For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಮಂದಣ್ಣರನ್ನು ಒತ್ತಡಕ್ಕೆ ತಳ್ಳಿದ 'ಪುಷ್ಪ' ಸಿನಿಮಾ

  By ರವೀಂದ್ರ ಕೊಟಕಿ
  |

  ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ 'ಪುಷ್ಪ' ಡಿಸೆಂಬರ್ 17ರಂದು ವಿಶ್ವದಾದ್ಯಂತ ದೊಡ್ಡಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಅಲ್ಲು ಅರ್ಜುನ್ -ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರವನ್ನು ಸುಕುಮಾರ್ ನಿರ್ದೇಶಿಸಿದ್ದಾರೆ. ಚಿತ್ರ ಈಗಾಗಲೇ ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

  ಭಾರತೀಯ ಸಿನಿಮಾರಂಗ ಎದುರು ನೋಡುತ್ತಿರುವ ಕೆಲವೇ ಕೆಲವು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ 'ಪುಷ್ಪ' ಕೂಡ ಒಂದು. "ಪುಷ್ಪ' ಚಿತ್ರತಂಡ ಈಗಾಗಲೇ ದೊಡ್ಡಮಟ್ಟದಲ್ಲಿ ಚಿತ್ರದ ಪ್ರಮೋಷನ್ ಕಾರ್ಯಗಳನ್ನು ನಡೆಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲು ಮುಂದಾಗಿದ್ದಾರೆ.

  ಅಲ್ಲದೆ ಚಿತ್ರವನ್ನು ಗ್ರಾಂಡ್ ಸ್ಕೇಲ್‌ನಲ್ಲಿ ಡಿಸೆಂಬರ್ 17 ರಂದು ಬಿಡುಗಡೆಗೊಳಿಸಲು ಎಲ್ಲಾ ಥರಹದ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

  ಇನ್ನು 'ಪುಷ್ಪ' ಚಿತ್ರದ ವಿಚಾರಕ್ಕೆ ಬರುವುದಾದರೆ. ಚಿತ್ರ ಭಾರಿ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿದ್ದು, ಎರಡು ಭಾಗಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರವುನಲ್ಲಮಲ್ಲ ಕಾಡಿನಲ್ಲಿ ಬೆಳೆಯುವ ಅತಿ ವಿಶಿಷ್ಟವಾದ ಮತ್ತು ಜಗತ್ತಿನಾದ್ಯಂತ ಹೆಚ್ಚಿನ ಬೇಡಿಕೆ ಇರುವ ರಕ್ತಚಂದನ (ರೆಡ್ ಸ್ಯಾಂಡಲ್)ಕಳ್ಳಸಾಗಾಣಿಕೆಯ ಹಿನ್ನೆಲೆಯನ್ನು ಹೊಂದಿದೆ. ಚಿತ್ರದ ಮೊದಲ ಭಾಗ 'ಪುಷ್ಪ- ದಿ ರೈಸ್' ಪುಷ್ಪ ರಾಜ್ ರೆಡ್ ಸ್ಯಾಂಡಲ್ ದುನಿಯಾದೊಳಗೆ ಎಂಟ್ರಿಯಾಗುವ ಕಥೆ, ಮತ್ತು ಅದರ ಹಿನ್ನಲೆಯನ್ನು ಹೊಂದಿರುತ್ತದೆ ಎನ್ನಲಾಗಿದೆ. ಡಿಸೆಂಬರ್ 17ರಂದು ಪುಷ್ಪದ ಮೊದಲನೆ ಭಾಗ ಬಿಡುಗಡೆಯಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್, ಚಿತ್ರದ ಪಾತ್ರಗಳ ಫಸ್ಟ್ ಲುಕ್ ಮತ್ತು ಮೊದಲ ಹಾಡು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಹಲ್ಚಲ್ ಉಂಟುಮಾಡಿದೆ. ಅಲ್ಲದೆ 'ಪುಷ್ಪ" ಚಿತ್ರದ ಅಭಿಮಾನಿಗಳು ಕಾತರದಿಂದ ಚಿತ್ರದ ಬಿಡುಗಡೆಗಾಗಿ ಎದುರು ನೋಡುವಂತೆ ಮಾಡಿದೆ.

