ವಿಜಯ್ ದೇವರಕೊಂಡ ಜೊತೆಗಿರುವ ನೆಚ್ಚಿನ ಫೋಟೋ ಶೇರ್ ಮಾಡಿ ರಶ್ಮಿಕಾ ಹೇಳಿದ್ದೇನು?
ರಶ್ಮಿಕಾ ಮಂದಣ್ಣ ಸದ್ಯ ತೆಲುಗು ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಸಂಪಾದಿಸಿರುವ ರಶ್ಮಿಕಾ ಆಗಾಗ ಸಾಮಾಜಿಕ ಜಾಲತಾಣದ ಮೂಲಕ ಸಂವಾದ ನಡೆಸುತ್ತಿರುತ್ತಾರೆ.
ಇತ್ತೀಚಿಗೆ ರಶ್ಮಿಕಾ ಇನ್ಸ್ಟಾಗ್ರಾಮ್ ನಲ್ಲಿ ಅಭಿಮಾನಿಗಳಿಗೆ ಏನಾದರು ಪ್ರಶ್ನೆಗಳನ್ನು ಕೇಳಿ ಹೇಳಿದ್ದರು. ರಶ್ಮಿಕಾ ಹೀಗೆ ಹೇಳುತ್ತಿದ್ದಂತೆ ಅಭಿಮಾನಿಗಳು ಮುಗಿಬಿದ್ದು ಪ್ರಶ್ನೆಗಳನ್ನು ಎಸೆದಿದ್ದಾರೆ. ಆಯ್ದ ಪ್ರಶ್ನೆಗಳಿಗೆ ರಶ್ಮಿಕಾ ಉತ್ತರ ನೀಡಿದ್ದಾರೆ. ಕೆಲವು ಅಭಿಮಾನಿಗಳು ನಟ ವಿಜಯ್ ದೇವರಕೊಂಡ ಬಗ್ಗೆ ಮಾಡಿದ್ದಾರೆ.
ವಿಜಯ್ ದೇವರಕೊಂಡ ಜೊತೆಗಿನ ನೆಚ್ಚಿನ ಫೋಟೋ ಯಾವುದು? ಎಂದು ಹೇಳಿದ ಪ್ರಶ್ನೆಗೆ ರಶ್ಮಿಕಾ ನೆಚ್ಚಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ತುಂಬಾ ಜನ ಇರುವ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಇರುವ ಬ್ಲಾಕ್ ಅಂಡ್ ಫೋಟೋ ಶೇರ್ ಮಾಡಿದ್ದಾರೆ. ಇದು ನೆಚ್ಚಿನ ಫೋಟೋ ಎಂದಿದ್ದಾರೆ.

ಇನ್ನು ಮತ್ತೊಬ್ಬ ಅಭಿಮಾನಿ ವಿಜಯ್ ನಿಮಗೆಷ್ಟು ವಿಶೇಷ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ರಶ್ಮಿಕಾ, ಬೆಸ್ಟ್ ಫ್ರೆಂಡ್ ಎಂದು ಹೇಳಿ, ಹಗ್ ಮಾಡುವ ವಿಡಿಯೋ ಶೇರ್ ಮಾಡಿದ್ದಾರೆ. ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಇಬ್ಬರು 'ಗೀತ ಗೋವಿಂದಂ' ಸಿನಿಮಾದಲ್ಲಿ ಪರಿಚಿತರಾದವರು. ಈ ಸಿನಿಮಾ ಸಮಯದಲ್ಲಿ ಇಬ್ಬರ ನಡುವೆ ಉತ್ತಮ ಬಾಂಧವ್ಯ ಬೆಳೆದಿದ್ದು ಈಗಲೂ ಮುಂದುವರೆದಿದ್ದೆ.

Recommended Video
ಅಷ್ಟೆಯಲ್ಲ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ನಲ್ಲಿದ್ದಾರೆ, ಪ್ರೀತಿಸುತ್ತಿದ್ದಾರೆ ಎನ್ನುವ ಸುದ್ದಿ ಆಗಾಗ ಕೇಳಿಬರುತ್ತಿರುತ್ತೆ. ಆದರೆ ಇಬ್ಬರೂ ಬೆಸ್ಟ್ ಫ್ರೆಂಡ್ ಅಷ್ಟೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ರಶ್ಮಿಕಾ ಸದ್ಯ ಅಮಿತಾಬ್ ಬಚ್ಚನ್ ಜೊತೆ ಗುಬ್ ಡೈ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇನ್ನು ಮಿಷನ್ ಮಜ್ನು ಸಿನಿಮಾ ಕೂಡ ರಶ್ಮಿಕಾ ಕೈಯಲ್ಲಿದೆ. ತೆಲುಗಿನಲ್ಲಿ ಪುಷ್ಪ ಚಿತ್ರದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











