ವೇದಿಕೆ ಮೇಲೆ "ವಿಜಯ್ ಮದುವೆ ಆಗ್ತೀನಿ" ಎಂದ ರಶ್ಮಿಕಾ? 'ಗೀತಾ ಗೋವಿಂದಂ' ಮದುವೆ ಈ ದಿನ ಕನ್ಫರ್ಮ್?

By Srushti

ರಶ್ಮಿಕಾ-ವಿಜಯ್ ದೇವರಕೊಂಡ ಇಬ್ಬರು ಡೇಟಿಂಗ್ ಮ್ಯಾಟರ್ ಚರ್ಚೆಯಾದಷ್ಟು ಬೇರೆ ಯಾರದ್ದೂ ಆಗಿಲ್ಲವೇನೋ. ಈ ಜೋಡಿಯ ಚೊಚ್ಚಲ ಸಿನಿಮಾ 'ಗೀತಾ ಗೋವಿಂದಂ' ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಿತ್ತು. ಅಲ್ಲಿಂದ ರಶ್ಮಿಕಾ ಹಾಗೂ ವಿಜಯ್ ಬಗ್ಗೆ ಚಿತ್ರರಂಗದಲ್ಲಿ ಗಾಳಿ ಸುದ್ದಿಗಳು ಹರಿದಾಡುತ್ತಲೇ ಇದ್ದವು. ಆದರೆ, ಇಬ್ಬರೂ ಈ ತಮ್ಮ ಲವ್‌ ಸ್ಟೋರಿಯ ಬಗ್ಗೆ ಬಾಯಿ ಬಿಟ್ಟಿರಲಿಲ್ಲ.

ಇಬ್ಬರ ಅಭಿಮಾನಿಗಳೇ ಸಾಕ್ಷಿ ಸಮೇತ ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆ ಮಾಡಿದ್ದರು. ಆಗಲೂ ರಶ್ಮಿಕಾ ಮಂದಣ್ಣ ಆಗಲಿ, ಇಲ್ಲ ವಿಜಯ್ ದೇವರಕೊಂಡ ಆಗಲಿ ಡೇಟಿಂಗ್ ಮ್ಯಾಟರ್‌ ಅನ್ನು ಕನ್ಫರ್ಮ್ ಮಾಡಿರಲಿಲ್ಲ. ಇತ್ತೀಚೆಗೆ ಈ ಜೋಡಿ ಕೇವಲ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆಂಬ ಸುದ್ದಿ ಕೂಡ ಹರಿದಾಡಿತ್ತು. ಆ ಬಗ್ಗೆನೂ ನೇರವಾಗಿ ಒಪ್ಪಿಕೊಂಡಿಲ್ಲ.

Rashmika Mandanna said she will marry Vijay Deverakonda in an audience interaction

ರಶ್ಮಿಕಾ ಮಂದಣ್ಣ ನಟಿಸಿದ ಹೊಸ ಸಿನಿಮಾ 'ದಿ ಗರ್ಲ್‌ಫ್ರೆಂಡ್' ರಿಲೀಸ್‌ ಆಗಿದೆ. ಈ ವೇಳೆ ಮಾಧ್ಯಮಗಳೊಂದಿಗೆ ಸಿನಿಮಾ ಬಗ್ಗೆ ಚರ್ಚೆ ಮಾಡುವಾಗ ಮದುವೆ ಮ್ಯಾಟರ್ ಕೂಡ ಬಂದಿತ್ತು. ಆ ವೇಳೆ ವಿಜಯ್ ದೇವರಕೊಂಡ, ಮದುವೆ ಹಾಗೂ ಎಐ, ಡೀಪ್‌ ಫೇಕ್ ಫೋಟೋಗಳ ಬಗ್ಗೆ ಮಾತಾಡಿದ್ದಾರೆ. ಈ ವೇಳೆ 'ಡೇಟ್, ಮುದುವೆ ಹಾಗೂ ಕಿಲ್' ಎನ್ನುವ ಗೇಮ್‌ನಲ್ಲಿ ರಶ್ಮಿಕಾ ಮಂದಣ್ಣ "ವಿಜಯ್ ಜೊತೆ ಮದುವೆ ಆಗುತ್ತೇನೆಂದು" ಹೇಳಿದ್ದಾರೆ. ಈ ಮೂಲಕ ಮದುವೆ ಸುಳಿವು ಬಿಟ್ಟು ಕೊಟ್ಟಿದ್ದಾರೆಂದು ಚರ್ಚೆಯಾಗುತ್ತಿದೆ.

