರೋಲ್‌ನಲ್ಲಿ ಅಬ್ಬರಿಸಿದ್ದಾರೆ. ಗೋಪಿಚಂದ್ ಮಲಿನೇನಿ ನಿರ್ದೇಶನದ ಈ ಚಿತ್ರದಲ್ಲಿ ಕನ್ನಡ ನಟ ದುನಿಯಾ ವಿಜಯ್ ಕೂಡ ಮುಖ್ಯವಾದ ಪಾತ್ರ ಮಾಡ್ತಿದ್ದಾರೆ. 'ಮಫ್ತಿ' ಚಿತ್ರದ ಭೈರತಿ ರಣಗಲ್ ಶಿವಣ್ಣನನ್ನು ನೆನಪಿಸುವಂತೆ ಈ ಚಿತ್ರದಲ್ಲಿ ಬಾಲಕೃಷ್ಣ ದರ್ಶನ ಕೊಟ್ಟಿದ್ದಾರೆ. ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿದ್ದು, ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬರಲಿದೆ. ಮತ್ತೆರಡು ಸಿನಿಮಾಗಳಲ್ಲಿ ನಟಿಸಲು ಬಾಲಯ್ಯ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ.

More from Filmibeat

English summary
Rashmika Mandanna's Video Call To Balakrishna Video Goes Viral. The interaction between rashmika and balakrishna over a video call is one of the highlights of Unstoppable -2 episode- 3.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X