For Quick Alerts
  ALLOW NOTIFICATIONS  
  For Daily Alerts

  'ಪುಷ್ಪ'ರಾಜ್ ಪ್ರೇಯಸಿ ಶ್ರೀವಲ್ಲಿ ಸೀರೆಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್!

  |

  ಸ್ಟೈಲಿಶ್ ಸ್ಟೈಲ್ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿದ್ದು ಗೊತ್ತೇಯಿದೆ. ಸುಕುಮಾರ್ ನಿರ್ದೇಶನದ ಈ ಮಾಸ್ ಮಸಾಲಾ ಎಂಟರ್‌ಟೈನರ್ ಉತ್ತರ ಭಾರತದಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಚಿತ್ರದಲ್ಲಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಲುಕ್, ಕಾಸ್ಟ್ಯೂಮ್ ಎಲ್ಲವೂ ವಿಭಿನ್ನವಾಗಿತ್ತು. ಪುಷ್ಫ ರಾಜ್ ಮ್ಯಾನರಿಸಂ, ಸಾಂಗ್ಸ್, ಫೈಟ್ಸ್ ಎಲ್ಲವೂ ಸೂಪರ್. ಅಷ್ಟೇ ಅಲ್ಲ ಸಿಕ್ಕಾಪಟ್ಟೆ ಟ್ರೆಂಡ್ ಸೆಟ್ ಮಾಡಿತ್ತು. ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಧರಿಸಿದ್ದ ಕಾಸ್ಟ್ಯೂಮ್ಸ್ ಟ್ರೆಂಡಿಂಗ್ ಆಗಿವೆ.

  ಎಲ್ಲಾ ವಿಭಾಗಗಳಲ್ಲೂ ಪರ್ಫೆಕ್ಟ್ ಅನ್ನುವಂತಿದ್ದ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿ ಕೊಂಡಾಡಿದ್ದರು. ಚಿತ್ರದಲ್ಲಿ ರಶ್ಮಿಕಾ ಡೀ ಗ್ಲಾಮರಸ್ ರೋಲ್‌ನಲ್ಲಿ ಹಳ್ಳಿಹುಡುಗಿಯ ಪಾತ್ರದಲ್ಲಿ ಮಿಂಚಿದ್ದರು. ಶ್ರೀವಲ್ಲಿ ಪಾತ್ರಕ್ಕಾಗಿ ಕಾಸ್ಟ್ಯೂಮ್ ಡಿಸೈನರ್ ಪ್ರೀತಿಶೀಲ್ ಸಿಂಗ್ ಡಿಸೋಜಾ ವಿಭಿನ್ನವಾಗಿ ಕಾಸ್ಟ್ಯೂಮ್ಸ್ ಡಿಸೈನ್ ಮಾಡಿದ್ದರು. ಅದರಲ್ಲೂ 'ರಾ ರಾ ಸ್ವಾಮಿ' ಹಾಡಿನಲ್ಲಿ ರಶ್ಮಿಕಾ ಮಂದಣ್ಣ ತೊಟ್ಟಿದ್ದ ಹಸಿರು ಬ್ಲೌಸ್ ಹಾಗೂ ಕೆಂಪು ಸೀರೆ ಪ್ರೇಕ್ಷಕರ ಮನಸೂರೆಗೊಂಡಿತ್ತು. ಸದ್ಯ ಆ ಸೀರೆಗಳು 'ಶ್ರೀವಲ್ಲಿ ಸೀರೆಗಳು' ಎನ್ನುವ ಹೆಸರಿನಲ್ಲಿ ಮಾರುಕಟ್ಟೆ ಬಂದಿದೆ.

  ರಶ್ಮಿಕಾ- ಪೂಜಾನ ಮೀರಿಸೋ ಗಟ್ಟಿಗಿತ್ತಿ ಬಂದೇಬಿಟ್ಲು: ಎಲ್ಲೆಲ್ಲೂ ಈಗ ಮರಾಠಿ ಮಲ್ಲಿಗೆ ಘಮಲು!ರಶ್ಮಿಕಾ- ಪೂಜಾನ ಮೀರಿಸೋ ಗಟ್ಟಿಗಿತ್ತಿ ಬಂದೇಬಿಟ್ಲು: ಎಲ್ಲೆಲ್ಲೂ ಈಗ ಮರಾಠಿ ಮಲ್ಲಿಗೆ ಘಮಲು!

  ಮಹಿಳೆಯರು ಮುಂಬರುವ ಹಬ್ಬಗಳ ಸಂದರ್ಭದಲ್ಲಿ ಶ್ರೀವಲ್ಲಿ ಸೀರೆ ಉಡಲು ಬಯಸಿದ್ದಾರೆ. ರಾಜಸ್ತಾನದ ಬಟ್ಟೆ ಅಂಗಡಿಗಳಲ್ಲಿ 'ಶ್ರೀವಲ್ಲಿ ಸೀರೆಗಳು' ಮಾರಾಟವಾಗ್ತಿದೆ. ಅದರ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇನ್ನು ಈಗಾಗಲೇ 'ಪುಷ್ಫ ರಾಜ್' ಪಾತ್ರದಲ್ಲಿ ಅಲ್ಲು ಅರ್ಜುನ್ ಧರಿಸಿದ್ದ ಟೀಶರ್ಟ್ ಹಾಗೂ ಶರ್ಟ್‌ಗಳು ಮಾರುಕಟ್ಟೆಗೆ ಬಂದಿರುವುದು ಗೊತ್ತೇ ಇದೆ. ಮತ್ತೊಂದೆಡೆ, 'ಪುಷ್ಪ ರಾಜ್' ಫೋಟೊ ಪ್ರಿಂಟ್ ಮಾಡಿರುವ ಟೀಶರ್ಟ್‌ಗಳನ್ನು ಅಭಿಮಾನಿಗಳು ಧರಿಸಿದ್ದಾರೆ. ಶ್ರೀವಲ್ಲಿ ಸೀರೆಗಳು ಈಗ ಟ್ರೆಂಡ್ ಆಗುತ್ತಿವೆ.

