Rashmika Mandanna: "ಅವನಂದ್ರೆ ಬಹಳ ಇಷ್ಟ.. ಈಗಾಗಲೇ ಗುಟ್ಟಾಗಿ ನಮ್ಮಿಬ್ಬರ ಮದುವೆ ಆಗೋಗಿದೆ": ರಶ್ಮಿಕಾ ಮಂದಣ್ಣ

By ಫಿಲ್ಮಿಬೀಟ್ ಡೆಸ್ಕ್

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ನಲ್ಲೂ ಸೈ ಎನಿಸಿಕೊಂಡಿದ್ದಾರೆ. ಬಿಟೌನ್ ನಟಿಯರಿಗೆ ಟಫ್ ಕಾಂಪಿಟೇಷನ್ ಕೊಡುತ್ತಿದ್ದಾರೆ. ಕ್ರೇಜ್‌ಗೆ ತಕ್ಕಂತೆ ದಿನದಿಂದ ದಿನಕ್ಕೆ ಸಂಭಾವನೆ ಹೆಚ್ಚಿಸಿಕೊಂಡು ಕಮಾಲ್ ಮುನ್ನುಗ್ಗುತ್ತಿದ್ದಾರೆ. ಇನ್ನು ಜಾಹಿರಾತುಗಳಲ್ಲೂ ಕಾಣಿಸಿಕೊಂಡು ಕೋಟಿ ಕೋಟಿ ಎಣಿಸುತ್ತಿದ್ದಾರೆ. ಇದ್ದಕ್ಕಿದಂತೆ ನ್ಯಾಷನಲ್ ಕ್ರಶ್ ರಶ್ಮಿಕಾ ತಮ್ಮ ಸೀಕ್ರೆಟ್ ಮ್ಯಾರೇಜ್‌ ಬಗ್ಗೆ ರಶ್ಮಿಕಾ ಮಂದಣ್ಣ ಮಾತನಾಡಿದ್ದಾರೆ.

'ಕಿರಿಕ್ ಪಾರ್ಟಿ' ಸಿನಿಮಾ ಸಕ್ಸಸ್ ಬೆನ್ನಲ್ಲೇ ನಟ ರಕ್ಷಿತ್ ಶೆಟ್ಟಿ ಜೊತೆ ರಶ್ಮಿಕಾ ಮಂದಣ್ಣ ಮದುವೆ ನಿಶ್ಚಯವಾಗಿತ್ತು. ಬಹಳ ಅದ್ಧೂರಿಯಾಗಿ ಇಬ್ಬರ ಎಂಗೇಜ್‌ಮೆಂಟ್ ನಡೆದಿತ್ತು. ಆದರೆ ಕೆಲ ದಿನಗಳ ಬಳಿಕ ಆ ಎಂಗೇಜ್‌ಮೆಂಟ್ ಮುರಿದುಬಿದ್ದಿತ್ತು. ಸದ್ಯ ಸಿನಿಮಾಗಳತ್ತ ರಶ್ಮಿಕಾ ಹೆಚ್ಚು ಗಮನ ಹರಿಸಿದ್ದಾರೆ. ಇನ್ನು ವಿಜಯ್ ದೇವರಕೊಂಡ ಜೊತೆ ಕೊಡಗಿನ ಬೆಡಗಿ ಹೆಸರು ಪದೇ ಪದೆ ಕೇಳಿ ಬರುತ್ತಿರುತ್ತದೆ. ಆದರೆ ನಾವಿಬ್ಬರು ಬರೀ ಫ್ರೆಂಡ್ಸ್ ಅಷ್ಟೇ ಎನ್ನುವ ಅದೇ ರೆಡಿಮೇಡ್ ಉತ್ತರವನ್ನು ಇಬ್ಬರೂ ಕೊಡುತ್ತಾ ಬರುತ್ತಿದ್ದಾರೆ.

