ಲಕ್ಕು ಅಂದ್ರೆ ಇದೇ ನೋಡ್ರಪ್ಪ....ರಶ್ಮಿಕಾಗೆ ಮಾತ್ರ ಇಂತಹ ಆಫರ್!

ಯುವನಟಿ ರಶ್ಮಿಕಾ ಮಂದಣ್ಣ ಟ್ರೆಂಡ್ ನಡೆಯುತ್ತಿದೆ. ಅದರಲ್ಲೂ ತೆಲುಗು ಪ್ರೇಕ್ಷಕರಂತೂ ಆಕೆಗೆ ಬಹಳ ಹತ್ತಿರವಾಗಿದ್ದಾರೆ. ತೆಲುಗು ನಟಿಯರನ್ನೇ ಹಿಂದಿಕ್ಕಿ ಕೊಡಗಿನ ಕುವರಿ ಟಾಲಿವುಡ್ ಆಳುತ್ತಿದ್ದಾರೆ ಎಂಬ ಮಾತಿದೆ.

ಒಂದು ಸಿನಿಮಾ ಮುಗಿಯುಷ್ಟರಲ್ಲಿ ಇನ್ನೊಂದು ದೊಡ್ಡ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬಹುಶಃ ಇಂತಹ ಅವಕಾಶಗಳು ರಶ್ಮಿಕಾ ಮಾತ್ರ ಸಿಗುತ್ತಿದೆ. ಮಹೇಶ್ ಬಾಬು ಸಿನಿಮಾ ಮುಗಿದ ಮೇಲೆ ಮತ್ತಿಬ್ಬರು ಸ್ಟಾರ್ ನಟರ ಚಿತ್ರಕ್ಕೆ ಹೀರೋಯಿನ್ ಆಗುವ ಸಾಧ್ಯತೆ ಇದೆಯಂತೆ. ಅಷ್ಟಕ್ಕೂ ಯಾರು ಆ ನಟರು? ಮುಂದೆ ಓದಿ...

ಜನವರಿ 11ಕ್ಕೆ ಸರಿಲೇರು ನೀಕೇವರು

ಜನವರಿ 11ಕ್ಕೆ ಸರಿಲೇರು ನೀಕೇವರು

ಮಹೇಶ್ ಬಾಬು ನಾಯಕನಾಗಿ ನಟಿಸಿ ರಶ್ಮಿಕಾ ಮಂದಣ್ಣ ನಾಯಕಿಯಾಗಿರುವ ಸರಿಲೇರು ನೀಕೇವರು ಸಿನಿಮಾ ಜನವರಿ 11 ರಂದು ತೆರೆಕಾಣುತ್ತಿದೆ. ಈ ಸಿನಿಮಾ ಮುಗಿದ ಬಳಿಕ ತೆಲುಗಿನ ಮತ್ತಿಬ್ಬರು ಸ್ಟಾರ್ ನಟರ ಚಿತ್ರದಲ್ಲಿ ಹೀರೋಯಿನ್ ಆಗಿ ನಟಿಸುವ ಸಾಧ್ಯತೆ ಇದೆ.

ರಾಮ್ ಚರಣ್ ಜೊತೆ ರಶ್ಮಿಕಾ!

ರಾಮ್ ಚರಣ್ ಜೊತೆ ರಶ್ಮಿಕಾ!

ಮೆಗಾಪವರ್ ಸ್ಟಾರ್ ರಾಮ್ ಚರಣ್ ಜೊತೆ ರಶ್ಮಿಕಾ ಮಂದಣ್ಣ ಹೊಸ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಎಸ್ ಎಸ್ ರಾಜಮೌಳಿ ಜೊತೆ ಆರ್ ಆರ್ ಆರ್ ಸಿನಿಮಾ ಮಾಡುತ್ತಿರುವ ರಾಮ್ ಚರಣ್ ಅದಾದ ಬಳಿಕ ಹೊಸ ಚಿತ್ರಕ್ಕೆ ಚಾಲನೆ ನೀಡಲಿದ್ದಾರಂತೆ.

ಜೂ ಎನ್ ಟಿ ಆರ್ ಚಿತ್ರದಲ್ಲೂ ರಶ್ಮಿಕಾ!

ಜೂ ಎನ್ ಟಿ ಆರ್ ಚಿತ್ರದಲ್ಲೂ ರಶ್ಮಿಕಾ!

ತೆಲುಗಿನ ಮತ್ತೊಬ್ಬ ಸೂಪರ್ ಸ್ಟಾರ್ ಜೂನಿಯರ್ ಎನ್ ಟಿ ಆರ್ ಜೊತೆಯೂ ನಟಿಸುವ ಆಫರ್ ಬಂದಿದೆಯಂತೆ. ಎನ್ ಟಿ ಆರ್ ಕೂಡ ರಾಜಮೌಳಿ ಜೊತೆ ಆರ್ ಆರ್ ಆರ್ ಸಿನಿಮಾ ಮಾಡ್ತಿದ್ದು, ಅದಾದ ಮೇಲೆ ತ್ರಿವಿಕ್ರಮ ಜೊತೆ ಮಾಡಲಿರುವ ಚಿತ್ರಕ್ಕೆ ರಶ್ಮಿಕಾ ಕರೆತರುವ ಪ್ಲಾನ್ ಇದೆಯಂತೆ.

ರಶ್ಮಿಕಾ ಕೈಯಲ್ಲಿರುವ ಚಿತ್ರಗಳು

ರಶ್ಮಿಕಾ ಕೈಯಲ್ಲಿರುವ ಚಿತ್ರಗಳು

ಕನ್ನಡದಲ್ಲಿ ಪೊಗರು ಸಿನಿಮಾ ಮುಗಿಸಿರುವ ರಶ್ಮಿಕಾ, ತೆಲುಗಿನಲ್ಲಿ ನಿತೀನ್ ಜೊತೆ ಭೀಷ್ಮ ಸಿನಿಮಾ ಮಾಡ್ತಿದ್ದಾರೆ. ತಮಿಳಿನಲ್ಲಿ ಕಾರ್ತಿ ಜೊತೆ ಸುಲ್ತಾನ್ ಎಂಬ ಸಿನಿಮಾ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಚಿತ್ರದಲ್ಲೂ ನಟಿಸುತ್ತಿದ್ದಾರೆ.

More from Filmibeat

English summary
After Mahesh babu movie rashmika mandanna set to play female lead in two big stars movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X