ಪ್ರೇಮಿಗಳು ಕೈಕೈ ಹಿಡಿದುಕೊಂಡು ಹೋದರೆ ಕಲ್ಲು ಹೊಡೆಯಬೇಕು ಅನಿಸುತ್ತೆ ಎಂದ ರಶ್ಮಿಕಾ.!
Recommended Video

ಒಂದಲ್ಲಾ ಒಂದು ಕಾರಣಕ್ಕೆ ನಟಿ ರಶ್ಮಿಕಾ ಮಂದಣ್ಣ ಸದ್ದು-ಸುದ್ದಿ ಮಾಡುತ್ತಲೇ ಇರುತ್ತಾರೆ. ಸದ್ಯಕ್ಕೆ 'ಭೀಷ್ಮ' ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ಬಿಜಿಯಾಗಿರುವ ನಟಿ ರಶ್ಮಿಕಾ ಮಂದಣ್ಣ, ಒಂದಲ್ಲಾ ಒಂದು ಹೇಳಿಕೆಗಳನ್ನು ಕೊಟ್ಟು ಸೌಂಡ್ ಮಾಡುತ್ತಿದ್ದಾರೆ.
'ಭೀಷ್ಮ' ಚಿತ್ರದ ಪ್ರಮೋಷನ್ ಸಲುವಾಗಿ ಕೊಟ್ಟ ಸಂದರ್ಶನದಲ್ಲಿ, ನಟಿ ರಶ್ಮಿಕಾ ಮಂದಣ್ಣ ನಾಯಿ ಬಿಸ್ಕೆಟ್ ತಿಂದ ವಿಚಾರ ಬಹಿರಂಗವಾಗಿತ್ತು. ಇದೀಗ ಇದೇ 'ಭೀಷ್ಮ' ಚಿತ್ರದ ಸಂದರ್ಶನದಲ್ಲಿ ಪ್ರೇಮಿಗಳ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಕಣ್ಣು ಕೆಂಪಗೆ ಮಾಡಿಕೊಂಡಿದ್ದಾರೆ.
''ಪ್ರೇಮಿಗಳು ಕೈಕೈ ಹಿಡಿದುಕೊಂಡು ಹೋದರೆ ಕಲ್ಲು ಹೊಡೆಯಬೇಕು ಅನಿಸುತ್ತೆ'' ಅಂತ ಸಂದರ್ಶನದಲ್ಲಿ ಹೇಳಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಮುಂದೆ ಓದಿರಿ...

ಕಲ್ಲು ಹೊಡೆಯಬೇಕು.!
''ನನಗೆ ಪ್ರೇಮಿಗಳ ದಿನ ಅಂದ್ರೆ ಇಷ್ಟ ಆಗಲ್ಲ. ಪ್ರೇಮಿಗಳು ಕೈಕೈ ಹಿಡಿದುಕೊಂಡು ಹೋದರೆ, ರೊಮ್ಯಾನ್ಸ್ ಮಾಡ್ತಿದ್ರೆ, ಕಲ್ಲು ಹೊಡೆಯಬೇಕು ಅನಿಸುತ್ತದೆ'' ಎಂದು ಸಂದರ್ಶನವೊಂದರಲ್ಲಿ ನಟಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ಯಾರೂ ಪ್ರಪೋಸ್ ಮಾಡಿಲ್ಲ.!
''ಪ್ರೇಮಿಗಳ ದಿನ ನನಗೆ ಯಾರೂ ಪ್ರಪೋಸ್ ಮಾಡಿಲ್ಲ. ಮುಂಚೆನೂ ಅಷ್ಟೇ. ಈಗಲೂ ಹಾಗೆ. ನನಗೆ ಯಾರೂ ಲವ್ ಲೆಟರ್ ಕೂಡ ಬರೆದಿಲ್ಲ'' ಅಂತ ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ಕ್ರಶ್ ಆಗಿಲ್ಲ.!
ಇನ್ನೂ ರಶ್ಮಿಕಾಗೆ ಕ್ರಶ್ ಅನ್ನೋದು ಆಗಿಲ್ವಂತೆ. ಆದ್ರೆ, ಚಿಕ್ಕವಯಸ್ಸಿನಿಂದ ತಮಿಳು ನಟ ವಿಜಯ್ ಅಂದ್ರೆ ರಶ್ಮಿಕಾ ಮಂದಣ್ಣಗೆ ಸಿಕ್ಕಾಪಟ್ಟೆ ಇಷ್ಟವಂತೆ.

8 ವರ್ಷದ ನಂತರ ಮದುವೆ.!
ರಶ್ಮಿಕಾ ಮಂದಣ್ಣ ಇಷ್ಟೆಲ್ಲ ಹೇಳಿದ್ದನ್ನ ಕೇಳಿದ್ಮೇಲೆ, ''ನೀವು ಲವ್ ಮ್ಯಾರೇಜ್ ಆಗಲ್ಲ ಅನ್ಸುತ್ತೆ'' ಅಂತ ನಿರೂಪಕಿ ಕೇಳಿದರು. ಆಗ, ''ಈಗಿನ ಪರಿಸ್ಥಿತಿ ನೋಡಿದರೆ ಲವ್ ಮ್ಯಾರೇಜ್ ಆಗಲ್ಲ. ಅರೇಂಜ್ ಮ್ಯಾರೇಜ್ ಮಾಡಿಕೊಳ್ಳುವೆ. ಅದು 8 ವರ್ಷ ಕಳೆದ ಮೇಲೆ. 8 ವರ್ಷದ ನಂತರ ನಡೆಯುವ ಮದುವೆಗೆ ಈಗ ಯಾಕೆ ಮಾತು'' ಅಂತ ರಶ್ಮಿಕಾ ಮಂದಣ್ಣ ಹೇಳಿದ್ದಾರೆ.


Click it and Unblock the Notifications











