For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಮಂದಣ್ಣ ಸಂಸದೆ ಆಗಲಿದ್ದಾರೆಂದ ಜ್ಯೋತಿಷಿ: ಯಾವ ಪಕ್ಷದಿಂದ? ಯಾವ ರಾಜ್ಯದಿಂದ?

  |

  ಮೂರ್ಖರ ಅಂತಿಮ ನಿಲ್ದಾಣ ರಾಜಕೀಯ ಎಂಬ ಮಾತೊಂದಿದೆ. ಅದನ್ನು ಸಿನಿಮಾ ನಟ-ನಟಿಯರ ಅಂತಿಮ ನಿಲ್ದಾಣ ರಾಜಕೀಯ ಎಂದು ಬದಲಾಯಿಸಿದರೂ ತಪ್ಪೇನೂ ಆಗುವುದಿಲ್ಲ.

  ಹಲವು ಸಿನಿಮಾ ನಟ-ನಟಿಯರು ತಮ್ಮ ನಟನಾ ವೃತ್ತಿ ನಡುಗಟ್ಟ ದಾಟುತ್ತಲೇ ರಾಜಕೀಯಕ್ಕೆ ಇಳಿಯುವುದು ತೀರ ಸಾಮಾನ್ಯ ಎಂಬಂತಾಗಿದೆ. ಸಿನಿಮಾಗಳಲ್ಲಿ ಅವಕಾಶ ಕಡಿಮೆ ಆಗುತ್ತಾ ಬಂದಂತೆ ಯಾವುದಾದರೂ ಒಂದು ಪಕ್ಷ ನೋಡಿ ಸದಸ್ಯರಾಗುತ್ತಾರೆ ಅದೃಷ್ಟ ಇದ್ದರೆ ಶಾಸಕರೊ, ಸಂಸದರೋ ಇನ್ನೂ ಹೆಚ್ಚಿನ ಅದೃಷ್ಟ ಇದ್ದರೆ ಸಚಿವರಾಗಿ ನಂತರ ತಮ್ಮ ಮಕ್ಕಳನ್ನೂ ಸಿನಿಮಾ ನಟರನ್ನಾಗಿಯೋ ರಾಜಕಾರಣಿಗಳನ್ನಾಗಿಯೋ ಮಾಡುತ್ತಾರೆ.

  ರಶ್ಮಿಕಾ-ರಕ್ಷಿತ್ ಶೆಟ್ಟಿ ದೂರವಾಗಲು ಕಾರಣ ಈ ಜ್ಯೋತಿಷಿರಶ್ಮಿಕಾ-ರಕ್ಷಿತ್ ಶೆಟ್ಟಿ ದೂರವಾಗಲು ಕಾರಣ ಈ ಜ್ಯೋತಿಷಿ

  ಬಹುತೇಕ ನಟ-ನಟಿಯರ ಭವಿಷ್ಯದ ಯೋಜನೆ ಇದೇ ಆಗಿರುತ್ತದೆ. ಕೆಲವರಂತೂ ಜ್ಯೋತಿಷಿಗಳ ಬಳಿ ಸಲಹೆ ಪಡೆದು ರಾಜಕೀಯ ಪಕ್ಷ, ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದೀಗ ವೃತ್ತಿ ಜೀವನದ ಪೀಕ್‌ನಲ್ಲಿರುವ ರಶ್ಮಿಕಾ ಮಂದಣ್ಣ ಸಹ ಮುಂದೊಂದು ದಿನ ರಾಜಕೀಯಕ್ಕೆ ಇಳಿಯಲಿದ್ದಾರೆ ಮಾತ್ರವಲ್ಲ ಸಂಸದೆ ಸಹ ಆಗಲಿದ್ದಾರೆ ಎಂದು ಜ್ಯೋತಿಷಿಯೊಬ್ಬರು ಭವಿಷ್ಯ ನಡುದಿದ್ದಾರೆ.

