'ಸರಿಲೇರು ನೀಕೆವ್ವರು' ಸಿನಿಮಾ ನೋಡಿ ರಶ್ಮಿಕಾ ತಂಗಿ ಹೇಳಿದ್ದೇನು?
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ನಟನೆಯ 'ಸರಿಲೇರು ನೀಕೆವ್ವರು' ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣ್ತಿದೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿರುವ ಕಾರಣ ಈ ಚಿತ್ರ ಕನ್ನಡ ಪ್ರೇಕ್ಷಕರಿಗೆ ಹತ್ತಿರವಾಗಿತ್ತು.
ನಿರೀಕ್ಷೆಯಂತೆ ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದ್ದು, ರಶ್ಮಿಕಾ ಮಂದಣ್ಣ ಪಾತ್ರ ವಿಶೇಷವಾಗಿ ಮೆಚ್ಚುಗೆ ಗಳಿಸಿಕೊಂಡಿದೆ. ಇನ್ನು 'ಸರಿಲೇರು ನೀಕೆವ್ವರು' ಸಿನಿಮಾ ನೋಡಿದ ರಶ್ಮಿಕಾ ಮಂದಣ್ಣ ಅವರ ತಂಗಿ ಬಹಳ ಸಂತಸ ಪಟ್ಟರಂತೆ.
ಮೊದಲ ದಿನ ರಶ್ಮಿಕಾ ಮಂದಣ್ಣ ಜೊತೆ ಸಿನಿಮಾ ನೋಡಿದ ಸಹೋದರಿ, ''ಮಹೇಶ್ ಬಾಬು ಕುರಿತು ಹೆಚ್ಚು ಖುಷಿಯಾದರಂತೆ. ಅವರನ್ನು ಭೇಟಿ ಮಾಡ್ಬೇಕು, ಅವರ ಜೊತೆ ಡ್ಯಾನ್ಸ್ ಮಾಡ್ಬೇಕು'' ಎಂದು ಸಂಭ್ರಮಿಸಿದ್ದಾರೆ.

ಈ ವಿಷ್ಯವನ್ನು ಖುದ್ದು ರಶ್ಮಿಕಾ ಅವರೇ 'ಸರಿಲೇರು ನೀಕೆವ್ವರು' ಚಿತ್ರದ ಸಕ್ಸಸ್ ಮೀಟ್ ನಲ್ಲಿ ಹೇಳಿಕೊಂಡಿದ್ದಾರೆ. ರಶ್ಮಿಕಾ ಅವರ ಈ ಮಾತು ಕೇಳಿ ಸ್ವತಃ ಮಹೇಶ್ ಬಾಬು ಮುಗುಳ್ನಗೆ ಬೀರಿದರು.
ಇನ್ನುಳಿದಂತೆ ರವಿ ಅನಿಲ್ ಪುಡಿ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ವಿಜಯಶಾಂತಿ, ಪ್ರಕಾಶ್ ರಾಜ್, ಸಂಗೀತಾ, ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ.


Click it and Unblock the Notifications











