ಅಭಿಮಾನಿ ಮಾತಿಗೆ ನಾಚಿ ನೀರಾದ ರಶ್ಮಿಕಾ! ಅಂಥಹದ್ದೇನಂದ ಆ ಚಾಲಾಕಿ ಅಭಿಮಾನಿ
ನಟಿ ರಶ್ಮಿಕಾ ಮಂದಣ್ಣ ತಮ್ಮ ಸಿನಿಮಾಗಳಷ್ಟೆ ಅವರ ಖಾಸಗಿ ಜೀವನದ ಕುರಿತಾಗಿಯೂ ಸುದ್ದಿಯಾಗುತ್ತಿರುತ್ತಾರೆ. ಅದರಲ್ಲಿಯೂ ರಶ್ಮಿಕಾರ ಲವ್ ಲೈಫ್ ಬಗ್ಗೆ ಆಗಾಗ್ಗೆ ಸುದ್ದಿಗಳು ಪ್ರಕಟವಾಗುತ್ತಲೇ ಇರುತ್ತವೆ.
ಇದೀಗ ರಶ್ಮಿಕಾ ಮಂದಣ್ಣ ತಮ್ಮ ಅಭಿಮಾನಿಯೊಬ್ಬನಿಗೆ ಪ್ರೇಮ ನಿವೇದನೆ ಹೇಗೆ ಮಾಡುವುದೆಂದು ಹೇಳಿ ಕೊಟ್ಟಿದ್ದಾರೆ. ಆದರೆ ಆ ಚಾಲಾಕಿ ಅಭಿಮಾನಿ ರಶ್ಮಿಕಾರನ್ನೇ ಇಕ್ಕಟ್ಟಿಗೆ ಸಿಲುಕಿಸಿಬಿಟ್ಟಿದ್ದಾನೆ.
ಯಾವುದೋ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ರಶ್ಮಿಕಾ ಮಂದಣ್ಣ ಅವರನ್ನು ಅಭಿಮಾನಿಯೊಬ್ಬ, ಮೇಡಂ, ತೆಲುಗಿನಲ್ಲಿ ಪ್ರೇಮನಿವೇದನೆ ಮಾಡುವುದು ಅಥವಾ ಪ್ರೊಪೋಸ್ ಮಾಡುವುದು ಹೇಗೆ ಹೇಳಿಕೊಡಿ ಎಂದು ಕೇಳಿದ್ದಾನೆ. ಪಾಪ ಅಭಿಮಾನಿ ಸಹಾಯ ಕೇಳುತ್ತಿದ್ದಾನೆಂದು ಕೊಂಡ ನಟಿ ರಶ್ಮಿಕಾ, ತೆಲುಗಿನಲ್ಲಿ 'ಮೀರು ಚಾಲಾ ಮಂಚಿಗಾ ಕನಿಪಿಸ್ತುನ್ನಾವು' (ನೀನು ತುಂಬಾ ಚೆನ್ನಾಗಿ ಕಾಣುತ್ತಿದ್ದೀಯ) ಎಂದು ಹೇಳುವಂತೆ ಹೇಳಿದ್ದಾರೆ ರಶ್ಮಿಕಾ.

ಆದರೆ ರಶ್ಮಿಕಾ ತೆಲುಗಿನಲ್ಲಿ ಈ ಸಾಲು ಹೇಳಿದ ಕೂಡಲೆ, ಆ ಚಾಲಾಕಿ ಅಭಿಮಾನಿ 'ಸೇಮ್ ಟು ಯು' ಎಂದು ಬಿಟ್ಟಿದ್ದಾನೆ, ಅಭಿಮಾನಿಯ ಚಾಲಾಕಿ ಉತ್ತರದಿಂದ ಗಾಬರಿಯಾದ ರಶ್ಮಿಕಾ, ಬಳಿಕ ನಾಚಿಕೊಂಡು, ಅಭಿಮಾನಿಯ ಬುದ್ಧಿವಂತಿಕೆಗೆ ಒಂದು ನಗೆ ನಕ್ಕು ಅಲ್ಲಿಂದ ತೆರಳಿದ್ದಾರೆ.
ಚಾಲಾಕಿ ಅಭಿಮಾನಿ ತನ್ನ ನೆಚ್ಚಿನ ನಟಿಯನ್ನು ಟ್ರಿಕ್ ಮಾಡಿದ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಅಂದಹಾಗೆ ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ಕೆಲವು ವರ್ಷಗಳಿಂದಲೂ ಹರಿದಾಡುತ್ತಿದೆ. ಇಬ್ಬರೂ ಈ ಸುದ್ದಿಗಳನ್ನು ನಿರಾಕರಿಸಿದ್ದಾರಾದರು, ಇಬ್ಬರೂ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ, ಇತ್ತೀಚೆಗೆ ಒಟ್ಟಿಗೆ ವಿದೇಶಿ ಪ್ರವಾಸಕ್ಕೂ ಹೋಗಿದ್ದರು.
ಸಿನಿಮಾ ವಿಷಯಕ್ಕೆ ಮರಳುವುದಾದರೆ, ರಶ್ಮಿಕಾ ಮಂದಣ್ಣ ಇದೀಗ ಪ್ಯಾನ್ ಇಂಡಿಯಾ ನಟಿಯಾಗಿದ್ದು, ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್‌ನಲ್ಲಿ ರಣ್ಬೀರ್ ಕಪೂರ್ ನಟನೆಯ 'ಅನಿಮಲ್' ಸಿನಿಮಾದಲ್ಲಿ ರಶ್ಮಿಕಾ ನಾಯಕಿ. ತೆಲುಗಿನ 'ಪುಷ್ಪ 2' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಹೊಸ ಸಿನಿಮಾ ಒಂದನ್ನು ರಶ್ಮಿಕಾ ಒಪ್ಪಿಕೊಂಡಿದ್ದಾರೆ. ಹೊಸ ಅವಕಾಶವೊಂದು ರಶ್ಮಿಕಾರನ್ನು ಅರಸಿ ಬಂದಿದೆ ಎನ್ನಲಾಗುತ್ತಿದೆ.


Click it and Unblock the Notifications











