Pushpa 2: ಪುಷ್ಪ 2 ಸೆಟ್‌ನ ಬ್ಲಾಕ್ ಅಂಡ್ ವೈಟ್ ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣ

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ 2: ದಿ ರೂಲ್' ಈ ವರ್ಷದ ಅತ್ಯಂತ ಹೆಚ್ಚು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಸಿನಿಮಾದ ಮೊದಲ ಭಾಗ 'ಪುಷ್ಪ: ದಿ ರೈಸ್' ಪ್ರೇಕ್ಷಕರ ಮನದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಇವುಗಳಿಗೆಲ್ಲ ಎರಡನೇ ಭಾಗದಲ್ಲಿ ಉತ್ತರ ದೊರೆಯಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಸಿನಿಪ್ರೇಮಿಗಳು.

ರಾಷ್ಟ್ರ ಪ್ರಶಸ್ತಿ ಪಡೆದಿರುವ ನಟ ಅಲ್ಲು ಅರ್ಜುನ್ ಅವರ ಪುಷ್ಪರಾಜ್ ಪಾತ್ರ ಜನರಲ್ಲಿ ಒಂದು ಬಗೆಯ ಕ್ರೇಜ್ ಕ್ರಿಯೆಟ್ ಮಾಡಿದೆ. ನಟಿ ರಶ್ಮಿಕಾ ಮಂದಣ್ಣ ಶ್ರೀವಲ್ಲಿಯಾಗಿ ಜನರ ಗಮನ ಸೆಳೆದಿದ್ದಾರೆ. ಫಹಾದ್ ಫಾಸಿಲ್ ಅಭಿನಯ ಕಣ್ಣು ತುಂಬಿಕೊಳ್ಳಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಹೀಗಾಗಿಯೇ ಈ ಆಕ್ಷನ್ ಸಿನಿಮಾದ ಸೀಕ್ವೆಲ್ ಹೆಚ್ಚು ಸುದ್ದಿಯಾಗುತ್ತಿದ್ದು, ಅಪ್‌ಡೇಟ್‌ಗಳಿಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುದ್ದಾರೆ.

rashmika-mandanna-shares-pushpa-2-set-pic

ಪುಷ್ಪ 2ನಲ್ಲಿ ಇದ್ದಾರೆ ರಶ್ಮಿಕಾ ಮಂದಣ್ಣ

ಈ ವರ್ಷದ ಆರಂಭದಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದಂದು ಪುಷ್ಪ 2 ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನಾವರಣ ಮಾಡಲಾಗಿತ್ತು. ಬಳಿಕ ನಟಿ ರಶ್ಮಿಕಾ ಮಂದಣ್ಣ ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕಾರಣ 'ಪುಷ್ಪ'ದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬ ವದಂತಿಗಳಿದ್ದವು. ಇದಕ್ಕೆ ಶ್ರೀವಲ್ಲಿ ಸೆಪ್ಟೆಂಬರ್ 8 ರಂದು (ಶುಕ್ರವಾರ) ಫುಲ್‌ಸ್ಟಾಪ್ ಇಟ್ಟಿದ್ದಾರೆ.

ಪುಷ್ಪನ ಶ್ರೀವಲ್ಲಿ ಪಾತ್ರದಲ್ಲಿ ನಟಿಸಿರುವ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸೆಪ್ಟೆಂಬರ್ 8 ರಂದು ಪುಷ್ಪ: ದಿ ರೂಲ್ ಚಿತ್ರದ ಸೆಟ್‌ನಿಂದ ಹೊಸ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಂದರೆ ಸಿನಿಮಾದಲ್ಲಿ ತಾನಿದ್ದೇನೆ. ಚಿತ್ರೀಕರಣ ನಡೆಯುತ್ತಿದೆ ಎಂಬ ಸಂದೇಶವನ್ನು ತನ್ನ ಅಭಿಮಾನಿಗಳಿಗೆ ನೀಡಿದ್ದಾರೆ.

rashmika-mandanna-shares-pushpa-2-set-pic

Instagramನಲ್ಲಿ 'ಪುಷ್ಪ 2' ಸೆಟ್‌ನಿಂದ ಬ್ಲಾಕ್ ಅಂಡ್ ವೈಟ್ ಚಿತ್ರವನ್ನು ಹಂಚಿಕೊಂಡಿದ್ದಾರೆ. 'ಪುಷ್ಪ: ದಿ ರೂಲ್' ಚಿತ್ರದ ಸ್ಟಿಲ್ ಫೋಟೋದಲ್ಲಿ ಸಿನಿಮಾಗಾಗಿ ನಿರ್ಮಿಸಲಾದ ಬಂಗಲೆಯ ಭವ್ಯವಾದ ಸೆಟ್ ನೋಡಬಹುದು. ಚಿತ್ರಕ್ಕೆ ಹ್ಯಾಶ್‌ಟ್ಯಾಗ್ ಪುಷ್ಪ 2 ಎಂದು ಹಾರ್ಟ್ ಹಂಚಿಕೊಂಡಿದ್ದಾರೆ. ಚಿತ್ರದ ಭವ್ಯ ಬಂಗಲೆಯ ಸೆಟ್ ನೋಡಿದವರಿಗೆ ಸಿನಿಮಾದ ರಿಚ್‌ನೆಸ್ ಮತ್ತಷ್ಟು ಅರ್ಥವಾಗಲಿದೆ.

ಪುಷ್ಪ 2 ರ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಇನ್ನೂ ಬಹಿರಂಗಪಡಿಸಿಲ್ಲ. ಆದರೂ ಸಿನಿಮಾ 2024 ರ ಬೇಸಿಗೆಯ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. 'ಪುಷ್ಪ: ದಿ ರೂಲ್' ಸಿನಿಮಾವನ್ನು ಸುಕುಮಾರ್ ನಿರ್ದೇಶಿಸಿದ್ದು, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹಾದ್ ಫಾಸಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ರಶ್ಮಿಕಾ ಮಂದಣ್ಣ ಮುಂದಿನ ಚಿತ್ರಗಳು

ನಟಿ ರಶ್ಮಿಕಾ ಮಂದಣ್ಣ ಸಾಲು ಸಾಲು ಚಿತ್ರಗಳನ್ನು ತಮ್ಮ ತೆಕ್ಕೆಯಲ್ಲಿ ಹೊಂದಿದ್ದಾರೆ. ಅವರು ಬಹು ನಿರೀಕ್ಷಿತ ಬಾಲಿವುಡ್ ಚಿತ್ರ 'ಅನಿಮಲ್' ನಲ್ಲಿ ರಣಬೀರ್ ಕಪೂರ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದಲ್ಲಿ ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದಲ್ಲದೇ ರಶ್ಮಿಕಾ ಮಂದಣ್ಣ ಧನುಷ್ ಮತ್ತು ನಾಗಾರ್ಜುನ ಜೊತೆಗೆ 'ಡಿ 51' ಮತ್ತು ತೆಲುಗಿನಲ್ಲಿ 'ರೇನ್ಬೋ' ಸಿನಿಮಾಗಳಿವೆ.

More from Filmibeat

English summary
Rashmika Mandanna shares Pushpa 2 set pic on instagram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X