For Quick Alerts
  ALLOW NOTIFICATIONS  
  For Daily Alerts

  ನಮ್ಮ ನಡುವೆ ಏನೂ ಇಲ್ಲ ಎನ್ನುತ್ತಲೇ ವಿಜಯ್ ದೇವರಕೊಂಡ ಚಿತ್ರ ಹಂಚಿಕೊಂಡ ರಶ್ಮಿಕಾ!

  |

  ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಬಗೆಗಿನ ಸುದ್ದಿಗಳಿಗೆ ಕೊನೆ-ಮೊದಲಿಲ್ಲ. ಕೆಲ ವರ್ಷಗಳ ಹಿಂದೆ ಇಬ್ಬರೂ ಒಟ್ಟಿಗೆ 'ಗೀತ ಗೋವಿಂದಂ' ಸಿನಿಮಾದಲ್ಲಿ ನಟಿಸಿದಾಗಿನಿಂದಲೂ ಇಬ್ಬರ ನಡುವೆ ಪ್ರೀತಿ ಇದೆ ಎಂಬ ಸುದ್ದಿಗಳು ಹರಿದಾಡುತ್ತಲೇ ಇವೆ.

  ಇದಕ್ಕೆ ಪೂರಕವೆಂಬಂತೆ ಈ ಜೋಡಿ ಆಗೊಮ್ಮೆ ಈಗೊಮ್ಮೆ ಒಟ್ಟಿಗೆ ಕೈ ಕೈ ಹಿಡಿದು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ. ಆ ಮೂಲಕ ಪ್ರೀತಿ-ಪ್ರೇಮದ ಸುದ್ದಿಗಳಿಗೆ ಇನ್ನಷ್ಟು ಇಂಬು ನೀಡುತ್ತಾರೆ.

  ಆದರೆ ಇದೀಗ ಹೊಸ ಸುದ್ದಿಗಳ ಪ್ರಕಾರ ಈ ಇಬ್ಬರು ಬ್ರೇಕ್ ಅಪ್ ಮಾಡಿಕೊಂಡಿದ್ದಾರಂತೆ. ಇಬ್ಬರೂ ಪ್ರೀತಿಸುತ್ತಿದ್ದರು ಆದರೆ ಈಗ ಒಟ್ಟಿಗಿಲ್ಲ, ಅನಿವಾರ್ಯ ಕಾರಣಗಳಿಂದ ದೂರಾಗಿದ್ದಾರೆ. ಇಬ್ಬರೂ ಸಿಂಗಲ್ ಆಗಿದ್ದಾರೆ ಎನ್ನಲಾಗಿದೆ. ಆದರೆ ಈ ಬ್ರೇಕ್ ಅಪ್ ಸುದ್ದಿಯ ನಡುವಿನಲ್ಲೇ ರಶ್ಮಿಕಾ ಮಂದಣ್ಣ ಮತ್ತೆ ವಿಜಯ್ ದೇವರಕೊಂಡ ಚಿತ್ರವನ್ನು ಹಂಚಿಕೊಂಡಿದ್ದಾರೆ.

  ಆದರೆ ರಶ್ಮಿಕಾ ಮಂದಣ್ಣ ಕೇವಲ ವಿಜಯ್ ದೇವರಕೊಂಡ ಚಿತ್ರವನ್ನು ಮಾತ್ರವನ್ನೇ ಹಂಚಿಕೊಂಡಿಲ್ಲ ಬದಲಿಗೆ ತನ್ನ ಇತರ ಹಲವು ಗೆಳೆಯ ಗೆಳತಿಯರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಆದರೆ ರಶ್ಮಿಕಾ ಹಂಚಿಕೊಂಡಿರುವ ಚಿತ್ರಗಳಲ್ಲಿ ಅವರ ಸಿನಿಮಾ ರಂಗದ ಮೊದಲ ಗೆಳೆಯರಾದ ಶೆಟ್ಟಿ ಗ್ಯಾಂಗ್‌ನವರು ಯಾರೂ ಇಲ್ಲ.

