'ಪುಷ್ಪ' ಸಿನಿಮಾ: ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ ರಶ್ಮಿಕಾ ಮಂದಣ್ಣ ಲುಕ್
ನಟಿ ರಶ್ಮಿಕಾ ಮಂದಣ್ಣ ಒಂದಲ್ಲೊಂದು ವಿಚಾರಕ್ಕೆ ಟ್ರೋಲ್ ಆಗುತ್ತಲೇ ಇರುತ್ತಾರೆ. ಹೆಚ್ಚು ಟ್ರೋಲ್ ಆದ ನಟಿಯರಲ್ಲಿ ರಶ್ಮಿಕಾನೇ ಜಾಸ್ತಿ ಎಂದರೇ ತಪ್ಪಾಗಲ್ಲ. ಪ್ರತಿಯೊಂದು ವಿಚಾರಕ್ಕೂ ಟ್ರೋಲಿಗರಿಗೆ ಆಹಾರವಾಗುವ ರಶ್ಮಿಕಾ ಇತ್ತೀಚಿಗಷ್ಟೆ ಪುರುಷರ ಒಳ ಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಂಡು ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದರು. ಇದೀಗ ಪುಷ್ಪ ಸಿನಿಮಾದ ಲುಕ್ ಬಿಡುಗಡೆಯಾಗಿದ್ದು, ರಶ್ಮಿಕಾ ಅವರ ಈ ಲುಕ್ ಕೂಡ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.
ನಟಿ ರಶ್ಮಿಕಾ ಪುಷ್ಪ ಸಿನಿಮಾದಲ್ಲಿ ರಾ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಗಡ್ ಲುಕ್ ಅನ್ನು ಅನೇಕರು ಇಷ್ಟ ಪಟ್ಟಿದ್ದಾರೆ. ಆದರೆ ಇನ್ನು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ಶ್ರಿವಲ್ಲಿ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇಂದು (ಸೆಪ್ಟಂಬರ್ 29) ಶ್ರೀವಲ್ಲಿ ಪಾತ್ರದ ಮೊದಲ ಲುಕ್ ಅನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ. ಸೀರೆ ಧರಿಸುವ ತಯಾರಿಯಲ್ಲಿರುವ ರಶ್ಮಿಕಾ ಓಲೆ ಹಾಕಿಕೊಳ್ಳುತ್ತಿದ್ದಾರೆ. ಎದುರಲ್ಲಿ ಸೀರೆ, ಹೂವು ಬೆಂಕಿಪೊಟ್ಟಣ ಸೇರಿದಂತೆ ಕೆಲವು ವಸ್ತುಗಳನ್ನು ಇಟ್ಟುಕೊಂಡಿದ್ದಾರೆ.
ರಶ್ಮಿಕಾ ಅವರ ಈ ರಗಡ್ ಲುಕ್ ಈಗ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ. ರಶ್ಮಿಕಾ ಅವರ ಈ ಲುಕ್ ಅನ್ನು ಪೂಂಜಾ ಗಾಂಧಿ ನಟನೆಯ ದಂಡುಪಾಳ್ಯ ಸಿನಿಮಾಗೆ ಹೋಲಿಸಲಾಗಿದೆ. ದಂಡುಪಾಳ್ಯ ಸಿನಿಮಾದಲ್ಲಿ ಪೂಜಾ ಗಾಂಧಿ ಕುಳಿತ ಭಂಗಿಯನ್ನು ರಶ್ಮಿಕಾ ಪಕ್ಕದಲ್ಲಿ ಕೂರಿಸಿ ಜೋಡಿ ಸಿಕ್ಕಿತ್ತು ಎಂದು ಕ್ಯಾಪ್ಷನ್ ಹಾಕಿ ಟ್ರೋಲ್ ಮಾಡುತ್ತಿದ್ದಾರೆ.

