ವಿಜಯ್ ದೇವರಕೊಂಡ ಸಹೋದರ ಚಿತ್ರ ನೋಡಿ ಗುಣಗಾನ ಮಾಡಿದ ರಶ್ಮಿಕಾ
ಟಾಲಿವುಡ್ ಸ್ಟೈಲಿಶ್ ಐಕಾನ್ ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ನಟನೆಯ 'ಮಿಡಲ್ ಕ್ಲಾಸ್ ಮೆಲೋಡಿಸ್' ಸಿನಿಮಾ ನವೆಂಬರ್ 20 ರಂದು ಆನ್‌ಲೈನ್‌ನಲ್ಲಿ ಬಿಡುಗಡೆಯಾಗಲಿದೆ.
Recommended Video
ನಿನ್ನೆಯಷ್ಟೇ 'ಮಿಡಲ್ ಕ್ಲಾಸ್ ಮೆಲೋಡಿಸ್' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ನಟಿ ರಶ್ಮಿಕಾ ಮಂದಣ್ಣ ಮೆಚ್ಚಿಕೊಂಡಿದ್ದಾರೆ. ಈ ಕುರಿತು ಟ್ವಿಟ್ಟರ್‌ನಲ್ಲಿ ಹಾಡಿ ಹೊಗಳಿರುವ ರಶ್ಮಿಕಾ, ಆನಂದ್ ದೇವರಕೊಂಡ ಮತ್ತು ನಟಿ ವರ್ಷಾ ಬೊಲ್ಲಮ್ಮ ಕಾಂಬಿನೇಷನ್‌ಗೆ ಫಿದಾ ಆಗಿದ್ದಾರೆ. ಸರಣಿ ಟ್ವೀಟ್ ಮಾಡುವ ಮೂಲಕ ವಿಜಯ್ ದೇವರಕೊಂಡ ಸಹೋದರನ ಚಿತ್ರಕ್ಕೆ ಬೆಂಬಲ ಸೂಚಿಸಿದ್ದಾರೆ. ಮುಂದೆ ಓದಿ....

ನೋಡಿದೆ, ಬಹಳ ಖುಷಿ ಪಟ್ಟೆ
ಮಿಡಲ್ ಕ್ಲಾಸ್ ಮೆಲೋಡಿಸ್ ಚಿತ್ರದ ಟ್ರೈಲರ್ ಹಂಚಿಕೊಂಡಿರುವ ರಶ್ಮಿಕಾ ''ನಾನು ಸಿನಿಮಾ ನೋಡಿದ್ದೇನೆ.. ಬಹಳಷ್ಟು ನಕ್ಕಿದ್ದೇನೆ .. ಚಿತ್ರದ ಹಿಡಿತಕ್ಕೊಳಗಾಗಿದ್ದೆ .. ನನ್ನ ಇಬ್ಬರು ಸ್ನೇಹಿತರು ಆ ದೊಡ್ಡ ಪರದೆಯಲ್ಲಿದ್ದಾರೆ ಎಂದು ನಂಬಲಾಗಲಿಲ್ಲ .. ಅವರನ್ನು ತೆರೆಮೇಲೆ ನೋಡುವುದರಿಂದ ಸಂತೋಷ ಉಂಟು ಮಾಡಿದೆ'' ಎಂದು ಟ್ವೀಟ್ ಮಾಡಿದ್ದಾರೆ.

ಪ್ರೇಕ್ಷಕರಿಗೆ ಇಷ್ಟ ಆಗುತ್ತೆ
''ತುಂಬಾ ಇಷ್ಟ ಆಯ್ತು. ಹೃದಯಪೂರ್ವಕವಾಗಿ ಶುಭಾಶಯಗಳು. ಆನಂದ್ ದೇವರಕೊಂಡ ಮತ್ತು ವರ್ಷಾ ಬೊಲ್ಲಮ್ಮ ಲವ್ ಯೂ. ನಿಮ್ಮ ಪಾತ್ರಗಳು ಹೆಚ್ಚು ಇಷ್ಟ ಆಯ್ತು. ನಾನು ನಿಮ್ಮಿಬ್ಬರನ್ನೂ ಪ್ರೀತಿಸುತ್ತೇನೆ. ಮತ್ತು ಪ್ರೇಕ್ಷಕರು ಸಹ ಇಷ್ಟ ಪಡ್ತಾರೆ ಎಂಬ ವಿಶ್ವಾಸವಿದೆ. ನಿರ್ದೇಶಕರಿಗೆ ಅಭಿನಂದನೆಗಳು. ದೇವರ ಆಶೀರ್ವಾದ'' ಎಂದು ರಶ್ಮಿಕಾ ಟ್ವಿಟ್ಟರ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಲ್ಲರ ಹೃದಯ ಗೆಲ್ಲುವ ಭರವಸೆ ಇದೆ
ಸಹೋದರನ ಚಿತ್ರದ ಬಗ್ಗೆ ವಿಜಯ್ ದೇವರಕೊಂಡ ಟ್ವೀಟ್ ಮಾಡಿದ್ದು, ''ಈ ಚಿತ್ರವೂ ಎಲ್ಲ ಹೃದಯ ಗೆಲ್ಲುವ ಭರವಸೆ ಇದೆ. ನಾನು ಈ ಚಿತ್ರದ ಬಗ್ಗೆ ಉತ್ಸುಕನಾಗಿದ್ದೇನೆ. ನನ್ನ ಕುಟುಂಬ, ಸ್ನೇಹಿತರೊಂದಿಗೆ ಸಿನಿಮಾ ನೋಡಿದ್ದೇನೆ. ಸಂಪೂರ್ಣವಾಗಿ ಇಷ್ಟ ಆಗುತ್ತೆ'' ಎಂದಿದ್ದಾರೆ.

ಎರಡನೇ ಚಿತ್ರ ಇದು
ಆನಂದ್ ದೇವರಕೊಂಡ ಅಭಿನಯದ ಎರಡನೇ ಚಿತ್ರ ಮಿಡಲ್ ಕ್ಲಾಸ್ ಮೆಲೋಡಿಸ್. ಇದಕ್ಕೂ ಮುಂಚೆ 'ದೊರಸಾನಿ' ಚಿತ್ರದಲ್ಲಿ ಆನಂದ್ ನಟಿಸಿದ್ದರು. ಕಳೆದ ವರ್ಷ ಈ ಚಿತ್ರ ಬಿಡುಗಡೆಯಾಗಿತ್ತು. ಮೊದಲ ಸಿನಿಮಾ ಅಷ್ಟಾಗಿ ಯಶಸ್ಸು ಕಂಡಿಲ್ಲ. ಇದೀಗ, ನವೆಂಬರ್ 20 ರಂದು ಎರಡನೇ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದ್ದು, ನಿರೀಕ್ಷೆ ಹೆಚ್ಚಿದೆ.


Click it and Unblock the Notifications