  ಅಕ್ಟೋಬರ್ 13ಕ್ಕೆ ಚಿತ್ರದ ಎರಡನೇ ಸಿಂಗಲ್ ಶ್ರೀವಳ್ಳಿ

  ಅಕ್ಟೋಬರ್ 13ಕ್ಕೆ ಚಿತ್ರದ ಎರಡನೇ ಸಿಂಗಲ್ ಶ್ರೀವಳ್ಳಿ

  ಚಿತ್ರದ ಪ್ರಮುಖ ಆಕರ್ಷಣೆಯ ಬಿಂದುವಾಗಿರುವ ನಟಿ ರಶ್ಮಿಕಾ ಮಂದಣ್ಣ ಅಭಿನಯಿಸಿರುವ 'ಶ್ರೀವಳ್ಳಿ' ಪಾತ್ರದ ಮೊದಲ ಲುಕ್ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಅನೇಕರು ಈ ಲುಕ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತೆ ಕೆಲವರು ಇದನ್ನು ಟ್ರೋಲ್ ಮಾಡಿದ್ದಾರೆ. ಇನ್ನು 'ಪುಷ್ಪ' ಚಿತ್ರದಲ್ಲಿ ಶ್ರೀವಳ್ಳಿ ಮೇಲೆ ಚಿತ್ರಿಸಲಾಗಿರುವ ಹಾಡನ್ನು ಅಕ್ಟೋಬರ್ 13 ರಂದು ಬಿಡುಗಡೆ ಮಾಡುವುದಾಗಿ ಅಧಿಕಾರಯುತವಾಗಿ ಚಿತ್ರತಂಡ ಘೋಷಣೆ ಮಾಡಿದೆ. ಇದರ ಬಗ್ಗೆ ಅಧಿಕೃತವಾದ ಟ್ವೀಟ್ ಮಾಡಿರುವ ಚಿತ್ರತಂಡ 'ಪುಷ್ಪ ರಾಜ್ ಮನಸ್ಸನ್ನು ಕದ್ದಿದ್ದಾಳೆ. ಈಗ ನಮ್ಮ ಉಸಿರನ್ನೇ ನಿಲ್ಲಿಸಲು ಬರುತ್ತಿದ್ದಾಳೆ ಶ್ರೀವಳ್ಳಿ' ಅಂತ ಹಾಡಿನ ಬಗ್ಗೆ ಹೇಳಿಕೊಂಡು ಬಂದಿದ್ದಾರೆ.

  ನಾಲ್ಕು ಭಾಷೆಯಲ್ಲಿ ಸಿದ್ ಶ್ರೀರಾಮ್ ಹಾಡಿದ್ದಾರೆ

  ನಾಲ್ಕು ಭಾಷೆಯಲ್ಲಿ ಸಿದ್ ಶ್ರೀರಾಮ್ ಹಾಡಿದ್ದಾರೆ

  ಇದೇ ಅಕ್ಟೋಬರ್ 13ರಂದು ಬಿಡುಗಡೆಯಾಗುತ್ತಿರುವ ಶ್ರೀವಳ್ಳಿ, 'ಪುಷ್ಪ' ಎರಡನೇ ಸಿಂಗಲ್ ನ ಮತ್ತೊಂದು ವಿಶೇಷವೆಂದರೆ ಈ ಹಾಡನ್ನು ಖ್ಯಾತ ಗಾಯಕ ಸಿದ್ ಶ್ರೀರಾಮ್ ತೆಲುಗು, ತಮಿಳು, ಕನ್ನಡ,ಮಲಯಾಳಂ ನಾಲ್ಕು ಭಾಷೆಗಳಿಗೆ ಹಾಡಿದ್ದಾರೆ. ನಾಲ್ಕು ಭಾಷೆಗಳಲ್ಲಿ ಒಂದೇ ಗಾಯಕನ ಕಂಠಸಿರಿಯಲ್ಲಿ ಮೂಡಿ ಬಂದಿರುವುದರಿಂದ ಯಾವ ಭಾಷೆಯಲ್ಲಿ ಅತ್ಯುತ್ತಮವಾಗಿ ಸಿದ್ಧ ಗಾಯನ ಮಾಡಿರಬಹುದು ಅಂತ ಅಭಿಮಾನಿಗಳು ಯೋಚಿಸುತ್ತಿದ್ದಾರೆ.

