ಕೋಟಿ ಕೋಟಿ ಹಣದ ದೊಡ್ಡ ಸೂಟ್‌ಕೇಸ್ ಹೊತ್ತೊಯ್ದ ರಶ್ಮಿಕಾ ಮಂದಣ್ಣ!
ಟೈಟಲ್ ನೋಡಿ ಕನ್‌ಫ್ಯೂಸ್ ಆಗಬೇಡಿ. ರಶ್ಮಿಕಾ ಮಂದಣ್ಣ ಹಣದ ದೊಡ್ಡ ಸೂಟ್‌ಕೇಸ್ ಹೊತ್ತು ಹೋಯ್ದಿದ್ದು ನಿಜವೇ, ಆದರೆ ನಿಜವಾಗಿ ಅಲ್ಲ. ತಮಿಳಿನ 'ಕುಬೇರ' ಚಿತ್ರದಲ್ಲಿ. ಕೊಡಗಿ ಕುವರಿ ರಶ್ಮಿಕಾ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ 'ಕುಬೇರ' ಚಿತ್ರದಲ್ಲಿ ಆಕೆಯ ಪಾತ್ರ ಪರಿಚಯಿಸುವ ಟೀಸರ್ ರಿವೀಲ್ ಆಗಿದೆ.
ಶೇಖರ್ ಕಮ್ಮುಲ ನಿರ್ದೇಶನದ 'ಕುಬೇರ' ಸಿನಿಮಾ ಏಕಕಾಲಕ್ಕೆ ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ನಿರ್ಮಾಣವಾಗ್ತಿದೆ. ಚಿತ್ರದಲ್ಲಿ ಧನುಷ್ ಹೀರೊ ಆಗಿ ನಟಿಸುತ್ತಿದ್ದಾರೆ. ತೆಲುಗು ನಟ ನಾಗಾರ್ಜುನ ಕೂಡ ಮುಖ್ಯವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಬಹಳ ಅದ್ಧೂರಿಯಾಗಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಇತ್ತೀಚೆಗೆ ಮುಂಬೈನಲ್ಲಿ ಸಣ್ಣ ಶೆಡ್ಯೂಲ್ ಮುಗಿಸಿದೆ ಚಿತ್ರತಂಡ.

ಕೆಂಪು ಬಣ್ಣದ ಸಲ್ವಾರ್ ತೊಟ್ಟ ರಶ್ಮಿಕಾ ಮಂದಣ್ಣ ಹಾರೆ, ಸನಿಕೆ ಹಿಡಿದು ರಾತ್ರಿ ನಿರ್ಜನ ಪ್ರದೇಶಕ್ಕೆ ಬರುವುದರೊಂದಿಗೆ ಟೀಸರ್ ಶುರುವಾಗುತ್ತದೆ. ಹೀಗೆ ಬಂದ ರಶ್ಮಿಕಾ ಒಂದು ಜಾಗದಲ್ಲಿ ಅಗೆಯಲು ಆರಂಭಿಸುತ್ತಾರೆ. ಒಳಗೆ ನಿಧಿ ರೀತಿ ದೊಡ್ಡ ಟ್ರಾಲಿ ಸೂಟ್‌ಕೇಸ್ ಸಿಗುತ್ತದೆ. ಅದನ್ನು ತೆರೆದು ನೋಡಿದ್ದಾಗ ಕಂತೆ ಕಂತೆ ಹಣ ಸಿಗುತ್ತದೆ. ಇದನ್ನು ನೋಡಿ ಖುಷಿಯಾಗುವ ಆಕೆ ಹಣಕ್ಕೆ ಕಣ್ಣೊತ್ತಿಕೊಂಡು ಮುಗಿಯುತ್ತಾಳೆ. ಬಳಿಕ ಸೂಟ್‌ಕೇಸ್ ಮುಚ್ಚಿ ಎಳೆದುಕೊಂಡು ಹೋಗುವುದರೊಂದಿಗೆ ಟೀಸರ್ ಮುಕ್ತಾಯವಾಗುತ್ತದೆ.
ದೇವಿಶ್ರೀ ಪ್ರಸಾದ್ ಮ್ಯೂಸಿಕ್ ಚಿತ್ರಕ್ಕಿದೆ. ಶ್ರೀ ವೆಂಕಟೇಶ್ವರ ಸಿನಿಮಾಸ್ ಹಾಗೂ ಅಮಿಗೋಸ್ ಬ್ಯಾನರ್‌ನಲ್ಲಿ 'ಕುಬೇರ' ಸಿನಿಮಾ ನಿರ್ಮಾಣವಾಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನಗಳು ನಡೆಯುತ್ತಿದೆ. ರಾಯಲ ಸೀಮೆಯ ಕರ್ನೂಲು ಪ್ರಾಂತ್ಯದಲ್ಲಿ 'ಕುಬೇರ' ಸಿನಿಮಾ ಕತೆ ಸಾಗಲಿದೆ. ಹಾಗಾಗಿ ರಶ್ಮಿಕಾ ಅಲ್ಲಿನ ಭಾಷಾ ಶೈಲಿಯನ್ನು ಕಲಿತು ನಟಿಸುತ್ತಿದ್ದಾರೆ. ಈ ಹಿಂದೆ 'ಪುಷ್ಪ' ಚಿತ್ರದಲ್ಲಿ ಇದನ್ನು ಟ್ರೈ ಮಾಡಿದ್ದರು.
'ವಾಥಿ' ಎನ್ನುವ ತಮಳು, ತೆಲುಗು ಚಿತ್ರದಲ್ಲಿ ನಟಿಸಿ ಧನುಷ್ ಕಳೆದ ವರ್ಷ ಗೆದ್ದಿದ್ದರು. ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಅದೇ ಲೆಕ್ಕಾಚಾರದಲ್ಲಿ 'ಕುಬೇರ' ಚಿತ್ರವನ್ನು ಕಟ್ಟಿಕೊಡಲಾಗುತ್ತಿದೆ. ಕೆಲ ದಿನಗಳ ಹಿಂದೆ ತಿರುಪತಿಯಲ್ಲಿ ಚಿತ್ರೀಕರಣದ ವೇಳೆ ಸಮಸ್ಯೆ ಎದುರಾಗಿತ್ತು. ತಿರುಪತಿಯ ಅಲಪಿರಿ ಗರುಡ ವೃತ್ತದಲ್ಲಿ ಸಿನಿಮಾ ಚಿತ್ರೀಕರಣದ ನಡೆಸಿದ್ದರಿಂದ ಟ್ರಾಫಿಕ್ ಜಾಮ್ ಆಗಿ ಸಮಸ್ಯೆ ಎದುರಾಗಿತ್ತು.