Rashmika-mandanna-married-Naruto

ರಕ್ಷಿತ್‌ ಶೆಟ್ಟಿ ಹಾಗೂ ರಶ್ಮಿಕಾ ಎಂಗೇಜ್‌ಮೆಂಟ್ ಮುರಿದು ಬೀಳಲು ವಿಜಯ್ ದೇವರಕೊಂಡ ಕಾರಣ ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗಿತ್ತು. 'ಗೀತಾ ಗೋವಿಂದಂ' ಚಿತ್ರದಲ್ಲಿನ ವಿಜಯ್-ರಶ್ಮಿಕಾ ಲಿಪ್‌ಲಾಕ್ ಸೀನ್ ಇಷ್ಟಕ್ಕೆಲ್ಲಾ ಪ್ರಮುಖ ಕಾರಣ ಎಂದು ಕೆಲವರು ವಾದಿಸಿದ್ದರು. ಇದೇ ವಿಚಾರವಾಗಿ ರಶ್ಮಿಕಾರನ್ನು ಕೆಲವರು ಸುಖಾಸುಮ್ಮನೆ ಟ್ರೋಲ್ ಮಾಡಿದ್ದರು.

ರಶ್ಮಿಕಾ ಸೀಕ್ರೆಟ್ ಮ್ಯಾರೇಜ್?

ಕಿರಿಕ್ ಬೆಡಗಿ ರಶ್ಮಿಕಾ "ನನ್ನ ಮನಸ್ಸಿನಲ್ಲಿ ಆತ ಇದ್ದಾನೆ. ಈಗಾಗಲೇ ಸೀಕ್ರೆಟ್ ಆಗಿ ಮದುವೆ ಕೂಡ ಆಗಿದ್ದೀನಿ" ಎಂದು ಹೇಳಿದ್ದಾರೆ. ಇದನ್ನು ಕೇಳಿ ಕೆಲವರು ಶಾಕ್ ಆಗಿದ್ದಾರೆ. ಅರೇ, ಯಾರೊಟ್ಟಿಗೆ ರಶ್ಮಿಕಾ ಮದುವೆ ಆಯಿತು. ಅಸಲಿ ವಿಚಾರ ತಿಳಿದು ಎಲ್ಲರೂ ಸುಸ್ತಾಗಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನಟ ಟೈಗರ್ ಶ್ರಾಫ್ ಜೊತೆ ರಶ್ಮಿಕಾ ಭಾಗಿ ಆಗಿದ್ದರು. ಈ ವೇಳೆ ನಿರೂಪಕನ ಪ್ರಶ್ನೆಗೆ ರೋಶ್ ಫನ್ನಿಯಾಗಿ ಪ್ರತಿಕ್ರಿಯಿಸಿದ್ದಾರೆ.

Rashmika-mandanna-married-Naruto

ನರುಟೊ ಜೊತೆ ನನ್ನ ಮದುವೆ!

ಸಂದರ್ಶನದಲ್ಲಿ ಮಾತನಾಡುತ್ತಾ ರಶ್ಮಿಕಾ "ನನಗೆ ನರುಟೊ ಜೊತೆ ಮದುವೆ ಆಗೋಗಿದೆ. ನನ್ನ ಮನಸ್ಸಿನಲ್ಲಿ ಆತನೇ ಇರೋದು" ಎಂದು ಹೇಳಿದ್ದರು. ಅಂದಹಾಗೆ 'ನರುಟೊ' ಅನ್ನೋದು ಫೇಮಸ್ 'ಎನಿಮೆ' ಕಾರ್ಟೂನ್ ಸೀರಿಸ್‌ನಲ್ಲಿ ಬರುವ ಒಂದು ಪಾತ್ರ ಅಷ್ಟೆ. ಇಂತಹ ಕಾರ್ಟೂನ್‌ಗಳಿಗೆ ದೊಡ್ಡ ಅಭಿಮಾನಿ ಬಳಗ ಇರುತ್ತದೆ. ಅಂತಹವರಲ್ಲಿ ರಶ್ಮಿಕಾ ಮಂದಣ್ಣ ಕೂಡ ಒಬ್ಬರು.