ದಕ್ಷಿಣ ಭಾರತದ ಮೋಸ್ಟ್ ರೋಮ್ಯಾಂಟಿಕ್ ಜೋಡಿ ನಟಿ ರಶ್ಮಿಕಾ ಮಂದಣ್ಣ ಮತ್ತು ಸೂಪರ್‌ಸ್ಟಾರ್ ವಿಜಯ್ ದೇವರಕೊಂಡ ಅವರ ವೈವಾಹಿಕ ಜೀವನದ ಬಗ್ಗೆ ಕೇಳಿಬರುತ್ತಿರುವ ಸುದ್ದಿ ಇದೀಗ ಬಹುತೇಕ ಸತ್ಯ ಎನಿಸುತ್ತಿದೆ. ಈ ಹೇಳಿಕೆ ಬೆನ್ನಲ್ಲೇ ಮುಂದಿನ ವರ್ಷ, ಫೆಬ್ರವರಿ 26, 2026 ರಂದು ರಾಜಸ್ಥಾನದ ಉದಯಪುರದಲ್ಲಿ ಭವ್ಯ ವಿವಾಹಕ್ಕೆ ಇಬ್ಬರೂ ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿನೂ ಹರಿದಾಡುತ್ತಿದೆ.

ಹೈದರಾಬಾದ್‌ನಲ್ಲಿ ಗುಪ್ತ ನಿಶ್ಚಿತಾರ್ಥ

ಕೆಲವೇ ತಿಂಗಳ ಹಿಂದೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದೆ ಎಂಬ ಸುದ್ದಿ ಹಲ್‌ಚಲ್ ಎಬ್ಬಿಸಿತ್ತು. ಇದೇ ವರ್ಷ ಅಕ್ಟೋಬರ್ 3 ರಂದು ಹೈದರಾಬಾದ್‌ನಲ್ಲಿರುವ ವಿಜಯ್ ದೇವರಕೊಂಡ ನಿವಾಸದಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆದಿದ್ದಾಗಿ ಸುದ್ದಿಯಾಗಿತ್ತು. ಈ ಮೂಲಕ ಕಳೆದ ಹಲವು ವರ್ಷಗಳಿಂದ ಹರಿದಾಡುತ್ತಿದ್ದ ಡೇಟಿಂಗ್ ವದಂತಿಗಳಿಗೆ ಒಂದು ಸ್ಪಷ್ಟ ಚಿತ್ರಣ ಸಿಕ್ಕಿತ್ತು. ಆದರೆ, ಇನ್ನೂ ನಿಶ್ವಿತಾರ್ಥದ ಬಗ್ಗೆ ಈ ಜೋಡಿ ಬಾಯಿಬಿಟ್ಟಿಲ್ಲ.

Rashmika Mandanna said she will marry Vijay Deverakonda in an audience interaction

ಉದಯಪುರದಲ್ಲಿ ವೈಭವದ ವಿವಾಹ

ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ತಮ್ಮ ಮದುವೆಗೆ ರಾಜಸ್ಥಾನದ ಉದಯಪುರವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ವಿವಾಹವು ಫೆಬ್ರವರಿ 26, 2026 ರಂದು ನಡೆಯಲಿದ್ದು, ಇದು ದಕ್ಷಿಣ ಭಾರತೀಯ ಮತ್ತು ರಾಜಸ್ಥಾನಿ ಸಂಪ್ರದಾಯಗಳ ಸಮ್ಮಿಲನವಾಗಿರಲಿದೆ. ಇದು ಇಬ್ಬರೂ ನಟರ ಸಾಂಸ್ಕೃತಿಕ ಹಿನ್ನೆಲೆ ಹಾಗೂ ಅವರ ಸ್ಥಾನಮಾನಕ್ಕೆ ತಕ್ಕಂತೆ ಅದ್ದೂರಿಯಾಗಿ ನಡೆಯುವ ಸಾಧ್ಯತೆ ಇದೆ.

