ಯೂಟ್ಯೂಬ್‌ನಲ್ಲಿ ದಾಖಲೆ ನಿರ್ಮಿಸಿದ ರಶ್ಮಿಕಾ ಮಂದಣ್ಣ ಹಾಡು
ಕನ್ನಡದಿಂದ ತೆಲುಗು, ತಮಿಳಿಗೆ ಹಾರಿ ಅಲ್ಲಿಂದ ಬಾಲಿವುಡ್‌ಗೆ ಪ್ರೊಮೋಷನ್ ಪಡೆದಿರುವ ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ.
ನಟಿ ರಶ್ಮಿಕಾ ಮಂದಣ್ಣ ನಟಿಸಿರುವ ಸಿನಿಮಾಗಳು ಭರ್ಜರಿ ಯಶಸ್ಸು ಗಳಿಸುತ್ತಿವೆ. ಇದೀಗ ರಶ್ಮಿಕಾ ಮಂದಣ್ಣ ನಟಿಸಿರುವ ಹಾಡೊಂದು ಯೂಟ್ಯೂಬ್‌ನಲ್ಲಿ ದಾಖಲೆ ಸೃಷ್ಟಿಸಿದೆ.
ರಶ್ಮಿಕಾ ಮಂದಣ್ಣ ಹಾಗೂ ತೆಲುಗಿನ ಸ್ಟಾರ್ ನಟ ಮಹೇಶ್ ಬಾಬು ಒಟ್ಟಿಗೆ ನಟಿಸಿದ್ದ 'ಸರಿಲೇರು ನಿಕೆವ್ವರು' ಸಿನಿಮಾವು ಚಿತ್ರಮಂದಿರಗಳಲ್ಲಿ ಹಿಟ್ ಎನಿಸಿಕೊಂಡಿತ್ತು. ಇದೀಗ ಆ ಸಿನಿಮಾದ ಹಾಡು ಯೂಟ್ಯೂಬ್‌ನಲ್ಲಿ ದಾಖಲೆ ಸೃಷ್ಟಿಸಿದೆ.

ಮಹೇಶ್ ಬಾಬು, ರಶ್ಮಿಕಾ ನಟನೆಯ 'ಸರಿಲೇರು ನೀಕೆವ್ವರು' ಸಿನಿಮಾದ 'ಮೈಂಡ್ ಬ್ಲಾಕ್' ಹಾಡನ್ನು ಯೂಟ್ಯೂಬ್‌ನಲ್ಲಿ 10 ಕೋಟಿಗೂ ಹೆಚ್ಚು ಮಂದಿ ನೋಡಿದ್ದಾರೆ. ಇಷ್ಟೋಂದು ದೊಡ್ಡ ಸಂಖ್ಯೆಯಲ್ಲಿ ಯೂಟ್ಯೂಬ್‌ನಲ್ಲಿ ವೀಕ್ಷಣೆಗೆ ಒಳಪಟ್ಟ ಕೆಲವೇ ಹಾಡುಗಳ ಪಟ್ಟಿಗೆ ರಶ್ಮಿಕಾ-ಮಹೇಶ್ ಬಾಬು ಅವರ ಈ ಹಾಡು ಸಹ ಸೇರಿಕೊಂಡಿದೆ.
ಈ ಹಿಂದೆ ಅಲ್ಲು ಅರ್ಜುನ್ ನಟನೆಯ 'ಅಲಾ ವೈಕುಂಟಪುರಂಲೋ' ಸಿನಿಮಾದ 'ಬುಟ್ಟ ಬೊಮ್ಮ' ಹಾಡು 10 ಕೋಟಿಗೂ ಹೆಚ್ಚು ವೀಕ್ಷಣೆಯಾಗಿತ್ತು. ಅದನ್ನು ಹೊರತುಪಡಿಸಿದರೆ ತೆಲುಗಿನ 'ಫಿದಾ' ಸಿನಿಮಾದ ಹಾಡು, ಆರ್‌ಎಕ್ಸ್ 100 ಸಿನಿಮಾದ ಹಾಡುಗಳು ಸಹ ಯೂಟ್ಯೂಬ್‌ನಲ್ಲಿ ಸೂಪರ್ ಹಿಟ್ ಆಗಿವೆ.
ರಶ್ಮಿಕಾ ವಿಷಯಕ್ಕೆ ಮರಳುವುದಾದರೆ, ತೆಲುಗಿನಲ್ಲಿ 'ಪುಷ್ಪಾ' ಸಿನಿಮಾದಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲಿ ಸಹ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ 'ಮಿಷನ್ ಮಜ್ನು' ಅಮಿತಾಬ್ ಬಚ್ಚನ್ ಜೊತೆಗೆ 'ಗುಡ್ ಬೈ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ ರಶ್ಮಿಕಾ ಮಂದಣ್ಣ.
Recommended Video
ನಟ ಮಹೇಶ್ ಬಾಬು ಅವರು ಪ್ರಸ್ತುತ 'ಸರ್ಕಾರು ವಾರಿ ಪಾಠ' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಆ ಸಿನಿಮಾದ ಚಿತ್ರೀಕರಣ ಬಳಿಕ ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ.


Click it and Unblock the Notifications