ಸದ್ಯ ರಶ್ಮಿಕಾ ಅತ್ತ ಬಾಲಿವುಡ್, ಇತ್ತ ಕಾಲಿವುಡ್, ಟಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. 'ಪುಷ್ಪ-2' ರಿಲೀಸ್ ಪೋಸ್ಟ್‌ಪೋನ್ ಆಗಿದೆ. ರೈನ್‌ಬೋ ಹಾಗೂ 'ದಿ ಗರ್ಲ್ ಫ್ರೆಂಡ್' ರೀತಿಯ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಚಾವ' ಎನ್ನುವ ಬಾಲಿವುಡ್ ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ರಾಮ್‌ಚರಣ್ ಮುಂದಿನ ಚಿತ್ರದಲ್ಲೂ ನಾಯಕಿಯಾಗಿ ರೋಶ್ ನಟಿಸೋ ಬಗ್ಗೆ ಗುಸುಗುಸು ಶುರುವಾಗಿದೆ. ಈ ಸುದ್ದಿ ಕೇಳಿ ಅಭಿಮಾನಿಗಳಂತೂ ಖುಷಿಯಾಗಿದ್ದಾರೆ.
ಸಿನಿಮಾಗಳಲ್ಲಿ ಸಾಕಷ್ಟು ಬ್ಯುಸಿಯಾಗಿದ್ದರೂ ರಶ್ಮಿಕಾ ಇತ್ತೀಚೆಗೆ ಸ್ನೇಹಿತೆಯ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಹುಟ್ಟೂರಿಗೆ ಆಗಮಿಸಿದ್ದರು. ಸೀರೆ ಉಟ್ಟು ಮಿರಿಮಿರಿ ಮಿಂಚಿದ್ದರು. ಈ ವೇಳೆ ಕೊಡವ ಭಾಷೆಯಲ್ಲೇ ಕೊಡವ ಸಮುದಾಯದ ಬಗ್ಗೆ ಆಕೆ ಮಾತನಾಡಿದ್ದ ವೀಡಿಯೋ ವೈರಲ್ ಆಗಿತ್ತು. ಆದರೆ ಅದು ಯಾವ ಭಾಷೆ ಎಂದು ಅರ್ಥವಾಗದೇ ಪರಭಾಷಾ ಅಭಿಮಾನಿಗಳಿಗೆ ಗೊಂದಲವಾಗಿತ್ತು.


Click it and Unblock the Notifications











