For Quick Alerts
  ALLOW NOTIFICATIONS  
  For Daily Alerts

  ಬುರ್ಕಾ ಹಾಕ್ಕೊಂಡಾದರೂ ಆ ಸ್ಥಳಕ್ಕೆ ಹೋಗ್ತಾರಂತೆ ರಶ್ಮಿಕಾ ಮಂದಣ್ಣ

  |

  ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಸದ್ಯ ಟಾಲಿವುಡ್ ಇಂಡಸ್ಟ್ರಿಯಲ್ಲಿ ಹೆಚ್ಚು ಸಕ್ಸಸ್ ಕಾಣುತ್ತಿದ್ದಾರೆ. ತೆಲುಗು ಹುಡುಗಿ ಎನ್ನುವಷ್ಟು ಅಲ್ಲಿನ ಜನರು ರಶ್ಮಿಕಾ ಅವರನ್ನು ಸ್ವೀಕರಿಸಿದ್ದಾರೆ. ಅದಕ್ಕೆ ಪುಷ್ಠಿ ನೀಡುವಂತೆ ಸತತವಾಗಿ ತೆಲುಗು ಚಿತ್ರಗಳ ಆಫರ್ ಸಿಗ್ತಿದೆ.

  ರಶ್ಮಿಕಾ ಬುರ್ಕಾ ಹಾಕೊಂಡು ಹೋಗ್ತೀನಿ ಅಂದಿದ್ದು ಎಲ್ಲಿಗೆ ಗೊತ್ತಾ..?

  ಒಂದು ಸಿನಿಮಾ ಮುಗಿಯುಷ್ಟರಲ್ಲಿ ಇನ್ನೊಂದು ಸ್ಟಾರ್ ನಟನ ಚಿತ್ರಕ್ಕೆ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗುತ್ತಿದ್ದಾರೆ. ಹೀಗೆ 'ತೆಲುಗು ಅಮ್ಮಾಯಿ' ಎನಿಸಿಕೊಳ್ಳುತ್ತಿರುವ ರಶ್ಮಿಕಾಗೆ ಅದೊಂದು ಸ್ಥಳಕ್ಕೆ ಹೋಗಬೇಕು ಎಂಬ ಆಸೆ ಇದೆಯಂತೆ. ಆದರೆ ಆ ಸ್ಥಳಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಬೇಸರ ವ್ಯಕ್ತಪಡಿಸಿದ್ದಾರೆ.

  ಒಂದಲ್ಲ ಒಂದು ದಿನಕ್ಕೆ ಬುರ್ಕಾ ಹಾಕ್ಕೊಂಡಾದರೂ ಹೋಗುತ್ತೇನೆ ಎಂದು ಹೇಳಿಕೊಂಡಿದ್ದಾರೆ ಎಂದು ತೆಲುಗು ಫಿಲ್ಮೀಬಿಟ್ ವರದಿ ಮಾಡಿದೆ. ಅಷ್ಟಕ್ಕೂ, ರಶ್ಮಿಕಾ ನೋಡಬೇಕೆಂದುಕೊಂಡಿರುವ ಆ ಸ್ಥಳ ಯಾವುದು? ಮುಂದೆ ಓದಿ...

  ಚಾರ್ ಮಿನರ್ ಅಂದ್ರೆ ಇಷ್ಟ

  ಚಾರ್ ಮಿನರ್ ಅಂದ್ರೆ ಇಷ್ಟ

  ''ಚಾರ್ ಮಿನರ್ ಅಂದ್ರೆ ನನಗೆ ಇಷ್ಟ. ಆದರೆ ಇದುವರೆಗೂ ಅಲ್ಲಿಗೆ ಹೋಗಿ ನೋಡಲು ಸಾಧ್ಯವಾಗಲಿಲ್ಲ. ಯಾವುದೋ ಒಂದು ದಿನ ರಾತ್ರಿ ಬುರ್ಕಾ ಹಾಕ್ಕೊಂಡಾದರೂ ಚಾರ್ ಮಿನರ್ ಗೆ ಹೋಗ್ತೀನಿ. ಗೋಲ್ಕುಂಡ ಕೋಟೆ ಅಂದ್ರು ಇಷ್ಟ ಅಲ್ಲಿಯೂ ಹೋಗಬೇಕು'' ಎಂದು ತಮ್ಮ ಆಸೆ ಹಂಚಿಕೊಂಡಿದ್ದಾರೆ ರಶ್ಮಿಕಾ.

  ತೆಲುಗು ಅಮ್ಮಾಯಿ!

  ತೆಲುಗು ಅಮ್ಮಾಯಿ!