ನಟರ ಸುಳಿವುಗಳು ಮತ್ತು ಪ್ರತಿಕ್ರಿಯೆ

ಇವರಿಬ್ಬರೂ ತಮ್ಮ ಮದುವೆ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ, ಅವರೇ ನೀಡುತ್ತಿರುವ ಸುಳಿವುಗಳು ಈ ಸುದ್ದಿಗಳಿಗೆ ಮತ್ತಷ್ಟು ಬಲ ಪಡಿಸುತ್ತಿವೆ. 'ತಮ್ಮಾ'ದ ಪ್ರಚಾರದ ಸಂದರ್ಭದಲ್ಲಿ ರಶ್ಮಿಕಾಗೆ ನಿಶ್ಚಿತಾರ್ಥದ ಬಗ್ಗೆ ಪ್ರಶ್ನಿಸಿದಾಗ, ಅವರು ನಗುತ್ತಾ, "ಎಲ್ಲರಿಗೂ ಅದರ ಬಗ್ಗೆ ಗೊತ್ತಿದೆ" ಎಂದು ಪ್ರತಿಕ್ರಿಯಿಸಿದ್ದರು. ರಶ್ಮಿಕಾ ಅವರ ಈ ಪ್ರತಿಕ್ರಿಯೆ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿತ್ತು.

ಉಂಗುರಗಳು ಸೃಷ್ಟಿಸಿದ ಸಂಚಲನ

ಅಕ್ಟೋಬರ್‌ ತಿಂಗಳಲ್ಲಿ ಇವರಿಬ್ಬರ ನಿಶ್ಚಿತಾರ್ಥದ ವದಂತಿಗಳು ಮೊದಲು ಭುಗಿಲೆದ್ದಿದ್ದವು. ರಶ್ಮಿಕಾ ತಮ್ಮ ಮುದ್ದಿನ ನಾಯಿ 'ಔರಾ' ಜೊತೆಗಿನ ವೀಡಿಯೊವೊಂದರಲ್ಲಿ ಕಾಣಿಸಿಕೊಂಡಾಗ ಅವರ ಬೆರಳಲ್ಲಿ ವಜ್ರದ ಉಂಗುರವಿತ್ತು. ಇದೇ ಸಮಯದಲ್ಲಿ, ವಿಜಯ್ ದೇವರಕೊಂಡ ಆಂಧ್ರಪ್ರದೇಶದ ಶ್ರೀ ಸತ್ಯ ಸಾಯಿ ಬಾಬಾ ಸಮಾಧಿಗೆ ಭೇಟಿ ನೀಡಿದ್ದಾಗ, ಅದೇ ರೀತಿಯ ಉಂಗುರವನ್ನು ಧರಿಸಿದ್ದರು. ಇದು ಇಬ್ಬರ ನಿಶ್ಚಿತಾರ್ಥಕ್ಕೆ ನೀಡಿದ ಪುರಾವೆಗಳಾಗಿದ್ದವು. ಸದ್ಯ ಕೋಟ್ಯಂತರ ಅಭಿಮಾನಿಗಳು ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಬಾಯಿಂದಲೇ ಈ ಶುಭ ಸುದ್ದಿಯ ಅಧಿಕೃತ ಘೋಷಣೆ ಹೊರಬೀಳಲಿ ಎಂದು ಕಾತರದಿಂದ ಕಾಯುತ್ತಿದ್ದಾರೆ.

More from Filmibeat

English summary
Rashmika Mandanna said she will marry Vijay Deverakonda in an audience interaction.
Read more about: rashmika mandanna vijay marriage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X