ಗಂಡಸರಿಗೆ ಜೀವನದಲ್ಲಿ ಒಮ್ಮೆ ಆದ್ರೂ ಆ ನೋವು ಗೊತ್ತಾಗಬೇಕು- ರಶ್ಮಿಕಾ ಮಂದಣ್ಣ

ಪ್ರತಿಯೊಬ್ಬ ಮಹಿಳೆ ಪ್ರತಿ 28-25 ದಿನಗಳಿಗೊಮ್ಮೆ ಋತುಚಕ್ರಕ್ಕೆ ಒಳಗಾಗುತ್ತಾಳೆ. ಇನ್ನು ಮುಟ್ಟಿನ ಸಮಯದಲ್ಲಿ ಉಂಟಾಗುವ ನೋವನ್ನು ಡಿಸ್ಮೆನೊರಿಯಾ ಎಂದು ಕರೆಯಲಾಗುತ್ತದೆ. ಆ ಸಮಯದಲ್ಲಿ ಸ್ತ್ರೀ ದೇಹವು ಬಹಳಷ್ಟು ಬದಲಾವಣೆಗಳಿಗೆ ಒಳಗಾಗುತ್ತದೆ. ಹೊಟ್ಟೆಯ ಕೆಳಭಾಗದಲ್ಲಿ ಬಹಳ ನೋವು ಅನುಭವಿಸುತ್ತಾರೆ. ಕೆಲವರಿಗೆ ಇದು ಕೆಳ ಬೆನ್ನು ಮತ್ತು ತೊಡೆಗಳಿಗೂ ತಲುಪಿ ಮತ್ತಷ್ಟು ಭಾದಿಸುತ್ತದೆ.

ಒಮ್ಮೆ ಆದರೂ ಗಂಡಸರಿಗೆ ಪೀರಿಯಡ್ಸ್ ಆಗಬೇಕು. ಆ ನೋವು ಹೇಗಿರುತ್ತದೆ ಎಂದು ಗೊತ್ತಾಗಬೇಕು ಎಂದು ನಟಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಈ ವಾರ ಆಕೆ ನಟಿಸಿರುವ 'ದಿ ಗರ್ಲ್‌ಫ್ರೆಂಡ್' ಸಿನಿಮಾ ಬಿಡುಗಡೆ ಆಗ್ತಿದೆ. ಚಿತ್ರದ ಪ್ರಚಾರದಲ್ಲಿ ಕೊಡಗಿನ ನಟಿ ಬ್ಯುಸಿಯಾಗಿದ್ದಾರೆ. 'ಜಯಮ್ಮು ನಿಶ್ಚಯಮ್ಮುರಾ' ತೆಲುಗು ಕಿರುತೆರೆ ಕಾರ್ಯಕ್ರಮದಲ್ಲಿ ರಶ್ಮಿಕಾ ಭಾಗವಹಿಸಿದ್ದು ಸಾಕಷ್ಟು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

Rashmika Mandanna Says Men Should Experience Period Pain to Understand Women

'ಜಯಮ್ಮು ನಿಶ್ಚಯಮ್ಮುರಾ' ಕಾರ್ಯಕ್ರಮದ ಹೊಸ ಪ್ರೋಮೊ ಬಿಡುಗಡೆಯಾಗಿದೆ. ನಿರ್ದೇಶಕ ರಾಹುಲ್ ರವಿಂದ್ರನ್ ಕೂಡ ಶೋನಲ್ಲಿ ಭಾಗಿ ಆಗಿ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ನಿರೂಪಕ ಜಗಪತಿ ಬಾಬು ಮಾತನಾಡಿ "ಗಂಡಸರಿಗೂ ಪೀರಿಯಡ್ಸ್ ಬಂದರೆ ಚೆನ್ನಾಗಿರುತ್ತದೆ ಎಂದು ಭಾವಿಸಿದಂತಿದೆ" ಎಂದಿದ್ದಾರೆ. ಅದಕ್ಕೆ ರಶ್ಮಿಕಾ ಪ್ರತಿಕ್ರಿಯಿಸಿ "ಹೌದು.. ಗಂಡಸರಿಗೆ ಪೀರಿಯಡ್ಸ್ ಬಂದು ಆ ನೋವು ಹೇಗಿರುತ್ತದೆ ಎಂದು ಗೊತ್ತಾಗಬೇಕು. ಅದಕ್ಕೆ ಅವರಿಗೆ ಪೀರಿಯಡ್ಸ್ ಬರಬೇಕು" ಎಂದಿದ್ದಾರೆ.

