ನಾನು ಐಟಂ ಸಾಂಗ್ ಮಾಡೋಕೆ ಸಿದ್ಧ, ಆದ್ರೆ ಒಂದು ಕಂಡೀಷನ್- ರಶ್ಮಿಕಾ ಮಂದಣ್ಣ

ಕಥೆಗೆ ಸ್ಪೆಷಲ್ ಸಾಂಗ್ ಬೇಕೋ ಬೇಡ್ವೋ ಕಮರ್ಷಿಯಲ್ ಸಿನಿಮಾಗಳಲ್ಲಿ ಅದನ್ನು ಸೇರಿಸಿಬಿಡುತ್ತಾರೆ. ಮೊದಲೆಲ್ಲಾ ಕ್ಯಾಬರೆ ಡ್ಯಾನ್ಸ್, ಸ್ಪೆಷಲ್ ಸಾಂಗ್ಸ್‌ ಮಾಡೋಕೆ ಅಂತ್ಲೇ ಬೇರೆ ನಟಿಯರಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಟಾಪ್ ಹೀರೋಯಿನ್ಸ್ ಕೂಡ ಬಿಂದಾಸ್ ಸಾಂಗ್‌ಗಳಿಗೆ ಹೆಜ್ಜೆ ಹಾಕುತ್ತಾರೆ. ಸ್ಪೆಷಲ್ ಸಾಂಗ್ ಮಾಡುವ ಬಗ್ಗೆ ರಶ್ಮಿಕಾ ಮಾತನಾಡಿದ್ದಾರೆ.

ಕರೀನಾ ಕಪೂರ್, ಕತ್ರೀನಾ ಕೈಫ್, ಪ್ರಿಯಾಂಕ ಚೋಪ್ರಾ ಹಾಗೂ ದೀಪಿಕಾ ಪಡುಕೋಣೆ ರೀತಿಯ ಸ್ಟಾರ್ ನಟಿಯರೇ ಐಟಂ ಸಾಂಗ್‌ಗಳಿಗೆ ಕುಣಿದು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ತಮನ್ನಾ ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಮಿಲ್ಕಿ ಬ್ಯೂಟಿ ಹೆಜ್ಜೆ ಹಾಕಿದ್ರೆ ಸಿನಿಮಾ ಹಿಟ್ ಎನ್ನುವ ಮಟ್ಟಿಗೆ ಕ್ರೇಜ್ ಸೃಷ್ಟಿಯಾಗಿದೆ. 'ಥಮ್ಮ' ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸಿದ್ದರೂ ಬಿಂದಾಸ್ ಸಾಂಗ್‌ವೊಂದಕ್ಕೆ ಕುಣಿದು ರಂಗೇರಿಸಿದ್ದರು.

Rashmika Mandanna Says She ll Do Item Songs Only for Four Top Directors

ನಾಯಕಿಯಾಗಿ ನಟಿಸದೇ ಬೇರೆ ಚಿತ್ರವೊಂದಕ್ಕೆ ಬರೀ ಐಟಂ ಸಾಂಗ್ ಮಾತ್ರ ಮಾಡ್ತೀರಾ ಎನ್ನುವ ಪ್ರಶ್ನೆಗೆ ರಶ್ಮಿಕಾ ಮಂದಣ್ಣ ಉತ್ತರಿಸಿದ್ದಾರೆ. ಸ್ಪೆಷಲ್ ಸಾಂಗ್ಸ್ ವಿಚಾರದಲ್ಲಿ ಒಬ್ಬೊಬ್ಬರದ್ದು ಒಂದೊಂದು ಲೆಕ್ಕಾಚಾರ. ಸಿನಿಮಾ ಕಥೆ, ಕಾಲ್‌ಶೀಟ್, ಫಲಿತಾಂಶದ ಬಗ್ಗೆ ತಲೆಬಿಸಿ ಇಲ್ಲದೇ ಒಂದೆರಡು ದಿನ ಡ್ಯಾನ್ಸ್ ಮಾಡಿ ಬರುವುದು ಸುಲಭ. ಅದಕ್ಕೆ ಒಳ್ಳೆ ಸಂಭಾವನೆ ಕೂಡ ಸಿಗುತ್ತದೆ ಎಂದು ಕೆಲವರು ಭಾವಿಸುತ್ತಾರೆ.

