For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ಕುಟುಂಬದ ಯುವ ಕುಡಿಯೊಂದಿಗೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್!

  |

  ಅವಕಾಶಗಳನ್ನು ಬಾಚಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ, ತೆಲುಗು ಸಿನಿಮಾ ಉದ್ಯಮದ ಪ್ರಸ್ತುತ ಭಾರಿ ಬೇಡಿಕೆಯಲ್ಲಿರುವ ನಟಿ.

  ವಿಜಯ್ ದೇವರಕೊಂಡ ಬಳಿಕ ಮಹೇಶ್ ಬಾಬು, ನಿತಿನ್, ನಾನಿ-ನಾಗಾರ್ಜುನ, ಅಲ್ಲು ಅರ್ಜುನ್ ಹೀಗೆ ಹಲವು ಸ್ಟಾರ್ ನಟರ ಸಿನಿಮಾಗಳಿಗೆ ಮೊದಲ ಆಯ್ಕೆ ಆಗಿದ್ದಾರೆ ರಶ್ಮಿಕಾ ಮಂದಣ್ಣ.

  ಮೆಗಾಸ್ಟಾರ್ ಚಿರಂಜೀವಿ 'ಆಚಾರ್ಯ' ಸಿನಿಮಾದಲ್ಲಿ ಕನ್ನಡದ ನಟಿ?ಮೆಗಾಸ್ಟಾರ್ ಚಿರಂಜೀವಿ 'ಆಚಾರ್ಯ' ಸಿನಿಮಾದಲ್ಲಿ ಕನ್ನಡದ ನಟಿ?

  ಇದೀಗ ರಶ್ಮಿಕಾ ಮಂದಣ್ಣ ಬಗ್ಗೆ ಎರಡೆರಡು ಹೊಸ ಸುದ್ದಿ ತೆಲುಗು ಸಿನಿಉದ್ಯಮದಿಂದ ಹೊರಬಿದ್ದಿದೆ. ಮೊದಲನೇಯದಾಗಿ ಮೆಗಾಸ್ಟಾರ್ ಚಿರಂಜೀವಿ ನಟನೆಯ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ರಾಮ್‌ಚರಣ್ ಗೆ ನಾಯಕಿ ಆಗಲಿದ್ದಾರಂತೆ.

  ಅಖಿಲ್ ಸಿನಿಮಾಕ್ಕೆ ರಶ್ಮಿಕಾ ನಾಯಕಿ

  ಅಖಿಲ್ ಸಿನಿಮಾಕ್ಕೆ ರಶ್ಮಿಕಾ ನಾಯಕಿ

  ಇನ್ನೊಂದು ಹೊಸ ಸುದ್ದಿಯೆಂದರೆ ಸ್ಟಾರ್ ನಟರ ಕುಟುಂಬದ ಯುವ ನಟನೊಂದಿಗೆ ತೆರೆಯ ಮೇಲೆ ರೊಮಾನ್ಸ್ ಮಾಡಲಿದ್ದಾರಂತೆ ನಟಿ ರಶ್ಮಿಕಾ ಮಂದಣ್ಣ. ಹೌದು, ಈ ಸುದ್ದಿ ಬಹುತೇಕ ಖಚಿತವಾಗಿದ್ದು, ನಾಗಾರ್ಜುನ ಕಿರಿಯ ಪುತ್ರನ ಸಿನಿಮಾಕ್ಕೆ ರಶ್ಮಿಕಾ ನಾಯಕಿ ಆಗಲಿದ್ದಾರೆ.

