ರಶ್ಮಿಕಾಗೆ ಈ ಹೀರೋ ಜೊತೆ ಡೇಟ್‌ಗೆ ಹೋಗಬೇಕೆಂಬ ಆಸೆ

ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾದಿಂದ ನಟನೆ ಆರಂಭಿಸಿದ ನಟಿ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಮಿಂಚಿ ಈಗ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಈ ನಟಿ ಮಾಧ್ಯಮಗಳಲ್ಲಿಯೂ ಕಾಣಿಸಿಕೊಳ್ಳತ್ತಲೇ ಇರುತ್ತಾರೆ. ಸಂದರ್ಶನಗಳು, ಪಾಪರಾಟ್ಜಿ ಫೊಟೊ ಶೂಟ್‌ಗಳು ಹೀಗೆ ಒಟ್ಟಿನಲ್ಲಿ ಸದಾ ಸುದ್ದಿಯಲ್ಲಿರುವುದು ರಶ್ಮಿಕಾಗೆ ಅಭ್ಯಾಸವಾಗಿದೆ. ಇದರಿಂದ ಕೆಲವು ಬಾರಿ ಸಮಸ್ಯೆಗೂ ಸಿಲುಕಿದ್ದಿದೆ.

ರಶ್ಮಿಕಾರ ಹೆಸರು ಈಗಾಗಲೇ ಕೆಲವು ನಟರೊಂದಿಗೆ ಕೇಳಿಬರುತ್ತಿದೆ. ರಕ್ಷಿತ್ ಶೆಟ್ಟಿ ಜೊತೆಗೆ ಹಸೆಮಣೆ ಏರುತ್ತಾರೆ ಎಂಬುದು ಬಹುತೇಕ ಖಾತ್ರಿಯಾಗಿದ್ದ ಸಮಯದಲ್ಲೇ ಸಂಬಂಧ ಮುರಿದುಕೊಂಡು ತೆಲುಗು ಚಿತ್ರರಂಗಕ್ಕೆ ಅಡಿಯಿಟ್ಟ ಈ ಚೆಲುವೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ತಾವು ತಮಿಳುನಾಡಿನ ಮನೆಗೆ ಸೊಸೆಯಾಗಿ ಹೋಗಬೇಕು ಎಂದಿದ್ದರು. ಈಗ ಹೊಸ ಮತ್ತೊಂದು ಸಂದರ್ಶನದಲ್ಲಿ ಯಾವ ನಟನೊಂದಿಗೆ ಡೇಟಿಂಗ್‌ಗೆ ಹೋಗಲು ತಮಗೆ ಇಷ್ಟ ಎಂದು ಹೇಳಿಕೊಂಡಿದ್ದಾರೆ.

ಪ್ರಭಾಸ್ ಜೊತೆ ಡೇಟ್‌ಗೆ ಹೋಗಲು ಇಷ್ಟ: ರಶ್ಮಿಕಾ

ಪ್ರಭಾಸ್ ಜೊತೆ ಡೇಟ್‌ಗೆ ಹೋಗಲು ಇಷ್ಟ: ರಶ್ಮಿಕಾ

ರಶ್ಮಿಕಾ ಮಂದಣ್ಣರಿಗೆ ನಟ ಪ್ರಭಾಸ್ ಜೊತೆಗೆ ಡೇಟ್‌ಗೆ ಹೋಗಲು ಹೋಗಲು ಬಹು ಇಷ್ಟವಂತೆ. ಆ ಅವಕಾಶ ಸಿಕ್ಕರೆ ಖಂಡಿತ ಮಿಸ್ ಮಾಡಿಕೊಳ್ಳುವುದಿಲ್ಲ. 'ಪ್ರಭಾಸ್ ನನ್ನ ನೆಚ್ಚಿನ ನಟ ಅವರೊಟ್ಟಿಗೆ ಡೇಟ್‌ಗೆ ಹೋಗುವುದು ನನಗೆ ಇಷ್ಟ' ಎಂದಿದ್ದಾರೆ ರಶ್ಮಿಕಾ ಮಂದಣ್ಣ.

