ಮತ್ತೆ ಸಿಕ್ಕಿಬಿದ್ದ ರಶ್ಮಿಕಾ ಮಂದಣ್ಣ; ಸಿಕ್ಕಾಪಟ್ಟೆ ಟ್ರೋಲ್

ರಶ್ಮಿಕಾ ಮಂದಣ್ಣ ಒಂದಿಲ್ಲೊಂದು ಕಾರಣಕ್ಕೆ ಪದೇ ಪದೆ ಸುದ್ದಿ ಆಗುತ್ತಾರೆ. ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳ ಮೂಲಕ ಆಕೆ ಕಮಾಲ್ ಮಾಡುತ್ತಿದ್ದಾರೆ. ಸದ್ಯ 'ಕುಬೇರ' ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆಕೆಯ ನಟನೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇತ್ತೀಚೆಗೆ 'ವಿ ದಿ ವುಮೆನ್' ಎಂಬ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಭಾಗಿ ಆಗಿದ್ದರು. ಈ ವೇಳೆ ತಮ್ಮ ಸಿನಿಕರಿಯರ್, ಕೆಲಸ ಮಾಡುವ ಜಾಗಗಳಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ಸಮಾಜಕ್ಕೆ ಕೆಟ್ಟ ಸಂದೇಶ ಕೊಡುವ ಪಾತ್ರಗಳಲ್ಲಿ ನಟಿಸುವುದಿಲ್ಲ. ತೆರೆಮೇಲೆ ಸ್ಮೋಕ್ ಮಾಡುವಂತೆ ಸನ್ನಿವೇಶಕ್ಕೆ ಒಪ್ಪಲ್ಲ ಎಂದು ಹೇಳಿದ್ದಾರೆ.

Rashmika Mandanna Speaks Out Against On-Screen Smoking Faces Trolls Over Old Bheeshma Clip

ರಶ್ಮಿಕಾ ಮಾತನಾಡಿ "ನಾನು ವೈಯಕ್ತಿಕ ಜೀವನದಲ್ಲಿ ಅಥವಾ ತೆರೆಮೇಲೆ ಸ್ಮೋಕಿಂಗ್ ಮಾಡುವುದಿಲ್ಲ. ಕಾರಣ ನನಗೆ ಸ್ಮೋಕಿಂಗ್ ಎನ್ನುವ ಕಾನ್ಸೆಪ್ಟ್ ಇಷ್ಟವಾಗುವುದಿಲ್ಲ. ಅದು ನನ್ನ ವೈಯಕ್ತಿಕ ಅಭಿಪ್ರಾಯ. ಒಂದು ವೇಳೆ ಫಿಲ್ಮ್ ಮೇಕರ್ಸ್ ಬಂದು ಚಿತ್ರದಲ್ಲಿ ಇಂತಹ ಪಾತ್ರದಲ್ಲಿ ನಟಿಸಬೇಕು ಎಂದು ಹೇಳಿದರೆ ಅದು ಎಂತಹ ದೊಡ್ಡ ಸಿನಿಮಾ ಆಗಿದ್ದರೂ ಬಿಟ್ಟುಬಿಡುತ್ತೇನೆ" ಎಂದಿದ್ದಾರೆ.

ಸದ್ಯ ಮಾತುಗಳು ವೈರಲ್ ಆಗುತ್ತಿದೆ. ಕೆಲವರು ಟ್ರೋಲ್ ಸಹ ಮಾಡುತ್ತಿದ್ದಾರೆ. ಈ ಹಿಂದೆ 'ಭೀಷ್ಮ' ಎಂಬ ಚಿತ್ರದ ಹಾಡಿನಲ್ಲಿ ರಶ್ಮಿಕಾ ವೈನ್ ಕುಡಿಯುವ, ಸಿಗರೇಟ್ ಸೇದುವ ಸನ್ನಿವೇಶಗಳಲ್ಲಿ ಕಾಣಿಸಿಕೊಂಡಿದ್ದರು. ಅದೇ ವೀಡಿಯೋ ತೋರಿಸಿ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಹೇಳುವುದು ಒಂದು, ಮಾಡುವುದು ಇನ್ನೊಂದು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಅಂದಹಾಗೆ ರಶ್ಮಿಕಾ ಧೂಮಪಾನ ಮಾಡುವ ಬಗ್ಗೆ ಮಾತನಾಡಿರುವುದು ಇದೇ ಮೊದಲಲ್ಲ. ಈ ಹಿಂದೆ ಅಭಿಮಾನಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಇದೇ ಪ್ರಶ್ನೆ ಕೇಳಿದ್ದರು. ದಿನಕ್ಕೆ ನೀವು ಎಷ್ಟು ಸಿಗರೇಟ್ ಸೇದುತ್ತಿರಾ? ಎಂದು ಪ್ರಶ್ನಿಸಿದ್ದರು. ಅದಕ್ಕೆ ರಿಪ್ಲೇ ಮಾಡಿದ್ದ ರಶ್ಮಿಕಾ ನನಗೆ ಸ್ಮೋಕಿಂಗ್ ಇಷ್ಟವಿಲ್ಲ, ನನ್ನ ಮುಂದೆ ಯಾರಾದರೂ ಸ್ಮೋಕ್ ಮಾಡಿದರೂ ಇಷ್ಟವಾಗಲ್ಲ ಎಂದಿದ್ದರು. ಆದರೆ ಆಗ 'ಭೀಷ್ಮ' ಸಿನಿಮಾ ಬಂದಿರಲಿಲ್ಲ.