  ಆ ಸಮಯದಲ್ಲಿ ನಾನು ತುಂಬಾ ಒತ್ತಡದಲ್ಲಿದ್ದೆ

  ಆ ಸಮಯದಲ್ಲಿ ನಾನು ತುಂಬಾ ಒತ್ತಡದಲ್ಲಿದ್ದೆ

  'ಪುಷ್ಪ' ಚಿತ್ರದಲ್ಲಿ ನಟಿಸಿದ ಅನುಭವವನ್ನು ರಶ್ಮಿಕಾ ಮಂದಣ್ಣ ಇತ್ತೀಚೆಗೆ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. "ಇದು ನನ್ನ ಮೊದಲ ಪ್ಯಾನ್-ಇಂಡಿಯಾ ಪ್ರಾಜೆಕ್ಟ್ ಆಗಿರುವುದರಿಂದ, ಚಿತ್ರದ ಬಿಡುಗಡೆ ದಿನಾಂಕದ ಘೋಷಣೆಯಿಂದ ತಕ್ಷಣವೇ ಹೆದರಿದ್ದೆ. ಚಿತ್ರವನ್ನು ನನ್ನ ಪಾತ್ರವನ್ನು ಜನ ಹೇಗೆ ಸ್ವೀಕರಿಸುತ್ತಾರೆ ಅಂತ ಬಹಳ ಹೆದರಿಕೆ ಮತ್ತು ಒತ್ತಡದಲ್ಲೇ ಸಿನಿಮಾದ ಬಿಡುಗಡೆಗಾಗಿ ಎದುರು ನೋಡುತ್ತಿದ್ದೆ. ಆದರೆ ಕೊರೊನಾದಿಂದಾಗಿ ಚಿತ್ರದ ಬಿಡುಗಡೆಯನ್ನು ಮುಂದೂಡಲಾಯಿತು. ಚಿತ್ರದಲ್ಲಿ ನನ್ನ ಪಾತ್ರ ಬಹಳ ವಿಶೇಷವಾಗಿದೆ" ಎಂದು ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

  ವೃತ್ತಿ ಜೀವನದಲ್ಲಿ ಮೈಲಿಗಲ್ಲಾಗಲಿದೆ: ರಶ್ಮಿಕಾ

  ವೃತ್ತಿ ಜೀವನದಲ್ಲಿ ಮೈಲಿಗಲ್ಲಾಗಲಿದೆ: ರಶ್ಮಿಕಾ

  'ಶ್ರೀವಳ್ಳಿ ಪಾತ್ರವು ಸಾಕಷ್ಟು ವ್ಯಾಪ್ತಿಯನ್ನು ಹೊಂದಿರುತ್ತದೆ. ಈ ಚಿತ್ರವು ನನ್ನ ವೃತ್ತಿ ಜೀವನದಲ್ಲಿ ಒಂದು ಮೈಲಿಗಲ್ಲಾಗಲಿದೆ" ಎಂದು ಇದೇ ಸಂದರ್ಭದಲ್ಲಿ ರಶ್ಮಿಕಾ ಹೇಳಿಕೊಂಡಿದ್ದಾರೆ. ಎಲ್ಲರಂತೆ, ತಾನು ಸಿನಿಮಾದ 'ಶ್ರೀವಳ್ಳಿ'' ಹಾಡಿಗೆ ಎದುರು ನೋಡುತ್ತಿದ್ದೇನೆ ಎಂದು ಹೇಳಿದಳು. ಚಿತ್ರದಲ್ಲಿ ಖಳನಾಯಕರಾಗಿ ಫಹಾದ್ ಫಾಸಿಲ್, ಧನಂಜಯ್ ನಟಿಸಿದ್ದು, ಸುನೀಲ್ ಮತ್ತು ಅನಸೂಯಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ದೇವಿ ಶ್ರೀ ಪ್ರಸಾದ್ ಸಂಗೀತ ನೀಡುತ್ತಿದ್ದಾರೆ.

  English summary
  Actress Rashmika Mandanna talks about her upcoming movie Pushpa. She said this is my first pan India project I am little nervous.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X