For Quick Alerts
  ALLOW NOTIFICATIONS  
  For Daily Alerts

  'ಅಲ್ಲು ಅರ್ಜುನ್ ನನ್ನ ಲೈಫ್ ಕೋಚ್' ಎಂದ ನಟಿ ರಶ್ಮಿಕಾ ಮಂದಣ್ಣ

  |

  ದಕ್ಷಿಣದಿಂದ ಉತ್ತರದವರೆಗೂ ಮೋಡಿ ಮಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಶ್. ಮೊದಲಿಗಿಂತ ಈಗ ರಶ್ಮಿಕಾ ಅಭಿಮಾನಿಗಳ ಸಂಖ್ಯೆ ವಿಸ್ತಾರವಾಗಿದೆ. ಸೌತ್ ಇಂಡಸ್ಟ್ರಿಯಲ್ಲಿ ಮಾತ್ರವಲ್ಲ ಬಾಲಿವುಡ್‌ನಲ್ಲೂ ಕೊಡಗಿನ ಸುಂದರಿಯ ಸಂಚಲನ ಸೃಷ್ಟಿಸುತ್ತಿದ್ದಾರೆ.

  ಹಿಂದಿಯಲ್ಲಿ ರಶ್ಮಿಕಾ ಮಂದಣ್ಣ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಎರಡು ಸಿನಿಮಾಗಳ ಚಿತ್ರೀಕರಣ ಮುಗಿಸಿದ್ದು, ಬಿಡುಗಡೆಗೆ ತಯಾರಾಗುತ್ತಿದೆ. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಗುರುತಿಸಿಕೊಂಡಿರುವ ನಟಿ ಈಗ ಬಹುಭಾಷೆ ತಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಪುನೀತ್ ರಾಜ್ ಕುಮಾರ್, ತೆಲುಗಿನಲ್ಲಿ ವಿಜಯ್ ದೇವರಕೊಂಡ, ಮಹೇಶ್ ಬಾಬು, ತಮಿಳಿನಲ್ಲಿ ಕಾರ್ತಿ ಜೊತೆ ಈಗ ಅಲ್ಲು ಅರ್ಜುನ್ ಜೊತೆಯೂ ಸಿನಿಮಾ ಮಾಡಿದ್ದಾರೆ.

  ರಶ್ಮಿಕಾ ಬಾಲಿವುಡ್ ಪ್ರವೇಶಕ್ಕೆ 'ಮಿಷನ್ ಮಜ್ನು' ಚಿತ್ರವನ್ನೇ ಆಯ್ಕೆ ಮಾಡಿದ್ದೇಕೆ?ರಶ್ಮಿಕಾ ಬಾಲಿವುಡ್ ಪ್ರವೇಶಕ್ಕೆ 'ಮಿಷನ್ ಮಜ್ನು' ಚಿತ್ರವನ್ನೇ ಆಯ್ಕೆ ಮಾಡಿದ್ದೇಕೆ?

  'ಪುಷ್ಪ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ರಶ್ಮಿಕಾ ಮಂದಣ್ಣ ಐಕಾನ್ ಸ್ಟಾರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ''ಅಲ್ಲು ಅರ್ಜುನ್ ನನ್ನ ಲೈಫ್ ಕೋಚ್'' ಎಂದು ಹಾಡಿಹೊಗಳಿದ್ದಾರೆ. ಮುಂದೆ ಓದಿ...

  ಅಲ್ಲು ಅರ್ಜುನ್ ನನ್ನ ಲೈಫ್ ಕೋಚ್

  ಅಲ್ಲು ಅರ್ಜುನ್ ನನ್ನ ಲೈಫ್ ಕೋಚ್

  'ಪುಷ್ಪ' ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡಿರುವ ರಶ್ಮಿಕಾ ಮಂದಣ್ಣ, ಐಕಾನ್ ಸ್ಟಾರ್ ನನ್ನ ಲೈಫ್ ಕೋಚ್ ಎಂದಿದ್ದಾರೆ. ''ನನ್ನ ವೃತ್ತಿ ಜೀವನದಲ್ಲಿ ನಾನು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಅಲ್ಲು ಅರ್ಜುನ್ ಅವರ ಮಾರ್ಗದರ್ಶನ ಇದೆ. ಅವರು ನನ್ನ ಜೀವನಕ್ಕೆ ತರುಬೇತುದಾರ. ಭವಿಷ್ಯದ ನನ್ನ ಜರ್ನಿಯ ಬಗ್ಗೆ ನಾನು ನಿರ್ಧರಿಸುವ ನಿರ್ಧಾರಗಳಲ್ಲಿ ಅವರ ಪ್ರಭಾವ ಇರಲಿದೆ'' ಎಂದಿದ್ದಾರೆ.

