Rashmika Mandanna: ಜೀವ ಹೋಗುವಷ್ಟು ನೋವು.. ಆದರೂ ಹಠ ಬಿಡದ ಕೊಡಗಿನ ಕುವರಿ

ಬಾಲಿವುಡ್, ಟಾಲಿವುಡ್ ಸಿನಿಮಾಗಳ ಮೂಲಕ ರಶ್ಮಿಕಾ ಮಂದಣ್ಣ ಫುಲ್ ಬ್ಯುಸಿಯಾಗಿ ಬಿಟ್ಟಿದ್ದಾರೆ. ಇತ್ತೀಚೆಗೆ ಮತ್ತೊಂದು ತಮಿಳು ಚಿತ್ರವನ್ನು ಕೂಡ ಒಪ್ಪಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ಗ್ಲಾಮರ್ ಡೋಸ್ ಹೆಚ್ಚಿಸುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಚೆಲುವೆ ಫೋಟೊ, ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಸದ್ಯ ಜಿಮ್‌ ವರ್ಕ್‌ಔಟ್ ವಿಡಿಯೋವೊಂದನ್ನು ಆಕೆ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮೊದಲಿನಿಂದಲೂ ಫಿಟ್‌ನೆಸ್‌ ಫ್ರೀಕ್‌ ಆಗಿರುವ ರಶ್ಮಿಕಾ ಮಂದಣ್ಣ ಪ್ರತಿದಿನ ಜಿಮ್‌ನಲ್ಲಿ ಬೆವರಿಳಿಸುತ್ತಾರೆ.

Rashmika Mandanna shares a glimpse of her intense workout session

ರಶ್ಮಿಕಾ ಲೆಗ್ ಎಕ್ಸ್‌ಟೆಂಷನ್ ವರ್ಕ್‌ಔಟ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಜಿಮ್ ಕೋಚ್ ಜುನೈದ್ ಶೇಕ್ ಮಾರ್ಗದರ್ಶನದಲ್ಲಿ ಕಿರಿಕ್ ಬೆಡಗಿ ಪ್ರತಿದಿನ ಕಸರಸ್ತು ಮಾಡುತ್ತಾರೆ. ಈ ವಿಡಿಯೋವನ್ನು ಕೂಡ ಜುನೈದ್ ಸೆರೆ ಹಿಡಿದಿರುವುದಾಗಿ ರಶ್ಮಿಕಾ ಬರೆದುಕೊಂಡಿದ್ದಾರೆ. "ಅಲ್ಲಿ ನನ್ನ ಆತ್ಮವು ನನ್ನ ದೇಹ ಬಿಟ್ಟು ಹೋಗಿ ಹೋಗಿ ಬರುತ್ತಿದೆ. ಜುನೈದ್ ನನ್ನನ್ನು ನಿಧಾನವಾಗಿ ಸೂಪರ್ ವುಮೆನ್ ಆಗಿ ಮಾಡುತ್ತಿದ್ದಾನೆ. ಈ ವೀಡಿಯೊ ನೋಡುವಾಗ ನನ್ನೊಳಗಿನ ಬೀಸ್ಟ್ ಬಹಳ ಸಂತೋಷವಾಗಿದೆ ಎನಿಸುತ್ತದೆ" ಎಂದು ಪೋಸ್ಟ್ ಮಾಡಿದ್ದಾರೆ.

ಲೆಗ್ ಎಕ್ಸ್‌ಟೆಂಷನ್ ವರ್ಕ್‌ಔಟ್ ಮಾಡಲು ರಶ್ಮಿಕಾ ಬಹಳ ಕಷ್ಟಪಡುತ್ತಿರುವುದು ವಿಡಿಯೋದಲ್ಲಿ ಗೊತ್ತಾಗುತ್ತಿದೆ. ಆದರೆ ಹಠ ಬಿಡದೇ ಶ್ರಮವಹಿಸುತ್ತಿದ್ದಾರೆ. ಗ್ಲಾಮರಸ್ ಫೀಲ್ಡ್‌ನಲ್ಲಿ ಫಿಟ್‌ನೆಸ್ ಬಹಳ ಅಗತ್ಯ. ದೇಹಕ್ಕೆ ಯಾವುದೇ ಕಾಸ್ಟ್ಯೂಮ್ ಆದರೂ ಪರ್ಫೆಕ್ಟ್ ಎನಿಸಬೇಕು. ಅದಕ್ಕಾಗಿ ರಶ್ಮಿಕಾ ಇಷ್ಟೆಲ್ಲಾ ಕಷ್ಟಪಡುತ್ತಿದ್ದಾರೆ. ಬಿಳಿ ಟೀಶರ್ಟ್‌, ಬ್ಲಾಕ್‌ ಕಲರ್ ಶಾರ್ಟ್ಸ್‌ನಲ್ಲಿ ರಶ್ಮಿಕಾ ವರ್ಕೌಟ್‌ ನೋಡಿ ಅಭಿಮಾನಿಗಳು ತಾವು ಜಿಮ್‌ಗೆ ಹೋಗಬೇಕು ಎಂದುಕೊಳ್ಳುವಂತಾಗಿದೆ. ಚಂದವಾಗಿ ಕಾಣಿಸಿಕೊಳ್ಳಲು ರಶ್ಮಿಕಾ ಮಾಡುತ್ತಿರುವ ಕಸರತ್ತು ನೋಡಿ ನೆಟ್ಟಿಗರು ಮೆಚ್ಚಿಕೊಳ್ಳುತ್ತಿದ್ದಾರೆ.