  ''ನನ್ನನ್ನು ಎಲ್ಲರೂ ತೆಲುಗು ಹುಡುಗಿಯಂತೆ ನೋಡುತ್ತಿದ್ದಾರೆ. ಈ ಮಧ್ಯೆ ನನ್ನ ಪಾತ್ರಗಳಿಗೆ ನಾನೇ ಡಬ್ಬಿಂಗ್ ಮಾಡುತ್ತಿದ್ದೇನೆ'' ಎಂದು ರಶ್ಮಿಕಾ ಖುಷಿ ಹೇಳಿಕೊಂಡಿದ್ದಾರೆ. 'ತನಗೆ ಬಿರಿಯಾನಿ ಅಂದ್ರೆ ಬಹಳ ಇಷ್ಟ. ಹೈದರಾಬಾದ್ ಗೆ ಬಂದಾಗ ಬಿರಿಯಾನಿ ತಿನ್ನುತ್ತಿದ್ದೆ, ಈಗ ನಾನ್ ವೆಜ್ ತಿನ್ನುವುದು ಬಿಟ್ಟಿದ್ದೀನಿ'' ಎಂದು ನೆಚ್ಚಿನ ಆಹಾರದ ಬಗ್ಗೆ ತಿಳಿಸಿದ್ದಾರೆ.

  ಸಿನಿಮಾ ಇಲ್ಲದಿದ್ದರೆ ಈ ಕೆಲಸ ಮಾಡುತ್ತೇನೆ

  ಸಿನಿಮಾ ಇಲ್ಲದಿದ್ದರೆ ಈ ಕೆಲಸ ಮಾಡುತ್ತೇನೆ

  ''ಒಂದು ವೇಳೆ ಸಿನಿಮಾ ಅವಕಾಶ ಇಲ್ಲದಿದ್ದರೆ ನಾನು ಫಟ್ನೆಸ್ ಗೆ ಸಂಬಂಸಿದ ಯಾವುದಾದರೂ ಬಿಸಿನೆಸ್ ಮಾಡ್ತೇನೆ. ಸಿನಿಮಾ ಇಂಡಸ್ಟ್ರಿಗೆ ಬಂದಿಲ್ಲ ಅಂದಿದ್ದರೆ ಮನೋವೈದ್ಯೆ ಆಗಿರುತ್ತಿದ್ದೆ'' ಎಂದು ರಶ್ಮಿಕಾ ತಿಳಿಸಿದ್ದಾರೆ. ಇನ್ನು ಶೂಟಿಂಗ್ ಇಲ್ಲದ ಸಮಯದಲ್ಲಿ ಪುಸ್ತಕ ಓದುವುದು, ಟಿವಿ ನೋಡುವುದು ಹೆಚ್ಚು'' ಎಂದು ತಮ್ಮ ಅಭ್ಯಾಸದ ಕುರಿತು ತಿಳಿಸಿದ್ದಾರೆ.

  ಮನೆ ಖರೀದಿ ಮಾಡುವ ಪ್ಲಾನ್ ಇದೆ

  ಮನೆ ಖರೀದಿ ಮಾಡುವ ಪ್ಲಾನ್ ಇದೆ

  ಹೆಚ್ಚು ಹೆಚ್ಚು ತೆಲುಗು ಸಿನಿಮಾಗಳನ್ನು ಮಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣ ಅವರು, ಹೈದರಾಬಾದ್ ನಲ್ಲಿ ಮನೆ ಖರೀದಿಸುವ ಪ್ಲಾನ್ ಹೊಂದಿದ್ದಾರಂತೆ. ''ಎರಡ್ಮೂರು ಸಿನಿಮಾ ಮಾಡುವುದು ಬಾಕಿ ಇದೆ, ಅದಾದ ಬಳಿಕ ಹೈದರಾಬಾದ್ ಮನೆ ಖರೀದಿ ಮಾಡುತ್ತೇನೆ'' ಎಂದು ಹೇಳಿದ್ದಾರೆ ರಶ್ಮಿಕಾ.

  ರಶ್ಮಿಕಾ ಮಂದಣ್ಣ ತೆಲುಗು ಸಿನಿಮಾ

  ರಶ್ಮಿಕಾ ಮಂದಣ್ಣ ತೆಲುಗು ಸಿನಿಮಾ

  ಚಲೋ ಚಿತ್ರದಲ್ಲಿ ನಾಗಶೌರ್ಯ, ಗೀತಾ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಚಿತ್ರಗಳಲ್ಲಿ ವಿಜಯ್ ದೇವರಕೊಂಡ, ದೇವದಾಸ್ ಸಿನಿಮಾದಲ್ಲಿ ನಾನಿ, ಸರಿಲೇರು ನೀಕೆವ್ವರು ಚಿತ್ರದಲ್ಲಿ ಮಹೇಶ್ ಬಾಬು, ಭೀಷ್ಮ ಸಿನಿಮಾದಲ್ಲಿ ನಿತೀನ್ ಜೊತೆ ಸ್ಕ್ರೀನ್ ಶೇರ್ ಮಾಡಿದ ರಶ್ಮಿಕಾ ಈಗ ಅಲ್ಲು ಅರ್ಜುನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಾಮ್ ಚರಣ್ ಮತ್ತು ಜೂನಿಯರ್ ಎನ್ ಟಿ ಆರ್ ಚಿತ್ರಗಳಲ್ಲೂ ನಟಿಸುವ ಆಫರ್ ಬಂದಿದೆ ಎನ್ನಲಾಗಿದೆ.

  English summary
  South indian actress Rashmika Mandanna shared her favorite place name in hyderabad. but, till today she did not visited to that place.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X