ದೇವರಕೊಂಡ ಇಂದ ದೂರಾಗಿ ಮತ್ತೊಬ್ಬ ನಟನೊಟ್ಟಿಗೆ ರಶ್ಮಿಕಾ ಡೇಟಿಂಗ್? ಅಸಲಿ ಸಂಗತಿ ಏನು ಗೊತ್ತಾ?
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಡುವೆ ಲವ್ವಿ ಡವ್ವಿ ನಡೀತಿದೆ ಎನ್ನುವ ಗುಸುಗುಸು ಬಹಳ ದಿನಗಳಿಂದ ಕೇಳಿಬರ್ತಿದೆ. ಆದರೆ ಇಬ್ಬರು ಜಸ್ಟ್ ಫ್ರೆಂಡ್ಸ್ ಅಷ್ಟೇ ಎಂದು ಮಾತ್ರ ಹೇಳುತ್ತಿದ್ದಾರೆ. ವಿಜಯ್ ಸ್ನೇಹಿತರು ಹಾಗೂ ಫ್ಯಾಮಿಲಿ ಜೊತೆ ಕೊಡಗಿನ ಕುವರಿ ಆಗಾಗ್ಗೆ ವಿದೇಶಗಳಿಗೆ ಪ್ರವಾಸ ಹೋಗುತ್ತಿರುತ್ತಾರೆ. ಇದೀಗ ವಿಜಯ್- ರಶ್ಮಿಕಾ ಲವ್ ಬ್ರೇಕಪ್ ಆಗಿದ್ದು ಮತ್ತೊಬ್ಬ ನಟನ ಜೊತೆ ರಶ್ಮಿಕಾ ಸುತ್ತಾಡುತ್ತಿದ್ದಾರಂತೆ.
ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾದಿಂದ ಬಣ್ಣಲೋಕಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ನೋಡ ನೋಡುತ್ತಲೇ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿ ಗೆದ್ದರು. ಅಲ್ಲಿಂದ ಮುಂದೆ ಬಾಲಿವುಡ್‌ಗೂ ಅಡಿ ಇಟ್ಟಿದ್ದಾರೆ. ಬಿಗ್‌ಬಿ ಮಗಳ ಪಾತ್ರದಲ್ಲಿ ನಟಿಸಿ ಗೆದ್ದಿದ್ದಾರೆ. ಇನ್ನು ರಣ್‌ಬೀರ್ ಕಪೂರ್ ಜೋಡಿಯಾಗಿ 'ಅನಿಮಲ್' ಚಿತ್ರದಲ್ಲಿ ನಟಿಸ್ತಿದ್ದಾರೆ. ಇತ್ತೀಚೆಗೆ 'ಭೀಷ್ಮ' ಕಾಂಬಿನೇಷನ್‌ನಲ್ಲಿ ಮತ್ತೊಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದೆಲ್ಲದರ ನಡುವೆ ಪರ್ಸನಲ್ ಲೈಫ್ ವಿಚಾರಗಳಿಂದ ಸುದ್ದಿಯಲ್ಲಿ ಇರ್ತಾರೆ.

ಬಣ್ಣದಲೋಕದಲ್ಲಿ ಪ್ರೀತಿ ಪ್ರೇಮಕ್ಕೆ ಆಯಸ್ಸು ಕಮ್ಮಿ ಅನ್ನುವಂತಾಗಿದೆ. ಇದೀಗ ವಿಜಯ್ ದೇವರಕೊಂಡನಿಂದ ದೂರಾಗಿರುವ ರಶ್ಮಿಕಾ ತೆಲುಗಿನ ಮತ್ತೊಬ್ಬ ನಟನೊಟ್ಟಿಗೆ ಸುತ್ತಾಡುತ್ತಿದ್ದಾರೆ ಎನ್ನಲಾಗ್ತಿದೆ. ಆ ನಟ ಮತ್ಯಾರು ಅಲ್ಲ ಬೆಲ್ಲಂಕೊಂಡ ಶ್ರೀನಿವಾಸ್. ಸಿನಿಮಾ ನಿರ್ಮಾಪಕ ಬೆಲ್ಲಂಕೊಂಡ ಸುರೇಶ್ ಮಗನಾಗಿರುವ ಬೆಲ್ಲಂಕೊಂಡ ಶ್ರೀನಿವಾಸ್ ಈಗಾಗಲೇ 10 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ 'ಛತ್ರಪತಿ' ಆಗಿ ಬಾಲಿವುಡ್ ಅಂಗಳಕ್ಕೂ ಜಿಗಿಯುತ್ತಿದ್ಧಾರೆ. ರಶ್ಮಿಕಾ ಹಾಗೂ ಶ್ರೀನಿವಾಸ್ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.
ಇತ್ತೀಚೆಗೆ ಪದೇ ಪದೇ ಬೆಲ್ಲಂಕೊಂಡ ಶ್ರೀನಿವಾಸ್ ಮತ್ತು ರಶ್ಮಿಕಾ ಮಂದಣ್ಣ ಒಟ್ಟಿಗೆ ಕಾಣಿಸಿಕೊಳ್ಳುತ್ತರುವುದೇ ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣವಾಗಿದೆ. ಕೆಲ ದಿನಗಳ ಹಿಂದೆ ಜೀ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ರಶ್ಮಿಕಾ ಹಾಗೂ ಶ್ರೀನಿವಾಸ್ ಒಟ್ಟಿಗೆ ಕ್ಯಾಮರಾಗೆ ಪೋಸ್ ಕೊಟ್ಟಿದ್ದರು. ಈ ವೇಳೆ ರಶ್ಮಿಕಾ ತೊಟ್ಟಿದ್ದ ಕಾಸ್ಟ್ಯೂಮ್ ಸಖತ್ ಟ್ರೋಲ್ ಆಗಿತ್ತು. ಇದೀಗ ಮತ್ತೆ ಇಬ್ಬರು ಏರ್‌ಪೋರ್ಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೊಗಳು ವೈರಲ್ ಆಗ್ತಿದೆ. ಆದರೆ ಇದೆಲ್ಲಾ ಕಾಕತಾಳೀಯ ಅಷ್ಟೇ ಎಂದು ಕೆಲವರು ಹೇಳುತ್ತಿದ್ಧಾರೆ.