  ಸಿದ್ಧಾರ್ಥ್ ಮಲ್ಹೋತ್ರ ಜೊತೆ ಪ್ರವೇಶ

  ಸಿದ್ಧಾರ್ಥ್ ಮಲ್ಹೋತ್ರ ಜೊತೆ ಪ್ರವೇಶ

  ಶಾಂತನು ಬಾಗ್ಚಿ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಮಿಷನ್ ಮಜ್ನು' ಚಿತ್ರದೊಂದಿಗೆ ರಶ್ಮಿಕಾ ಬಾಲಿವುಡ್ ಪ್ರವೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ರಾ ಏಜೆಂಟ್ ಆಗಿ ಕಾಣಿಸಿಕೊಂಡಿದ್ದು, ಇದುವರೆಗೂ ರಶ್ಮಿಕಾ ಮಂದಣ್ಣ ಪಾತ್ರ ಏನು ಎನ್ನುವುದು ಬಹಿರಂಗವಾಗಿಲ್ಲ. ರೋನಿ ಸ್ಕ್ರೂವಾಲಾ, ಅಮರ್ ಬುಟಾಲಾ ಮತ್ತು ಗರಿಮಾ ಮೆಹ್ತಾ ಈ ಚಿತ್ರ ನಿರ್ಮಿಸಿದ್ದಾರೆ. 1970ರ ನೈಜ ಘಟನೆಗಳಿಂದ ಸ್ಫೂರ್ತಿಯಿಂದ ಈ ಸಿನಿಮಾ ತಯಾರಾಗಿದೆ.

  ರಶ್ಮಿಕಾರನ್ನು ಹಾಡಿ ಹೊಗಳಿದ ಬಾಲಿವುಡ್ ಸ್ಟಾರ್ ನಟರಶ್ಮಿಕಾರನ್ನು ಹಾಡಿ ಹೊಗಳಿದ ಬಾಲಿವುಡ್ ಸ್ಟಾರ್ ನಟ

  ಮಿಷನ್ ಮಜ್ನು ಮೊದಲ ಆಯ್ಕೆ ಆಗಿದ್ದು ಏಕೆ?

  ಮಿಷನ್ ಮಜ್ನು ಮೊದಲ ಆಯ್ಕೆ ಆಗಿದ್ದು ಏಕೆ?

  ಬಾಲಿವುಡ್‌ನಿಂದ ಈ ಹಿಂದೆ ಹಲವು ಸಿನಿಮಾಗಳಿಂದ ಆಫರ್ ಬಂದಿತ್ತು. ಆದರೆ ಅದ್ಯಾವುದಕ್ಕೂ ಒಪ್ಪಿಕೊಳ್ಳದ ರಶ್ಮಿಕಾ, ಮಿಷನ್ ಮಜ್ನು ಚಿತ್ರಕ್ಕೆ ಸಮ್ಮತಿ ನೀಡಿದರು. ಈ ಬಗ್ಗೆ ಮಾತನಾಡಿದ್ದ ನಟಿ ''ಮೊದಲ ಚಿತ್ರಗಳು ಯಾವಾಗಲೂ ವಿಶೇಷ. ಮಿಷನ್ ಮಜ್ನು ನನ್ನನ್ನು ಗಡಿದಾಟಿ ಬರುವ ಅವಕಾಶ ಮಾಡಿಕೊಟ್ಟ ಚಿತ್ರ. ಈ ಪ್ರಾಜೆಕ್ಟ್‌ನೊಂದಿಗೆ ಸುಂದರ ಜನರು ಹಾಗೂ ಹಿಂದಿ ಚಿತ್ರರಂಗದೊಂದಿಗೆ ನನ್ನ ಪಯಣ ಆರಂಭಿಸಿದೆ ಎನ್ನುವ ಸಂತಸ ನನ್ನಲ್ಲಿದೆ. ಈ ಚಿತ್ರದ ಸ್ಕ್ರಿಪ್ಟ್ ಮೊದಲ ಬಾರಿಗೆ ಕೇಳಿದಾಗಲೇ ಇದರಲ್ಲಿ ನಾನು ಭಾಗಿಯಾಗಬೇಕು ಎಂದು ನಿರ್ಧರಿಸಿದೆ. ಏಕಂದ್ರೆ, ಈ ಅವಕಾಶ ಕಳೆದುಕೊಂಡರೆ ಮತ್ತೊಮ್ಮೆ ಇಂತಹ ಪಾತ್ರ ನಾನು ಮಾಡುವುದಿಲ್ಲ ಎಂದು ತಿಳಿದಿತ್ತು. ಅಂತಹದೊಂದು ಪಾತ್ರ ಇದಾಗಿತ್ತು. ಎಂದಿಗೂ ವಿಶೇಷವಾಗಿ ಉಳಿಯುವ ಪಾತ್ರ ಇದು'' ಎಂದು ಹೇಳಿಕೊಂಡಿದ್ದರು

  ಕ್ರಿಸ್‌ಮಸ್‌ಗೆ ಪುಷ್ಪ-1

  ಕ್ರಿಸ್‌ಮಸ್‌ಗೆ ಪುಷ್ಪ-1

  ಸುಕುಮಾರ್ ನಿರ್ದೇಶನದಲ್ಲಿ ತಯಾರಾಗಿರುವ ಪುಷ್ಪ ಸಿನಿಮಾ ಎರಡು ಭಾಗಗಳಾಗಿ ಬಿಡುಗಡೆಯಾಗುತ್ತಿದೆ. ಮೊದಲ ಭಾಗ ಡಿಸೆಂಬರ್ 24 ರಂದು ಕ್ರಿಸ್‌ಮಸ್ ಪ್ರಯುಕ್ತ ತೆರೆಗೆ ಬರ್ತಿದೆ. ಕೆಜಿಎಫ್ ಚಿತ್ರವನ್ನು ಮೀರಿಸುವಂತೆ ಈ ಸಿನಿಮಾ ತಯಾರಾಗಿದೆ ಎಂಬ ಟಾಕ್ ಇದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಧನಂಜಯ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

  English summary
  Pushpa actress Rashmika Mandanna Says that Allu Arjun sir is my life coach.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X