  ರಶ್ಮಿಕಾ ಮಂದಣ್ಣರ ಜಾತಕವನ್ನು ಅಭ್ಯಾಸ ಮಾಡಿರುವ ಅವರು ಸ್ಟಾರ್ ನಟಿಯಾಗುವ ಮುನ್ನ ಅವರಿಗಾಗಿ ವಿಶೇಷ ಪೂಜೆಗಳನ್ನು ಸಹ ಮಾಡಿರುವ ತೆಲುಗು ರಾಜ್ಯಗಳ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ರಶ್ಮಿಕಾ ಮಂದಣ್ಣ ಮುಂದಿನ ದಿನಗಳಲ್ಲಿ ಸಂಸದೆ ಆಗುವುದು ಖಂಡಿತ ಎಂದಿದ್ದಾರೆ. ರಶ್ಮಿಕಾ ಮಂದಣ್ಣಗೆ ಆ ಯೋಗವಿದೆ ಎಂದು ವೇಣು ಸ್ವಾಮಿ ಹೇಳಿದ್ದಾರೆ.

  ''ಕಾಂಗ್ರೆಸ್ ಪಕ್ಷದಿಂದ ಸಂಸದೆ ಆಗಲಿದ್ದಾರೆ ರಶ್ಮಿಕಾ''

  ''ಕಾಂಗ್ರೆಸ್ ಪಕ್ಷದಿಂದ ಸಂಸದೆ ಆಗಲಿದ್ದಾರೆ ರಶ್ಮಿಕಾ''

  ''ರಶ್ಮಿಕಾ ಮಂದಣ್ಣಗೆ ಸಿನಿಮಾಗಳಲ್ಲಿ ಮಾತ್ರವಲ್ಲ ರಾಜಕೀಯದಲ್ಲಿಯೂ ಒಳ್ಳೆಯ ಯೋಗವಿದೆ ಎಂದಿರುವ ವೇಣು ಸ್ವಾಮಿ ರಶ್ಮಿಕಾ ಮಂದಣ್ಣ ಕರ್ನಾಟಕದಲ್ಲಿಯೇ ಸಂಸದೆ ಆಗುತ್ತಾರೆ'' ಎಂದಿದ್ದಾರೆ ಅಲ್ಲದೆ ರಶ್ಮಿಕಾ ಮಂದಣ್ಣ ಕಾಂಗ್ರೆಸ್ ಪಕ್ಷದ ಮೂಲಕವೇ ಸಂಸದೆ ಆಗಲಿದ್ದಾರೆ ಎಂದೂ ಸಹ ಭವಿಷ್ಯ ನುಡಿದಿದ್ದಾರೆ. ರಶ್ಮಿಕಾರ ಜಾತಕದಲ್ಲಿ ರಾಜಕೀಯದ ಯೋಗವಿದೆ ಎಂದು ಹೇಳಿದ್ದಾರೆ.

  ರಮ್ಯಾ ರೀತಿಯಲ್ಲಿಯೇ ಸಂಸದೆ ಆಗಲಿದ್ದಾರೆ

  ರಮ್ಯಾ ರೀತಿಯಲ್ಲಿಯೇ ಸಂಸದೆ ಆಗಲಿದ್ದಾರೆ

  ನಟಿ ರಮ್ಯಾರ ಉದಾಹರಣೆಯನ್ನೂ ನೀಡಿರುವ ವೇಣು ಸ್ವಾಮಿ, ಕರ್ನಾಟಕದ ನಟಿ ರಮ್ಯಾ ರೀತಿಯಲ್ಲಿಯೇ ಅವರು ಕಾಂಗ್ರೆಸ್‌ನಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಾರೆ. ರಮ್ಯಾ, ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ಮುಖ್ಯಸ್ಥೆಯಾಗಿದ್ದರು, ರಾಹುಲ್ ಗಾಂಧಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು, ಸಂಸದೆಯೂ ಆಗಿದ್ದರು. ಹಾಗೆಯೇ ರಶ್ಮಿಕಾ ಮಂದಣ್ಣ ಸಹ ರಾಜಕೀಯದಲ್ಲಿ ಎತ್ತರಕ್ಕೆ ಏರುತ್ತಾರೆ. ಸಂಸದೆ ಆಗುವುದಂತೂ ಖಂಡಿತ ಎಂದಿದ್ದಾರೆ ವೇಣು ಸ್ವಾಮಿ.