ಸಿನಿಮಾಗಳ ವಿಚಾರಕ್ಕೆ ಬಂದರೆ ರಶ್ಮಿಕಾ ಸದ್ಯ ಬಾಲಿವುಡ್‌ನ 'ಅನಿಮಲ್', ತೆಲುಗಿನ 'ಪುಷ್ಪ'-2 ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. 'ರೇನ್‌ಬೋ' ಒಂದು ಮಹಿಳಾ ಪ್ರಧಾನ ಚಿತ್ರದಲ್ಲೂ ಮಿಂಚಿದ್ದಾರೆ. ತಮಿಳು, ತೆಲುಗಿನಲ್ಲಿ ಈ ಸಿನಿಮಾ ತೆರೆಗೆ ಬರಬೇಕಿದೆ. ಸಮಂತಾ ನಾಯಕಿಯಾಗಿ ಈ ಸಿನಿಮಾ ಘೋಷಣೆ ಆಗಿತ್ತು. ಆಕೆ ಮಯೋಸೈಟಿಸ್ ಸಮಸ್ಯೆಗೆ ತುತ್ತಾದ ಮೇಲೆ ಚಿತ್ರತಂಡ ರಶ್ಮಿಕಾಳನ್ನು ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿತ್ತು.

ನಿತಿನ್ ಜೋಡಿಯಾಗಿ ರಶ್ಮಿಕಾ 'ಎಕ್ಸ್ಟ್ರಾಡಿನರಿಮ್ಯಾನ್' ಎನ್ನುವ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ ಡೇಟ್ಸ್ ಸಮಸ್ಯೆಯಿಂದ ರೋಶ್ ಆ ಸಿನಿಮಾ ಕೈಬಿಡಬೇಕಾಯಿತು. ಆ ಅವಕಾಶ ಬಳಿಕ ಶ್ರೀಲೀಲಾ ಪಾಲಾಗಿತ್ತು. ಧನುಷ್ ನಟನೆಯ 51ನೇ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಶೇಖರ್ ಕಮ್ಮುಲ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾಗಾಗಿಯೇ ರಶ್ಮಿಕಾ 'ಎಕ್ಸ್ಟ್ರಾಡಿನರಿಮ್ಯಾನ್' ಸಿನಿಮಾ ಕೈಬಿಟ್ರು ಎನ್ನಲಾಗುತ್ತದೆ.

'ಸುಲ್ತಾನ್' ಹಾಗೂ 'ವಾರಿಸು' ಸಿನಿಮಾಗಳ ಬಳಿಕ ರಶ್ಮಿಕಾ ಮತ್ತೆ ಕಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. D51 ಸಿನಿಮಾ ತೆಲುಗು, ತಮಿಳು ಎರಡೂ ಭಾಷೆಗಳಲ್ಲಿ ನಿರ್ಮಾಣವಾಗಲಿದೆ. ಬೇರೆ ಭಾಷೆಗಳಿಗೂ ಡಬ್ ಆಗಲಿದೆ. ರಣ್‌ಬೀರ್ ಕಪೂರ್ ಜೊತೆಗಿನ 'ಅನಿಮಲ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಡಿಸೆಂಬರ್ 1ಕ್ಕೆ ತೆರೆಗಪ್ಪಳಿಸಲಿದೆ.

'ಪುಷ್ಪ' ಚಿತ್ರದಲ್ಲಿ ಶ್ರೀವಲ್ಲಿಯಾಗಿ ರಶ್ಮಿಕಾ ಗಮನ ಸೆಳೆದಿದ್ದರು. ಸೀಕ್ವೆಲ್‌ನಲ್ಲಿ ಅದೇ ಪಾತ್ರವನ್ನು ಮುಂದುವರೆಸಿದ್ದಾರೆ. ಇತ್ತೀಚೆಗೆ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ರಶ್ಮಿಕಾ ಸೆಟ್‌ ಫೋಟೊವೊಂದನ್ನು ಹಂಚಿಕೊಂಡಿದ್ದರು. ಸುಕುಮಾರ್ ನಿರ್ದೇಶನದ ಈ ಮಾಸ್ ಮಸಾಲಾ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಅಲ್ಲು ಅರ್ಜುನ್ ನಟನೆಯ ಸಿನಿಮಾ ಮುಂದಿನ ವರ್ಷ ಆಗಸ್ಟ್ 15ಕ್ಕೆ ರಿಲೀಸ್ ಆಗಲಿದೆ.

More from Filmibeat

English summary
Pushpa-2 actress shares new workout video on Instagram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X