ಸ್ಪೆಷಲ್ ಸಾಂಗ್ ಮಾಡುವುದರಲ್ಲಿ ತಪ್ಪೇನಿದೆ. ಅದು ಕೂಡ ಸಿನಿಮಾದ ಒಂದು ಭಾಗ ಅಲ್ಲವೇ ಎನ್ನುವುದು ಕೆಲವರ ಲೆಕ್ಕಾಚಾರ. ತೆಲುಗಿನ 'ಜಯಮ್ಮು ನಿಶ್ಚಯಮ್ಮುರಾ' ಟಿವಿ ಶೋನಲ್ಲಿ ಇತ್ತೀಚೆಗೆ ರಶ್ಮಿಕಾ ಮಂದಣ್ಣ ಭಾಗಿ ಆಗಿದ್ದರು. ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ನೆಗೆಟಿವ್ ರೋಲ್ ಮಾಡುವುದಕ್ಕೂ ಸಿದ್ಧ, ನನಗೆ ವೆರೈಟಿ ಪಾತ್ರಗಳು ಬೇಕು, ಇಂಟ್ರೆಸ್ಟಿಂಗ್ ಅನ್ನಿಸಿದ್ರೆ ಮಾಡ್ತೀನಿ ಎಂದು ಕೊಡಗಿನ ಕುವರಿ ಹೇಳಿದ್ದಾರೆ. ಇದೇ ವೇಳೆ ಸ್ಪೆಷಲ್ ಸಾಂಗ್ ಮಾಡುವ ಬಗ್ಗೆ ಕೇಳಿದ ಪ್ರಶ್ನೆಗೂ ಉತ್ತರಿಸಿದ್ದಾರೆ.

"ಬೇರೆ ಸಿನಿಮಾಗಳಲ್ಲಿ ಸ್ಪೆಷಲ್ ಸಾಂಗ್ಸ್ ಮಾಡೋಕೆ ಸಿದ್ಧ. ಆದರೆ ಆ 4 ಜನ ನಿರ್ದೇಶಕ ಸಿನಿಮಾಗಳಲ್ಲಿ ಮಾತ್ರ. ಅದು ಯಾರು ಎಂದು ನಾನು ಹೇಳಲ್ಲ. ಅವ್ರು ಕೇಳಿದ್ರೆ ಮಾತ್ರ ಐಟಂ ಸಾಂಗ್ ಮಾಡ್ತೀನಿ. ಅದು ಬಿಟ್ಟು ಬೇರೆ ಯಾರೇ ಕೇಳಿದ್ರು ನಾನು ಡ್ಯಾನ್ಸಿಂಗ್ ನಂಬರ್‌ಗೆ ಹೆಜ್ಜೆ ಹಾಕಲ್ಲ" ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ರಶ್ಮಿಕಾ ಹೇಳಿದ 4 ನಿರ್ದೇಶಕರು ಯಾರಪ್ಪಾ? ರಾಜಮೌಳಿ, ಸಂಜಯ್ ಲೀಲಾ ಬನ್ಸಾಲಿ, ಹಿರಾನಿ ಹಾಗೂ ಸುಕುಮಾರ್ ಇರಬಹುದಾ? ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಇನ್ನು ಕೊಡಗಿನ ಕುವರಿ ಕ್ರೇಜ್ ಜೋರಾಗಿದೆ. ಆಕೆ ನಟಿಸಿದ ಸಿನಿಮಾಗಳೆಲ್ಲಾ ಸದ್ದು ಮಾಡ್ತಿದೆ. ಸಾಧಾರಣ ಓಪನಿಂಗ್ ಪಡೆದುಕೊಂಡಿದ್ದ 'ದಿ ಗರ್ಲ್‌ಫ್ರೆಂಡ್' ಸಿನಿಮಾ ವೀಕೆಂಡ್‌ನಲ್ಲಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಒಳ್ಳೆ ಕಲೆಕ್ಷನ್ ಕೂಡ ಮಾಡಿದೆ.

ರಾಹುಲ್ ರವೀಂದ್ರನ್ ನಿರ್ದೇಶಕದ ರೊಮ್ಯಾಂಟಿಕ್ ಸಿನಿಮಾ 'ದಿ ಗರ್ಲ್‌ಫ್ರೆಂಡ್'. ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು ರಶ್ಮಿಕಾ ಜೊತೆ ಕನ್ನಡ ನಟ ದೀಕ್ಷಿತ್ ಶೆಟ್ಟಿ ಹೀರೊ ಆಗಿ ನಟಿಸಿದ್ದಾರೆ. ಸಿನಿಮಾ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚಿ ಕಾಮೆಂಟ್ ಮಾಡುತ್ತಿದ್ದಾರೆ. ಮುಖ್ಯವಾಗಿ ರಶ್ಮಿಕಾ ಮಂದಣ್ಣ ನಟನೆಗೆ ಒಳ್ಳೆ ಅಂಕ ಸಿಗುತ್ತಿದೆ.

'ದಿ ಗರ್ಲ್‌ಫ್ರೆಂಡ್' ಸಿನಿಮಾ ಫಸ್ಟ್ ವೀಕೆಂಡ್‌ನಲ್ಲಿ 6.98 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. 'ಪುಷ್ಪ'-2, 'ಛಾವ', 'ಥಮ್ಮ' ಬಳಿಕ ರಶ್ಮಿಕಾ ನಟನೆಯ ಈ ಸಿನಿಮಾ ಕೂಡ ಗೆಲ್ಲುವ ಸೂಚನೆ ಸಿಗುತ್ತಿದೆ. ಪ್ರೇಕ್ಷಕರ ಪ್ರತಿಕ್ರಿಯೆ ಕಂಡು ರಶ್ಮಿಕಾ ಖುಷಿಯಾಗಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X