  'ಪುಷ್ಪ' ದಿ ರೈಸ್ ಸಿನಿಮಾ 300 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿ ಗೆದ್ದಿದೆ. ಇದೀಗ 'ಪುಷ್ಪ' ದಿ ರೂಲ್ ಸಿನಿಮಾಗಾಗಿ ಅಭಿಮಾನಿಗಳು ಕಾಯುವಂತಾಗಿದೆ. ಇತ್ತೀಚೆಗಷ್ಟೆ ಸುಕುಮಾರ್ ಅಂಡ್ ಟೀಂ ಪೂಜೆ ನೆರವೇರಿಸಿ, ಚಿತ್ರೀಕರಣಕ್ಕೆ ಚಾಲನೆ ಕೊಟ್ಟಿದೆ. ಈ ವರ್ಷಾಂತ್ಯಕ್ಕೆ ಶೂಟಿಂಗ್ ಕಂಪ್ಲೀಟ್ ಮಾಡುವ ಲೆಕ್ಕಾಚಾರದಲ್ಲಿದೆ ಚಿತ್ರತಂಡ. ಮುಂದಿನ ವರ್ಷ ಸಮ್ಮರ್‌ ವೇಳೆಗೆ ಮತ್ತೆ ತೆರೆಮೇಲೆ 'ಪುಷ್ಪ'ರಾಜ್ ಆರ್ಭಟ ಶುರುವಾಗಿದೆ. ಚಿತ್ರದಲ್ಲಿ ಬನ್ನಿ ಹಾಗೂ ಫಹಾದ್ ಫಾಸಿಲ್ ಕಾದಾಟ ನೋಡಲು ಪ್ರೇಕ್ಷಕರು ಉತ್ಸುಕರಾಗಿದ್ದಾರೆ.

  ವಿಡಿಯೋ: ರಶ್ಮಿಕಾ ಮಂದಣ್ಣ ಭೇಟಿ ಆಗಬೇಕೆಂದ ಈ ಪುಟಾಣಿ ಕ್ಯೂಟಿ ಯಾರು..?ವಿಡಿಯೋ: ರಶ್ಮಿಕಾ ಮಂದಣ್ಣ ಭೇಟಿ ಆಗಬೇಕೆಂದ ಈ ಪುಟಾಣಿ ಕ್ಯೂಟಿ ಯಾರು..?

  ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ನಲ್ಲಿ ನವೀನ್ ಎರ್ನೇನಿ ಹಾಗೂ ರವಿಶಂಕರ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಎಲ್ಲರ ನಿರೀಕ್ಷೆ ಮೀರಿ 'ಪುಷ್ಪ' ಫಸ್ಟ್ ಪಾರ್ಟ್ ಸೂಪರ್ ಹಿಟ್ ಆಗಿದೆ. ಹಾಗಾಗಿ ಸೆಕೆಂಡ್ ಪಾರ್ಟ್‌ನ ಮತ್ತಷ್ಟು ಅದ್ಧೂರಿಯಾಗಿ ಅಷ್ಟೇ ರೋಚಕವಾಗಿ ತೆರೆಗೆ ತರುವ ಪ್ರಯತ್ನ ನಡೀತಿದೆ. ಮತ್ತಷ್ಟು ಹೊಸ ಕಲಾವಿದರು ಚಿತ್ರಕ್ಕೆ ಸೇರಿಕೊಳ್ಳಿದ್ದಾರೆ. ದೇವಿಶ್ರೀ ಪ್ರಸಾದ್ ಮತ್ತಷ್ಟು ಬಿಂದಾಸ್ ನಂಬರ್ಸ್ ಕಂಪೋಸ್ ಮಾಡ್ತಿದ್ದು, ಈ ಬಾರಿ ಮತ್ತೆ ಸ್ಟೈಲಿಶ್ ಸ್ಟಾರ್ ಜೊತೆ ಕೊಡಗಿನ ಕುವರಿ ರಶ್ಮಿಕಾ ಕುಣಿದು ಕುಪ್ಪಳಿಸಲಿದ್ದಾರೆ. ಸೀಕ್ವೆಲ್‌ ಸಿನಿಮಾ ಬಜೆಟ್ ಮಾತ್ರವಲ್ಲ ಕಲಾವಿದರು ಹಾಗೂ ತಂತ್ರಜ್ಞರ ಸಂಭಾವನೆಯೂ ಹೆಚ್ಚಾಗಿದೆ.

  English summary
  Rashmika Mandanna Srivalli Inspired Sarees Arrive In Jaipur Markets Photos Goes Viral. Know More.
  Thursday, September 15, 2022, 21:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X