ಅವಾರ್ಡ್ ಫಂಕ್ಷನ್‌ನಲ್ಲಿ ಭೇಟಿ ವೇಳೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಅದೇ ರೀತಿ ಏರ್‌ಪೋರ್ಟ್‌ನಲ್ಲಿ ಇಬ್ಬರು ಒಟ್ಟಿಗೆ ದರ್ಶನ ಕೊಟ್ಟಿದ್ದಾರೆ. ಇಷ್ಟೆ ಡೇಟಿಂಗ್ ಎಂದರೆ ಹೇಗೆ ಎಂದ ಕೆಲವರು ಕೇಳುತ್ತಿದ್ದಾರೆ. ಬೆಲ್ಲಂಕೊಂಡ ಶ್ರೀನಿವಾಸ್ ಈಗ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ರಾಜಮೌಳಿ ಹಾಗೂ ಪ್ರಭಾಸ್ ಕಾಂಬಿನೇಷನ್‌ನಲ್ಲಿ ಬಂದ 'ಛತ್ರಪತಿ' ಸಿನಿಮಾವನ್ನು ಅದೇ ಟೈಟಲ್‌ನಲ್ಲಿ ಹಿಂದಿಗೆ ರೀಮೆಕ್ ಮಾಡ್ತಿದ್ದಾರೆ. ಇತ್ತೀಚೆಗೆ ಚಿತ್ರದ ಟೀಸರ್ ಸಹ ರಿಲೀಸ್ ಆಗಿದೆ. ಈ ಸಿನಿಮಾ ಕೆಲಸಗಳಿಗಾಗಿ ಮುಂಬೈ ಹಾಗೂ ಹೈದರಾಬಾದ್‌ಗೆ ಓಡಾಡುತ್ತಿದ್ದಾರೆ.
ರಶ್ಮಿಕಾ ಕೂಡ ಅತ್ತ ಹಿಂದಿ ಹಾಗೂ ಇತ್ತ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ಅವರು ಕೂಡ ಮುಂಬೈಗೆ ಅಪ್ ಅಂಡ್ ಡೌನ್ ಮಾಡುತ್ತಿದ್ದಾರೆ. ಈ ವೇಳೆ ಬೆಲ್ಲಂಕೊಂಡ ಶ್ರೀನಿವಾಸ್‌ನ ಪದೇ ಪದೇ ಭೇಟಿ ಆಗಿರಬಹುದು. ತೆಲುಗಿನವರು ಎನ್ನುವ ಕಾರಣಕ್ಕೆ ಮುಂಬೈನಲ್ಲೂ ರಶ್ಮಿಕಾ, ಶ್ರೀನಿವಾಸ್ ಜೊತೆ ಮಾತನಾಡಿರಬಹುದು. ಒಟ್ಟಿಗೆ ಒಂದೇ ಫ್ಲೈಟ್‌ನಲ್ಲಿ ಓಡಾಡಿರಬಹುದು. ಅಷ್ಟಕ್ಕೇ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ಇದೆ ಎಂದರೆ ಹೇಗೆ ಅನ್ನುವುದು ಕೆಲವರ ವಾದ. ಒಟ್ನಲ್ಲಿ ರಶ್ಮಿಕಾ- ಶ್ರೀನಿವಾಸ್ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೊಗಳು ವೈರಲ್ ಆಗ್ತಿದೆ.

'ಅಲ್ಲುಡು ಶ್ರೀನು' ಆಗಿ ಟಾಲಿವುಡ್ ಪ್ರವೇಶಿಸಿದ ಬೆಲ್ಲಂಕೊಂಡ ಶ್ರೀನಿವಾಸ್ ಮುಂದೆ 'ಸ್ಪೀಡುನ್ನೋಡು', 'ಜಯ ಜಾನಕಿ ನಾಯಕ', 'ಸಾಕ್ಷ್ಯಂ', 'ಸೀತ', 'ಕವಚಂ', 'ರಾಕ್ಷಸುಡು' ಸಿನಿಮಾಗಳಲ್ಲಿ ನಟಿದಿದ್ದಾರೆ. ಆದರೆ ದೊಡ್ಡ ಬ್ರೇಕ್ ಮಾತ್ರ ಸಿಕ್ಕಿಲ್ಲ. ಇದೀಗ ಛತ್ರಪತಿಯಾಗಿ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿತ್ತಿದ್ದಾರೆ. ಇನ್ನು ರಶ್ಮಿಕಾ ತೆಲುಗಿನ 'ಪುಷ್ಪ- 2' ಹಾಗೂ ಬಾಲಿವುಡ್‌ನ 'ಅನಿಮಲ್' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ವೆಂಕಿ ಕುಡುಮುಲ ನಿರ್ದೇಶನದಲ್ಲಿ ತೆಲುಗು ನಟ ನಿತಿನ್ ಜೊತೆ ಮತ್ತೊಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.


Click it and Unblock the Notifications