  ಇನ್‌ಸ್ಟಾಗ್ರಾಂನಲ್ಲಿ ಚಿತ್ರ ಹಂಚಿಕೊಂಡಿದ್ದಾರೆ ರಶ್ಮಿಕಾ

  ಇನ್‌ಸ್ಟಾಗ್ರಾಂನಲ್ಲಿ ಚಿತ್ರ ಹಂಚಿಕೊಂಡಿದ್ದಾರೆ ರಶ್ಮಿಕಾ

  ಹಲವು ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ರಶ್ಮಿಕಾ, ನಾನು 'ಫ್ರೆಂಡ್‌ಶಿಪ್ ಡೇ, ಹಗ್ ಡೇ, ಕಿಸ್ ಡೇ, ವ್ಯಾಲೆಂಟೈನ್ಸ್‌ ಡೇ ಗಳನ್ನೆಲ್ಲ ಆಚರಿಸುವುದಿಲ್ಲ. ಅವಕ್ಕೆ ಹೆಚ್ಚು ಪ್ರಾಮಖ್ಯತೆಯನ್ನೂ ಕೊಡುವುದಿಲ್ಲ ಜೊತೆಗೆ ನನ್ನ ಖಾಸಗಿ ಜೀವನದ ಬಗ್ಗೆಯೂ ಹೆಚ್ಚಾಗಿ ನಾನು ಏನನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದಿಲ್ಲ ಆದರೆ ಇಂದು ಕೆಲವು ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದೇನೆ ಇದು ನನಗೆ ಹಾಗೂ ಈ ಚಿತ್ರದಲ್ಲಿರುವವರಿಗೆ ಸಹ ಆಶ್ಚರ್ಯ ಮೂಡಿಸುವುದು ಪಕ್ಕಾ'' ಎಂದಿದ್ದಾರೆ.

  ನಿಮ್ಮಿಂದ ನನ್ನ ಮುಖದಲ್ಲಿ ಮಂದಹಾಸ: ರಶ್ಮಿಕಾ

  ನಿಮ್ಮಿಂದ ನನ್ನ ಮುಖದಲ್ಲಿ ಮಂದಹಾಸ: ರಶ್ಮಿಕಾ

  ಈ ಚಿತ್ರಗಳಲ್ಲಿ ಇರುವ ವ್ಯಕ್ತಿತಗಳೆಲ್ಲ ನನ್ನ ಜೀವನದಲ್ಲಿ ಎಷ್ಟು ಮುಖ್ಯ ಎಂಬುದನ್ನು ಹೇಳಲೆಂದು ನಾನು ಇಲ್ಲಿ ಇವರ ಚಿತ್ರಗಳನ್ನು ಹಂಚಿಕೊಂಡಿದ್ದೇನೆ. ಈ ಚಿತ್ರಗಳಲ್ಲಿ ಇರುವ ಕೆಲವರೊಟ್ಟಿಗೆ ನಾನು ಬೆಳೆದಿದ್ದೇನೆ, ಕೆಲವರೊಟ್ಟಿಗೆ ನಾನು ಕೆಲಸ ಮಾಡಿದ್ದೇನೆ. ಕೆಲವರೊಟ್ಟಿಗೆ ನಾನು ಸಂಪರ್ಕದಲ್ಲಿ ಸಹ ಇಲ್ಲ. ಆದರೂ ಇವರೆಲ್ಲ ನನ್ನ ಜೀವನವನ್ನು ಅದ್ಭುತಗೊಳಿಸಿದ್ದಾರೆ. ಇವರನ್ನೆಲ್ಲ ನಾನು ಬಹುವಾಗಿ ಪ್ರೀತಿಸುತ್ತೇನೆ. ನಿಮ್ಮಿಂದ ಬರುವ ಒಂದು ನೋಟಿಫಿಕೇಶನ್ ನನ್ನ ಮುಖದಲ್ಲಿ ನಗು ಅರಳಿಸುತ್ತದೆ'' ಎಂದಿದ್ದಾರೆ.