ಅಷ್ಟೆಯಲ್ಲ ರಶ್ಮಿಕಾ ಅವರನ್ನು ಸಿಕ್ಕ ಸಿಕ್ಕ ಕಡೆಯಲ್ಲಾ ಕೂರಿಸಿ ಟ್ರೋಲಿಗರು ಕಾಲೆಳೆಯುತ್ತಿದ್ದಾರೆ. ತರಕಾರಿ ಮಾರುವ ಜಾಗದಲ್ಲಿ, ಶೌಚಾಲಯದೊಳಗೆ, ದಂಡುಪಾಳ್ಯ ಗ್ಯಾಂಗ್ ಜೊತೆ ಹೀಗೆ ರಶ್ಮಿಕಾ ಅವರ ಲುಕ್ ಎಲ್ಲಾ ಕಡೆ ಬಳಕೆಯಾಗುತ್ತಿದೆ. ರಶ್ಮಿಕಾ ಲುಕ್ ಅನ್ನು ಶೇರ್ ಮಾಡಿ ಕ್ಯಾಪ್ಶನ್ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿದ್ದಾರೆ.
ಅಂದಹಾಗೆ ಟ್ರೋಲ್‌ಗಳು ರಶ್ಮಿಕಾಗೆ ಏನು ಹೊಸದಲ್ಲ. ರಶ್ಮಿಕಾ ಟ್ರೋಲ್‌ಗಳ ಮಧ್ಯೆಯೆ ಬೆಳೆದುಬಂದ ನಟಿ. ಎಷ್ಟೇ ಟ್ರೋಲ್ ಮಾಡಿದರು ತಲೆಕೆಡಿಸಿಕೊಳ್ಳದ ರಶ್ಮಿಕಾ ದಕ್ಷಿಣದಿಂದ ಬಾಲಿವುಡ್‌ವರೆಗೂ ಫೇಮಸ್ ಆಗಿದ್ದಾರೆ. ಪುಷ್ಪ ಸಿನಿಮಾದ ಬಗ್ಗೆ ರಶ್ಮಿಕಾ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಲುಕ್ ನೋಡಿದ್ರೆ ಗೊತ್ತಾಗುತ್ತಿದೆ ಡಿ ಗ್ಲಾಮ್ ಆಗಿ, ಪಕ್ಕಾ ರಾ ಲುಕ್‌ನಲ್ಲಿ ಮಿಂಚಿದ್ದಾರೆ.

ಪುಷ್ಪ ಸಿನಿಮಾ ಹಲವು ಭಾಷೆಯಲ್ಲಿ ಮೂಡಿಬರುತ್ತಿದೆ. ದಕ್ಷಿಣ ಭಾರತದ ಎಲ್ಲಾ ಭಾಷೆಯ ಜೊತೆಗೆ ಹಿಂದಿಯಲ್ಲೂ ಮೂಡಿಬರುತ್ತಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ. ಅಂದಹಾಗೆ ಪುಷ್ಪ ಸಿನಿಮಾದಲ್ಲಿ ಕನ್ನಡದ ಡಾಲಿ ಧನಂಜಯ್ ಕೂಡ ನಟಿಸುತ್ತಿದ್ದಾರೆ. ಈಗಾಗಲೇ ಧನಂಜಯ್ ಲುಕ್ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ಪಾತ್ರವಾಗಿದೆ.

ಪುಷ್ಪ ನಿರ್ದೇಶಕ ಸುಕುಮಾರ್ ಸಾರಥ್ಯದಲ್ಲಿ ಮೂಡಿಬರುತ್ತಿದೆ. ಭಾರಿ ನಿರೀಕ್ಷೆ ಮೂಡಿಸಿರುವ ಪುಷ್ಪ ಸಿನಿಮಾ ಯಾವಾಗ ತೆರೆಗೆ ಬರುತ್ತದೆ ಎನ್ನುವುದು ಸದ್ಯದ ಕುತೂಹಲ. ಮೂಲಗಳ ಪ್ರಕಾರ ಸಿನಿಮಾ ಡಿಸೆಂಬರ್ ನಲ್ಲಿ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಆದರೆ ಇನ್ನು ಅಧಿಕೃತವಾಗಿ ಬಹಿರಂಗವಾಗಿಲ್ಲ.


Click it and Unblock the Notifications