ಸದ್ಯ 'ಭೀಷ್ಮ' ಸಿನಿಮಾ ಸಾಂಗ್ ವೀಡಿಯೋ ತೋರಿಸಿ ಟ್ರೋಲ್ ಮಾಡುವವರಿಗೆ ರಶ್ಮಿಕಾ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ. ಆ ದೃಶ್ಯದಲ್ಲಿ ಆಕೆ ಸೇದಿರುವುದು E- ಸಿಗರೇಟ್ ಎಂದು ಹೇಳುತ್ತಿದ್ದಾರೆ. ರಶ್ಮಿಕಾ ಏನೇ ಮಾತನಾಡಿದರೂ ಕೆಲವೊಮ್ಮೆ ಟೀಕೆ ಎದುರಾಗುತ್ತದೆ. ಟ್ರೋಲ್ ಅನುಭವಿಸುವಂತಾಗುತ್ತದೆ. ಇದೀಗ ಸ್ಮೋಕಿಂಗ್ ಬಗ್ಗೆ ಆಕೆಯ ಹೇಳಿಕೆ ಕೂಡ ಇದೇ ರೀತಿ ಸುದ್ದಿಯಾಗಿದೆ.

ಟ್ರೋಲ್ ವಿಚಾರ ಪಕ್ಕಕ್ಕಿಟ್ಟರೆ ರಶ್ಮಿಕಾ ಈಗ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಬಾಲಿವುಡ್‌ನಲ್ಲಿ ಕೂಡ ಬಹುಬೇಡಿಕೆಯ ನಟಿಯಾಗಿ ಗುರ್ತಿಸಿಕೊಂಡಿದ್ದಾರೆ. ಸ್ಟಾರ್ ನಟರ ಜೊತೆ ಮಿಂಚುತ್ತಿದ್ದಾರೆ. ಮಹಿಳಾ ಪ್ರಧಾನ ಚಿತ್ರದಲ್ಲಿ ಕಮಾಲ್ ಮಾಡುತ್ತಿದ್ದಾರೆ. ಆಕೆ ನಟಿಸುತ್ತಿರುವ 'ಮೈಸಾ' ಎಂಬ ಮತ್ತೊಂದು ಸಿನಿಮಾ ಘೋಷಣೆಯಾಗಿದೆ. 'ಥಮ', 'ದಿ ಗರ್ಲ್‌ ಫ್ರೆಂಡ್' ಎಂಬ ಮತ್ತೆರಡು ಸಿನಿಮಾಗಳ ಚಿತ್ರೀಕರಣ ನಡೀತಿದೆ.

'ಅನಿಮಲ್', 'ಪುಷ್ಪ'-2, 'ಛಾವ' ಈಗ ರಶ್ಮಿಕಾ ನಟನೆಯ 'ಕುಬೇರ' ಸಿನಿಮಾ ಕೂಡ ಬ್ಲಾಕ್‌ಬಸ್ಟರ್ ಹಿಟ್ ಲಿಸ್ಟ್ ಸೇರಿದೆ. ನಡುವೆ ಬಂದಿದ್ದ 'ಸಿಕಂದರ್' ಸಿನಿಮಾ ಮಾತ್ರ ಸೋತಿತ್ತು. ಬಾಲಿವುಡ್ ಟಾಪ್ ನಟಿಯರಿಗೆ ಕೂಡ ಕೊಡಗಿನ ಚೆಲುವೆ ಪೈಪೋಟಿ ಕೊಡುತ್ತಿದ್ದಾರೆ. ಮುಂದೆ ಮತ್ತಷ್ಟು ದೊಡ್ಡ ಸಿನಿಮಾಗಳಲ್ಲಿ ನಟಿಸುವ ಸುಳಿವು ಸಿಗುತ್ತಿದೆ.

More from Filmibeat

English summary
Rashmika Mandanna has gone viral after stating she refuses to smoke on screen, sparking online trolls who shared a scene from 'Bheeshma'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X