  ಪ್ರೀತಿ-ಪ್ರೇಮ ಇತ್ಯಾದಿ: ರಶ್ಮಿಕಾ ಮಂದಣ್ಣ ಕೊಟ್ಟ ಉತ್ತರಪ್ರೀತಿ-ಪ್ರೇಮ ಇತ್ಯಾದಿ: ರಶ್ಮಿಕಾ ಮಂದಣ್ಣ ಕೊಟ್ಟ ಉತ್ತರ

  ಅಖಿಲ್ ಅಕ್ಕಿನೇನಿಯ ಐದನೇ ಸಿನಿಮಾ

  ಅಖಿಲ್ ಅಕ್ಕಿನೇನಿಯ ಐದನೇ ಸಿನಿಮಾ

  ಹೌದು, ಅಖಿಲ್ ಅಕ್ಕಿನೇನಿ ನಟಿಸುತ್ತಿರುವ ಐದನೇ ಸಿನಿಮಾಕ್ಕೆ ರಶ್ಮಿಕಾ ಮಂದಣ್ಣ ಆಯ್ಕೆ ಬಹುತೇಕ ಪಕ್ಕಾ ಆಗಿದೆಯಂತೆ. ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಸೈರಾ ನರಸಿಂಹ ರೆಡ್ಡಿ ನಿರ್ದೇಶಕ ಸುರೇಂದ್ರ ರೆಡ್ಡಿ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ.

  ಅಂದದ ಜೊತೆಗೆ ಅಭಿನಯ ಬೇಕಿತ್ತು

  ಅಂದದ ಜೊತೆಗೆ ಅಭಿನಯ ಬೇಕಿತ್ತು

  ಅಖಿಲ್ ಅಕ್ಕಿನೇನಿಯ ಈ ಐದನೇ ಸಿನಿಮಾ ಭಯೋತ್ಪಾದಕರು ಅವರನ್ನು ಮಟ್ಟಹಾಕುವ ಅಂಡರ್‌ಕವರ್ ಏಜೆಂಟ್ ಕುರಿತಾದದ್ದಾಗಿದ್ದು, ನಾಯಕಿ ಪಾತ್ರಕ್ಕೆ ಹೆಚ್ಚಿನ ಮಹತ್ವವಿದೆಯಂತೆ. ಹಾಗಾಗಿ ಅಂದದ ಜೊತೆಗೆ ಅಭಿನಯವೂ ಚೆನ್ನಾಗಿರಬೇಕೆಂಬ ಕಾರಣಕ್ಕೆ ರಶ್ಮಿಕಾರನ್ನು ಆಯ್ಕೆ ಮಾಡಿಕೊಳ್ಳಲಿದೆ ಎನ್ನಲಾಗಿದೆ

  ರಶ್ಮಿಕಾ ಮಂದಣ್ಣ ಫೋಟೋ ನೋಡಿ ಮೋಹಕ ತಾರೆ ರಮ್ಯಾ ಹೇಳಿದ್ದೇನು?ರಶ್ಮಿಕಾ ಮಂದಣ್ಣ ಫೋಟೋ ನೋಡಿ ಮೋಹಕ ತಾರೆ ರಮ್ಯಾ ಹೇಳಿದ್ದೇನು?

  Rakesh Adiga spiritual Rap , ಕನ್ನಡಧ Rapperಗಳಿಗೆ ಕಿವಿಮಾತು | Rakesh Adiga | Filmibeat Kannada
  ಸಖತ್ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ

  ಸಖತ್ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ

  ರಶ್ಮಿಕಾ ಮಂದಣ್ಣ ಪ್ರಸ್ತುತ ಸಖತ್ ಬ್ಯುಸಿಯಾಗಿದ್ದಾರೆ. ಕನ್ನಡದಲ್ಲಿ ಪೊಗರು ಹಾಗೂ ತಮಿಳಿನ ಸುಲ್ತಾನ್ ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಈ ಮಧ್ಯೆ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಅಖಿಲ್ ಅಭಿನಯದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಿನಿಮಾ ಬಿಡುಗಡೆಗೆ ತಯಾರಾಗಿದೆ.

  English summary
  Actress Rashmika Mandanna will play the lead lady role in Akhil Akkineni's fifth movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X