For Quick Alerts
  ALLOW NOTIFICATIONS  
  For Daily Alerts

  ವಿಡಿಯೋ: ರಶ್ಮಿಕಾ ಮಂದಣ್ಣ ಭೇಟಿ ಆಗಬೇಕೆಂದ ಈ ಪುಟಾಣಿ ಕ್ಯೂಟಿ ಯಾರು..?

  |

  ಟಾಲಿವುಡ್​ ಸ್ಟೈಲಿಶ್​​​ ಸ್ಟಾರ್​ ಅಲ್ಲು ಅರ್ಜುನ್​ ಹಾಗೂ ನ್ಯಾಶನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ' ಸಿನಿಮಾ ಬಾಕ್ಸ್​ ಆಫೀಸ್​ ಕಲೆಕ್ಷನ್​ ಸೇರಿದಂತೆ ಪ್ರತಿಯೊಂದರಲ್ಲೂ ದಾಖಲೆ ಬರೆದ ಚಿತ್ರವಾಗಿದೆ. ಈ ಸಿನಿಮಾದ ಪ್ರತಿಯೊಂದು ಹಾಡುಗಳು ಸಖತ್​ ಹಿಟ್​ ಆಗಿದ್ದು, ಎವರ್​ ಗ್ರೀನ್​ ಫೇವರೇಟ್​ ಹಾಡುಗಳ ಪಟ್ಟಿಗೆ 'ಪುಷ್ಪ' ಚಿತ್ರದ ಹಾಡುಗಳು ಸಹ ಸೇರಿಕೊಂಡಿದೆ.

  ಪುಷ್ಪ ಚಿತ್ರದ ರಾ..ರಾ.. ಸಾಮಿ ಹಾಡಂತೂ ತನ್ನದೇ ಕೇಳುಗರನ್ನು ಹೊಂದಿದ್ದು, ಎಳೆಯರಿಂದ ಹಿರಿಯವರವರೆಗೂ ಈ ಹಾಡಿಗೆ ಹಜ್ಜೆ ಹಾಕದವರಿಲ್ಲ. ಫೇಸ್​ಬುಕ್​, ಇನ್ಸ್ಟಾಗ್ರಾಮ್​ ರೀಲ್ಸ್​ನಲ್ಲೂ ರಾ..ರಾ..ಸಾಮಿ ಹಾಡು ಸಖತ್​ ವೈರಲ್​ ಆಗಿದೆ. ಇದೀಗ ಪುಟಾಣಿ ಬಾಲಕಿಯೊಬ್ಬಳು ರಾ..ರಾ..ಸಾಮಿ ಹಾಡಿಗೆ ಹೆಜ್ಜೆ ಹಾಕಿದ್ದು, ಈ ವಿಡಿಯೋ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಅವರನ್ನು ತಲುಪಿದೆ.

  ರಾ..ರಾ..ಸಾಮಿ ಹಾಡಿಗೆ ಸೊಂಟ ಬಳುಕಿಸಿದ ಬಾಲೆಯ ನೃತ್ಯಕ್ಕೆ​ ರಶ್ಮಿಕಾ ಮಂದಣ್ಣ ಮನಸೋತಿದ್ದು, ಆ ಬಾಲಕಿಯನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ನ್ಯಾಶನಲ್​ ಕ್ರಶ್ ಆಗಿರುವ ರಶ್ಮಿಕಾ ಮಂದಣ್ಣಗೆ ಲಕ್ಷಾಂತರ ಮಂದಿ ಅಭಿಮಾನಿಗಳಿದ್ದು, ಅವರನ್ನು ಭೇಟಿಯಾಗಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿರುತ್ತಾರೆ. ಆದರೆ ಇದೀಗ ಸ್ವತಃ ರಶ್ಮಿಕಾ ಅವರೇ ಪುಟ್ಟ ಬಾಲಕಿಯನ್ನು ಭೇಟಿಯಾಗಲು ಬಯಸಿದ್ದಾರೆ.

  ಶಾಲಾ ಬಾಲಕಿ ಎಲ್ಲಾ ವಿದ್ಯಾರ್ಥಿಗಳ ನಡುವೆ ರಾ..ರಾ.. ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋವನ್ನು ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ "ಮೇಡ್​ ಮೈ ಡೇ..ನಾನು ಮುದ್ದು ಬಾಲಕಿಯನ್ನು ಭೇಟಿಯಾಗಬೇಕು ಆದರೆ ಹೇಗೆ..?" ಎಂದು ಬರೆದುಕೊಂಡಿದ್ದಾರೆ. ರಶ್ಮಿಕಾ ಅವರ ಪೋಸ್ಟ್​ಗೆ ಅನೇಕ ಅಭಿಮಾನಿಗಳು ನಾವು ನಿಮ್ಮನ್ನು ಭೇಟಿಯಾಗಬೇಕು ಎಂದು ಉತ್ತರಿಸಿದ್ದಾರೆ.

  ಬಹುಭಾಷಾ ನಟಿಯಾಗಿರುವ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್​ನಲ್ಲೂ ಮಿಂಚುತ್ತಿದ್ದು, ಬಿಗ್​ ಬಿ ಅಮಿತಾಭ್​ ಬಚ್ಚನ್​ ಜೊತೆ ಕೂಡ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಮೆಗಾಸ್ಟಾರ್​ ಅಮಿತಾಭ್​ ಬಚ್ಚನ್​ ಜೊತೆ ನಟಿಸಿರುವ ಗುಡ್​ ಬೈ ಸಿನಿಮಾ ಟ್ರೈಲರ್​ ರಿಲೀಸ್​ ಆಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಗುಡ್​ ಬೈ ಚಿತ್ರ ಅಕ್ಟೋಬರ್ 07 ರಂದು ತೆರೆ ಕಾಣಲು ಸಿದ್ಧವಾಗಿದ್ದು, 2022 ಅಕ್ಟೋಬರ್​ 7ರಂದು ಸಿನಿಮಾ ಬಿಡುಗಡೆಯಾಗಲಿದೆ. ಇನ್ನು ಸಿದ್ದಾರ್ಥ್​ ಮಲ್ಹೋತ್ರಾ ಜೊತೆ ರಶ್ಮಿಕಾ ನಟಿಸಿರುವ 'ಮಿಷನ್​ ಮಜ್ನು' ಸಿನಿಮಾ ಕೂಡ ಶೀಘ್ರವೇ ತೆರೆ ಕಾಣಲಿದೆ.

  English summary
  Rashmika Mandanna shares cute video of school girl dancing to Pushpa movie hit song Saami Saami.
  Wednesday, September 14, 2022, 19:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X