'ಕಿರಿಕ್ ಪಾರ್ಟಿ' ಹಿಂದಿ ರಿಮೇಕ್ ನಲ್ಲಿ ನಟಿಸಲ್ಲ ಎಂದ ರಶ್ಮಿಕಾ: ಕಾರಣವೇನು?
ನಟಿ ರಶ್ಮಿಕಾ ಮಂದಣ್ಣ ಬಣ್ಣದ ಲೋಕಕ್ಕೆ ಕಾಲಿಟ್ಟ ಸಿನಿಮಾ, ರಶ್ಮಿಕಾರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಚಿತ್ರ, ಸ್ಟಾರ್ ಗಿರಿಯನ್ನು ತಂದುಕೊಟ್ಟ ಸಿನಿಮಾ ಕಿರಿಕ್ ಪಾರ್ಟಿ. ಮೊದಲ ಸಿನಿಮಾದಲ್ಲೇ ದೊಡ್ಡ ಮಟ್ಟದ ಖ್ಯಾತಿಗಳಿಸಿದ ರಶ್ಮಿಕಾಗೆ ಈ ಸಕ್ಸಸ್ ಟಾಲಿವುಡ್ ಎಂಟ್ರಿಗೆ ಸುಲಭವಾಯಿತು.
Recommended Video
ಇದೀಗ ಟಾಲಿವುಡ್, ಕಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಈ ನಡುವೆ ರಶ್ಮಿಕಾಗೆ ಹಿಂದಿ ಕಿರಿಕ್ ಪಾರ್ಟಿ ರಿಮೇಕ್ ನಲ್ಲಿ ನಟಿಸುತ್ತಾ ಎನ್ನುವ ಪ್ರಶ್ನೆ ಎದುರಾಗಿದೆ.
2016ರಲ್ಲಿ ತೆರೆಗೆ ಬಂದ ಕಿರಿಕ್ ಪಾರ್ಟಿ ಕನ್ನಡದಲ್ಲಿ ದೊಡ್ಡ ಮಟ್ಟದ ಸಕ್ಸಸ್ ಕಂಡಿತ್ತು. ಸೂಪರ್ ಹಿಟ್ ಬಳಿಕ ರಿಮೇಕ್ ರೈಟ್ಸ್ ಗೆ ಬೇಡಿಕೆಯೂ ಹೆಚ್ಚಾಗಿತ್ತು. ಹಿಂದಿಗೂ ರಿಮೇಕ್ ಆಗುತ್ತಿದೆ ಎನ್ನುವ ಸುದ್ದಿ ಕೇಳಿಬಂದಿತ್ತು. ಬಾಲಿವುಡ್ ಸ್ಟಾರ್ ನಟ ಕಾರ್ತಿಕ್ ಆರ್ಯನ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಬಾಲಿವುಡ್ ಅಂಗಳದಲ್ಲಿ ಹರಿದಾಡಿತ್ತು. ಆದರೆ ಇಂದಿಗೂ ಸಿನಿಮಾ ಸೆಟ್ಟೇರಲಿಲ್ಲ.

ರಶ್ಮಿಕಾ ಸದ್ಯ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಸಿನಿಮಾ ರಿಲೀಸ್ ಮೊದಲೇ ಎರಡನೇ ಸಿನಿಮಾಗೆ ಸಹಿ ಮಾಡಿದ್ದಾರೆ. ಬಾಲಿವುಡ್ ನಲ್ಲೂ ಬೇಡಿಕೆಯ ನಟಿಯಾಗಿರುವ ರಶ್ಮಿಕಾ ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಹಿಂದಿ ಕಿರಿಕ್ ಪಾರ್ಟಿ ಬಗ್ಗೆ ಮಾತನಾಡಿದ್ದಾರೆ. ಒಂದು ವೇಳೆ ಕಿರಿಕ್ ಪಾರ್ಟಿ ರಿಮೇಕ್ ಸೆಟ್ಟೇರಿದರೆ ನೀವು ನಟಿಸುತ್ತೀರಾ ಎನ್ನುವ ಪ್ರಶ್ನೆ ರಶ್ಮಿಕಾಗೆ ಎದುರಾಗಿದೆ.
ಇದಕ್ಕೆ ಉತ್ತರಿಸಿದ ರಶ್ಮಿಕಾ, 'ಖಂಡಿತ ಇಲ್ಲ. ನಾನು ಕಿರಿಕ್ ಪಾರ್ಟಿ ರಿಮೇಕ್ ಮಾಡುವುದಿಲ್ಲ. ಒಮ್ಮೆ ನಾನು ಆ ಪಾತ್ರ ಮಾಡಿದ್ದೇನೆ ಅದರ ಅನುಭವವನ್ನು ಫೀಲ್ ಮಾಡಿದ್ದೇನೆ. ಮತ್ತೆ ಅದನ್ನೇ ಮಾಡಿದ್ರೆ ಹೊಸತನ ನೀಡಲು ಸಾಧ್ಯವಿಲ್ಲ ಎಂದು ನಂಬಿದ್ದೇನೆ. ಹೊಸ ಕಥೆಗಳ ಮೂಲಕ ಹೊಸ ಅನುಭವ ಪಡೆಯುವ ಅವಕಾಶ ಇರುವಾಗ ಮತ್ತೆ ನಾನೇಕೆ ಹಳೇ ಅನುಭವ ಪಡೆಯಬೇಕು?' ಎಂದಿದ್ದಾರೆ.

'ಒಮ್ಮೆ ಒಂದು ಪಾತ್ರ ಮಾಡಿನ ನಂತರ ನಾನು ಮುಂದುವರೆಯುತ್ತೇನೆ. ನಾನು ಹೊಸ ಕಥೆಗಳನ್ನು ಹೇಳಲು ಮತ್ತು ಹೊಸ ಕಥೆಯ ಭಾಗವಾಗಲು ಬಯಸುತ್ತೇನೆ. ನಾನು ನನ್ನದೇ ಯಾವ ಸಿನಿಮಾಗಳ ರಿಮೇಕ್ ನಲ್ಲೂ ನಟಿಸುವುದಿಲ್ಲ' ಎಂದು ಹೇಳಿದ್ದಾರೆ.
ರಶ್ಮಿಕಾ ಮಂದಣ್ಣ ಸದ್ಯ ಬಹುನಿರೀಕ್ಷೆಯ ಪುಷ್ಪ ಸಿನಿಮಾದ ರಿಮೇಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗು ಜೊತೆಗೆ ಬಾಲಿವುಡ್ ಸಿನಿಮಾಗಳಲ್ಲೂ ರಶ್ಮಿಕಾ ಬ್ಯುಸಿಯಾಗಿದ್ದಾರೆ. ಮಿಷನ್ ಮಜ್ನು ಮೂಲಕ ಹಿಂದಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮೊದಲ ಸಿನಿಮಾ ರಿಲೀಸ್ ಆಗುವ ಮೊದಲೇ ಎರನೇ ಸಿನಿಮಾಗೆ ಸಹಿ ಮಾಡಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ರಶ್ಮಿಕಾ ನಟಿಸುತ್ತಿದ್ದಾರೆ.


Click it and Unblock the Notifications