  ಆದಷ್ಟು ಬೇಗ ಬೇಡಿಕೆ ಕಡಿಮೆ ಆಗಲಿದೆ

  ಆದಷ್ಟು ಬೇಗ ಬೇಡಿಕೆ ಕಡಿಮೆ ಆಗಲಿದೆ

  ರಶ್ಮಿಕಾ ಮಂದಣ್ಣ ಈಗ ವೃತ್ತಿ ಜೀವನದ ಪೀಕ್‌ನಲ್ಲೇನೊ ಇದ್ದಾರೆ ಆದರೆ ಅವರ ಈ ಸ್ಪೀಡ್‌ ಹೆಚ್ಚು ದಿನ ಇರುವುದಿಲ್ಲವೆಂದು ಸಹ ಜ್ಯೋತಿಷಿ ವೇಣು ಸ್ವಾಮಿ ಹೇಳಿದ್ದಾರೆ. ಈಗ ವೃತ್ತಿ ಜೀವನದ ಏರುಗತಿಯಲ್ಲಿರುವ ರಶ್ಮಿಕಾ ಮಂದಣ್ಣರ ಬೇಡಿಕೆ ಇನ್ನೆರಡು ವರ್ಷಗಳಲ್ಲಿ ಪೂರ್ಣ ಇಳಿದು ಹೋಗುತ್ತದೆ. 2024 ರಿಂದ ಆಚೆಗೆ ಅವರಿಗೆ ಅವಕಾಶಗಳು ಕಡಿಮೆಯಾಗುತ್ತವೆ'' ಎಂದು ವೇಣು ಸ್ವಾಮಿ ಹೇಳಿದ್ದಾರೆ.

  ರಶ್ಮಿಕಾಗಾಗಿ ಪೂಜೆ ಮಾಡಿದ್ದ ವೇಣು ಸ್ವಾಮಿ

  ರಶ್ಮಿಕಾಗಾಗಿ ಪೂಜೆ ಮಾಡಿದ್ದ ವೇಣು ಸ್ವಾಮಿ

  ರಶ್ಮಿಕಾ ನಟನಾ ವೃತ್ತಿಯ ಆರಂಭದಲ್ಲಿ ವೇಣು ಸ್ವಾಮಿಯಿಂದ ಪೂಜೆ ಮಾಡಿಸಿದ್ದರು. ರಶ್ಮಿಕಾ ಹಾಗೂ ರಕ್ಷಿತ್ ಶೆಟ್ಟಿಯ ಎಂಗೇಜ್‌ಮೆಂಟ್ ಮುರಿದು ಬೀಳಲು ಸಹ ನಾನೇ ಕಾರಣ ಎಂದು ವೇಣು ಸ್ವಾಮಿ ಹೇಳಿದ್ದಾರೆ. ರಶ್ಮಿಕಾ-ರಕ್ಷಿತ್ ಶೆಟ್ಟಿಯ ಜಾತಕ ನೋಡಿದ್ದೆ ಅವರ ಜಾತಕ ಸರಿಯಿರಲಿಲ್ಲ ಹಾಗಾಗಿ ಬ್ರೇಕ್ ಅಪ್ ಮಾಡಿಕೊಳ್ಳುವಂತೆ ಹೇಳಿದ್ದೆ. ಆ ನಂತರ ಅವರಿಗಾಗಿ ರಾಜಶಾಮಲ ಪೂಜೆ ಮಾಡಿದ್ದಾಗಿಯೂ ಜ್ಯೋತಿಷಿ ವೇಣು ಸ್ವಾಮಿ ಹೇಳಿಕೊಂಡಿದ್ದಾರೆ.

  English summary
  Actress Rashmika Mandanna will enter politics and will became member of parliament one day says astrologer Venu Swamy.
  Monday, July 25, 2022, 10:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X