ನನ್ನ ಪ್ರಿಯಕರ ನರುಟೊ

ಈ ಹಿಂದೆ ಕೂಡ ರಶ್ಮಿಕಾ ಮಂದಣ್ಣ ನರುಟೊ ಕಾರ್ಟೂನ್ ಕ್ಯಾರೆಕ್ಟರ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ನರುಟೊ ಪುಟ್ಟ ಗೊಂಬೆ ಹಿಡಿದು "ನನ್ನ ಶಾಶ್ವತ ಪ್ರಿಯಕರ" ಎಂದು ಬರೆದುಕೊಂಡಿದ್ದರು. ಸಾಕಷ್ಟು ಜನ ನಾವು ಕೂಡ ನರುಟೊ ಅಭಿಮಾನಿಗಳು ಎಂದು ಕಾಮೆಂಟ್ ಮಾಡಿದ್ದರು.

ಕ್ರೇಜಿ ಪ್ರಾಜೆಕ್ಟ್‌ಗಳಲ್ಲಿ ರೋಶ್

ಅಲ್ಲು ಅರ್ಜುನ್ ನಟನೆಯ 'ಪುಷ್ಪ-2' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತೆ ಶ್ರೀವಲ್ಲಿ ಆಗಿ ನಟಿಸುತ್ತಿದ್ದಾರೆ. ಇನ್ನು ಬಾಲಿವುಡ್‌ನ 'ಅನಿಮಲ್' ಚಿತ್ರದಲ್ಲಿ ರಣ್‌ಬೀರ್ ಕಪೂರ್‌ ಜೋಡಿಯಾಗಿದ್ದಾರೆ. ಇನ್ನು ರೈನ್‌ಬೋ' ಎನ್ನುವ ಮಹಿಳಾ ಪ್ರಧಾನ ಸಿನಿಮಾ ಕೂಡ ಆಕೆಯ ಕೈಯಲ್ಲಿದೆ. ಸಮಂತಾ ಈ ಚಿತ್ರದಲ್ಲಿ ನಟಿಸಬೇಕಿತ್ತು. ಕಾರಣಾಂತರಗಳಿಂದ ಅವಕಾಶ ಕೊಡಗಿನ ಬೆಡಗಿ ಪಾಲಾಯಿತು. ಇನ್ನು 'ಎಕ್ಸ್ಟ್ರಾಡಿನರಿ ಮ್ಯಾನ್' ಸಿನಿಮಾದಿಂದ ಕಿರಿಕ್ ಬೆಡಗಿ ಹೊರ ಬಂದಿದ್ದಾರೆ. ಈ ಹಿಂದೆ ತೆಲುಗಿನಲ್ಲಿ ನಿತಿನ್, ರಶ್ಮಿಕಾ ನಟನೆಯ 'ಭೀಷ್ಮ' ಸಿನಿಮಾ ಹಿಟ್ ಆಗಿತ್ತು. ಅದೇ ಕಾಂಬಿನೇಷನ್‌ನಲ್ಲಿ ಸಿನಿಮಾ ಘೋಷಿಸಲಾಗಿತ್ತು. ಆ ಚಿತ್ರದಿಂದ ರಶ್ಮಿಕಾ ಹೊರಬಂದಿದ್ದು ಶ್ರೀಲೀಲಾ ಆ ಜಾಗ ತುಂಬಿದ್ದಾರೆ. ಈ ಚಿತ್ರಕ್ಕೆ 'ಎಕ್ಸ್ಟ್ರಾಡಿನರಿ ಮ್ಯಾನ್' ಟೈಟಲ್ ಫಿಕ್ಸ್ ಆಗಿದೆ.

More from Filmibeat

English summary
Rashmika Mandanna about her marriage, she says i already married to Naruto. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X