  ನನ್ನ ಹೃದಯದ ಚೂರುಗಳು ನೀವು: ರಶ್ಮಿಕಾ

  ನನ್ನ ಹೃದಯದ ಚೂರುಗಳು ನೀವು: ರಶ್ಮಿಕಾ

  ಮುಂದುವರೆದು, ''ನಾನು ಇಂದು ಏನಾಗಿದ್ದೇನೆಯೋ ಅದು ನಿಮ್ಮಿಂದ, ನೀವು ನನ್ನ ಹೃದಯದ ತುಣುಕುಗಳು. ನಿಮ್ಮಿಂದ ನನ್ನ ಜೀವನ ಸುಂದರವಾಗಿದೆ ಎಂದಿದ್ದಾರೆ. ಏಳು ಚಿತ್ರಗಳನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದು ವಿಡಿಯೋ ಸಹ ಇದೆ. ಏಳರಲ್ಲಿ ಒಂದು ಗ್ರೂಫ್ ಫೋಟೊದಲ್ಲಿ ವಿಜಯ್ ದೇವರಕೊಂಡ ಸಹ ಇದ್ದಾರೆ. ಆದರೆ ಕನ್ನಡದ ಯಾವೊಬ್ಬ ನಟರ ಚಿತ್ರವನ್ನು ರಶ್ಮಿಕಾ ಹಂಚಿಕೊಂಡಿಲ್ಲ.

  ರಶ್ಮಿಕಾ ಮಂದಣ್ಣ ಕೈಲಿ ಹಲವು ಸಿನಿಮಾಗಳು

  ರಶ್ಮಿಕಾ ಮಂದಣ್ಣ ಕೈಲಿ ಹಲವು ಸಿನಿಮಾಗಳು

  ರಶ್ಮಿಕಾ ಮಂದಣ್ಣ ಕೈಲಿ ಈಗ ಹಲವಾರು ಸಿನಿಮಾಗಳಿವೆ. ರಶ್ಮಿಕಾ ನಟಿಸಿರುವ ಬಾಲಿವುಡ್‌ ಸಿನಿಮಾಗಳಾದ 'ಮಿಷನ್ ಮಜ್ನು' ಹಾಗೂ ಅಮಿತಾಬ್ ಬಚ್ಚನ್ ಜೊತೆ ನಟಿಸಿರುವ 'ಗುಡ್ ಬೈ' ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ಎರಡೂ ಸಿನಿಮಾಗಳು ಶೀಘ್ರದಲ್ಲಿಯೇ ತೆರೆಗೆ ಅಪ್ಪಳಿಸಲಿವೆ. ತಮಿಳಿನಲ್ಲಿ ನಟ ವಿಜಯ್ ಜೊತೆಯಾಗಿ ಹೊಸ ಸಿನಿಮಾವೊಂದನ್ನು ರಶ್ಮಿಕಾ ಮಂದಣ್ಣ ಒಪ್ಪಿಕೊಂಡಿದ್ದಾರೆ. ಶೀಘ್ರದಲ್ಲಿಯೇ ಮಲಯಾಂ ಚಿತ್ರರಂಗಕ್ಕೂ ರಶ್ಮಿಕಾ ಕಾಲಿಡುವ ಸಾಧ್ಯತೆ ಇದೆ. ಬಾಲಿವುಡ್‌ನಲ್ಲಿ ಸಹ ಹೊಸ ಸಿನಿಮಾ ಒಂದರ ಆಫರ್ ರಶ್ಮಿಕಾರನ್ನು ಅರಸಿ ಬಂದಿದೆಯಂತೆ.

  English summary
  Actress Rashmika Mandanna shared Vijay Devarkonda photo on Instagram after a long gap. She shared her friends photos.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X