ಈ ಹಿಂದೆ ಋತುಚಕ್ರದ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಪೋಸ್ಟ್ ಮಾಡಿದ್ದರು. "ಮುಟ್ಟಿನ ಸಮಯದಲ್ಲಿ ನೋವನ್ನು ನಿಭಾಯಿಸಲು ಏನು ಮಾಡಬೇಕು" ಆ ನೋವಿನಿಂದ ಸ್ವಲ್ಪ ಪರಿಹಾರ ಪಡೆಯಲು ಏನು ಮಾಡಬೇಕು? ಎಂದು ಕೇಳುವ ಪೋಲ್ ಪೋಸ್ಟ್ ಮಾಡಿದ್ದರು. 1. ಐಸ್ ಕ್ರೀಮ್, ಚಾಕಲೇಟ್ ತಿನ್ನಬೇಕಾ? 2. ಯಾರನ್ನಾದರೂ ಹೊಡೆಯಬೇಕೇ? 3. ನಾನು ಸಿನಿಮಾ ನೋಡಬೇಕೇ? ಅಥವಾ 4. ನಾನು ಸುಮ್ಮನೆ ಕೂತು ಅಳಬೇಕೇ? ಎಂದು ಪ್ರಶ್ನಿಸಿದ್ದರು. ಸಾಕಷ್ಟು ಮಹಿಳಾ ಅಭಿಮಾನಿಗಳು ಅದಕ್ಕೆ ಕಾಮೆಂಟ್ ಮಾಡಿ ಪ್ರತಿಕ್ರಿಯಿಸಿದ್ದರು.

Rashmika Mandanna Says Men Should Experience Period Pain to Understand Women

ಕೊಡಗಿನ ನಟಿ ಈಗ ತೆಲುಗು, ಹಿಂದಿ ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಆಕೆ ನಟಿಸಿದ ಸಿನಿಮಾಗಳೆಲ್ಲಾ ಸಖತ್ ಸದ್ದು ಮಾಡ್ತಿದೆ. ಬಾಲಿವುಡ್ ನಟಿಯರಿಗೆ ರಶ್ಮಿಕಾ ಪೈಪೋಟಿ ಕೊಡುತ್ತಿದ್ದಾರೆ. 'ಪುಷ್ಪ-2', 'ಛಾವ', 'ಥಮ್ಮಾ' ಸಿನಿಮಾಗಳು ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದು ಗೊತ್ತೇಯಿದೆ. ಈ ಮೂಲಕ ಸಾಕಷ್ಟು ಅವಕಾಶಗಳು ಆಕೆಯನ್ನು ಅರಸಿ ಬರ್ತಿದೆ. 'ದಿ ಗರ್ಲ್‌ಫ್ರೆಂಡ್' ಬಳಿಕ ಆಕೆ ನಟಿಸಿರುವ 'ಕಾಕ್‌ಟೇಲ್- 2' ಸಿನಿಮಾ ತೆರೆಗೆ ಬರಲಿದೆ. 'ಮೈಸಾ' ಎಂಬ ಮತ್ತೊಂದು ಸಿನಿಮಾ ಕೈಯಲ್ಲಿದೆ.

ಗುಟ್ಟಾಗಿ ರಶ್ಮಿಕಾ ಮದುವೆ ಆಗಿದೆ ಎನ್ನುವ ಚರ್ಚೆ ನಡೀತಿದೆ. ಈ ಬಗ್ಗೆ ನೇರವಾಗಿ ಪ್ರಶ್ನೆ ಎದುರಾದರೂ ನುಣುಚಿಕೊಳ್ಳುತ್ತಿದ್ದಾರೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಮಾತುಗಳು ಪದೇ ಪದೇ ಕೇಳಿಬರ್ತಿತ್ತು. ಅವರಿಬ್ಬರೂ ಮದುವೆಗೆ ನಿಶ್ಚಯಿಸಿದ್ದು ಪೋಷಕರ ಒಪ್ಪಿಗೆ ಪಡೆದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಮಾತ್ರ ಸಿಕ್ಕಿಲ್ಲ.

ಈ ಹಿಂದೆ ರಕ್ಷಿತ್ ಶೆಟ್ಟಿ ಅವರನ್ನು ಪ್ರೀತಿಸಿ ರಶ್ಮಿಕಾ ಮದುವೆಗೆ ಮುಂದಾಗಿದ್ದರು. ಅದ್ಧೂರಿಯಾಗಿ ಇಬ್ಬರ ಎಂಗೇಜ್‌ಮೆಂಟ್ ಸಹ ನಡೆದಿತ್ತು. ಆದರೆ ದಿಢೀರನೆ ಅದು ಮುರಿದುಬಿದ್ದಿತ್ತು. ಬಳಿಕ ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿಯಾಗಿಬಿಟ್ಟರು.

More from Filmibeat

Read more about: rashmika mandanna tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X