ಪ್ರಭಾಸ್‌ ಮೇಲೆ ಕ್ರಶ್: ರಶ್ಮಿಕಾ

ಪ್ರಭಾಸ್‌ ಮೇಲೆ ಕ್ರಶ್: ರಶ್ಮಿಕಾ

ಪ್ರಭಾಸ್ ಎಂದರೆ ಬಹಳ ಇಷ್ಟ ಎಂದಿರುವ ರಶ್ಮಿಕಾ, 'ನನಗೆ ಪ್ರಭಾಸ್ ಮೇಲೆ ಕ್ರಶ್ ಇದೆ' ಎಂದಿದ್ದಾರೆ. ಅವರೊಟ್ಟಿಗೆ ಒಂದು ದಿನ ಡೇಟ್‌ಗೆ ಹೋಗುವ ಅವಕಾಶ ಸಿಕ್ಕರೆ ನಾನು ಅದನ್ನು ಖಂಡಿತ ಮಿಸ್ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. ಈ ಹಿಂದೆ ರಶ್ಮಿಕಾ-ಪ್ರಭಾಸ್ ಒಟ್ಟಿಗೆ ನಟಿಸುತ್ತಾರೆ ಎಂಬ ಸುದ್ದಿ ಹರಿದಾಡಿತ್ತು ಆದರೆ ಅದು ನಿಜವಾಗಲಿಲ್ಲ.

ವಿಜಯ್ ದೇವರಕೊಂಡ ಜೊತೆಗೆ ಹೆಸರು ಕೇಳಿಬರುತ್ತಿದೆ

ವಿಜಯ್ ದೇವರಕೊಂಡ ಜೊತೆಗೆ ಹೆಸರು ಕೇಳಿಬರುತ್ತಿದೆ

ರಕ್ಷಿತ್ ಶೆಟ್ಟಿ ಜೊತೆಗೆ ಬ್ರೇಕ್‌ ಅಪ್ ಆದ ನಂತರ ರಶ್ಮಿಕಾ ಹೆಸರು ತೆಲುಗಿನ ವಿಜಯ್ ದೇವರಕೊಂಡ ಜೊತೆಗೆ ಜೋರಾಗಿ ಕೇಳಿಬರುತ್ತಿದೆ. ಮುಂಬೈನಲ್ಲಿ ಇಬ್ಬರೂ ಒಟ್ಟಿಗೆ ಓಡಾಡುತ್ತಿದ್ದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಆದರೆ ಇಬ್ಬರೂ ಸಹ ತಾವು ಒಳ್ಳೆಯ ಗೆಳೆಯರೆಂದು ಹೇಳಿಕೊಂಡಿದ್ದಾರೆ.

Recommended Video

ಇನ್ಯಾವತ್ತೂ Salman Khan ಸಿನಿಮಾ ವಿಮರ್ಶೆ ಮಾಡೋದಿಲ್ಲ ಎಂದ‌ KRK | Filmibeat Kannada
ಬಾಲಿವುಡ್‌ನಲ್ಲಿ ನೆಲೆ ನಿಲ್ಲುವ ಯೋಚನೆಯಲ್ಲಿ ರಶ್ಮಿಕಾ

ಬಾಲಿವುಡ್‌ನಲ್ಲಿ ನೆಲೆ ನಿಲ್ಲುವ ಯೋಚನೆಯಲ್ಲಿ ರಶ್ಮಿಕಾ

ನಟಿ ರಶ್ಮಿಕಾ ಪ್ರಸ್ತುತ ತೆಲುಗಿನ 'ಪುಷ್ಪ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಬಾಲಿವುಡ್‌ನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ 'ಮಿಷನ್ ಮಜ್ನು' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಮಿತಾಬ್ ಬಚ್ಚನ್ ಮಗಳ ಪಾತ್ರದಲ್ಲಿ 'ಗುಡ್ ಬೈ' ಹೆಸರಿನ ಹಿಂದಿ ಸಿನಿಮಾದಲ್ಲಿಯೂ ರಶ್ಮಿಕಾ ನಟಿಸುತ್ತಿದ್ದಾರೆ. ಬಾಲಿವುಡ್‌ನಲ್ಲಿ ನೆಲೆ ನಿಲ್ಲುವ ಯೋಚನೆಯಲ್ಲಿದ್ದಾರೆ ರಶ್ಮಿಕಾ.

More from Filmibeat

English summary
Actress Rashmika Mandanna said she will love to go on date with actor Prabhas.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X